ಬ್ರೇಕಿಂಗ್ ನ್ಯೂಸ್
01-04-26 12:46 pm HK News Staffer ದೇಶ - ವಿದೇಶ
ವಾಷಿಂಗ್ಟನ್, ಏಪ್ರಿಲ್ 1: ಸಂಧಾನ ಮಾತುಕತೆ ಮುರಿದು ಬಿದ್ದ ಬೆನ್ನಲ್ಲೇ ಇರಾನ್ ಜೊತೆಗಿನ ಸಂಘರ್ಷ ಜೋರಾಗಿದೆ. ಅಮೆರಿಕ- ಇಸ್ರೇಲ್ ಜಂಟಿಯಾಗಿ ಇರಾನ್ ಪರಮಾಣು ಸ್ಥಾವರಗಳ ಮೇಲೆ ದಾಳಿ ನಡೆಸಿದೆ. ಇದೇ ವೇಳೆ, ವಿಶ್ವಸಂಸ್ಥೆಯ ಬೆಂಬಲದೊಂದಿಗೆ ಇರಾನ್ ಮೇಲೆ ಅಣ್ವಸ್ತ್ರ ಬಳಕೆಗೆ ಅಮೆರಿಕ ಸಿದ್ಧತೆ ನಡೆಸುತ್ತಿದೆ ಎನ್ನುವ ವದಂತಿ ಹರಡಿದೆ. ಯುದ್ಧ ಎದುರಿಸಲು ವಿಶ್ವ ಆರೋಗ್ಯ ಸಂಸ್ಥೆ ನಡೆಸಿರುವ ಸಿದ್ಧತೆಗಳು ಪರಮಾಣು ದಾಳಿಯ ಸೂಚನೆಯಾಗಿದೆ ಎಂದು ಹೇಳಲಾಗುತ್ತಿದೆ.
ಪರಮಾಣು ಶಸ್ತ್ರಾಸ್ತ್ರ ಬಳಕೆಗಾಗಿ ವಿಶ್ವಸಂಸ್ಥೆ ಸಿದ್ಧತೆ ನಡೆಸಿರುವುದಕ್ಕೆ ಕಳವಳ ವ್ಯಕ್ತಪಡಿಸಿ ವಿಶ್ವಸಂಸ್ಥೆಯ 'ಪೇಟ್ರಿಯಾಟಿಕ್ ವಿಷನ್ ಅಸೋಸಿಯೇಷನ್' ಮುಖ್ಯ ಪ್ರತಿನಿಧಿಯಾಗಿದ್ದ ಮೊಹಮ್ಮದ್ ಸಫಾ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. "ಅಣ್ವಸ್ತ್ರ ದಾಳಿಯ ಬಗ್ಗೆ ಮಾಹಿತಿಯನ್ನು ಸೋರಿಕೆ ಮಾಡುವ ಮೂಲಕ ನಾನು ನನ್ನ 12 ವರ್ಷಗಳ ರಾಜತಾಂತ್ರಿಕ ವೃತ್ತಿಗೆ ಅಂತ್ಯ ಹಾಡುತ್ತಿದ್ದೇನೆ ಎಂದು ಅವರು ತಮ್ಮ ರಾಜೀನಾಮೆ ವೇಳೆ ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, "ವಿಶ್ವಸಂಸ್ಥೆಯ ಕೆಲವು ಹಿರಿಯ ಅಧಿಕಾರಿಗಳು ವಿಶ್ವಸಂಸ್ಥೆಯ ಆಶಯಗಳಿಗಿಂತ ಹೆಚ್ಚಾಗಿ ಪ್ರಭಾವಿ ರಾಜಕೀಯ ಗುಂಪುಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಈ ಪ್ರಭಾವದಿಂದಾಗಿ ಅಮೆರಿಕ ಮತ್ತು ಇಸ್ರೇಲ್ ಮಾಡುತ್ತಿರುವ ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆಗಳನ್ನು ತಡೆಯಲು ವಿಶ್ವಸಂಸ್ಥೆ ವಿಫಲವಾಗಿದೆ ಎಂದು ದೂರಿದ್ದಾರೆ.
ಈ ಮಧ್ಯೆ, ಅಮೆರಿಕ ಅಥವಾ ಇಸ್ರೇಲ್ ಅಣು ಬಾಂಬ್ ದಾಳಿಯ ಬಗ್ಗೆ ಯಾವ ಸುಳಿವನ್ನೂ ನೀಡಿಲ್ಲವಾದರೂ, ಪೂರ್ವ ಸಿದ್ಧತೆಗಳು ಈ ಕುರಿತು ಸುಳಿವು ನೀಡಿವೆ. ಇರಾನ್ನ ಪ್ರಮುಖ ಪರಮಾಣು ಕೇಂದ್ರವಾದ ಇಶ್ಫಹಾನ್ ಮೇಲೆ ಅಮೆರಿಕ ಮಂಗಳವಾರ ಮುಂಜಾನೆ ದಾಳಿ ಮಾಡಿರುವುದು ಸಹ, ಅಣ್ವಸ್ತ್ರ ದಾಳಿಗೆ ಮುನ್ನ ಇರಾನ್ನ ಪರಮಾಣು ಕೇಂದ್ರಗಳನ್ನು ನಾಶಪಡಿಸುವ ಯೋಜನೆಯ ಭಾಗವೇ ಆಗಿದೆ ಎಂದು ಹೇಳಲಾಗಿದೆ.
ಇದೇ ವೇಳೆ, ಇರಾನ್ನ ಮುಖ್ಯ ಪರಮಾಣು ಕೇಂದ್ರ ಇಶ್ಫಹಾನ್ ಮೇಲೆ ಬಾಂಬ್ ದಾಳಿ ನಡೆಸಿರುವ ವಿಡಿಯೋವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸಾಮಾಜಿಕ ಜಾಲತಾಣ ಟ್ರುಥ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಶಾಂತಿ ಸಂಧಾನದ ಮಾತುಕತೆ ಮಧ್ಯೆ ಮಂಗಳವಾರ ಮುಂಜಾನೆ ಅಮೆರಿಕ-ಇಸ್ರೇಲ್ ಜಂಟಿಯಾಗಿ ಇಶ್ಫಹಾನ್ ಮೇಲೆ ವೈಮಾನಿಕ ದಾಳಿ ನಡೆಸಿದ್ದು ಜಿಪಿಯು-57 ಬಂಕರ್ ಬಸ್ಟರ್ ಮೂಲಕ 907 ಕೇಜಿ ಬಾಂಬ್ ಅನ್ನು ಹಾಕಿದ್ದು ಸ್ಪೋಟದ ಭೀಕರತೆಗೆ ಆಕಾಶದಲ್ಲಿ ಬೆಂಕಿಯುಂಡೆ ಎದ್ದಿದೆ. ಪರಮಾಣು ಪ್ರಸರಣ ಒಪ್ಪಂದದಿಂದ ಹಿಂದೆ ಸರಿಯಲು ಇರಾನ್ ಮುಂದಾಗಿದೆ ಎಂಬ ವರದಿ ಬೆನ್ನಿಗೆ ಪ್ರಮುಖ ಪರಮಾಣು ಕೇಂದ್ರದ ಮೇಲೆ ಅಮೆರಿಕ ದಾಳಿ ನಡೆಸಿದೆ. ಇಶ್ಫಹಾನ್ನಲ್ಲಿ ಸಂಗ್ರಹಿಸಿಡಲಾದ 540 ಕೆ.ಜಿ. ಉತ್ಕೃಷ್ಟ ಯುರೇನಿಯಂ ವಶಪಡಿಸಿಕೊಳ್ಳುವ ಉದ್ದೇಶದಿಂದ ಅಮೆರಿಕ ದಾಳಿ ನಡೆಸಿದೆ ಎಂದು ಹೇಳಲಾಗಿದೆ.
14-10-26 10:35 am
HK News Staffer
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
14-10-26 10:57 am
HK News Staffer
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
13-10-26 11:10 pm
HK News Desk
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹ...
13-10-26 02:54 pm
14-10-26 12:23 pm
HK News Staffer
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm
ಮುಂಬೈ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿ ಪುತ್ತೂರಿನ...
12-10-26 10:36 pm
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm