ಬ್ರೇಕಿಂಗ್ ನ್ಯೂಸ್
30-03-26 10:31 pm HK News Desk ದೇಶ - ವಿದೇಶ
ನವದೆಹಲಿ, ಮಾರ್ಚ್ 30: ಗಲ್ಫ್ ಯುದ್ಧದಿಂದಾಗಿ ದಿನೇ ದಿನೇ ಡಾಲರ್ ಮುಂದೆ ಕುಸಿಯುತ್ತಿರುವ ರೂಪಾಯಿ ಮೌಲ್ಯ ಇದೇ ಮೊದಲ ಬಾರಿಗೆ 1 ಡಾಲರ್ ಎದುರು 95 ರೂ. ಗಡಿಯನ್ನು ದಾಟಿದೆ.
ರೂಪಾಯಿ ಮೌಲ್ಯ ಕುಸಿಯುವುದನ್ನು ತಡೆಯಲು ಮಾರ್ಚ್ 27ರಂದು ಎಲ್ಲ ಬ್ಯಾಂಕುಗಳು ಪ್ರತಿ ವ್ಯವಹಾರದ ದಿನದ ಅಂತ್ಯಕ್ಕೆ ತಮ್ಮ Net Open Position in Rupee – NOP-INR ಗರಿಷ್ಠ 100 ಮಿಲಿಯನ್ ಡಾಲರ್‌ಗೆ ಮಿತಿಗೊಳಿಸಬೇಕು ಎಂದು ಆರ್ ಬಿಐ ನಿರ್ದೇಶನ ನೀಡಿತ್ತು. ಈ ಹೊಸ ನಿಯಮವನ್ನು ಪಾಲಿಸಲು ಬ್ಯಾಂಕ್‌ಗಳಿಗೆ ಏಪ್ರಿಲ್ 10 ರ ವರೆಗೆ ಗಡುವು ನೀಡಲಾಗಿದೆ.
ಆರ್‌ಬಿಐ ಈ ನಿರ್ಧಾರದ ಬೆನ್ನಲ್ಲೇ ರೂಪಾಯಿ ಮೌಲ್ಯ ಇಂದು ಬೆಳಗ್ಗೆ ಸುಮಾರು 1 ರೂಪಾಯಿ 30 ಪೈಸೆ ಏರಿಕೆಯಾಗಿ 93.59 ಕ್ಕೆ ತಲುಪಿತ್ತು. ಬೆಳಗ್ಗೆ ಏರಿಕೆಯಾಗಿದ್ದರೆ ನಂತರ ರೂಪಾಯಿ ಮೌಲ್ಯ ಕುಸಿಯುತ್ತ ಹೋಯಿತು. ಮಧ್ಯಾಹ್ನ 3 ಗಂಟೆಯ ವೇಳೆಗೆ 1 ಡಾಲರ್ ಮುಂದೆ 95.13 ರೂ.ನಲ್ಲಿ ವ್ಯವಹಾರ ನಡೆಸುತ್ತಿತ್ತು. ಸಂಜೆಯ ವೇಳೆಗೆ ರೂಪಾಯಿ ಮೌಲ್ಯ ಕುಸಿದು 95ಕ್ಕೆ ತಲುಪಿದ್ದು ಈ ಮಟ್ಟಿಗೆ ಕುಸಿದಿರುವುದು ಇದೇ ಮೊದಲು.
ಈ ಹಿಂದೆ ಬ್ಯಾಂಕ್‌ಗಳ ಆಡಳಿತ ಮಂಡಳಿಗಳೇ ತಮ್ಮ ಬಂಡವಾಳದ 25% ವರೆಗೆ ಈ ಮಿತಿಯನ್ನು ನಿಗದಿಪಡಿಸಿಕೊಳ್ಳಲು ಅವಕಾಶವಿತ್ತು. ಇದರಿಂದ ದೊಡ್ಡ ಬ್ಯಾಂಕ್‌ಗಳು ಶತಕೋಟಿ ಡಾಲರ್‌ಗಳ ವರೆಗೆ ವಹಿವಾಟು ನಡೆಸುತ್ತಿದ್ದವು. ಈಗ ಎಲ್ಲಾ ಬ್ಯಾಂಕ್‌ಗಳಿಗೂ ಸಮಾನವಾಗಿ 100 ದಶಲಕ್ಷ ಡಾಲರ್‌ನ ಕಠಿಣ ಮಿತಿಯನ್ನು ಹೇರಲಾಗಿದೆ. ಇದರ ಅರ್ಥ ಒಂದು ಬ್ಯಾಂಕ್ ತನ್ನಲ್ಲಿ ಇಟ್ಟುಕೊಳ್ಳಬಹುದಾದ ಒಟ್ಟು ವಿದೇಶಿ ಕರೆನ್ಸಿಯ (ಮುಖ್ಯವಾಗಿ ಡಾಲರ್) ನಿವ್ವಳ ಮೌಲ್ಯವು ದಿನದ ಅಂತ್ಯಕ್ಕೆ 100 ಮಿಲಿಯನ್ ಡಾಲರ್ ದಾಟುವಂತಿಲ್ಲ.
ಮಿತಿಯನ್ನು ನಿಗದಿ ಪಡಿಸಿದ್ದರಿಂದ ಬ್ಯಾಂಕ್‌ಗಳು ತಮ್ಮಲ್ಲಿರುವ ಹೆಚ್ಚುವರಿ ಡಾಲರ್‌ಗಳನ್ನು ಮಾರಾಟ ಮಾಡಬೇಕಾಗುತ್ತದೆ. ಈ ನಿರ್ಧಾರದಿಂದ ಮಾರುಕಟ್ಟೆಯಲ್ಲಿ ಡಾಲರ್ ಪೂರೈಕೆ ಹೆಚ್ಚಾಗಿ ರೂಪಾಯಿ ಮೌಲ್ಯ ಸ್ಥಿರಗೊಳ್ಳಬಹುದು ಎಂಬ ಲೆಕ್ಕಾಚಾರ ಆರ್ಬಿಐನದ್ದು.
ಆದರೆ, ಈ ಹಠಾತ್ ಬದಲಾವಣೆಯಿಂದ ಬ್ಯಾಂಕ್‌ಗಳಿಗೆ ಅಲ್ಪಾವಧಿಯ ನಷ್ಟ ಉಂಟಾಗಬಹುದು ಎಂದು ಆತಂಕ ವ್ಯಕ್ತವಾಗಿದೆ. ಬ್ಯಾಂಕುಗಳು ಏಪ್ರಿಲ್ 10 ರೊಳಗೆ ಈ ಮಿತಿಯನ್ನು ತಲುಪಬೇಕಿರುವುದರಿಂದ ಸುಮಾರು 18 ಶತಕೋಟಿ ಡಾಲರ್‌ನಿಂದ 30 ಶತಕೋಟಿ ಡಾಲರ್‌ವರೆಗಿನ ಹೆಚ್ಚುವರಿ ಡಾಲರ್‌ಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಬೇಕಾಗುತ್ತದೆ. ಇದರಿಂದಾಗಿ ಪರೋಕ್ಷವಾಗಿ ರುಪಾಯಿ ಮೌಲ್ಯ ಕುಸಿಯತೊಡಗಿದೆ ಎನ್ನಲಾಗುತ್ತಿದೆ.
14-10-26 10:35 am
HK News Staffer
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
14-10-26 10:57 am
HK News Staffer
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
13-10-26 11:10 pm
HK News Desk
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹ...
13-10-26 02:54 pm
14-10-26 12:23 pm
HK News Staffer
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm
ಮುಂಬೈ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿ ಪುತ್ತೂರಿನ...
12-10-26 10:36 pm
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm