ಬ್ರೇಕಿಂಗ್ ನ್ಯೂಸ್
22-03-26 03:14 pm HK News Staffer ದೇಶ - ವಿದೇಶ
ಟೆಹ್ರಾನ್, ಮಾರ್ಚ್ 22: ಅಮೆರಿಕ- ಇಸ್ರೇಲ್ ದಾಳಿಯಲ್ಲಿ ತನ್ನ ನಟಾಂಜಾ ಪರಮಾಣು ಸ್ಥಾವರವನ್ನು ಗುರಿಯಾಗಿಸಿದ್ದಕ್ಕೆ ಇರಾನ್ ಕೂಡ ಇಸ್ರೇಲ್ ನ್ಯೂಕ್ಲಿಯರ್ ರಿಯಾಕ್ಟರ್ ಗುರಿಯಾಗಿಸಿ ದಾಳಿ ನಡೆಸಿದೆ. ಶನಿವಾರ ರಾತ್ರಿ ಮಿಸೈಲ್ ದಾಳಿ ನಡೆಸಿರುವ ಇರಾನ್, ಇಸ್ರೇಲ್ ನಲ್ಲಿರುವ ಪ್ರಮುಖ ಅಣು ಸ್ಥಾವರ ಡಿಮೋನಾ ಮತ್ತು ಅರಾದ್ ನಲ್ಲಿ ಭಾರೀ ನಷ್ಟ ಉಂಟು ಮಾಡಿದೆ.
ಮುಯ್ಯಿಗೆ ಮುಯ್ಯಿ ಎನ್ನುವಂತೆ ಇರಾನ್, ಡಿಮೋನಾದಲ್ಲಿರುವ ಶಿಮೋನ್ ಪೆರೇಸ್ ನೆಗೆವ್ ನ್ಯೂಕ್ಲಿಯರ್ ರೀಸರ್ಚ್ ಸೆಂಟರ್ ಮತ್ತು ಅರಾದ್ ನ್ಯೂಕ್ಲಿಯರ್ ಘಟಕದ ಮೇಲೆ ದಾಳಿ ನಡೆಸಿದೆ. ಅಲ್ಲಿರುವ ಜನವಸತಿ ಕಟ್ಟಡಗಳು ಮತ್ತು ಇತರ ಕಟ್ಟಡಗಳ ಮೇಲೆ ಎರಡು ಬ್ಯಾಲಿಸ್ಟಿಕ್ ಮಿಸೈಲ್ ಅಪ್ಪಳಿಸಿದ್ದು ನೂರಕ್ಕೂ ಹೆಚ್ಚು ಮಂದಿ ತೀವ್ರ ಗಾಯಗೊಂಡಿದ್ದಾರೆ. ಮಿಸೈಲ್ ವಿರೋಧಿ ವ್ಯವಸ್ಥೆಯ ಹೊರತಾಗಿಯೂ ಎರಡು ಕ್ಷಿಪಣಿಗಳು ಶನಿವಾರ ರಾತ್ರಿ ನೇರವಾಗಿ ಬಂದು ಬಿದ್ದಿದ್ದು ಇಸ್ರೇಲ್ ದೊಡ್ಡ ಮಟ್ಟದ ಹಾನಿ ಅನುಭವಿಸಿದೆ. ಮಾಹಿತಿ ಪ್ರಕಾರ, ಅರಾದ್ ನಲ್ಲಿ 84 ಜನ ಗಾಯಗೊಂಡಿದ್ದು, ಅದರಲ್ಲಿ 10 ಮಂದಿ ತೀವ್ರ ಗಾಯಗೊಂಡಿದ್ದಾರೆ. ಡಿಮೋನಾದಲ್ಲಿ 33 ಮಂದಿ ಗಾಯಗೊಂಡಿದ್ದಾರೆ.
ಕಟ್ಟಡ ಪೂರ್ತಿ ನಾಶಗೊಂಡಿರುವುದರಿಂದ ದೊಡ್ಡ ಮಟ್ಟದ ಹಾನಿಯಾಗಿರುವ ಬಗ್ಗೆ ಶಂಕೆಯಿದೆ. ಮಿಸೈಲ್ ದಾಳಿಯಾಗಿರುವ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಕಾಶದಿಂದ ಬೆಂಕಿಯುಂಡೆ ನುಗ್ಗಿ ಬಂದಿರುವಂತೆ ತೋರಿದೆ. ದಾಳಿ ಘಟನೆಯನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಈ ದಿನ ಭಾರೀ ಕಷ್ಟದ ಸಂಜೆಯಾಗಿತ್ತು ಎಂದು ಹೇಳಿದ್ದಾರೆ. ತುರ್ತು ರಕ್ಷಣಾ ಕ್ರಮಗಳನ್ನು ಕೈಗೊಂಡಿದ್ದು ಜನರು ಭದ್ರತಾ ಪಡೆಗಳ ಸೂಚನೆಯನ್ನು ಪಾಲಿಸಬೇಕೆಂದು ಸೂಚಿಸಿದ್ದಾರೆ. ಇದೇ ವೇಳೆ, ಶತ್ರುಗಳ ಮೇಲಿನ ದಾಳಿಯು ಇನ್ನಷ್ಟು ತೀವ್ರಗೊಳ್ಳಲಿದೆ ಎಂದವರು ಹೇಳಿದ್ದಾರೆ.


ಶನಿವಾರ ಇರಾನ್ ದೇಶದ ಅತಿದೊಡ್ಡ ಪರಮಾಣು ರಿಯಾಕ್ಟರ್ ಇರುವ ನಟಾಂಜ್ ಮೇಲೆ ಅಮೆರಿಕ ದಾಳಿ ನಡೆಸಿತ್ತು. ಯುದ್ಧ ಮೊದಲ್ಗೊಂಡ 22 ದಿನಗಳ ಬಳಿಕ ಮೊದಲ ಬಾರಿಗೆ ಅಮೆರಿಕ ನ್ಯೂಕ್ಲಿಯರ್ ಸ್ಥಾವರಗಳನ್ನು ಗುರಿಯಾಗಿಸಿತ್ತು. ಘಟನೆಯಲ್ಲಿ ಹಲವಾರು ಕಟ್ಟಡಗಳಿಗೆ ಹಾನಿಯಾಗಿದ್ದರೂ, ಅಣು ಸ್ಥಾವರಕ್ಕೆ ಹಾನಿಯಾಗಿಲ್ಲ, ಅದರಿಂದ ವಿಕಿರಣ ಹೊರಬಂದಿಲ್ಲ ಎಂದು ವಿಶ್ವಸಂಸ್ಥೆ ಹೇಳಿದೆ.
14-10-26 10:35 am
HK News Staffer
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
14-10-26 12:54 pm
HK News Staffer
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
13-10-26 11:10 pm
HK News Desk
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹ...
13-10-26 02:54 pm
14-10-26 12:23 pm
HK News Staffer
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm
ಮುಂಬೈ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿ ಪುತ್ತೂರಿನ...
12-10-26 10:36 pm
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm