ಬ್ರೇಕಿಂಗ್ ನ್ಯೂಸ್
20-03-26 05:32 pm HK News Staffer ದೇಶ - ವಿದೇಶ
ಜೆರುಸಲೇಂ, ಮಾರ್ಚ್ 20: ಇಸ್ರೇಲ್ ಅಧಿಪತ್ಯದಲ್ಲಿರುವ ಪ್ಯಾಲೆಸ್ತೀನ್- ಜೆರುಸಲೇಂ ನಗರ ಕ್ರಿಸ್ತಿಯನ್ನರಿಗೆ ಮತ್ತು ಮುಸ್ಲಿಮರಿಗೆ ಪವಿತ್ರ ಸ್ಥಳ. ರಂಜಾನ್ ತಿಂಗಳ ಉಪವಾಸವನ್ನು ಇಡೀ ಜಗತ್ತಿನಲ್ಲಿ ಮುಸ್ಲಿಮರು ಪವಿತ್ರವೆಂದು ನಂಬುತ್ತಾರೆ. ಇದರ ಕೊನೆಯಲ್ಲಿ ಆಚರಿಸುವುದೇ ಉಪವಾಸ ಬಿಟ್ಟು ಸಂಭ್ರಮಿಸುವ ಈದುಲ್ ಫಿತರ್ ಹಬ್ಬ. ಆದರೆ ಈ ಬಾರಿ ಪ್ಯಾಲೆಸ್ತೀನಿಗರಿಗೆ ಈದ್ ಹಬ್ಬ ಕಹಿಯಾಗಿ ಪರಣಮಿಸಿದೆ.
ಈ ಬಾರಿಯ ಗಲ್ಫ್ ಯುದ್ಧದಿಂದಾಗಿ ಎರಡು ಧರ್ಮಗಳ ಉಗಮ ಸ್ಥಾನ ಎಂದು ಕರೆಯಲಾಗುವ ಜೆರುಸಲೇಮ್ ನಗರದಲ್ಲಿ ತೀವ್ರ ಬಿಕ್ಕಟ್ಟು ಎದುರಾಗಿದೆ. ಹಳೆ ನಗರದ ಒಳಗಿರುವ ಅಲ್ ಅಕ್ಸಾ ಮಸೀದಿಯಲ್ಲಿ ಮುಸ್ಲಿಮರಿಗೆ ಈದ್ ಪ್ರಾರ್ಥನೆಗೆ ಇಸ್ರೇಲ್ ಸೈನಿಕರು ಅವಕಾಶ ನೀಡಿಲ್ಲ. 1967ರ ಬಳಿಕ ಇದೇ ಮೊದಲ ಬಾರಿಗೆ ಪವಿತ್ರ ಸ್ಥಳದಲ್ಲಿ ಶುಕ್ರವಾರದ ಈದ್ ಪ್ರಾರ್ಥನೆಗೆ ಅವಕಾಶ ನೀಡಲಾಗಿಲ್ಲ ಎಂದು ಗಾರ್ಡಿಯನ್ ಪತ್ರಿಕೆ ವರದಿ ಮಾಡಿದೆ.
ಫೆಬ್ರವರಿ 28ರ ದಾಳಿಯ ಬಳಿಕ ಈ ಮಸೀದಿ ಆವರಣವನ್ನು ಇಸ್ರೇಲ್ ಸೇನಾ ಪಡೆಗಳು ಸೀಲ್ ಮಾಡಿದ್ದು, ಯಾರನ್ನೂ ಅಲ್ಲಿಗೆ ಪ್ರವೇಶಿಸಲು ಬಿಡುತ್ತಿಲ್ಲ. ಇಸ್ರೇಲ್ ಸೈನಿಕರು ಬ್ಯಾರಿಕೇಡ್ ಹಾಕಿ ನಗರ ಪ್ರವೇಶವನ್ನು ಮುಚ್ಚಿದ್ದು, ಯಾರನ್ನೂ ಹಳೆಯ ಈ ನಗರಕ್ಕೆ ತೆರಳಲು ಅವಕಾಶ ಕೊಟ್ಟಿಲ್ಲ. ಇದರಿಂದಾಗಿ ಸಾವಿರಾರು ಪ್ಯಾಲೇಸ್ತೀನ್ ಮುಸ್ಲಿಮರು ನಗರದ ಹೊರಗಡೆಯೇ ಶುಕ್ರವಾರದ ಈದ್ ಪ್ರಾರ್ಥನೆ ನೆರವೇರಿಸಿದ್ದಾರೆ.
ಅಲ್ ಅಕ್ಸಾ ಮಸೀದಿಯನ್ನು ಪ್ಯಾಲೆಸ್ತೀನಿಗರು ಅಲ್ ಹರಾಮ್ ಅಲ್ ಶರೀಫ್ ಎಂದು ಕರೆಯುತ್ತಾರಲ್ಲದೆ, ಏಳನೇ ಶತಮಾನದಲ್ಲಿ ಇಸ್ಲಾಮ್ ಉಗಮಗೊಂಡ ಸ್ಥಳದ ಪವಿತ್ರ ಬಂಡೆ ಕಲ್ಲು ಇರುವ ಜಾಗವೆಂದು ನಂಬುತ್ತಾರೆ. ಆದರೆ ಯೆಹೂದಿಗಳು ಇದನ್ನೇ ಟೆಂಪಲ್ ಮೌಂಟ್ ಎಂದು ಹೇಳುವುದಲ್ಲದೆ, ಕ್ರಿಸ್ತ ಪೂರ್ವ 70ರಲ್ಲಿ ರೋಮನ್ನರು ಕೆಡವಿದ್ದ ದೇವಾಲಯವನ್ನು ಹತ್ತನೇ ಶತಮಾನದಲ್ಲಿ ಪುನರ್ ಸ್ಥಾಪಿಸಲಾಗಿತ್ತು ಎಂದು ನಂಬುತ್ತಾರೆ.
ಈ ದಿನ ಜೆರುಸಲೇಮಿನ ಮುಸ್ಲಿಮರಿಗೆ ಅತ್ಯಂತ ಬೇಸರದ ದಿನವಾಗಲಿದೆ ಎಂದು ಜೆರುಸಲೇಮ್ ನಗರದ 48 ವರ್ಷದ ನಿವಾಸಿ ಹಸೇನ್ ಬುಲ್ ಬುಲ್ ಗಾರ್ಡಿಯನ್ ಪತ್ರಿಕೆಗೆ ಹೇಳುತ್ತಾರೆ. ತಾನು ಬಾಲ್ಯದಿಂದಲೂ ಅಲ್ ಅಕ್ಸಾ ಮಸೀದಿಯಲ್ಲೇ ರಂಜಾನ್ ತಿಂಗಳ ಉಪವಾಸವನ್ನು ಬಿಡುತ್ತಿದ್ದೆ ಎಂದು ಅವರು ಹೇಳಿದ್ದಾರೆ. ಇದೊಂದು ಅಪಾಯಕಾರಿ ನಡೆ, ಇದು ಮೊದಲ ಬಾರಿ ಆಗಿರಬಹುದು, ಆದರೆ ಕೊನೆಯದಂತೂ ಆಗಿರಲಿಕ್ಕಿಲ್ಲ. 2023ರ ಅಕ್ಟೋಬರ್ 7ರ ನಂತರ ಇಸ್ರೇಲ್ ಈ ನಗರವನ್ನು ಆಕ್ರಮಿಸಿಕೊಂಡಿದೆ ಎಂದು ಬುಲ್ ಬುಲ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಇತ್ತೀಚಿನ ತಿಂಗಳಲ್ಲಿ ಇಲ್ಲಿಗೆ ಬರುವ ಮುಸ್ಲಿಮರನ್ನು ಬಂಧಿಸಲಾಗುತ್ತಿದೆ. ಪ್ರಾರ್ಥನೆ ಸಮಯದಲ್ಲಿ ಬರುವವರನ್ನು ಗುರಿಯಾಗಿಸಿ ಇಸ್ರೇಲಿ ಪೊಲೀಸರು ಬಂಧನ ಮಾಡುತ್ತಿದ್ದಾರೆ. ಪ್ಯಾಲೆಸ್ತೀನಿಗರಿಗೆ ಇಲ್ಲಿಗೆ ಪ್ರವೇಶ ನೀಡುವುದಕ್ಕೆ ನಿರಾಕರಿಸುತ್ತಾರೆ. ಈ ಹಳೆಯ ನಗರ ರಂಜಾನ್ ಸಮಯದಲ್ಲಿ ಪ್ಯಾಲೆಸ್ತೀನಿಗರಿಂದ ತುಂಬಿರುತ್ತದೆ. ಈ ಬಾರಿ ಮರಳು ಮಾತ್ರ ಕಾಣಿಸುತ್ತಿದೆ ಎಂದು ಗಾರ್ಡಿಯನ್ ಬರೆದಿದೆ. ಪ್ಯಾಲೆಸ್ತೀನ್ ವ್ಯಾಪಾರಿಗಳ ಶಾಪ್ ಗಳನ್ನು ಮುಚ್ಚಿಸಲಾಗಿದೆ. ಮೆಡಿಕಲ್, ಅಗತ್ಯ ವಸ್ತುಗಳ ಅಂಗಡಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.
ಅಲ್ ಅಕ್ಸಾ ಮಸೀದಿಯ ಮುಖ್ಯಸ್ಥ ಮತ್ತು ಜೆರುಸಲೇಮ್ ನಗರದ ಗ್ರಾಂಡ್ ಮುಫ್ತಿ ಶೇಖ್ ಎಕ್ರಿಮಾ ಸಬ್ರಿ ಅವರು ಮುಸ್ಲಿಮರು ಆದಷ್ಟು ಮಸೀದಿಗೆ ಹತ್ತಿರದಲ್ಲೇ ಬಂದು ಪ್ರಾರ್ಥನೆ ನೆರವೇರಿಸುವಂತೆ ಕೇಳಿಕೊಂಡಿದ್ದಾರೆ. ನಗರದಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಿದ್ದು, ಅಲ್ಲಿನ ನಿವಾಸಿಗಳಿಗೆ ಭೀತಿ ಮೂಡಿಸಿದ್ದಾರೆ. ಮಸೀದಿಯನ್ನು ಬಂದ್ ಮಾಡಿದ್ದಕ್ಕೆ ಬಹಳಷ್ಟು ಜನರು ಇಸ್ರೇಲ್ ಸೈನಿಕರ ಜೊತೆಗೆ ಜಟಾಪಟಿಯನ್ನೂ ನಡೆಸಿದ್ದಾರೆ. ಇಸ್ರೇಲಿನ ಈ ನಡೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಖಂಡನೆಗೆ ಒಳಗಾಗಿದೆ.
14-10-26 10:35 am
HK News Staffer
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
14-10-26 12:54 pm
HK News Staffer
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
13-10-26 11:10 pm
HK News Desk
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹ...
13-10-26 02:54 pm
14-10-26 12:23 pm
HK News Staffer
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm
ಮುಂಬೈ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿ ಪುತ್ತೂರಿನ...
12-10-26 10:36 pm
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm