ಬ್ರೇಕಿಂಗ್ ನ್ಯೂಸ್
15-03-26 05:37 pm HK News Desk ದೇಶ - ವಿದೇಶ
ಟೆಹ್ರಾನ್, ಮಾರ್ಚ್ 15: ಇಸ್ರೇಲ್ ಮತ್ತು ಅಮೆರಿಕದ ಗುಪ್ತಚರ ಸಂಸ್ಥೆಗಳ ಹದ್ದಿನ ಕಣ್ಣು ಹಾಗೂ ಸರಣಿ ಬಾಂಬ್ ದಾಳಿಯ ಮಧ್ಯೆಯೇ ಇರಾನ್ ಪರಮೋಚ್ಚ ನಾಯಕ ಮೊಜ್ತಬಾ ಅಲಿ ಖಮೇನಿ ಅವರು ಸದ್ದಿಲ್ಲದೆ ರಷ್ಯಾಕ್ಕೆ ಎಸ್ಕೇಪ್ ಆಗಿದ್ದಾರೆ. ಅವರನ್ನು ರಷ್ಯಾದ ರಾಡಾರ್ ಕಣ್ಣಿಗೆ ಸಿಗದ ವಿಮಾನವೊಂದು ಇರಾನ್ ರಾಜಧಾನಿಗೆ ಬಂದು ರೊಯ್ಯನೆ ತನ್ನ ದೇಶಕ್ಕೆ ಕರೆದೊಯ್ದು ಚಿಕಿತ್ಸೆಗೆ ವ್ಯವಸ್ಥೆ ಮಾಡಿದೆ ಎಂದು ಅಲ್ ಜರೀದಾ ಎನ್ನುವ ಗಲ್ಫ್ ಮೂಲದ ಪತ್ರಿಕೆಯೊಂದು ವರದಿ ಮಾಡಿದೆ.
ಫೆ.28ರಂದು ಇಸ್ರೇಲ್ ದಾಳಿಯಲ್ಲಿ ಇರಾನ್ ನಾಯಕ ಅಯತೊಲ್ಲಾ ಖಮೇನಿ ಮತ್ತು ಅವರ ಕುಟುಂಬಸ್ಥರು ಸಾವಿಗೀಡಾಗಿದ್ದರು. ಅದೇ ಸಂದರ್ಭದಲ್ಲಿ ಪುತ್ರ ಮೊಜ್ತಬಾ ಖಮೇನಿಗೂ ತೀವ್ರ ಗಾಯಗಳಾಗಿದ್ದವು. ಆದರೆ ಈ ನಡುವೆ, ಅವರನ್ನೇ ಮುಂದಿನ ಪರಮೋಚ್ಚ ನಾಯಕನಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಅವರು ಜೀವಂತ ಇದ್ದಾರೆಯೇ, ಸೀರಿಯಸ್ ಸ್ಥಿತಿಯಲ್ಲಿ ಉಳಿದುಕೊಂಡಿದ್ದಾರೆಯೇ ಎಂಬ ಬಗ್ಗೆ ವದಂತಿಗಳಿದ್ದವು. ಹೀಗಾಗಿ ಮೊಜ್ತಾಬಾ ಎಲ್ಲಿದ್ದಾರೆಂದು ತಿಳಿಯಲು ಅಮೆರಿಕ- ಇಸ್ರೇಲ್ ಹದ್ದಿನ ಕಣ್ಣಿಟ್ಟಿದ್ದವು.
ಇದೇ ಸಮಯದಲ್ಲಿ, ರಷ್ಯಾದ ವಿಶೇಷ ಮಿಲಿಟರಿ ವಿಮಾನವೊಂದು ಇರಾನ್ನಿಂದ ಹಾರಾಟ ನಡೆಸಿರುವುದು ಪತ್ತೆಯಾಗಿದೆ. ಶತ್ರು ದೇಶಗಳ ಕ್ಷಿಪಣಿ ನಿರೋಧಕ ವ್ಯವಸ್ಥೆಗಳನ್ನು ಮತ್ತು ರಾಡಾರ್ಗಳನ್ನು ವಂಚಿಸಿ, ಬಾಂಬ್ ಸುರಿಮಳೆ ನಡುವೆಯೇ ಈ ವಿಮಾನವು ಮೊಜ್ತಾಬಾ ಅವರನ್ನು ಸುರಕ್ಷಿತವಾಗಿ ರಷ್ಯಾಕ್ಕೆ ತಲುಪಿಸಿದೆ ಎಂದು ಕುವೈತ್ ಪತ್ರಿಕೆ ಅಲ್-ಜರಿದಾ ವರದಿಯೊಂದು ಹೇಳಿದ್ದು ಇಸ್ರೇಲ್- ಅಮೆರಿಕ ಪಾಲಿಗೆ ಮುಖಕ್ಕೆ ಹೊಡೆದಂತಾಗಿದೆ.
ಆರೋಗ್ಯದ ಸ್ಥಿತಿ ಮತ್ತು ಶಸ್ತ್ರಚಿಕಿತ್ಸೆ !
ವರದಿಗಳ ಪ್ರಕಾರ, ಮೊಜ್ತಾಬಾ ಅವರಿಗೆ ಕಾಲುಗಳ ಭಾಗದಲ್ಲಿ ಬಲವಾದ ಪೆಟ್ಟು ಬಿದ್ದಿದ್ದು, ತುರ್ತು ಶಸ್ತ್ರಚಿಕಿತ್ಸೆಯ ಅಗತ್ಯವಿತ್ತು. ಇರಾನ್ನಲ್ಲಿ ಭದ್ರತಾ ದೃಷ್ಟಿಯಿಂದ ಚಿಕಿತ್ಸೆ ನೀಡುವುದು ಅಪಾಯಕಾರಿ ಎಂದು ಭಾವಿಸಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಅವರಿಗೆ ಮಾಸ್ಕೋದಲ್ಲಿ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಪ್ರಸ್ತುತ ಅವರು ಮಾಸ್ಕೋದ ರಹಸ್ಯ ಸ್ಥಳವೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಇರಾನ್ ಸರ್ಕಾರ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ.
ಇರಾನಿನ ಇತರ ನಾಯಕರು, "ಮೊಜ್ತಬಾ ಖಮೇನಿ ಸುರಕ್ಷಿತವಾಗಿದ್ದಾರೆ ಮತ್ತು ದೇಶದಲ್ಲೇ ಇದ್ದಾರೆ" ಎಂದು ಹೇಳುತ್ತಿದ್ದರೂ, ಮೊಜ್ತಾಬಾ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿರುವುದು ಮತ್ತು ಇದೇ ವೇಳೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಖಮೇನಿ ಜೀವಂತ ಇದ್ದಾರೆ ಅಷ್ಟೇ ಎಂದು ಹೇಳಿದ್ದು ಅವರ ದೈಹಿಕ ಸ್ಥಿತಿಯ ಸಂಶಯ ಹುಟ್ಟಿಕೊಳ್ಳುವಂತೆ ಮಾಡಿತ್ತು. ಇತ್ತ ರಷ್ಯಾ ಕೂಡ ಈ ಬಗ್ಗೆ ಮೌನ ತಾಳಿದ್ದು, ಕುತೂಹಲ ಕೆರಳಿಸಿದೆ.
14-10-26 10:35 am
HK News Staffer
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
14-10-26 12:54 pm
HK News Staffer
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
13-10-26 11:10 pm
HK News Desk
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹ...
13-10-26 02:54 pm
14-10-26 12:23 pm
HK News Staffer
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm
ಮುಂಬೈ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿ ಪುತ್ತೂರಿನ...
12-10-26 10:36 pm
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm