ಬ್ರೇಕಿಂಗ್ ನ್ಯೂಸ್
02-03-26 06:51 pm HK News Staffer ದೇಶ - ವಿದೇಶ
ನವದೆಹಲಿ, ಮಾರ್ಚ್ 2: ಇರಾನ್- ಇಸ್ರೇಲ್ ಸಂಘರ್ಷ ಜೋರಾಗಿದ್ದು ಎರಡು ಕಡೆಗಳಿಂದಲೂ ಪರಸ್ಪರ ಮಿಸೈಲ್ ದಾಳಿಯಾಗುತ್ತಿದೆ. ಈ ನಡುವೆ, ಇರಾನ್ ನಲ್ಲಿ ಹೊಸತಾಗಿ ಸುಪ್ರೀಂ ಲೀಡರ್ ಆಗಿ ನೇಮಿಸಲ್ಪಟ್ಟ ಅಲಿರೆಝಾ ಅರಾಫಿ ಅವರನ್ನೂ ಮಿಸೈಲ್ ದಾಳಿಯಿಂದ ಹತ್ಯೆ ಮಾಡಲಾಗಿದೆ ಎನ್ನುವ ಸುದ್ದಿ ಬಂದಿದೆ. ಈವರೆಗಿನ ದಾಳಿಯಲ್ಲಿ ಇರಾನಿನಲ್ಲಿ 500ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ.
ಹಂಗಾಮಿ ಸರ್ವೋಚ್ಛ ನಾಯಕನಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಅವರನ್ನು ಹತ್ಯೆ ಮಾಡಲಾಗಿದೆ ಎನ್ನುವ ಸುದ್ದಿ ಹರಿದಾಡಿದೆ. ಆದರೆ ಈ ಸುದ್ದಿಯನ್ನು ಅಂತಾರಾಷ್ಟ್ರೀಯ ಮಟ್ಟದ ಮಾಧ್ಯಮಗಳು ದೃಢಪಡಿಸಿಲ್ಲ. ಇರಾನ್ ಅಥವಾ ಇಸ್ರೇಲ್ ಕಡೆಯಿಂದಲೂ ಈ ಸುದ್ದಿಯನ್ನು ಪುಷ್ಟೀಕರಿಸಿಲ್ಲ. ಆದರೆ ಅರಾಫಿ ಅವರನ್ನು ಹತ್ಯೆ ಮಾಡಲಾಗಿದೆ ಎಂಬ ಸುದ್ದಿ ಜೋರಾಗಿಯೇ ಸದ್ದು ಮಾಡಿದೆ.
ಮೊನ್ನೆ ಫೆ.28ರಂದು ಹಠಾತ್ತಾಗಿ ಇರಾನ್ ಮೇಲೆ ದಾಳಿ ನಡೆಸಿದ ಇಸ್ರೇಲ್ ಮಿಸೈಲ್ ಗಳು ಇರಾನ್ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿಯವರನ್ನು ಹತ್ಯೆ ಮಾಡಿತ್ತು. ಆದರೆ ಹತ್ಯೆಯಾದ ಸುದ್ದಿ ಮೊದಲು ದೃಢಪಡಿಸಿರಲಿಲ್ಲ. ಇಸ್ರೇಲ್ ಗುಪ್ತಚರ ಪಡೆಗಳು ಖಚಿತಪಡಿಸಿದ ಬಳಿಕವೇ ಇರಾನ್ ಮಾಧ್ಯಮಗಳು ಕೂಡ ಖಮೇನಿ ಸಾವಾಗಿದ್ದನ್ನು ಹೇಳಿದ್ದವು. ಅಲಿ ಖಮೇನಿ ಹತ್ಯೆ ಬೆನ್ನಲ್ಲೇ ಹಿರಿಯ ಧರ್ಮಗುರು ಮತ್ತು ಖಮೇನಿ ಆಪ್ತರಾಗಿದ್ದ ಅಲಿರೆಝಾ ಅರಾಫಿ ಅವರನ್ನು ಪರಮೋಚ್ಛ ನಾಯಕರನ್ನಾಗಿ ನೇಮಿಸಲಾಗಿತ್ತು.
ಮುಂದಿನ ಸರ್ವೋಚ್ಛ ನಾಯಕನ ಆಯ್ಕೆ ಆಗುವ ವರೆಗೂ ಅರಾಫಿ ಅವರೇ ದೇಶವನ್ನು ಮುನ್ನಡೆಸಲಿದ್ದಾರೆ ಎನ್ನುವ ಸಂದೇಶ ಬಂದಿತ್ತು. ಅಲಿ ಖಮೇನಿ 1989ರಿಂದ ಇರಾನ್ ದೇಶದ ಸರ್ವೋಚ್ಛ ನಾಯಕರಾಗಿ ಅಧಿಕಾರದಲ್ಲಿದ್ದರು.
ಈ ವೇಳೆ, ಸರ್ವಾಧಿಕಾರಿ ಧೋರಣೆ ಹೊಂದಿದ್ದರು, ಹಲವರ ಹತ್ಯೆಗೆ ಕಾರಣವಾಗಿದ್ದರು ಎನ್ನುವ ಆರೋಪಗಳಿದ್ದವು. ಖಮೇನಿ ಅವರು ಅಧಿಕಾರ ತ್ಯಜಿಸಬೇಕೆಂದು ಅಲ್ಲಿನದ್ದೇ ಜನರು ಹಲವು ತಿಂಗಳುಗಳಿಂದ ಪ್ರತಿಭಟನೆಯನ್ನೂ ನಡೆಸಿದ್ದರು. ಇದೀಗ ಖಮೇನಿ ಅವರನ್ನು ಅಮೆರಿಕ- ಇಸ್ರೇಲ್ ಜಂಟಿ ದಾಳಿಯಲ್ಲಿ ಹತ್ಯೆ ಮಾಡಲಾಗಿದೆ.
14-10-26 02:02 pm
HK News Staffer
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
14-10-26 12:54 pm
HK News Staffer
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
14-10-26 02:00 pm
HK News Staffer
ಪಾಂಡೇಶ್ವರ ಟ್ರಾಫಿಕ್ ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ...
13-10-26 11:10 pm
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
14-10-26 12:23 pm
HK News Staffer
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm
ಮುಂಬೈ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿ ಪುತ್ತೂರಿನ...
12-10-26 10:36 pm
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm