ಬ್ರೇಕಿಂಗ್ ನ್ಯೂಸ್
28-02-26 10:54 pm HK News Desk ದೇಶ - ವಿದೇಶ
ನವದೆಹಲಿ, ಫೆ.28: ಇರಾನ್ – ಇಸ್ರೇಲ್ – ಅಮೆರಿಕ ಸಂಘರ್ಷ ಹಿನ್ನೆಲೆಯಲ್ಲಿ ದುಬೈನತ್ತಲೂ ಮಿಸೈಲ್ ದಾಳಿ ಆಗುತ್ತಿರುವುದರಿಂದ ಜಗತ್ತಿನ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲಿ ಎಲ್ಲ ಜನರು ತೆರವಾಗುವಂತೆ ಸೂಚಿಸಲಾಗಿದೆ.
ಇರಾನ್ ಪಡೆಗಳು ಅಲ್ ದಫ್ರಾದಲ್ಲಿರುವ ಅಮೆರಿಕದ ಮಿಲಿಟರಿ ಬೇಸನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದ್ದು, ಅಬುಧಾಬಿ ಮತ್ತು ದುಬೈನಲ್ಲೂ ಸ್ಫೋಟದ ಘಟನೆಗಳು ನಡೆದಿವೆ. ದುಬೈನ ಬುರ್ಜ್ ಖಲೀಫಾ ಕಟ್ಟಡದ ಬಳಿಯಲ್ಲೂ ಸ್ಫೋಟದ ಸದ್ದು ಕೇಳಿದ್ದು ಜನರು ಆತಂಕಗೊಂಡಿದ್ದಾರೆ. ದುಬೈನಲ್ಲಿ ಕೇರಳ, ಕರ್ನಾಟಕದ ಅತಿ ಹೆಚ್ಚು ಜನರಿದ್ದಾರೆ. ಯುಎಇ ರಾಜಧಾನಿ ಅಬುಧಾಬಿಯಲ್ಲಿ ಸ್ಫೋಟದ ಸದ್ದು ಕೇಳಿದ್ದು ಹೊಗೆ ಎದ್ದಿರುವ ದೃಶ್ಯವನ್ನು ಸಿಎನ್ಎನ್ ಟಿವಿ ವರದಿ ಮಾಡಿದೆ.
ಅಬುಧಾಬಿಯ ವಸತಿ ಪ್ರದೇಶಕ್ಕೂ ಇರಾನ್ ಕ್ಷಿಪಣಿ ದಾಳಿಯಾಗಿದ್ದರಿಂದ ಅಲ್ಲಿನ ಪ್ರಜೆಯೊಬ್ಬರು ಸಾವನ್ನಪ್ಪಿದ್ದಾರೆ. ಇದರ ನಂತರ, ದುಬೈನಲ್ಲಿ ವಿಮಾನ ಸಂಚಾರ ರದ್ದುಪಡಿಸಿದ್ದು ಏರ್ ಡಿಫೆನ್ಸ್ ಸಿಸ್ಟಮ್ ಸಿದ್ಧವಾಗಿಸಲಾಗಿದೆ. ಇರಾನ್ ದಾಳಿಯನ್ನು ಯುಎಇ ಸಚಿವಾಲಯ, ಹೇಡಿತನದ್ದು ಮತ್ತು ಅಪಾಯಕಾರಿ ನಡೆ ಎಂದು ಹೇಳಿದೆ. ದುಬೈ ಬಳಿಯ ಪ್ರಸಿದ್ಧ ಪ್ರವಾಸಿ ತಾಣ ಪಾಮ್ ಐಲ್ಯಾಂಡ್ ಬಳಿಯೂ ಬೆಂಕಿ ಮತ್ತು ಹೊಗೆ ಎದ್ದಿದ್ದು ಕ್ಷಿಪಣಿ ದಾಳಿಯಾದ ಬಗ್ಗೆ ಹೇಳಲಾಗುತ್ತಿದೆ.
ಅಮೆರಿಕ ಮತ್ತು ಇಸ್ರೇಲಿ ಪಡೆಗಳ ದಾಳಿಯು ಇರಾನ್ ನಾಯಕ ಅಲಿ ಖಮೇನಿ ಮತ್ತು ಅಧ್ಯಕ್ಷ ಮಸೂದ್ ಪಜೆಶ್ಕಿಯಾನ್ ಅವರನ್ನು ಗುರಿಯಾಗಿಸಿದ್ದು ಇರಾನ್ ದೇಶದ ಉತ್ತರ ದಕ್ಷಿಣವೆಂದು ಎಲ್ಲ ಕಡೆಯೂ ದಾಳಿಯಾಗಿದೆ. ಬಾಲಕಿಯರ ಶಾಲೆಗೂ ಬಾಂಬ್ ದಾಳಿಯಾಗಿದ್ದು, ಅಲ್ಲಿ 57 ಮಂದಿ ಸಾವನ್ನಪ್ಪಿದ್ದಾರೆಂದು ಹೇಳಲಾಗಿದೆ. ಒಟ್ಟು 85 ಮಂದಿ ಇರಾನ್ ಕಡೆಯಲ್ಲಿ ಸಾವು ಸಂಭವಿಸಿದೆ ಎನ್ನಲಾಗುತ್ತಿದೆ. ಶನಿವಾರದ ಇಸ್ರೇಲ್ ದಾಳಿಯಿಂದ ಅಲಿ ಖಮೇನಿ ಸಾವಾಗಿದೆ ಎಂದು ಹೇಳಲಾಗುತ್ತಿದ್ದರೂ ಇರಾನ್ ಇದನ್ನು ದೃಢಪಡಿಸಿಲ್ಲ. ಇರಾನ್ ವಿದೇಶ ಮಂತ್ರಿ ಅಬ್ಬಾಸ್ ಅರಾಗ್ಚಿ, ಖಮೇನಿ ಇನ್ನೂ ಜೀವಂತ ಇದ್ದಾರೆ ಎಂದಿದ್ದಾರೆ. ಇರಾನ್ ಮೇಲಿನ ದಾಳಿಯನ್ನು ರಷ್ಯಾ ಮತ್ತು ಚೀನಾ ಖಂಡಿಸಿವೆ.
14-10-26 02:02 pm
HK News Staffer
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
14-10-26 12:54 pm
HK News Staffer
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
14-10-26 02:00 pm
HK News Staffer
ಪಾಂಡೇಶ್ವರ ಟ್ರಾಫಿಕ್ ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ...
13-10-26 11:10 pm
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
14-10-26 12:23 pm
HK News Staffer
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm
ಮುಂಬೈ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿ ಪುತ್ತೂರಿನ...
12-10-26 10:36 pm
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm