ಬ್ರೇಕಿಂಗ್ ನ್ಯೂಸ್
23-02-26 06:57 pm HK News Desk ದೇಶ - ವಿದೇಶ
ಜೈಪುರ, ಫೆ.23: ರಾಜಸ್ಥಾನದಲ್ಲಿ ಕಂಬಳಿ ವಿತರಣೆ ಕಾರ್ಯಕ್ರಮದ ವೇಳೆ ಮುಸ್ಲಿಂ ಮಹಿಳೆಗೆ ಕಂಬಳಿ ನೀಡಲು ನಿರಾಕರಿಸಿರುವ ಬಿಜೆಪಿ ಸಂಸದನ ನಡೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಘಟನೆಗೆ ಸಂಬಂಧಿಸಿ ಟೋಂಕ್–ಸವಾಯಿ ಮಾಧೋಪುರ ಕ್ಷೇತ್ರದ ಮಾಜಿ ಬಿಜೆಪಿ ಸಂಸದ ಸುಖಬೀರ್ ಸಿಂಗ್ ಜೌನಪುರಿಯಾ ವಿರುದ್ಧ ಮುಸ್ಲಿಂ ಮಹಿಳೆ ಬಗ್ಗೆ ತಾರತಮ್ಯದ ಆರೋಪ ಕೇಳಿಬಂದಿದೆ.
ಫೆಬ್ರವರಿ 22 ರಂದು ನಿವಾಯ್ ತಹಸಿಲಿನ ಕರೇರಾ ಗ್ರಾಮದಲ್ಲಿ ಕಂಬಳಿ ವಿತರಣಾ ಸಮಾರಂಭ ಆಯೋಜಿಸಲಾಗಿತ್ತು. 2014 ರಿಂದ 2024ರ ವರೆಗೆ ಸಂಸದರಾಗಿದ್ದ ಸುಖಬೀರ್ ಸಿಂಗ್ ಜೌನಪುರಿಯಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಹಿಳೆಯರಿಗೆ ಕಂಬಳಿಗಳನ್ನು ವಿತರಿಸುತ್ತಿದ್ದರು.
ಈ ಸಂದರ್ಭದಲ್ಲಿ ಒಬ್ಬ ಮಹಿಳೆ ಕಂಬಳಿ ಸ್ವೀಕರಿಸಲು ಬಂದಿದ್ದು ಆಕೆಯದ್ದು ಮುಸ್ಲಿಂ ಹೆಸರು ಎಂದು ತಿಳಿಯುತ್ತಲೇ ಸುಖಬೀರ್ ಸಿಂಗ್, “ಪ್ರಧಾನಿ ನರೇಂದ್ರ ಮೋದಿಯನ್ನು ನಿಂದಿಸುವವರಿಗೆ ಕಂಬಳಿ ತೆಗೆದುಕೊಳ್ಳುವ ಹಕ್ಕಿಲ್ಲ. ನಿಮಗಿದು ಕೆಟ್ಟದು ಅಂತನಿಸಿದರೆ ನನಗೇನೂ ಮಾಡಲಾಗದು" ಎಂದು ಹೇಳಿ ಕಂಬಳಿಯನ್ನು ನೀಡಲು ನಿರಾಕರಿಸಿದ ವಿಡಿಯೋ ವೈರಲ್ ಆಗಿದೆ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಟೋಂಕ್–ಸವಾಯಿ ಮಾಧೋಪುರ ಕ್ಷೇತ್ರದ ಕಾಂಗ್ರೆಸ್ ಸಂಸದ ಹರೀಶ್ ಚಂದ್ರ ಮೀನಾ ಈ ವೀಡಿಯೋವನ್ನು ಹಂಚಿಕೊಂಡು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಿಂಗ್ ಅವರ ನಡವಳಿಕೆ ದೇಶದ ಸಾಮಾಜಿಕ ಸೌಹಾರ್ದತೆಗೆ ಧಕ್ಕೆಯುಂಟು ಮಾಡುತ್ತದೆ ಎಂದು ಕಿಡಿಕಾರಿದ್ದಾರೆ. ಇದೇ ವೇಳೆ ವಿರೋಧ ಪಕ್ಷದ ನಾಯಕ ಟಿಕಾರಂ ಜೂಲಿ ಕೂಡ ಘಟನೆಯನ್ನು ತಾರತಮ್ಯದ ನಡವಳಿಕೆ ಎಂದು ಟೀಕಿಸಿದ್ದು ಜನಪ್ರತಿನಿಧಿಯೊಬ್ಬರು ಈ ರೀತಿಯಲ್ಲಿ ವರ್ತಿಸಿರುವುದು ಖಂಡನೀಯ ಎಂದು ಹೇಳಿದ್ದಾರೆ.
ವಿವಾದ ತೀವ್ರಗೊಂಡ ನಂತರ ಸುಖಬೀರ್ ಸಿಂಗ್ ಜೌನಪುರಿಯಾ ಸ್ಪಷ್ಟನೆ ನೀಡಿದ್ದು, ಕಂಬಳಿ ವಿತರಣೆ ಸಂಪೂರ್ಣ ತಮ್ಮ ವೈಯಕ್ತಿಕ ಕಾರ್ಯಕ್ರಮವಾಗಿದ್ದು ಯಾವುದೇ ಸರ್ಕಾರಿ ಯೋಜನೆ ಅಥವಾ ಸಾರ್ವಜನಿಕ ಹಣವನ್ನು ಬಳಸಲಾಗಿಲ್ಲ ಎಂದು ತಿಳಿಸಿದ್ದಾರೆ. ತಾವು ಯಾರ ಮೇಲೂ ತಾರತಮ್ಯ ಮಾಡಿಲ್ಲ ಎಂದು ಅವರು ಹೇಳಿದ್ದಾರೆ.
14-10-26 02:02 pm
HK News Staffer
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
14-10-26 12:54 pm
HK News Staffer
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
14-10-26 02:00 pm
HK News Staffer
ಪಾಂಡೇಶ್ವರ ಟ್ರಾಫಿಕ್ ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ...
13-10-26 11:10 pm
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
14-10-26 12:23 pm
HK News Staffer
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm
ಮುಂಬೈ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿ ಪುತ್ತೂರಿನ...
12-10-26 10:36 pm
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm