ಬ್ರೇಕಿಂಗ್ ನ್ಯೂಸ್
01-01-21 11:09 pm Headline Karnataka News Network ದೇಶ - ವಿದೇಶ
Photo credits : Hauterfly
ಕೊಲ್ಲಂ, ಜ.1: ತಾನು ಕಸ ಗುಡಿಸುತ್ತಿದ್ದ ಪಂಚಾಯಿತಿಯಲ್ಲೇ ಆಕೆ ಅಧ್ಯಕ್ಷೆಯಾಗಿದ್ದಾರೆ. ಹೌದು... ಕೊಲ್ಲಂ ಜಿಲ್ಲೆಯ ಪತ್ತನಾಪುರಂ ಬ್ಲಾಕ್ ಪಂಚಾಯಿತಿಯಲ್ಲಿ ಕಸ ಗುಡಿಸುತ್ತಿದ್ದ ಮಹಿಳೆಗೆ ಅದೃಷ್ಟ ಒಲಿದಿದ್ದು, ಈಗ ಅದೇ ಪಂಚಾಯತಿನ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.
ಆಕೆಯ ಹೆಸರು ಆನಂದವಲ್ಲಿ. 46 ವರ್ಷದ ಈ ಮಹಿಳೆ ಪತ್ತನಾಪುರಂ ಪಂಚಾಯತಿಯಲ್ಲಿ ಕಸ ಗುಡಿಸುತ್ತಾ, ಅಧಿಕಾರಿಗಳಿಗೆ ಚಹಾ ತಂದು ಕೊಡುವ ಕೆಲಸ ಮಾಡುತ್ತಿದ್ದರು. ಹೀಗೆ ಕೆಲಸ ಮಾಡುತ್ತಿದ್ದ ಪರಿಶಿಷ್ಟ ಜಾತಿಯ ಮಹಿಳೆಯನ್ನು ಸಿಪಿಎಂ ಪಕ್ಷದಲ್ಲಿ ತಲವೂರು ಕ್ಷೇತ್ರದಲ್ಲಿ ಕಣಕ್ಕಿಳಿಸಲಾಗಿತ್ತು. ಅದೃಷ್ಟದಲ್ಲಿ ಗೆಲುವನ್ನೂ ಕಂಡಿದ್ದರು.
13 ಸ್ಥಾನಗಳ ಪತ್ತನಾಪುರಂ ಬ್ಲಾಕ್ ಪಂಚಾಯಿತಿಯಲ್ಲಿ ಸಿಪಿಎಂ ಏಳು ಸ್ಥಾನಗಳನ್ನು ಪಡೆದಿದ್ದು ಅಧಿಕಾರಕ್ಕೇರಿದೆ. ಅಧ್ಯಕ್ಷ ಸ್ಥಾನ ಪರಿಶಿಷ್ಟ ಮಹಿಳೆಗೆ ಮೀಸಲಾಗಿದ್ದರಿಂದ ಆನಂದವಲ್ಲಿ ಬಿಟ್ಟರೆ ಬೇರೆ ಯಾರು ಕೂಡ ಸೂಕ್ತ ಅಭ್ಯರ್ಥಿ ಇರಲಿಲ್ಲ. ಹೀಗಾಗಿ ಸಿಪಿಎಂ ಘಟಕ ಆನಂದವಲ್ಲಿಯನ್ನು ಅಧ್ಯಕ್ಷೆಯಾಗಿ ಆಯ್ಕೆ ಮಾಡಿದೆ. ಪತಿ ಮೋಹನ್, ಸಿಪಿಎಂ ಪಕ್ಷದ ಸ್ಥಳೀಯ ಸಮಿತಿ ಸದಸ್ಯರಾಗಿದ್ದಾರೆ.
ಆನಂದವಲ್ಲಿ 2011ರಲ್ಲಿ ಪತ್ತನಾಪುರಂ ಬ್ಲಾಕ್ ಪಂಚಾಯಿತಿಗೆ ಕಸ ಗುಡಿಸುವ ಕೆಲಸಕ್ಕೆ ಸೇರಿದ್ದರು. ಆಗ ಅವರಿಗೆ 2 ಸಾವಿರ ರೂ. ವೇತನ ಇತ್ತು. 2017ರಲ್ಲಿ ವೇತನ ಪರಿಷ್ಕರಣೆಯಾಗಿ ಆರು ಸಾವಿರಕ್ಕೆ ಏರಿಕೆಯಾಗಿತ್ತು. ಕಸ ಗುಡಿಸುವ ಜೊತೆಗೆ ಪಂಚಾಯಿತಿಯಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದರು. ದ್ವಿತೀಯ ಪಿಯುಸಿ ಓದಿರುವ ಆನಂದವಲ್ಲಿ ಪಂಚಾಯಿತಿಯಲ್ಲಿ ಕಳೆದ ವಾರದ ವರೆಗೂ ಅಧಿಕಾರಿಗಳಿಗೆ ಚಹಾ ತಂದು ಕೊಡುತ್ತಿದ್ದರು.
ಇಂಥ ಹುದ್ದೆಯನ್ನು ಅಲಂಕರಿಸುತ್ತೇನೆಂದು ಕನಸಿನಲ್ಲೂ ಎಣಿಸಿರಲಿಲ್ಲ. ನಾನೇ ಕಸ ಗುಡಿಸುತ್ತಿದ್ದ ಪಂಚಾಯಿತಿಯಲ್ಲೇ ಮುಖ್ಯಸ್ಥಳಾಗುವ ಅದೃಷ್ಟ ಬಂದಿರುವುದು ನಿಜಕ್ಕೂ ಊಹಿಸಲು ಸಾಧ್ಯವಾಗದ ವಿಷಯ ಎಂದು ಆನಂದವಲ್ಲಿ ಪ್ರತಿಕ್ರಿಯಿಸಿದ್ದಾರೆ.
For almost 10 years she had swept floors and dusted chairs at the panchayat office but on Wednesday A Anandavalli (46) occupied the chair of the block panchayat president in Pathanapuram in south Kerala’s Kollam district.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm