ಬ್ರೇಕಿಂಗ್ ನ್ಯೂಸ್
06-02-26 08:17 pm HK News Desk ದೇಶ - ವಿದೇಶ
ನವದೆಹಲಿ, ಫೆ 06 : ಚಿನ್ನ, ಬೆಳ್ಳಿ, ವಡವೆಗಳನ್ನ ಮನೆಯಲ್ಲಿಟ್ಟರೆ ಕಳ್ಳರಭಯ. ಆದ್ರೆ ಬ್ಯಾಂಕ್ ಲಾಕರ್‌ನಲ್ಲಿ ಇಟ್ಟರೆ ಭದ್ರತೆ ಎಂಬ ನಂಬಿಕೆಗೆ ಇದೀಗ ಭಾರೀ ಆಘಾತ ನೀಡುವ ಘಟನೆ ಹರಿಯಾಣದ ಫರಿದಾಬಾದ್ ಜಿಲ್ಲೆಯಲ್ಲಿ ನಡೆದಿದೆ. ದೇಶದ ಅತಿ ದೊಡ್ಡ ರಾಷ್ಟ್ರೀಕೃತ ಬ್ಯಾಂಕ್ ಎನ್ನಲಾಗುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (SBI) ಶಾಖೆಯಲ್ಲೇ, ಸುಮಾರು 2 ಕೋಟಿ ರೂ. ಮೌಲ್ಯದ ಚಿನ್ನ, ಬೆಳ್ಳಿ ಮತ್ತು ಬೆಲೆಬಾಳುವ ವಸ್ತುಗಳು ನಾಪತ್ತೆಯಾಗಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ.
ಫರಿದಾಬಾದ್‌ನ ಸೆಕ್ಟರ್–15 ನಲ್ಲಿರುವ SBI ಬ್ರಾಂಚ್, ಚಾರ್ಟರ್ಡ್ ಅಕೌಂಟೆಂಟ್ ಡಿ.ಸಿ. ಗಾರ್ಗ್ ಅವರಿಗೆ ಸೇರಿದ್ದ ಲಾಕರ್ ಬ್ಯಾಂಕ್ ದಾಖಲೆಗಳಿಂದಲೇ ಅಳಿದುಹೋಗಿರುವುದು ಗ್ರಾಹಕರಲ್ಲಿ ಆತಂಕ ಮೂಡಿಸಿದೆ. ಕಳೆದ 12 ವರ್ಷಗಳಿಂದ ಗಾರ್ಗ್ ಅವರು ಈ ಲಾಕರ್‌ನಲ್ಲಿ ಚಿನ್ನ, ಬೆಳ್ಳಿ ಹಾಗೂ ಮೌಲ್ಯವಸ್ತುಗಳನ್ನು ಸುರಕ್ಷಿತವಾಗಿ ಇಟ್ಟಿದ್ದರು. ಎರಡು ದಿನಗಳ ಹಿಂದೆ ಲಾಕರ್ ನಿರ್ವಹಣೆಗೆ ಗಾರ್ಗ್ ಅವರ ಪತ್ನಿ ಬ್ಯಾಂಕ್‌ಗೆ ತೆರಳಿದಾಗ, “ಈ ಲಾಕರ್ ಇಲ್ಲವೇ ಇಲ್ಲ” ಎಂಬ ಬ್ಯಾಂಕ್ ಸಿಬ್ಬಂದಿಯ ಉತ್ತರ ಕೇಳಿ ಬೆಚ್ಚಿಬಿದ್ದಿದ್ದಾರೆ. ಇನ್ನಷ್ಟು ಆಘಾತಕಾರಿ ಸಂಗತಿ ಎಂದರೆ ಕಳೆದ ಒಂದು ವರ್ಷದಿಂದಲೂ ಲಾಕರ್ ಅಸ್ತಿತ್ವದಲ್ಲಿಲ್ಲ ಎನ್ನಲಾಗುತ್ತಿದ್ದರೂ, ಗಾರ್ಗ್ ಅವರ ಖಾತೆಯಿಂದ ವಾರ್ಷಿಕ ಲಾಕರ್ ಶುಲ್ಕವಾದ 2,360 ರೂ. ಮಾತ್ರ ನಿಯಮಿತವಾಗಿ ಕಡಿತಗೊಳಿಸಲಾಗುತ್ತಿತ್ತು.
ಬ್ಯಾಂಕ್ ಅಧಿಕಾರಿಗಳನ್ನು ಪ್ರಶ್ನಿಸಿದಾಗ, “ನಿಮ್ಮ ಹೆಸರಿನಲ್ಲಿ ಯಾವುದೇ ಲಾಕರ್ ನೋಂದಾಯಿತವಾಗಿಲ್ಲ” ಎಂಬ ಉತ್ತರ ನೀಡಲಾಗಿದೆ. ಗಾರ್ಗ್ ಅವರು ತಮ್ಮ ಬಳಿ ಲಾಕರ್‌ನ ಮೂಲ ಕೀ ಇದೆ ಎಂದು ತಿಳಿಸಿದಾಗ, ಆ ಲಾಕರ್ ಅನ್ನು ಈಗ ಮತ್ತೊಬ್ಬ ವ್ಯಕ್ತಿಗೆ ಹಂಚಿಕೆ ಮಾಡಲಾಗಿದೆ ಎಂದು ಬ್ಯಾಂಕ್ ಅಧಿಕಾರಿಗಳು ಹೇಳಿದ್ದಾರೆ. ಇದರಿಂದ ಗ್ರಾಹಕರು ಮತ್ತಷ್ಟು ಶಾಕ್ ಆಗಿದ್ದಾರೆ.
ಗಾರ್ಗ್ ಅವರ ಆರೋಪದ ಪ್ರಕಾರ ಬ್ಯಾಂಕ್ ಸಿಬ್ಬಂದಿಯೇ ಇದರಲ್ಲಿ ಕೈ ಜೋಡಿಸಿದ್ದಾರಂತೆ. ಬ್ಯಾಂಕ್ ಲಾಕರ್ ಅನ್ನು ಮುರಿದು, ಬ್ಯಾಂಕ್ ಅಧಿಕಾರಿಗಳ ಅನುಮತಿಯೊಂದಿಗೆ ವಿಕಾಸ್ ಚೌಹಾಣ್ ಎಂಬವರಿಗೆ ಮರು ಹಂಚಿಕೆ ಮಾಡಲಾಗಿದೆ. ನಕಲಿ ಕೀಲಿಯನ್ನು ನೀಡುವ ಮೂಲಕ ಸುಮಾರು 1.25 ಕೆಜಿ ಚಿನ್ನದ ಬಾರ್‌ಗಳು, 3 ಕೆಜಿ ಬೆಳ್ಳಿ ಹಾಗೂ ಇತರ ಮೌಲ್ಯವಸ್ತುಗಳನ್ನು ಎಸ್ಕೇಪ್ ಮಾಡಲಾಗಿದೆ ಎಂದು ಅವರು ದೂರಿದ್ದಾರೆ.
ಎಸ್‌ಬಿಐ ಪ್ರಧಾನ ಕಚೇರಿ ಹಾಗೂ ಬ್ಯಾಂಕ್ ಅಧ್ಯಕ್ಷರಿಗೆ ದೂರು ಸಲ್ಲಿಸಲಾಗಿದೆ. ಹಿರಿಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಆದರೆ, ಬ್ಯಾಂಕ್ ಸಿಬ್ಬಂದಿ ಮಾತ್ರ ಗಾರ್ಗ್ ಕುಟುಂಬವೇ ಡೂಪ್ಲಿಕೇಟ್ ಲಾಕರ್ ಖಾಲಿ ಮಾಡಿಸಿಕೊಂಡಿದ್ದಾರೆ ಎಂದು ಹೇಳುತ್ತಿರುವುದು ಪ್ರಕರಣಕ್ಕೆ ಮತ್ತಷ್ಟು ಅನುಮಾನಗಳ ಛಾಯೆ ಮೂಡಿಸಿದೆ.
In a shocking incident that has raised serious concerns over bank locker security, gold, silver, and valuables worth nearly ₹2 crore have allegedly gone missing from an SBI branch in Faridabad, Haryana.
14-10-26 02:02 pm
HK News Staffer
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
14-10-26 12:54 pm
HK News Staffer
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
14-10-26 02:00 pm
HK News Staffer
ಪಾಂಡೇಶ್ವರ ಟ್ರಾಫಿಕ್ ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ...
13-10-26 11:10 pm
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
14-10-26 12:23 pm
HK News Staffer
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm
ಮುಂಬೈ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿ ಪುತ್ತೂರಿನ...
12-10-26 10:36 pm
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm