ಬ್ರೇಕಿಂಗ್ ನ್ಯೂಸ್
13-12-25 08:34 pm HK News Desk ದೇಶ - ವಿದೇಶ
ತಿರುವನಂತಪುರಂ, ಡಿ.13 : ಕೇರಳ ರಾಜ್ಯದಲ್ಲಿ ಏಕಕಾಲದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಅತಿ ಹೆಚ್ಚು ಸ್ಥಾನಗಳನ್ನು ಪಡೆದು ಭರ್ಜರಿ ಗೆಲುವು ಸಾಧಿಸಿದೆ. ಇದೇ ವೇಳೆ, ಬಿಜೆಪಿ ನೇತೃತ್ವದ ಎನ್ಡಿಎ ಇದೇ ಮೊದಲ ಬಾರಿಗೆ ರಾಜಧಾನಿ ತಿರುವನಂತಪುರಂ ಪಾಲಿಕೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಪಡೆದು ಜಯಭೇರಿ ಸಾಧಿಸಿದ್ದು ಹೊಸ ಇತಿಹಾಸ ಸೃಷ್ಟಿಸಿದೆ.
ಕೊಲ್ಲಂ, ಕೊಚ್ಚಿ, ತ್ರಿಶೂರ್ ಮತ್ತು ಕಣ್ಣೂರು ಮಹಾನಗರ ಪಾಲಿಕೆಗಳನ್ನು ಯುಡಿಎಫ್ ಗೆದ್ದಿದೆ. ಎಲ್ ಡಿಎಫ್ ಕೋಝಿಕ್ಕೋಡ್ ಪಾಲಿಕೆಯನ್ನು ಉಳಿಸಿಕೊಂಡಿದೆ. ಆದರೆ ಎನ್ ಡಿಎ ತಿರುವಂನಪುರಂ ಪಾಲಿಕೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಪಡೆದು ಎಲ್ ಡಿಎಫ್ ನಿಂದ ಅಧಿಕಾರ ಕಿತ್ತುಕೊಂಡಿದೆ.
59 ಜಿಲ್ಲಾ ಪಂಚಾಯತ್ಗಳು, 1,063 ಬ್ಲಾಕ್ ಪಂಚಾಯತ್ಗಳು ಮತ್ತು 7,451 ಗ್ರಾಮ ಪಂಚಾಯತ್ಗಳಲ್ಲಿ ಯುಡಿಎಫ್ ಅಧಿಕಾರ ಹಿಡಿದಿದ್ದು ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಎಡರಂಗದಿಂದ ಅಧಿಕಾರವನ್ನು ಕಿತ್ತುಕೊಳ್ಳುವ ಲಕ್ಷಣ ತೋರಿಸಿದೆ. ಎಡರಂಗ ನೇತೃತ್ವದ ಎಲ್ ಡಿಎಫ್ 30 ಜಿಲ್ಲಾ ಪಂಚಾಯಿತಿಗಳು, 823 ಬ್ಲಾಕ್ ಪಂಚಾಯಿತಿಗಳು ಮತ್ತು 6,137 ಗ್ರಾಮ ಪಂಚಾಯಿತಿಗಳಲ್ಲಿ ಅಧಿಕಾರ ಪಡೆದಿದೆ. ಎನ್ಡಿಎ ಒಂದು ಜಿಲ್ಲಾ ಪಂಚಾಯಿತಿ, 50 ಬ್ಲಾಕ್ ಪಂಚಾಯಿತಿಗಳು ಮತ್ತು 1,363 ಗ್ರಾಮ ಪಂಚಾಯಿತಿಗಳನ್ನು ಗೆದ್ದುಕೊಂಡಿದೆ.
101 ಸದಸ್ಯ ಬಲದ ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಎನ್ ಡಿಎ 50 ಸ್ಥಾನಗಳನ್ನು ಪಡೆದಿದ್ದು ಅತಿ ಹೆಚ್ಚು ಸ್ಥಾನಗಳೊಂದಿಗೆ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ. ಎನ್ ಡಿಎ 50, ಎಲ್ ಡಿಎಫ್ 29 ಹಾಗೂ ಯುಡಿಎಫ್ 19 ಸ್ಥಾನಗಳನ್ನು ಪಡೆದಿದೆ. 2020ರಲ್ಲಿ ಎಲ್ ಡಿಎಫ್ 52, ಎನ್ ಡಿಎ 33, ಯುಡಿಎಫ್ 10 ಸ್ಥಾನಗಳನ್ನು ಪಡೆದಿತ್ತು. ವಿಶೇಷ ಅಂದರೆ, ಎಡರಂಗ ಬಲಿಷ್ಠವಾಗಿರುವ ಪ್ರದೇಶದಲ್ಲೇ ಬಿಜೆಪಿ ಸದಸ್ಯರು ಗೆದ್ದುಕೊಂಡಿದ್ದಾರೆ. ಸಿಪಿಐ ರಾಜ್ಯ ಕಚೇರಿ ಇರುವ ಎಕೆಜಿ ಸೆಂಟರ್ ಭಾಗದಲ್ಲಿಯೇ ಬಿಜೆಪಿ ಗೆದ್ದಿದೆ. ಆಮೂಲಕ ಎಡರಂಗದ ಮತ ಬ್ಯಾಂಕನ್ನು ಬಿಜೆಪಿ ಸೆಳೆದಿರುವುದು ಸ್ಪಷ್ಟವಾಗಿದೆ.
ತಿರುವನಂತಪುರಂ ಪಾಲಿಕೆ ಅಸ್ತಿತ್ವಕ್ಕೆ ಬಂದ 45 ವರ್ಷಗಳ ಬಳಿಕ ಎಡರಂಗ ಅಧಿಕಾರ ಕಳಕೊಂಡಿದೆ. ಎಡರಂಗವೇ ಇಲ್ಲಿ ಮೊದಲಿನಿಂದಲೂ ಅಧಿಕಾರ ನಡೆಸುತ್ತ ಬಂದಿದೆ. ಯುಡಿಎಫ್ ಮತ್ತು ಎನ್ ಡಿಎ ಕೂಟಗಳು ಅತಿ ಹೆಚ್ಚು ಸ್ಥಾನ ಗಳಿಸಿರುವುದನ್ನು ತಿರುವನಂತಪುರ ಕಾಂಗ್ರೆಸ್ ಸಂಸದ ಶಶಿ ತರೂರ್, ಇದುವೇ ಪ್ರಜಾಪ್ರಭುತ್ವದ ಸೌಂದರ್ಯ. ಎಡರಂಗದ ಆಡಳಿತ ಅಂತ್ಯಗೊಳಿಸಲು ನಾವು ಪ್ರಚಾರ ಮಾಡಿದ್ದೆವು. ಜನರು ಬಿಜೆಪಿಯನ್ನು ಆರಿಸಿದ್ದಾರೆ. ಜನಮತವನ್ನು ನಾವು ಗೌರವಿಸಬೇಕು ಎಂದಿದ್ದಾರೆ.
In the simultaneous local body elections held across Kerala, the Congress-led United Democratic Front (UDF) emerged as the biggest gainer, securing the highest number of local bodies and delivering a strong performance ahead of the upcoming Assembly elections.
15-04-26 03:15 pm
HK News Staffer
ದಾವಣಗೆರೆ ಗದ್ದಲಕ್ಕೆ ಮತ್ತೊಂದು ತಲೆದಂಡ ; ಸಿಎಂ ರಾಜ...
14-04-26 02:04 pm
ಸುಳ್ಯದಲ್ಲಿ ಪಾಳು ಬಾವಿಗೆ ಬಿದ್ದ ಕಾಡಾನೆ; ಅಡ್ಡಲಾಗಿ...
13-04-26 09:49 pm
ಕುಂದಾಪುರದ 111 ವರ್ಷಗಳ ಸರ್ಕಾರಿ ಶಾಲೆಗೆ ಬಂತು ಎಐ ರ...
13-04-26 08:19 pm
ದಾವಣಗೆರೆ ದಕ್ಷಿಣದಲ್ಲಿ ಪ್ರಚಾರದಿಂದ ದೂರ; ಸಿಎಂ ರಾಜ...
13-04-26 04:20 pm
15-04-26 01:18 pm
HK News Staffer
ಅಮೆರಿಕ - ಇಸ್ರೇಲ್ ದಾಳಿಗೆ ಅವಕಾಶ ; ಗಲ್ಫ್ ರಾಷ್ಟ್ರ...
14-04-26 10:48 pm
ಕ್ಯಾಥೋಲಿಕ್ ಪೋಪ್ ಲಿಯೋ ಒಬ್ಬ ದುರ್ಬಲ ವ್ಯಕ್ತಿ, ರಾಜ...
14-04-26 01:46 pm
ಟಿಸಿಎಸ್ ಕಂಪನಿಯಲ್ಲಿ ಹೈಫೈ ಜಿಹಾದ್; ಸೆಕ್ಸ್ ದಂಧೆ,...
13-04-26 10:35 pm
ಬಾಂಗ್ಲಾದಲ್ಲಿ ಮುಸ್ಲಿಂ ಯುವಕರಿಂದಲೇ ಇಬ್ಬರು ಧರ್ಮಗು...
13-04-26 09:07 pm
13-04-26 11:39 pm
Mangalore Correspondent
ಮದುವೆ ಸಮಾರಂಭಕ್ಕೆ ಬಂದಿದ್ದ ವಾಹನಗಳು ಹೆದ್ದಾರಿಯಲ್ಲ...
13-04-26 12:53 pm
Mangalore Live Accident Nantoor: ಓವರ್ ಸ್ಪೀಡ್...
12-04-26 09:05 pm
ಬಂಟ್ವಾಳ ; ಮದರಂಗಿ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುತ...
11-04-26 05:05 pm
Fr Melvin J Pinto Death: ಸೈಂಟ್ ಅಲೋಶಿಯಸ್ ಶಿಕ್ಷ...
10-04-26 10:12 pm
14-04-26 11:16 pm
HK News Desk
ಆರಿಫ್ ಕೊಲೆ ಪ್ರಕರಣ ; ಮತ್ತೆ ಮೂವರು ಆರೋಪಿಗಳ ಬಂಧನ,...
14-04-26 11:52 am
ನಂತೂರು ಭೀಕರ ಅಪಘಾತ ; ಬೈಕ್ ಸವಾರನ ಧಾವಂತಕ್ಕೆ ರಸ್ತ...
14-04-26 11:14 am
ಸುದೀಪ್ ರೈ ಆತ್ಮಹತ್ಯೆ ಪ್ರಕರಣ ; ಪತ್ನಿ ಸೌಮ್ಯಾ ಶೆಟ...
11-04-26 11:14 pm
ಕಾಲೇಜು ಗೆಳತಿಯ ಪ್ರೀತಿ ಹುಚ್ಚಾಟ ; ಮಜಾ ಉಡಾಯಿಸಿದ ಬ...
11-04-26 03:09 pm