ಬ್ರೇಕಿಂಗ್ ನ್ಯೂಸ್
07-12-25 12:31 pm HK News Desk ದೇಶ - ವಿದೇಶ
ನವದೆಹಲಿ, ಡಿ.6 : ಸಂವಿಧಾನದ ಪೀಠಿಕೆಯಲ್ಲಿರುವ ಜಾತ್ಯತೀತ ಮತ್ತು ಸಮಾಜವಾದಿ ಪದಗಳನ್ನು ತೆಗೆದುಹಾಕಲು ಬಿಜೆಪಿ ಸಂಸದರೊಬ್ಬರು ರಾಜ್ಯಸಭೆಯಲ್ಲಿ ಮಸೂದೆಯೊಂದನ್ನು ಮಂಡಿಸಿದ್ದಾರೆ. ಸಂವಿಧಾನದ ಪೀಠಿಕೆಯಲ್ಲಿ 'ಜಾತ್ಯತೀತ' ಮತ್ತು 'ಸಮಾಜವಾದಿ' ಪದಗಳ ಅಗತ್ಯವಿಲ್ಲ. ತುರ್ತು ಪರಿಸ್ಥಿತಿಯ ಸಮಯದಲ್ಲಿ ಪ್ರಜಾಪ್ರಭುತ್ವ ವಿರೋಧಿ ರೀತಿಯಲ್ಲಿ ಅವುಗಳನ್ನು ಸೇರಿಸಲಾಗಿದೆ ಎಂದು ಹೇಳಿರುವ ಬಿಜೆಪಿ ಸಂಸದ ಭೀಮ್ ಸಿಂಗ್, ಆ ಪದಗಳನ್ನು ಕಿತ್ತುಹಾಕಲು ಖಾಸಗಿ ಮಸೂದೆಯನ್ನು ಮಂಡಿಸಿದ್ದಾರೆ.
ಶುಕ್ರವಾರ ರಾಜ್ಯಸಭೆಯಲ್ಲಿ ಸಂವಿಧಾನ (ತಿದ್ದುಪಡಿ) ಮಸೂದೆ 2025 ಮಂಡಿಸಿದ ಸಿಂಗ್, ಈ ಪದಗಳು "ಗೊಂದಲ"ವನ್ನು ಸೃಷ್ಟಿಸುತ್ತವೆ ಮತ್ತು ಮೂಲ ಸಂವಿಧಾನದ ಭಾಗವಲ್ಲ ಎಂದು ಹೇಳಿದರು. ಸಂವಿಧಾನದ ಪೀಠಿಕೆಯನ್ನು ತಿದ್ದುಪಡಿ ಮಾಡಲು, 'ಸಮಾಜವಾದಿ' ಮತ್ತು 'ಜಾತ್ಯತೀತ' ಪದಗಳನ್ನು ತೆಗೆದುಹಾಕಲು ಖಾಸಗಿ ಸದಸ್ಯರ ಮಸೂದೆಯನ್ನು ಮಂಡಿಸಿದ್ದೇನೆ. 1950 ರಿಂದ ಜಾರಿಯಲ್ಲಿರುವ 1949 ರಲ್ಲಿ ಅಂಗೀಕರಿಸಲ್ಪಟ್ಟ ಮೂಲ ಸಂವಿಧಾನದಲ್ಲಿ ಈ ಎರಡು ಪದಗಳು ಇರಲಿಲ್ಲ. ಇಂದಿರಾ ಗಾಂಧಿ 1976 ರಲ್ಲಿ ತುರ್ತು ಪರಿಸ್ಥಿತಿಯ ಸಮಯದಲ್ಲಿ 42ನೇ ಸಂವಿಧಾನ ತಿದ್ದುಪಡಿಯಡಿ ಸಂವಿಧಾನಕ್ಕೆ ಈ ಎರಡು ಪದಗಳನ್ನು ಸೇರಿಸಿದರು. ಆ ಸಮಯದಲ್ಲಿ ಸಂಸತ್ತಿನಲ್ಲಿ ಯಾವುದೇ ಚರ್ಚೆ ನಡೆದಿರಲಿಲ್ಲ ಎಂದು ಸಿಂಗ್ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಈ ವೇಳೆ, ಎಲ್ಲ ವಿರೋಧ ಪಕ್ಷದ ನಾಯಕರಾದ ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ, ಜಾರ್ಜ್ ಫರ್ನಾಂಡಿಸ್ - ಜೈಲಿನಲ್ಲಿದ್ದರು. ಪ್ರಜಾಪ್ರಭುತ್ವವನ್ನು ಕತ್ತು ಹಿಸುಕಲಾಗಿತ್ತು. ಅಂತಹ ಪರಿಸ್ಥಿತಿಯಲ್ಲಿ ಇಂದಿರಾ ಗಾಂಧಿ ಈ ಎರಡು ಪದಗಳನ್ನು ಸೇರಿಸಿದ್ದು ತಪ್ಪು. ಹೀಗಾಗಿ ಈ ಪದಗಳನ್ನು ತೆಗೆದುಹಾಕಿ, ಸಂವಿಧಾನವು ಅದರ ಮೂಲ ರೂಪದಲ್ಲಿಯೇ ಉಳಿಯಬೇಕು ಎಂದು ಸಿಂಗ್ ಹೇಳಿದ್ದಾರೆ.
ಸಂವಿಧಾನ ರಚನಾ ಸಭೆಯಲ್ಲೂ ಈ ಬಗ್ಗೆ ಚರ್ಚೆ ನಡೆದಿತ್ತು. ಕರಡು ಸಮಿತಿಯ ಅಧ್ಯಕ್ಷ ಡಾ.ಬಿ.ಆರ್. ಅಂಬೇಡ್ಕರ್ ಅವರು ಉತ್ತರ ನೀಡಿದ್ದರು. ಭಾರತದ ಸಂವಿಧಾನದ ರಚನೆ ದೇಶವನ್ನು ಜಾತ್ಯತೀತವಾಗಿಯೇ ಇರಿಸುತ್ತದೆ. ಆ ಪದವನ್ನು ಹೆಚ್ಚುವರಿಯಾಗಿ ಸೇರಿಸುವ ಅಗತ್ಯ ಇಲ್ಲ ಎಂದು ಹೇಳಿದ್ದರು. ಸಮಾಜವಾದಿ ಪದದ ಕುರಿತು ಚರ್ಚೆ ನಡೆದಿತ್ತು. ಸಂವಿಧಾನ ರಚನಾ ಸಭೆಯು ಭವಿಷ್ಯದ ಪೀಳಿಗೆಗಳು ಒಂದೇ ರೀತಿಯ ರಾಜಕೀಯ ಮತ್ತು ಆರ್ಥಿಕ ನೀತಿಯನ್ನು ಅನುಸರಿಸುವಂತೆ ಒತ್ತಾಯಿಸಲು ಸಾಧ್ಯವಿಲ್ಲ ಎಂದು ಅಂಬೇಡ್ಕರ್ ಉತ್ತರಿಸಿದ್ದರು.
ಆಗಿನ ಯುಎಸ್ಎಸ್ಆರ್ ಅನ್ನು ಸಂತೋಷಪಡಿಸಲು 'ಸಮಾಜವಾದಿ' ಎಂಬ ಪದವನ್ನು ಸೇರಿಸಲಾಗಿತ್ತು ಮತ್ತು ಮುಸ್ಲಿಮರನ್ನು ಸಮಾಧಾನಪಡಿಸಲು 'ಜಾತ್ಯತೀತ' ಎಂಬ ಪದವನ್ನು ಸೇರಿಸಲಾಯಿತು. ಇದು ಅನಗತ್ಯವಾಗಿದ್ದು, ಗೊಂದಲವನ್ನು ಮಾತ್ರ ಸೃಷ್ಟಿಸುತ್ತದೆ" ಎಂದು ಅವರು ವಾದಿಸಿದ್ದಾರೆ.
BJP Rajya Sabha MP Bheem Singh has introduced a private member’s bill seeking to remove the words “Secular” and “Socialist” from the Preamble of the Indian Constitution. He argued that these terms were not part of the original Constitution adopted in 1949 and were inserted undemocratically during the Emergency in 1976 through the 42nd Constitutional Amendment under then Prime Minister Indira Gandhi.
15-04-26 03:15 pm
HK News Staffer
ದಾವಣಗೆರೆ ಗದ್ದಲಕ್ಕೆ ಮತ್ತೊಂದು ತಲೆದಂಡ ; ಸಿಎಂ ರಾಜ...
14-04-26 02:04 pm
ಸುಳ್ಯದಲ್ಲಿ ಪಾಳು ಬಾವಿಗೆ ಬಿದ್ದ ಕಾಡಾನೆ; ಅಡ್ಡಲಾಗಿ...
13-04-26 09:49 pm
ಕುಂದಾಪುರದ 111 ವರ್ಷಗಳ ಸರ್ಕಾರಿ ಶಾಲೆಗೆ ಬಂತು ಎಐ ರ...
13-04-26 08:19 pm
ದಾವಣಗೆರೆ ದಕ್ಷಿಣದಲ್ಲಿ ಪ್ರಚಾರದಿಂದ ದೂರ; ಸಿಎಂ ರಾಜ...
13-04-26 04:20 pm
15-04-26 01:18 pm
HK News Staffer
ಅಮೆರಿಕ - ಇಸ್ರೇಲ್ ದಾಳಿಗೆ ಅವಕಾಶ ; ಗಲ್ಫ್ ರಾಷ್ಟ್ರ...
14-04-26 10:48 pm
ಕ್ಯಾಥೋಲಿಕ್ ಪೋಪ್ ಲಿಯೋ ಒಬ್ಬ ದುರ್ಬಲ ವ್ಯಕ್ತಿ, ರಾಜ...
14-04-26 01:46 pm
ಟಿಸಿಎಸ್ ಕಂಪನಿಯಲ್ಲಿ ಹೈಫೈ ಜಿಹಾದ್; ಸೆಕ್ಸ್ ದಂಧೆ,...
13-04-26 10:35 pm
ಬಾಂಗ್ಲಾದಲ್ಲಿ ಮುಸ್ಲಿಂ ಯುವಕರಿಂದಲೇ ಇಬ್ಬರು ಧರ್ಮಗು...
13-04-26 09:07 pm
13-04-26 11:39 pm
Mangalore Correspondent
ಮದುವೆ ಸಮಾರಂಭಕ್ಕೆ ಬಂದಿದ್ದ ವಾಹನಗಳು ಹೆದ್ದಾರಿಯಲ್ಲ...
13-04-26 12:53 pm
Mangalore Live Accident Nantoor: ಓವರ್ ಸ್ಪೀಡ್...
12-04-26 09:05 pm
ಬಂಟ್ವಾಳ ; ಮದರಂಗಿ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುತ...
11-04-26 05:05 pm
Fr Melvin J Pinto Death: ಸೈಂಟ್ ಅಲೋಶಿಯಸ್ ಶಿಕ್ಷ...
10-04-26 10:12 pm
14-04-26 11:16 pm
HK News Desk
ಆರಿಫ್ ಕೊಲೆ ಪ್ರಕರಣ ; ಮತ್ತೆ ಮೂವರು ಆರೋಪಿಗಳ ಬಂಧನ,...
14-04-26 11:52 am
ನಂತೂರು ಭೀಕರ ಅಪಘಾತ ; ಬೈಕ್ ಸವಾರನ ಧಾವಂತಕ್ಕೆ ರಸ್ತ...
14-04-26 11:14 am
ಸುದೀಪ್ ರೈ ಆತ್ಮಹತ್ಯೆ ಪ್ರಕರಣ ; ಪತ್ನಿ ಸೌಮ್ಯಾ ಶೆಟ...
11-04-26 11:14 pm
ಕಾಲೇಜು ಗೆಳತಿಯ ಪ್ರೀತಿ ಹುಚ್ಚಾಟ ; ಮಜಾ ಉಡಾಯಿಸಿದ ಬ...
11-04-26 03:09 pm