ಬ್ರೇಕಿಂಗ್ ನ್ಯೂಸ್
29-12-20 04:11 pm Headline Karnataka News Network ದೇಶ - ವಿದೇಶ
ಖಾನ್ಪುರ, ಡಿ.29: ಗ್ಯಾಂಗ್ ಸ್ಟರ್, ಭೂಗತ ಪಾತಕಿಗಳ ಫೋಟೋಗಳನ್ನು ಪೊಲೀಸ್ ಠಾಣೆಗಳ ಹಿಟ್ ಲಿಸ್ಟ್ ನಲ್ಲಿ ಅಥವಾ ಮೋಸ್ಟ್ ವಾಂಟೆಡ್ ಲಿಸ್ಟ್ ನಲ್ಲಿ ಹಾಕಿಡುವುದನ್ನು ಕೇಳಿದ್ದೇವೆ. ಆದರೆ, ಉತ್ತರ ಪ್ರದೇಶದಲ್ಲಿ ಭೂಗತ ಪಾತಕಿ ಛೋಟಾ ರಾಜನ್, ಮುನ್ನಾ ಬಜರಂಗಿಯಂತಹ ಗ್ಯಾಂಗ್ ಸ್ಟರ್ ಗಳ ಫೋಟೊಗಳನ್ನು ಸ್ಟಾಂಪ್ ಪೇಪರಿನಲ್ಲಿ ಪ್ರಿಂಟ್ ಮಾಡಿದ್ದು ಹೊಸ ವಿವಾದಕ್ಕೆ ಕಾರಣವಾಗಿದೆ. ಈ ರೀತಿಯ ಅಂಚೆ ಚೀಟಿ ಖಾನ್ ಪುರದ ಪ್ರಧಾನ ಅಂಚೆ ಇಲಾಖೆಯಲ್ಲಿ ಮುದ್ರಣವಾಗಿದೆ.
ಅಂಚೆ ಇಲಾಖೆಯಲ್ಲಿ ಮೈ ಸ್ಟಾಂಪ್ ಎನ್ನುವ ಯೋಜನೆ ಇದ್ದು, ಅದರಲ್ಲಿ ಕಾರ್ಪೊರೇಟ್ ಸಂಸ್ಥೆಗಳು, ಸಂಘಟನೆಗಳಿಗೆ ತಮ್ಮ ಹೆಸರಲ್ಲಿ ಸ್ಟಾಂಪ್ ಪೇಪರ್ ತರಬಹುದಾಗಿದೆ. ಸಂಘಟನೆಯ ಲೋಗೊ ಮತ್ತು ಅದಕ್ಕೆ ಸಂಬಂಧಪಟ್ಟ ಫೋಟೋಗಳನ್ನು ಮುದ್ರಿಸಲು ಅವಕಾಶ ಇರುತ್ತದೆ. ಯೋಜನೆಯಡಿ 12 ಸ್ಟಾಂಪ್ ಗಳುಳ್ಳ ಹಾಳೆ ದೊರಕಲಿದ್ದು, ಪ್ರತೀ ಅಂಚೆ ಚೀಟಿಯ ಮುಖಬೆಲೆ 5 ರೂ. ಆಗಿರುತ್ತದೆ. 12 ಸ್ಟಾಂಪಿನ ಒಂದು ಶೀಟ್ ಹೊರತರಲು 300 ರೂ. ಖರ್ಚು ತಗಲುತ್ತದೆ ಎನ್ನುವ ಮಾಹಿತಿ ಪೋಸ್ಟಲ್ ವೆಬ್ ನಲ್ಲಿ ಸಿಗುತ್ತದೆ.
ಈ ಬಗ್ಗೆ ಮಾಹಿತಿ ನೀಡಿರುವ ಖಾನ್ಪುರ ಅಂಚೆ ಇಲಾಖೆ ಪ್ರಧಾನ ಕಚೇರಿಯ ಪೋಸ್ಟ್ ಮಾಸ್ಟರ್ ಜನರಲ್ ವಿನೋದ್ ಕುಮಾರ್ ವರ್ಮಾ, ಮೈ ಸ್ಟಾಂಪ್ ಯೋಜನೆಯಡಿ ಖಾಸಗಿ ವ್ಯಕ್ತಿಗಳು ಕೂಡ ಪೋಸ್ಟಲ್ ಸ್ಟಾಂಪ್ ಹೊರತರಲು ಸಾಧ್ಯವಿದೆ. ಅದಕ್ಕಾಗಿ ಅಗತ್ಯ ದಾಖಲೆಗಳನ್ನು ಖುದ್ದಾಗಿ ಅಂಚೆ ಕಚೇರಿಗೆ ಬಂದು ನೀಡಬೇಕಾಗುತ್ತದೆ. ವೆಬ್ ಕ್ಯಾಮ್ ಮೂಲಕ ಪೋಸ್ಟೇಜ್ ಸ್ಟಾಂಪಿನ ಫೋಟೋಗಳನ್ನು ತೆಗೆಯಲಾಗುತ್ತದೆ. ಅದರಂತೆ, ಖಾನ್ಪುರದಲ್ಲಿ ಇಬ್ಬರು ಮಾಧ್ಯಮದ ವ್ಯಕ್ತಿಗಳು ಮೈ ಸ್ಪಾಂಪ್ ಗಾಗಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ತಮ್ಮ ಹೆಸರನ್ನು ಮುನ್ನಾ ಬಜರಂಗಿ(ಪ್ರೇಮ್ ಪ್ರಕಾಶ್) ಮತ್ತು ಛೋಟಾ ರಾಜನ್ (ರಾಜೇಂದ್ರ ಎಸ್.) ಎಂದು ನಮೂದಿಸಿದ್ದರು.
ಮುನ್ನ ಮತ್ತು ಛೋಟಾ ರಾಜನ್ ಫೋಟೋಗಳನ್ನು ನೀಡಿದ್ದಲ್ಲದೆ, ತಮ್ಮದೇ ಐಡಿ ಕಾರ್ಡನ್ನು ನೀಡಿದ್ದರು. ಈ ವೇಳೆ, ಪೋಸ್ಟ್ ಮ್ಯಾನ್ ಬಳಿ ಕೇಳಿದಾಗ, ಅವರಿಬ್ಬರು ನನಗೆ ಗೊತ್ತಿರುವ ಮಂದಿಯೇ. ನಕಲಿ ವ್ಯಕ್ತಿಗಳಲ್ಲ ಎಂದಿದ್ದಾರೆ. ಅದರಂತೆ, ಹೆಚ್ಚುವರಿ ತನಿಖೆಗೆ ಒಳಪಡಿಸದೆ ಸ್ಟಾಂಪ್ ಪ್ರಿಂಟ್ ಆಗಿತ್ತು ಎಂದಿದ್ದಾರೆ.
ಪ್ರಕರಣ ಸಂಬಂಧಿಸಿ, ಈಗ ಪೋಸ್ಟಲ್ ಕಚೇರಿಯ ಕ್ಲರ್ಕ್ ಒಬ್ಬರನ್ನು ಸಸ್ಪೆಂಡ್ ಮಾಡಲಾಗಿದೆ. ಅಲ್ಲದೆ, ಆರು ಮಂದಿ ವಿರುದ್ಧ ಇಲಾಖೆ ತನಿಖೆಗೆ ಆದೇಶ ಮಾಡಲಾಗಿದೆ.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm