ಬ್ರೇಕಿಂಗ್ ನ್ಯೂಸ್
29-11-25 08:34 pm HK News Desk ದೇಶ - ವಿದೇಶ
ಕಾನ್ಪುರ, ನ.29 : ಸ್ಲೀಪರ್ ಕೋಚ್ ಬಸ್ ಗೆ ಹೆದ್ದಾರಿಯಲ್ಲಿ ದಿಢೀರ್ ಬೆಂಕಿ ಹೊತ್ತಿಕೊಂಡಿದ್ದು ಇಬ್ಬರು ಪೊಲೀಸ್ ಪೇದೆಗಳು ಸಾಹಸ ಮೆರೆದು ಬಸ್ಸಿನಲ್ಲಿ ನಿದ್ದೆಯಲ್ಲಿದ್ದ 43 ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಘಟನೆಯ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.
ಉತ್ತರ ಪ್ರದೇಶದ ಕಾನ್ಪುರ ಹೆದ್ದಾರಿಯಲ್ಲಿ ಚಾಕೇರಿ ಪೊಲೀಸ್ ಠಾಣೆ ವ್ಯಾಪ್ತಿಯ ರಾಮದೇವಿ ಫ್ಲೈಓವರ್ನಲ್ಲಿ ಘಟನೆ ನಡೆದಿದೆ. ಬಸ್ ಮೇಲೆ ಹಾಕಿದ್ದ ಲಗೇಜ್ ಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಫ್ಲೈಓವರ್ನಲ್ಲಿ ಕರ್ತವ್ಯದಲ್ಲಿದ್ದ ಸಂಚಾರ ಪೊಲೀಸ್ ಸಿಬ್ಬಂದಿ ಬಸ್ಸನ್ನು ನಿಲ್ಲಿಸಿ, ಕೂಡಲೇ ಎಲ್ಲ ಪ್ರಯಾಣಿಕರನ್ನು ಕೆಳಕ್ಕಿಳಿಸಿದ್ದಾರೆ.
ಘಟನೆ ವೇಳೆ ಪ್ರಯಾಣಿಕರು ಬಸ್ನಲ್ಲಿ ನಿದ್ರಿಸುತ್ತಿದ್ದರು. ಚಲಿಸುತ್ತಿದ್ದ ಬಸ್ಸಿಗೆ ಬೆಂಕಿ ಹೊತ್ತಿರುವುದು ಗಮನಿಸಿದ ಟ್ರಾಫಿಕ್ ಪೇದೆಗಳು ಬಸ್ ನಿಲ್ಲಿಸಿ ಕೂಡಲೇ ಪ್ರಯಾಣಿಕರನ್ನು ಕೆಳಗಿಳಿಸಿ ರಕ್ಷಣೆ ಮಾಡಿದ್ದಾರೆ. ಬಳಿಕ ವಿಚಾರ ತಿಳಿದ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಬಂದು ಬೆಂಕಿ ನಂದಿಸಿವೆ. ಅಪಘಾತದಿಂದಾಗಿ ಫ್ಲೈಓವರ್ನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಘಟನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಪ್ರಯಾಣಿಕರ ಲಗೇಜ್ಗಳು ಸೇರಿದಂತೆ ಬಸ್ ಭಾಗಃಶ ಸುಟ್ಟು ಹೋಗಿದೆ.
ವಾರಣಾಸಿ ಮೂಲದ ಪಾಲಕ್ ಟ್ರಾವೆಲ್ಸ್ ಒಡೆತನದ ಸ್ಲೀಪರ್ ಬಸ್ ಗುರುವಾರ ರಾತ್ರಿ ದೆಹಲಿಯಿಂದ ವಾರಣಾಸಿಗೆ ಹೊರಟಿತ್ತು. ಬಸ್ಸಿನಲ್ಲಿ ಸುಮಾರು 43 ಪ್ರಯಾಣಿಕರಿದ್ದರು. ಪ್ರಯಾಣಿಕರ ಲಗೇಜ್ಗಳನ್ನು ಬಸ್ ಮೇಲೆ ಲೋಡ್ ಮಾಡಲಾಗಿತ್ತು. ಬಸ್ ರಾಮದೇವಿ ಫ್ಲೈಓವರ್ ತಲುಪಿದಾಗ, ಬಸ್ ಮೇಲಿದ್ದ ಲಗೇಜ್ ಗಳಿಂದ ಹೊಗೆ ಬರುತ್ತಿತ್ತು. ಈ ವೇಳೆ ಅಲ್ಲಿಯೇ ಇದ್ದ ಇಬ್ಬರು ಪೊಲೀಸ್ ಪೇದೆಗಳು ಗಮನಿಸಿ ನಿಲ್ಲಿಸಿದ್ದಾರೆ. ಅಷ್ಟರಲ್ಲಿ ಬಸ್ ಮೇಲಿದ್ದ ಲಗೇಜ್ ಗಳೆಲ್ಲ ಉರಿದು ಕೆಳಗಡೆಗೂ ಬೆಂಕಿ ಹರಡಿತ್ತು. ಪೊಲೀಸರು ಬಸ್ ನಿಲ್ಲಿಸುತ್ತಿದ್ದಂತೆಯೇ ಬೆಂಕಿ ಹತ್ತಿರುವುದನ್ನು ನೋಡಿದ ಚಾಲಕ ಭಯದಿಂದ ಬಸ್ ಬಿಟ್ಟು ಪರಾರಿಯಾಗಿದ್ದಾನೆ.
#कानपुर : NH-19 पर लग्जरी बस में भीषण आग
— News1India (@News1IndiaTweet) November 28, 2025
शॉर्ट सर्किट से बस में उठी चिंगारी ने लिया विकराल रूप
टायरों तक पहुंची आग, देखते ही देखते बस धू-धू कर जल उठी#Kanpur #BusFire @fireserviceup pic.twitter.com/y5EU2LNIrg
A major accident was averted on a Kanpur highway when a sleeper coach bus suddenly caught fire. Showing remarkable courage, two police constables pulled out 43 passengers, who were fast asleep, and saved their lives. The CCTV footage of the incident has now gone viral online.
15-04-26 03:15 pm
HK News Staffer
ದಾವಣಗೆರೆ ಗದ್ದಲಕ್ಕೆ ಮತ್ತೊಂದು ತಲೆದಂಡ ; ಸಿಎಂ ರಾಜ...
14-04-26 02:04 pm
ಸುಳ್ಯದಲ್ಲಿ ಪಾಳು ಬಾವಿಗೆ ಬಿದ್ದ ಕಾಡಾನೆ; ಅಡ್ಡಲಾಗಿ...
13-04-26 09:49 pm
ಕುಂದಾಪುರದ 111 ವರ್ಷಗಳ ಸರ್ಕಾರಿ ಶಾಲೆಗೆ ಬಂತು ಎಐ ರ...
13-04-26 08:19 pm
ದಾವಣಗೆರೆ ದಕ್ಷಿಣದಲ್ಲಿ ಪ್ರಚಾರದಿಂದ ದೂರ; ಸಿಎಂ ರಾಜ...
13-04-26 04:20 pm
15-04-26 01:18 pm
HK News Staffer
ಅಮೆರಿಕ - ಇಸ್ರೇಲ್ ದಾಳಿಗೆ ಅವಕಾಶ ; ಗಲ್ಫ್ ರಾಷ್ಟ್ರ...
14-04-26 10:48 pm
ಕ್ಯಾಥೋಲಿಕ್ ಪೋಪ್ ಲಿಯೋ ಒಬ್ಬ ದುರ್ಬಲ ವ್ಯಕ್ತಿ, ರಾಜ...
14-04-26 01:46 pm
ಟಿಸಿಎಸ್ ಕಂಪನಿಯಲ್ಲಿ ಹೈಫೈ ಜಿಹಾದ್; ಸೆಕ್ಸ್ ದಂಧೆ,...
13-04-26 10:35 pm
ಬಾಂಗ್ಲಾದಲ್ಲಿ ಮುಸ್ಲಿಂ ಯುವಕರಿಂದಲೇ ಇಬ್ಬರು ಧರ್ಮಗು...
13-04-26 09:07 pm
13-04-26 11:39 pm
Mangalore Correspondent
ಮದುವೆ ಸಮಾರಂಭಕ್ಕೆ ಬಂದಿದ್ದ ವಾಹನಗಳು ಹೆದ್ದಾರಿಯಲ್ಲ...
13-04-26 12:53 pm
Mangalore Live Accident Nantoor: ಓವರ್ ಸ್ಪೀಡ್...
12-04-26 09:05 pm
ಬಂಟ್ವಾಳ ; ಮದರಂಗಿ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುತ...
11-04-26 05:05 pm
Fr Melvin J Pinto Death: ಸೈಂಟ್ ಅಲೋಶಿಯಸ್ ಶಿಕ್ಷ...
10-04-26 10:12 pm
15-04-26 05:29 pm
HK News Staffer
ಚಿಕ್ಕೋಡಿಯಲ್ಲಿ ಮಾನಗೇಡಿ ಹತ್ಯೆ; ಪತಿಯನ್ನು ಬಿಟ್ಟು...
15-04-26 05:03 pm
ಕೌಟುಂಬಿಕ ಕಲಹ ; 14 ವರ್ಷದ ಮಗಳನ್ನು ಉಸಿರುಗಟ್ಟಿಸಿ...
14-04-26 11:16 pm
ಆರಿಫ್ ಕೊಲೆ ಪ್ರಕರಣ ; ಮತ್ತೆ ಮೂವರು ಆರೋಪಿಗಳ ಬಂಧನ,...
14-04-26 11:52 am
ನಂತೂರು ಭೀಕರ ಅಪಘಾತ ; ಬೈಕ್ ಸವಾರನ ಧಾವಂತಕ್ಕೆ ರಸ್ತ...
14-04-26 11:14 am