ಬ್ರೇಕಿಂಗ್ ನ್ಯೂಸ್
08-10-25 08:57 pm HK News Desk ದೇಶ - ವಿದೇಶ
ಮುಂಬೈ, ಅ.8: ಪ್ರಧಾನಿ ನರೇಂದ್ರ ಮೋದಿ ಬುಧವಾರ 19,650 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ನವಿ ಮುಂಬೈ ನಗರದ ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೊದಲ ಹಂತವನ್ನು ಉದ್ಘಾಟಿಸಿದರು.
1,160 ಹೆಕ್ಟೇರ್ ಪ್ರದೇಶದಲ್ಲಿ ಹರಡಿರುವ ಈ ಹೊಸ ವಿಮಾನ ನಿಲ್ದಾಣವು ಭಾರತದ ಅತಿದೊಡ್ಡ ಏರ್ಪೋರ್ಟ್ ಆಗಲಿದ್ದು ದೇಶದ ವಾಯುಯಾನ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸಲಿದೆ. ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಂಚಾರ ಹೊರೆಯನ್ನು ಕಡಿಮೆ ಮಾಡಲಿದೆ.
ಪ್ರಧಾನಿ ಮೋದಿ ಅವರು ನವಿ ಮುಂಬೈ ವಿಮಾನ ನಿಲ್ದಾಣ ಉದ್ಘಾಟನೆಗೆ ಮುನ್ನ, ವಿಮಾನ ನಿಲ್ದಾಣದ ಒಳಗೆ ಒಂದು ಸುತ್ತು ಹಾಕಿ, ಅತ್ಯಾಧುನಿಕ ಸೌಲಭ್ಯಗಳನ್ನು ಪರಿಶೀಲಿಸಿದರು. ಈ ವೇಳೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು, ಕೇಂದ್ರ ಸಚಿವ ಮುರಳೀಧರ್ ಮೊಹೋಲ್, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ರಾಜ್ಯಪಾಲ ಆಚಾರ್ಯ ದೇವವ್ರತ್, ಉಪ ಮುಖ್ಯಮಂತ್ರಿಗಳಾದ ಏಕನಾಥ್ ಶಿಂಧೆ ಮತ್ತು ಅಜಿತ್ ಪವಾರ್ ಉಪಸ್ಥಿತರಿದ್ದರು.









ಇದು ಭಾರತದ ಅತಿದೊಡ್ಡ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ ಯೋಜನೆಯಾಗಿದ್ದು, ಇದನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವ(ಪಿಪಿಪಿ) ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗಿದೆ ಮತ್ತು ಮುಂಬೈ ಮೆಟ್ರೋಪಾಲಿಟನ್ ಪ್ರದೇಶದ ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣವೂ ಇದಾಗಿದೆ. ಇದೇ ವೇಳೆ ಪ್ರಧಾನಿ ಮೋದಿ, ಅತ್ರೆ ಚೌಕ್ನಿಂದ ಕಫೆ ಪೆರೇಡ್ ವರೆಗೆ ವಿಸ್ತರಿಸಿರುವ ಮುಂಬೈ ಮೆಟ್ರೋ ಲೈನ್ -3ರ ಹಂತ 2 ಬಿ ಅನ್ನು ಉದ್ಘಾಟಿಸಿದರು. ಇದನ್ನು 12,200 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಮೊಬೈಲ್ ಟಿಕೆಟಿಂಗ್ ಸೇರಿದಂತೆ ಪ್ರಯಾಣಿಕರಿಗೆ ಪ್ರಯೋಜನ ನೀಡುವ ಮುಂಬೈ ಒನ್ ಅಪ್ಲಿಕೇಶನ್ ಅನ್ನು ಸಹ ಪ್ರಧಾನಿ ಮೋದಿ ಬಿಡುಗಡೆ ಮಾಡಿದರು.
Prime Minister Narendra Modi on Wednesday inaugurated the first phase of the Navi Mumbai International Airport, built at a cost of ₹19,650 crore. Spread across 1,160 hectares, the airport is set to become India’s largest, significantly boosting the nation’s aviation capacity and easing congestion at Mumbai’s Chhatrapati Shivaji Maharaj International Airport.
18-04-26 05:59 pm
HK News Staffer
ದುಬೈನಲ್ಲಿ ಕಚೇರಿ, ಟ್ರೇಡಿಂಗ್ ಹೆಸರಲ್ಲಿ ಕೋಟಿ ಕೋಟಿ...
18-04-26 02:43 pm
ರಾಹುಲ್ ಗಾಂಧಿ ದ್ವಿಪೌರತ್ವ ; ಬ್ರಿಟಿಷ್ ಪ್ರಜೆಯೆಂದು...
18-04-26 10:20 am
ಯೋಗೇಶ್ ಗೌಡ ಕೊಲೆ ಪ್ರಕರಣ ; ಶಾಸಕ ವಿನಯ್ ಕುಲಕರ್ಣಿ...
17-04-26 07:27 pm
ಯಾದಗಿರಿ ದೇವಸ್ಥಾನದಿಂದ ಮರಳುತ್ತಿದ್ದವರ ದುರಂತ ಅಂತ್...
17-04-26 01:39 pm
18-04-26 11:39 pm
HK News Desk
ಗಲ್ಫ್ ಸಂಘರ್ಷ ಸದ್ಯಕ್ಕೆ ತೆರೆ ; ಹೊರ್ಮುಜ್ ಜಲಸಂಧಿ...
18-04-26 10:31 am
ದುರಂತ ಅಂತ್ಯ ಕಂಡ ವಿಚ್ಛೇದನ ಕಲಹ ; ಪತ್ನಿಗೆ ಗುಂಡಿಕ...
17-04-26 08:08 pm
ಹೊಟ್ಟೆನೋವೆಂದು ಆಸ್ಪತ್ರೆಗೆ ಹೋಗಿದ್ದ ವ್ಯಕ್ತಿಗೆ ಬಿ...
17-04-26 11:27 am
250 ರೋಹಿಂಗ್ಯಾಗಳಿದ್ದ ಬೋಟ್ ಅಂಡಮಾನ್ ಸಮುದ್ರದಲ್ಲಿ...
16-04-26 01:09 pm
18-04-26 11:31 pm
HK News Desk
ಕುಂಪಲದಲ್ಲಿ ಏಕಾಏಕಿ ಕುಸಿದು ಬಿದ್ದ ಭಾರೀ ಗಾತ್ರದ ಆವ...
18-04-26 11:09 pm
ದಾವಣಗೆರೆ ಫಲಿತಾಂಶ ಏನಾಗುತ್ತೆಂದು ಹೇಳಲು ನಾನು ಜ್ಯೋ...
18-04-26 08:10 pm
ಕೊಣಾಜೆ ; ಪೊಳಲಿ ಜಾತ್ರೆಗೆ ತೆರಳಿದ್ದ ಅಪ್ರಾಪ್ತ ಬಾಲ...
17-04-26 10:32 pm
ಬಿ.ಸಿ.ರೋಡ್ - ಪುಂಜಾಲಕಟ್ಟೆ ಸೇರಿ ರಾಷ್ಟ್ರೀಯ ಹೆದ್...
17-04-26 08:56 pm
19-04-26 02:58 pm
HK News Staffer
15 ವರ್ಷಗಳ ಹಿಂದೆ ಜೈಲಿನಿಂದ ತಪ್ಪಿಸಿಕೊಂಡು ಮುಂಬೈ,...
19-04-26 02:24 pm
ಅಂಬ್ಲಮೊಗರು ; ಸ್ನೇಹಿತರೊಂದಿಗೆ ಕೆರೆ ನೀರಲ್ಲಿ ಆಟವಾ...
19-04-26 10:20 am
ಹೇಯ್ ಮಟನ್ ಸರಿಯಾಗಿ ಬೆಂದಿಲ್ಲ ಎಂದು ಸ್ನೇಹಿತನ ಮುಂದ...
18-04-26 10:37 pm
180 ಅಪ್ರಾಪ್ತ ಬಾಲಕಿಯರ 350 ಅಶ್ಲೀಲ ವಿಡಿಯೋ ವೈರಲ್...
18-04-26 03:50 pm