ಬ್ರೇಕಿಂಗ್ ನ್ಯೂಸ್
03-10-25 04:48 pm HK News Desk ದೇಶ - ವಿದೇಶ
ನವದೆಹಲಿ, ಅ.2 : ಮಹತ್ವದ ಬೆಳವಣಿಗೆಯಲ್ಲಿ ಆಫ್ಘಾನಿಸ್ತಾನದ ತಾಲಿಬಾನ್ ಸರ್ಕಾರದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಾಖಿ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಭಾರತದ ಕೋರಿಕೆಯಂತೆ ಮುತ್ತಾಖಿ ಪ್ರವಾಸಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅನುಮತಿ ನೀಡಿದೆ.
ಮುತ್ತಾಖಿ ಅ.9ರಿಂದ 16ರ ವರೆಗೆ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. 1998ರಲ್ಲಿ ತಾಲಿಬಾನ್ ನಾಯಕರ ವಿದೇಶ ಪ್ರವಾಸಕ್ಕೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ನಿರ್ಬಂಧ ಹೇರಿರುವ ಕಾರಣ, ಯಾವುದೇ ತಾಲಿಬಾನ್ ನಾಯಕರ ಪ್ರವಾಸಕ್ಕು ಮುನ್ನ ವಿಶ್ವಸಂಸ್ಥೆ ಪೂರ್ವಾನುಮತಿ ಪಡೆಯಬೇಕಿದೆ.
ಮುತ್ತಾಖಿ ಅವರಿಗೆ ಅಂತರಾಷ್ಟ್ರೀಯ ಪ್ರಯಾಣ ನಿರ್ಬಂಧಗಳಿಂದ ತಾತ್ಕಾಲಿಕ ವಿನಾಯಿತಿ ನೀಡಲಾಗಿದೆ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ದೃಢಪಡಿಸಿದೆ.
ಚೀನಾ ಮತ್ತು ಪಾಕಿಸ್ತಾನ ಹತ್ತಿಕ್ಕಲು ಭಾರತ ಯತ್ನಿಸುತ್ತಿರುವ ನಡುವೆಯೇ ಮುತ್ತಾಖಿ ಭಾರತ ಭೇಟಿ ಭಾರೀ ಮಹತ್ವ ಪಡೆದುಕೊಂಡಿದೆ. ವಿದೇಶಗಳಲ್ಲಿ ತಾಲಿಬಾನ್ ಸರ್ಕಾರದ ಪ್ರತಿನಿಧಿಗಳ ಜೊತೆ ಭಾರತದ ಅಧಿಕಾರಿಗಳ ಮಟ್ಟದ ಭೇಟಿ ನಡೆದಿತ್ತಾದರೂ, ಭಾರತಕ್ಕೆ ತಾಲಿಬಾನ್ ನಾಯಕರ ಆಗಮನ ಇದೇ ಮೊದಲು.
ಕಳೆದ ಜನವರಿ ಬಳಿಕ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಮತ್ತು ಹಿರಿಯ ಐಎಫ್ಎಸ್ ಅಧಿಕಾರಿ ಜೆ.ಪಿ. ಸಿಂಗ್ ತಾಲಿಬಾನ್ ಸರ್ಕಾರದ ಮುತ್ತಾಕಿ ಮತ್ತು ಇತರ ನಾಯಕರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ. ಆಗಾಗ್ಗೆ ದುಬೈನಂತಹ ಸ್ಥಳಗಳಲ್ಲಿ ಭೇಟಿ ಮಾಡಿದ್ದಾರೆ. ಭಾರತವು ಅಫ್ಘಾನಿಸ್ತಾನಕ್ಕೆ ನೀಡುತ್ತಿರುವ ಮಾನವೀಯ ನೆರವು, ವಿಶೇಷವಾಗಿ ಆರೋಗ್ಯ ವಲಯವನ್ನು ಬಲಪಡಿಸುವುದು ಮತ್ತು ನಿರಾಶ್ರಿತರ ಪುನರ್ವಸತಿಯನ್ನು ಬೆಂಬಲಿಸುವ ಬಗ್ಗೆ ಚರ್ಚೆ ನಡೆಸಲಾಗಿತ್ತು.
In a significant diplomatic development, Afghanistan’s Taliban Foreign Minister Amir Khan Muttaqi will visit India from October 9–16 after the UN Security Council approved a temporary exemption to his international travel ban. This marks the first visit of a Taliban leader to India since the regime’s return to power.
13-10-25 10:09 pm
HK News Desk
ಸಚಿವನಾಗಿ ಆದಾಯ ಮೂಲಕ್ಕೆ ಕತ್ತರಿ ; ನಟನೆಗೆ ಮರಳಲಿದ್...
13-10-25 03:54 pm
ಶಾಲಾ ಮೈದಾನ, ಪಾರ್ಕ್ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ...
13-10-25 12:51 pm
DK Shivakumar, MLA Munirathna, CM Siddaramaia...
12-10-25 08:59 pm
D.K. Shivakumar, MLA Munirathna, RSS: ಮುನಿರತ್...
12-10-25 08:05 pm
13-10-25 10:37 pm
HK News Desk
Kerala, IT professional dead, RSS members: ಆರ...
13-10-25 05:31 pm
ಪಾಕಿಸ್ತಾನದ ಸೇನಾ ಔಟ್ ಪೋಸ್ಟ್ ಮೇಲೆ ಅಫ್ಘಾನ್ ಭೀಕರ...
12-10-25 10:19 pm
Afghan Foreign Minister, Amir Khan Muttaqi: ಮ...
11-10-25 12:52 pm
ವೆನಿಜುವೆಲಾದ ಉಕ್ಕಿನ ಮಹಿಳೆ ಮಾರಿಯೋ ಮಚಾಡೋಗೆ ನೊಬೆಲ...
10-10-25 10:37 pm
13-10-25 07:47 pm
Udupi Correspondent
ಆರೆಸ್ಸೆಸ್ ಸೇವಾ ಚಟುವಟಿಕೆ ತಿಳಿಯದ ಪ್ರಿಯಾಂಕ ಖರ್ಗೆ...
13-10-25 04:33 pm
Honey Bees Attack in Puttur: ಪುತ್ತೂರು ; ಹೆಜ್ಜ...
12-10-25 09:53 pm
ಪುತ್ತೂರಿಗೆ ಬಂದಿದ್ದ ಇಬ್ಬರು ಯುವತಿಯರು ದಿಢೀರ್ ನಾಪ...
12-10-25 06:53 pm
Uchila Fire, Mangalore: ಹೊತ್ತಿ ಉರಿದ ಉಚ್ಚಿಲದ ಗ...
12-10-25 05:46 pm
13-10-25 10:04 pm
Mangalore Correspondent
Mangalore, Loan Fraud, Fake Gold: ಆತ್ಮಶಕ್ತಿ ಸ...
12-10-25 03:52 pm
Udupi, Karkala, Youth suicide: ಖಾಸಗಿ ವಿಡಿಯೋ ಮ...
10-10-25 09:48 pm
Bangalore Caste Census, Fight: ಜಾತಿಗಣತಿ ಸಮೀಕ್...
10-10-25 07:43 pm
ಆಭರಣ ಪಾಲಿಶಿಂಗ್ ಸೋಗಿನಲ್ಲಿ ಮಹಿಳೆಯ ಸರ ಪಡೆದು 14 ಗ...
09-10-25 05:30 pm