ಬ್ರೇಕಿಂಗ್ ನ್ಯೂಸ್
26-12-20 06:10 pm Headline Karnataka News Network ದೇಶ - ವಿದೇಶ
ಭುವನೇಶ್ವರ್, ಡಿ.26: ನಿವೃತ್ತಿ ಅಂದರೆ ಕೆಲವರಿಗೆ ಹೊಸತನದ ಆರಂಭ ಎನ್ನುತ್ತಾರೆ. ಸುದೀರ್ಘ ಒಂದೇ ವೃತ್ತಿಯಲ್ಲಿದ್ದು ಆಬಳಿಕ ಹೊಸ ವೃತ್ತಿ ಕೈಗೊಳ್ಳಲು ಸಕಾಲ ಎನ್ನುವ ಮಾತನ್ನು ಕೆಲವರು ಹೇಳುತ್ತಾರೆ. ಒಡಿಶಾ ರಾಜ್ಯದ ಜಯಕಿಶೋರ್ ಪ್ರಧಾನ್ ಇದೇ ಧಾಟಿಗೆ ಸೇರಿದವರು. ತಮ್ಮ 64ರ ಹರೆಯದಲ್ಲಿ ಎಂಬಿಬಿಎಸ್ ಕಲಿಯಲು ಆರಂಭಿಸಿದ್ದಾರೆ.
ಹೌದು.. ಒಡಿಶಾ ರಾಜ್ಯದ ಬಾರ್ಘಾ ಜಿಲ್ಲೆಯ ನಿವಾಸಿ ಜಯಕಿಶೋರ್ ಪ್ರಧಾನ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಡೆಪ್ಯುಟಿ ಮ್ಯಾನೇಜರ್ ಆಗಿ ನಿವೃತ್ತರಾಗಿದ್ದಾರೆ. ಆದರೆ, ಸುದೀರ್ಘ ಬ್ಯಾಂಕ್ ಉದ್ಯೋಗದಲ್ಲಿದ್ದು ಅವರಿಗೆ ತಮ್ಮ ಕನಸು ಈಡೇರಿಸಲು ಆಗಿಲ್ಲವಂತೆ. ಹಾಗಾಗಿ ವೈದ್ಯನಾಗುವ ಕನಸು ಹೊತ್ತು ಎಂಬಿಬಿಎಸ್ ಕಲಿಯಲು ಮೆಡಿಕಲ್ ಕಾಲೇಜು ಸೇರಿದ್ದಾರೆ. ನೀಟ್ ಪರೀಕ್ಷೆಯಲ್ಲಿ ತೇರ್ಗಡೆಯಾದ ಜಯಕಿಶೋರ್ ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಸೀಟು ಪಡೆದಿದ್ದಾರೆ. ಬುರ್ಲಾದಲ್ಲಿರುವ ಸರಕಾರಿ ಅಧೀನದ ವೀರ್ ಸುರೇಂದರ್ ಸಾಯಿ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರೀಸರ್ಚ್ (ವಿಮ್ಸಾರ್) ಕಾಲೇಜಿನಲ್ಲಿ ಪ್ರಧಾನ್ ಮೆಡಿಕಲ್ ಸೀಟು ಪಡೆದಿದ್ದಾರೆ.
ನನಗೆ ಸಣ್ಣಂದಿನಲ್ಲೇ ವೈದ್ಯನಾಗುವ ಕನಸಿತ್ತು. ಇಂಟರ್ ಮೀಡಿಯೆಟ್ ಸೈನ್ಸ್ ಪೂರೈಸಿದ ಬಳಿಕ ಮೆಡಿಕೆಲ್ ಎಂಟ್ರೆನ್ಸ್ ಪರೀಕ್ಷೆ ಬರೆದಿದ್ದು ಅದರಲ್ಲಿ ಫೈಲ್ ಆಗಿದ್ದೆ. ಬಳಿಕ ಬಿಎಸ್ಸಿ ಪದವಿ ಗಳಿಸಿ, ಸ್ಥಳೀಯ ಶಾಲೆ ಒಂದರಲ್ಲಿ ಶಿಕ್ಷಕನಾಗಿ ಸೇರಿಕೊಂಡಿದ್ದೆ. ನಂತರ ಇಂಡಿಯನ್ ಬ್ಯಾಂಕಿನಲ್ಲಿ ಉದ್ಯೋಗ ಪಡೆದಿದ್ದೆ. 1983ರಲ್ಲಿ ಎಸ್ ಬಿಐನಲ್ಲಿ ನೌಕರಿ ಪಡೆದು ಸುದೀರ್ಘ ಕಾಲ ಸೇವೆ ಸಲ್ಲಿಸಿ ನಿವೃತ್ತನಾಗಿದ್ದೇನೆ. ಆದರೆ, ಮೆಡಿಕಲ್ ಕಲಿಯಬೇಕೆಂಬ ಆಸೆ ಈಡೇರಿರಲಿಲ್ಲ.

2016ರಲ್ಲಿ ಬ್ಯಾಂಕಿನಿಂದ ರಿಟೈರ್ ಆದ ಕೂಡಲೇ ಮೆಡಿಕಲ್ ಎಕ್ಸಾಂ ಬರೆಯಲು ಸಿದ್ಧತೆ ನಡೆಸಿದ್ದೆ. ಈ ಬಾರಿ ಮೆಡಿಕಲ್ ಎಕ್ಸಾಂ ಬರೆದು ಪಾಸಾಗಿದ್ದೇನೆ. ನಾನು ಡಾಕ್ಟರ್ ಕಲಿತು ಬಡವರಿಗೆ ಉಚಿತವಾಗಿ ಚಿಕಿತ್ಸೆ ನೀಡಬೇಕೆಂಬ ಕನಸು ಹೊಂದಿದ್ದೇನೆ ಎಂದು ಜಯಕಿಶೋರ್ ಹೇಳಿದ್ದಾರೆ.
2018ರಲ್ಲಿ 25 ವರ್ಷಕ್ಕಿಂತ ಮೇಲ್ಪಟ್ಟವರು ಕೂಡ ನೀಟ್ ಪರೀಕ್ಷೆ ಬರೆಯಬಹುದು ಎಂದು ಸುಪ್ರೀಂ ಕೋರ್ಟ್ ಆದೇಶ ಮಾಡಿತ್ತು. ಅದರಂತೆ ಜಯಕಿಶೋರ್ ಪರೀಕ್ಷೆ ಬರೆದು ತೇರ್ಗಡೆಯಾಗಿದ್ದಾರೆ. ಅಂದಹಾಗೆ, 64 ವರ್ಷದ ಜಯಕಿಶೋರ್ ಪ್ರಧಾನ್ ಅವರಿಗೆ ಮೂವರು ಮಕ್ಕಳು. ಇಬ್ಬರು ಅವಳಿ ಹುಡುಗಿಯರು ಮತ್ತು ಒಬ್ಬ ಮಗ. ಒಬ್ಬಳು ಮಗಳು ಈಗ ಬಿಡಿಎಸ್ ಓದುತ್ತಿದ್ದರೆ, ಮತ್ತೊಬ್ಬಳು ಹುಡುಗಿ ಬಿಡಿಎಸ್ ಓದುತ್ತಿದ್ದಾಗಲೇ ಕಳೆದ ನವೆಂಬರ್ ನಲ್ಲಿ ಅನಾರೋಗ್ಯದಿಂದ ತೀರಿಕೊಂಡಿದ್ದಳು. ಇನ್ನೊಬ್ಬ ಮಗ ಎಸ್ಸೆಸ್ಸೆಲ್ಸಿ ಓದುತ್ತಿದ್ದಾನೆ.
64 ವರ್ಷದಲ್ಲಿ ಎಂಬಿಬಿಎಸ್ ಕಲಿಯಲು ತೊಡಗುತ್ತಿರುವುದು ಅಪರೂಪದಲ್ಲಿ ಅಪರೂಪ. ಇಂಥ ನಿದರ್ಶನ ದೇಶದಲ್ಲಿ ಇದೇ ಮೊದಲು ಎಂದು ಅನಿಸ್ತಾ ಇದೆ ಎಂದು ಸರ್ಜರಿ ಸ್ಪೆಷಲಿಸ್ಟ್ ಆಗಿ ರಿಟೈರ್ ಆಗಿರುವ ಬಿಕಾಸ್ ಹೋತಾ ಹೇಳುತ್ತಾರೆ.
After 40 years of gruelling job and raising children, a sexagenarian is probably more inclined to spend times with grandchildren, play cards, get immersed in gardening or visit close relatives more frequently than before. However, a 64-year-old retired banker from Odisha has a different idea.
17-04-26 07:27 pm
HK News Staffer
ಯಾದಗಿರಿ ದೇವಸ್ಥಾನದಿಂದ ಮರಳುತ್ತಿದ್ದವರ ದುರಂತ ಅಂತ್...
17-04-26 01:39 pm
ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ ಸೇವಾವಧಿ...
16-04-26 10:30 pm
ಫಲಿತಾಂಶ ಬರುವ ಮೊದಲೇ ಸೋಲೊಪ್ಪಿಕೊಂಡ ಕಾಂಗ್ರೆಸ್; ದಾ...
16-04-26 09:43 pm
ಎಸ್ಸೆಸ್ಸೆಲ್ಸಿ ತೃತೀಯ ಭಾಷೆಗೆ ಅಂಕ ಬದಲು ಗ್ರೇಡ್ ;...
16-04-26 07:37 pm
17-04-26 08:08 pm
HK News Staffer
ಹೊಟ್ಟೆನೋವೆಂದು ಆಸ್ಪತ್ರೆಗೆ ಹೋಗಿದ್ದ ವ್ಯಕ್ತಿಗೆ ಬಿ...
17-04-26 11:27 am
250 ರೋಹಿಂಗ್ಯಾಗಳಿದ್ದ ಬೋಟ್ ಅಂಡಮಾನ್ ಸಮುದ್ರದಲ್ಲಿ...
16-04-26 01:09 pm
AI ಅವಾಂತರ ; ಗೂಗಲ್ 'ಜೆಮಿನಿ' ಅನ್ನೇ ಹೆಂಡತಿ ಎಂದು...
15-04-26 01:18 pm
ಅಮೆರಿಕ - ಇಸ್ರೇಲ್ ದಾಳಿಗೆ ಅವಕಾಶ ; ಗಲ್ಫ್ ರಾಷ್ಟ್ರ...
14-04-26 10:48 pm
17-04-26 10:32 pm
Mangalore Correspondent
ಬಿ.ಸಿ.ರೋಡ್ - ಪುಂಜಾಲಕಟ್ಟೆ ಸೇರಿ ರಾಷ್ಟ್ರೀಯ ಹೆದ್...
17-04-26 08:56 pm
ಬುರುಡೆ ಗ್ಯಾಂಗ್ ಹೆಸರಿನಲ್ಲಿ ಹಾಸ್ಯ ; ಕಲಾವಿದರಿಗೆ...
17-04-26 03:02 pm
ಬೆಳ್ತಂಗಡಿಯಲ್ಲಿ ಎರಡು ಕಡೆ ಭೂಕಬಳಿಕೆ ; ವೀರೇಂದ್ರ ಹ...
17-04-26 12:33 pm
ಎಚ್ಐವಿ ಪೀಡಿತ ಮಕ್ಕಳ ಬಾಳಿಗೆ ಆಸರೆಯಾದ ಮಂಗಳೂರಿನ ತ...
17-04-26 11:25 am
17-04-26 06:48 pm
HK News Staffer
ದೂರವಾಣಿ ಮೂಲಕ ಕರೆ, ಬಾಡಿಗೆ ಮನೆಗಳಲ್ಲಿ ಮೀಟಿಂಗ್ ;...
16-04-26 10:36 pm
ಐಎಎಸ್ ಅಧಿಕಾರಿ ಎಂದು ನಂಬಿಸಿ ಸರ್ಕಾರಿ ವೈದ್ಯರಿಗೆ ವ...
16-04-26 07:35 pm
ಅರೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ತಾಯಿಯನ್ನು ಮೂರನೇ...
16-04-26 12:35 pm
ಮಂತ್ರಾಲಯ ಬಳಿ ಭೀಕರ ಅಪಘಾತ ; ರಾಯರ ದರ್ಶನಕ್ಕೆ ತೆರಳ...
16-04-26 11:21 am