ಬ್ರೇಕಿಂಗ್ ನ್ಯೂಸ್
29-08-25 01:47 pm HK News Desk ದೇಶ - ವಿದೇಶ
ಟೋಕಿಯೋ, ಆ.29 : ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಕ್ರವಾರ ಬೆಳಗ್ಗೆ ಜಪಾನ್ಗೆ ಭೇಟಿ ನೀಡಿದ್ದು, ಅಲ್ಲಿನ ಜಪಾನ್ ಸಮುದಾಯವು ಗಾಯತ್ರಿ ಮಂತ್ರದ ಉಚ್ಛಾರದೊಂದಿಗೆ ಮೋದಿಯವರನ್ನು ಸ್ವಾಗತಿಸಿದೆ. ಗಾಯತ್ರಿ ಮಂತ್ರದ ಜಪದೊಂದಿಗೆ ಟೋಕಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಾಂಸ್ಕೃತಿಕವಾಗಿ ಸ್ವಾಗತ ಕೋರಲಾಯಿತು. ಅನೇಕ ಜಾನಪದ ಹಾಗೂ ಮಂತ್ರ, ಶ್ಲೋಕಗಳ ಮೂಲಕ ಜಪಾನಿಯರು ಮೋದಿಯವರನ್ನು ತಮ್ಮ ದೇಶಕ್ಕೆ ಬರಮಾಡಿಕೊಂಡರು.
ಟೋಕಿಯೋ ವಿಮಾನ ನಿಲ್ದಾಣದಲ್ಲಿ ಜಪಾನಿನ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿದ್ದು, ಅಲ್ಲಿನ ಭಾರತೀಯ ವಲಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಮೋದಿಯವರನ್ನು ಬರಮಾಡಿಕೊಂಡರು. ಜಪಾನ್ ಭೇಟಿಗೂ ಮುನ್ನ ಪ್ರಧಾನಿಯವರು ಈ ಭೇಟಿಯು ಭಾರತ ಮತ್ತು ಜಪಾನ್ ನಡುವಿನ ಬಾಂಧವ್ಯ ಬಲಪಡಿಸುವ ಗುರಿ ಹೊಂದಿದೆ ಎಂದು ಹೇಳಿದ್ದು, ಜಪಾನ್ ಭೇಟಿ ಎರಡು ದಿನ ನಿಗದಿಯಾಗಿದೆ. ಈ ವೇಳೆ ಜಪಾನ್ ಪ್ರಧಾನಿ ಇಶಿಬಾ ಅವರೊಂದಿಗೆ ಪ್ರಧಾನಿಯವರು ಮಾತುಕತೆ ನಡೆಸಲಿದ್ದಾರೆ.








ಜಪಾನ್ ಭೇಟಿ ಮೂಲಕ ದೇಶದ ಬೆಳವಣಿಗೆಗೆ ಪೂರಕವಾಗಿ ಜಂಟಿ ಸಹಯೋಗದಲ್ಲಿ ಕಾರ್ಯಾಚರಣೆ ಮಾಡುವುದು, ಆರ್ಥಿಕ ಮತ್ತು ಹೂಡಿಕೆ ಸಂಬಂಧಗಳ ವ್ಯಾಪ್ತಿ ಮತ್ತು ಮಹತ್ವಾಕಾಂಕ್ಷೆಯನ್ನು ವಿಸ್ತರಿಸುವುದು, ಎಐ ಮತ್ತು ಸೆಮಿ ಕಂಡಕ್ಟರ್ಗಳು ಸೇರಿದಂತೆ ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಸಹಕಾರವನ್ನು ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ.
ಜಪಾನ್ ಬಳಿಕ ಚೀನಾಕ್ಕೆ ಭೇಟಿ
ಜಪಾನ್ ಭೇಟಿ ಬಳಿಕ ಪ್ರಧಾನಿ ಮೋದಿಯವರು ಚೀನಾಕ್ಕೆ ಭೇಟಿ ನೀಡಲಿದ್ದಾರೆ. ಆಗಸ್ಟ್ 31 ಮತ್ತು ಸೆಪ್ಟೆಂಬರ್ 1ರಂದು ಅವರು ಟಿಯಾಂಜಿನ್ನಲ್ಲಿ ನಡೆಯುವ ಎಸ್ಸಿಒ (ಶಾಂಘೈ ಕಾರ್ಪೊರೇಷನ್ ಆರ್ಗನೈಸೇಶನ್) ಶೃಂಗಸಭೆಯಲ್ಲಿ ಭಾಗವಹಿಸಲು ಚೀನಾಕ್ಕೆ ತೆರಳಲಿದ್ದಾರೆ. ಭಾರತಕ್ಕೆ ಅಮೆರಿಕ ಸುಂಕ ಬೆದರಿಕೆ ಹಿನ್ನೆಲೆಯಲ್ಲಿ ಚೀನಾ ಅಧ್ಯಕ್ಷರೇ ಮೋದಿಯವರನ್ನು ಸ್ವಾಗತಿಸಿ ಪಾಶ್ಚಾತ್ಯ ದೇಶಗಳಿಗೆ ಸಂದೇಶ ನೀಡುವ ನಿರೀಕ್ಷೆಯಿದೆ.
Prime Minister Narendra Modi received a grand cultural welcome upon his arrival in Japan on Friday morning, with the local Indian diaspora and Japanese community chanting the Gayatri Mantra at the Tokyo airport. The recitation of traditional mantras and shlokas created a spiritual ambiance as Japan warmly embraced the Indian leader.
28-02-26 11:49 am
HK News Desk
ರಾಜ್ಯದಲ್ಲಿ ಆಸ್ತಿ ಖರೀದಿದಾರರಿಗೆ ಮತ್ತೊಂದು ಶಾಕ್ !...
27-02-26 10:17 pm
ಧಾರವಾಡ ಪ್ರತಿಭಟನೆ ಎಫೆಕ್ಟ್ ; ರಾಜ್ಯದಲ್ಲಿ 60 ಸಾವಿ...
26-02-26 10:01 pm
ತಂದೆ ಆಟೋ ಚಾಲಕ, ತಾಯಿ ಹೂವಿನ ವ್ಯಾಪಾರಿ, ಮಗಳು ನ್ಯಾ...
26-02-26 12:58 pm
Moral Policing, Mangalore: ಮೋರಲ್ ಪೊಲೀಸ್ ; ರೈಲ...
26-02-26 10:26 am
28-02-26 07:17 pm
HK News Staffer
ಇರಾನ್ ಮೇಲೆ ಮುಗಿಬಿದ್ದ ಅಮೆರಿಕ-ಇಸ್ರೇಲ್ ಪಡೆಗಳು ;...
28-02-26 05:28 pm
ತ್ರಿಷಾ ಬಿರುಗಾಳಿ ; ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ್...
28-02-26 01:08 pm
ದೆಹಲಿ ಅಬಕಾರಿ ನೀತಿ ಹಗರಣ ; ಕೇಜ್ರಿವಾಲ್, ಸಿಸೋಡಿಯಾ...
27-02-26 03:55 pm
ಲಂಚ ಆರೋಪದಲ್ಲಿ ಸಿಕ್ಕಿಬಿದ್ದ ಗಣಿ ಉಪ ನಿರ್ದೇಶಕರ ಮನ...
27-02-26 06:14 am
28-02-26 08:53 pm
HK News Desk
Mangaluru Muscat Flight: ಮಂಗಳೂರು- ಮಸ್ಕತ್ ನಡುವ...
27-02-26 08:59 pm
Mangalore Sujith Madur: ಕೌನ್ಸಿಲರ್ ಸುಜಿತ್ ಮಾಡೂ...
27-02-26 08:52 pm
Leopard Mangalore, MLA Vedavyas Kamath: ಕದ್ರಿ...
27-02-26 08:40 pm
Justice Veerappa, Udupi: ಉಪ ಲೋಕಾಯುಕ್ತ ನ್ಯಾ.ವೀ...
27-02-26 08:36 pm
28-02-26 11:12 am
Mangalore Staffer
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm