ಮೋದಿ 75 ವರ್ಷಕ್ಕೆ ನಿವೃತ್ತರಾಗಬೇಕು ಎಂದು ಹೇಳಿಲ್ಲ ; ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗ್ವತ್‌ ಸ್ಪಷ್ಟನೆ 

29-08-25 12:50 pm       HK News Desk   ದೇಶ - ವಿದೇಶ

ತಿಂಗಳ ಹಿಂದೆ ತಾನು ನೀಡಿದ್ದ ಹೇಳಿಕೆಯೊಂದನ್ನು ಆಧರಿಸಿ ಪ್ರಧಾನಿ ನರೇಂದ್ರ ಮೋದಿಯವರ ನಿವೃತ್ತಿಯ ಬಗ್ಗೆ ಹಬ್ಬಿದ್ದ ಊಹಾಪೋಹಗಳಿಗೆ ಆರೆಸ್ಸೆಸ್‌ ಮುಖ್ಯಸ್ಥ ಮೋಹನ್ ಭಾಗ್ವತ್‌ ತೆರೆ ಎಳೆದಿದ್ದಾರೆ. ಸಂಘದಲ್ಲಿ 75 ವರ್ಷ ದಾಟಿದ ನಾಯಕರಿಗೆ ನಿವೃತ್ತಿ ನೀಡುವ ನಿಯಮ ಇಲ್ಲ ಎಂದು ಸ್ಪಷ್ಟಪಡಿಸುವ ಮೂಲಕ ಮೋದಿಯವರು ರಾಜಕೀಯದಲ್ಲಿ ಸಕ್ರಿಯರಾಗಿ ಮುಂದುವರಿಯಲು ಅಡ್ಡಿ ಇಲ್ಲ ಎಂಬ ಸಂದೇಶ ರವಾನಿಸಿದ್ದಾರೆ. 

ನವದೆಹಲಿ, ಆ.29 : ತಿಂಗಳ ಹಿಂದೆ ತಾನು ನೀಡಿದ್ದ ಹೇಳಿಕೆಯೊಂದನ್ನು ಆಧರಿಸಿ ಪ್ರಧಾನಿ ನರೇಂದ್ರ ಮೋದಿಯವರ ನಿವೃತ್ತಿಯ ಬಗ್ಗೆ ಹಬ್ಬಿದ್ದ ಊಹಾಪೋಹಗಳಿಗೆ ಆರೆಸ್ಸೆಸ್‌ ಮುಖ್ಯಸ್ಥ ಮೋಹನ್ ಭಾಗ್ವತ್‌ ತೆರೆ ಎಳೆದಿದ್ದಾರೆ. ಸಂಘದಲ್ಲಿ 75 ವರ್ಷ ದಾಟಿದ ನಾಯಕರಿಗೆ ನಿವೃತ್ತಿ ನೀಡುವ ನಿಯಮ ಇಲ್ಲ ಎಂದು ಸ್ಪಷ್ಟಪಡಿಸುವ ಮೂಲಕ ಮೋದಿಯವರು ರಾಜಕೀಯದಲ್ಲಿ ಸಕ್ರಿಯರಾಗಿ ಮುಂದುವರಿಯಲು ಅಡ್ಡಿ ಇಲ್ಲ ಎಂಬ ಸಂದೇಶ ರವಾನಿಸಿದ್ದಾರೆ. 

ಇದರೊಂದಿಗೆ ಬಿಜೆಪಿ ಮತ್ತು ಬಿಜೆಪಿಯ ಮಾರ್ಗದರ್ಶಕ ಸಂಸ್ಥೆ ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ 75 ವರ್ಷ ಆದ ನಾಯಕರಿಗೆ ನಿವೃತ್ತಿ ನೀಡುವ ಅಲಿಖಿತ ನಿಯಮವಿದೆ ಎಂಬ ಚರ್ಚೆಗಳಿಗೆ ಅವರು ಪೂರ್ಣ ವಿರಾಮ ಹಾಕಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಕಾರ್ಯಕ್ರಮದ ಉಪನ್ಯಾಸದ ಬಳಿಕ ಮಾತನಾಡಿದ ಮೋಹನ್ ಭಾಗ್ವತ್‌ 75 ವರ್ಷವಾದಾಗ ನಾನು ನಿವೃತ್ತಿಯಾಗುತ್ತೇನೆ ಅಥವಾ ಬೇರೆಯವರು ನಿವೃತ್ತಿಯಾಗಬೇಕು ಎಂದು ನಾನು ಎಂದಿಗೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.  

ನಾವೆಲ್ಲರೂ ಸಂಘದ ಸ್ವಯಂಸೇವಕರು. ನಮಗೆ ವಹಿಸಿದ ಜವಾಬ್ದಾರಿಯನ್ನು ನಾವು ನಿರ್ವಹಿಸುತ್ತೇವೆ. ನಾನು 80 ವರ್ಷವಾದರೂ ಸಂಘವನ್ನು ಮುನ್ನಡೆಸುತ್ತೇನೆ ಎಂದು ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿಯವರು 75ನೇ ವಯಸ್ಸಿನಲ್ಲಿ ನಿವೃತ್ತಿಯಾಗುತ್ತಾರೆ ಎಂಬ ವದಂತಿಯನ್ನು ಬಿಜೆಪಿ ಕೂಡ ತಳ್ಳಿ ಹಾಕಿದೆ. 75 ವರ್ಷದ ಮಿತಿ ಎಂಬ ನಿಯಮವೇ ಇಲ್ಲ ಎಂದು ಈಗಾಗಲೇ ಹಲವು ಬಾರಿ ಪಕ್ಷ ಸ್ಪಷ್ಟಪಡಿಸಿದೆ. ಇದಕ್ಕೆ ಉದಾಹರಣೆಯಾಗಿ, ಕೇಂದ್ರ ಸಚಿವ ಸಂಪುಟದಲ್ಲಿ 80 ವರ್ಷದ ಜಿತನ್ ರಾಮ್ ಮಾಂಝಿ ಅವರು ಸಚಿವರಾಗಿರುವುದನ್ನೂ ಬಿಜೆಪಿ ಉಲ್ಲೇಖಿಸಿದೆ.

ಮೂರು ಮಕ್ಕಳನ್ನು ಹೊಂದುವಂತೆ ಕರೆ 

ದೇಶದ ಎಲ್ಲ ನಾಗರಿಕರೂ ಕನಿಷ್ಠ ಮೂರು ಮಕ್ಕಳನ್ನು ಪಡೆಯಬೇಕು. ನಾವಿಬ್ಬರು, ನಮಗೆ ಮೂವರು' ಎಂಬ ಸೂತ್ರವನ್ನು ಪಾಲಿಸುವುದು ಒಳ್ಳೆಯದು ಎಂದು ಮೋಹನ್‌ ಭಾಗ್ವತ್‌ ಹೇಳಿದ್ದಾರೆ. ದೇಶದಲ್ಲಿ ಜನಸಂಖ್ಯಾ ಕುಸಿತ ತಡೆಗಟ್ಟಿ ಅದನ್ನು ಸ್ಥಿರಗೊಳಿಸಲು ಮೂರು ಮಕ್ಕಳನ್ನು ಹೊಂದುವುದು ಅಗತ್ಯ ಎಂದು ಅವರು ತಿಳಿಸಿದ್ದಾರೆ.

RSS chief Mohan Bhagwat has put an end to speculations regarding Prime Minister Narendra Modi’s retirement, clarifying that he never stated Modi must step down after turning 75. Addressing discussions sparked by one of his earlier remarks, Bhagwat made it clear that there is no such rule in the RSS requiring leaders to retire after the age of 75.