ಬ್ರೇಕಿಂಗ್ ನ್ಯೂಸ್
22-08-25 02:00 pm HK News Desk ದೇಶ - ವಿದೇಶ
ನವದೆಹಲಿ, ಆ.22 : ದೇಶದ ಶಕ್ತಿಕೇಂದ್ರ ಸಂಸತ್ ಭವನದಲ್ಲಿ ಮತ್ತೊಮ್ಮೆ ಭದ್ರತಾ ವೈಫಲ್ಯ ಕಂಡುಬಂದಿದ್ದು ಶುಕ್ರವಾರ ಬೆಳಗ್ಗೆ ಯುವಕನೊಬ್ಬ ಸಂಸತ್ತಿನ ಗೋಡೆ ಏರಲು ಯತ್ನಿಸಿದ್ದಾನೆ. ಬಿಗಿ ಭದ್ರತೆಯ ಮಧ್ಯೆಯೂ ಸುಮಾರು 20 ಅಡಿ ಎತ್ತರದ ಗೋಡೆಯನ್ನು ಏರಿ ಒಳಗೆ ನುಗ್ಗಲು ಯತ್ನಿಸಿದಾಗ ಭದ್ರತಾ ಸಿಬ್ಬಂದಿ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಂಧಿತ ಯುವಕ ಉತ್ತರ ಪ್ರದೇಶದವನಾಗಿದ್ದು, ರಾಮ ಎಂಬ ಹೆಸರಿನವನೆಂದು ಗುರುತಿಸಲಾಗಿದೆ. ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಶುಕ್ರವಾರ ಬೆಳಗ್ಗೆ 6.30ರ ವೇಳೆಗೆ ಘಟನೆ ನಡೆದಿದ್ದು 20 ವರ್ಷದ ಯುವಕನೊಬ್ಬ ಸಂಸತ್ತಿನ ಆವರಣದ ಮರವನ್ನು ಬಳಸಿ 20 ಅಡಿ ಎತ್ತರದ ಗೋಡೆಯನ್ನು ಏರಿ ಒಳಗೆ ಹೋಗಿದ್ದು 15 ಮೀಟರ್ ದೂರದ ಗರುಡ ಗೇಟ್ ನಲ್ಲಿ ಸಿಐಎಸ್ಎಫ್ ಭದ್ರತಾ ಸಿಬಂದಿ ತಪಾಸಣೆ ನಡೆಸಿದಾಗ ಸಿಕ್ಕಿಬಿದ್ದಿದ್ದಾನೆ. ಬಳಿಕ ಭದ್ರತಾ ಸಿಬಂದಿಯ ಮಾಹಿತಿ ಆಧರಿಸಿ ದೆಹಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ (ನವದೆಹಲಿ) ದೇವೇಶ್ ಮಹ್ಲಾ ತಿಳಿಸಿದ್ದಾರೆ.
ಬಂಧಿತ ವ್ಯಕ್ತಿ ಮಾನಸಿಕವಾಗಿ ಅಸ್ವಸ್ಥನಂತೆ ಕಾಣುತ್ತಿದ್ದಾನೆ ಮತ್ತು ಹೆಚ್ಚಿನ ವಿಚಾರಣೆ ಮತ್ತು ಪರಿಶೀಲನೆ ನಡೆಯುತ್ತಿದೆ' ಎಂದು ಡಿಸಿಪಿ ತಿಳಿಸಿದ್ದಾರೆ. ಗುಪ್ತಚರ ಬ್ಯೂರೋ (ಐಬಿ) ಮತ್ತು ದೆಹಲಿ ಪೊಲೀಸರ ವಿಶೇಷ ಘಟಕ ಸೇರಿದಂತೆ ಹಲವು ಕೇಂದ್ರ ತನಿಖಾ ಸಂಸ್ಥೆಗಳು ಆ ವ್ಯಕ್ತಿಯನ್ನು ವಿಚಾರಣೆ ನಡೆಸುತ್ತಿವೆ. ಆತನನ್ನು ಹೆಚ್ಚಿನ ವಿಚಾರಣೆಗಾಗಿ ದೆಹಲಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಅವನ ಉದ್ದೇಶ ಏನೆಂಬುದನ್ನು ನಿರ್ಧರಿಸಲು ಐಬಿ ಮತ್ತು ವಿಶೇಷ ಘಟಕದ ಅಧಿಕಾರಿಗಳು ಆತನನ್ನು ವಿಚಾರಣೆ ನಡೆಸುತ್ತಿದ್ದಾರೆ' ಎಂದು ಮೂಲಗಳು ತಿಳಿಸಿವೆ. ಎರಡು ವರ್ಷಗಳ ಹಿಂದೆಯೂ ಸಂಸತ್ತಿನಲ್ಲಿ ಭದ್ರತಾ ವೈಫಲ್ಯ ನಡೆದಿತ್ತು.
2023ರ ಡಿಸೆಂಬರ್ 13 ರಂದು ಮನೋರಂಜನ್ ಮತ್ತು ಸಾಗರ್ ಶರ್ಮ ಎಂಬಿಬ್ಬರು ವ್ಯಕ್ತಿಗಳು 2001ರ ಸಂಸತ್ ದಾಳಿಯ ವರ್ಷಾಚರಣೆ ದಿನವೇ ಅಕ್ರಮವಾಗಿ ಒಳನುಗ್ಗಿದ್ದಲ್ಲದೆ, ಸಂಸತ್ ಅಧಿವೇಶನ ನಡೆಯುತ್ತಿದ್ದಾಗಲೇ ಸಂದರ್ಶಕರ ಗ್ಯಾಲರಿಯಿಂದ ಹಾರಿ ಹಳದಿ ಬಣ್ಣದ ಕಲರ್ ಬಾಂಬ್ ಎಸೆಯುತ್ತ ಹೈಡ್ರಾಮಾ ಮಾಡಿದ್ದರು. ಸಂಸತ್ತಿನ ಹೊರಗಡೆಯೂ ಮತ್ತಿಬ್ಬರು ವ್ಯಕ್ತಿಗಳು ಇದೇ ರೀತಿಯ ಕೃತ್ಯ ಎಸಗಿದ್ದರು. ಇದೀಗ ಮತ್ತೆ ಸಂಸತ್ ಅಧಿವೇಶನ ಕೊನೆಗೊಂಡ ಮರುದಿನವೇ ಅಂತಹದ್ದೇ ಭದ್ರತಾ ವೈಫಲ್ಯ ನಡೆದಿದೆ.
In yet another lapse of security at the nation’s power center, a 20-year-old youth attempted to scale the 20-foot-high wall of Parliament on Friday morning. Despite the tight security, the youth managed to climb the wall using a tree inside the complex before being intercepted by security personnel. He was later handed over to Delhi Police.
22-08-25 12:29 pm
HK News Desk
Mahesh Thimarodi, Kalladka Prabhakar Bhat: ಮಹ...
22-08-25 09:47 am
Dharmasthala Case, Minister Eshwar Khandre: ಧ...
21-08-25 10:31 pm
Dharmasthala, Acharya Sri Gunadharanandi Maha...
21-08-25 10:21 pm
ಸೌಹಾರ್ದ ಸಹಕಾರಿ ವಿಧೇಯಕಕ್ಕೆ ಮೇಲ್ಮನೆಯಲ್ಲಿ ಸೋಲು ;...
21-08-25 06:24 pm
22-08-25 02:00 pm
HK News Desk
ಚಿತ್ರನಟಿ ಆರೋಪ ಬೆನ್ನಲ್ಲೇ ಮಂಗಳಮುಖಿಯಿಂದಲೂ ದೂರು,...
22-08-25 01:11 pm
ಮಹಾ ಸಿಎಂ ದೇವೇಂದ್ರ ಫಡ್ನವೀಸ್ - ಎಂಎನ್ಎಸ್ ಮುಖ್ಯಸ್...
21-08-25 06:09 pm
ಹೈದರಾಬಾದ್ ನಲ್ಲಿ ಕಲಬುರಗಿ ಮೂಲದ 2 ವರ್ಷದ ಮಗು ಸೇರ...
21-08-25 12:54 pm
ಹೆದ್ದಾರಿಯಲ್ಲಿ ಗುಂಡಿಗಳು ಬಿದ್ದಿದ್ದರೆ, ಟ್ರಾಫಿಕ್...
20-08-25 10:56 pm
21-08-25 09:35 pm
HK News Desk
Vhp, Mangalore, Sharan Pumpwell: ಗಣೇಶೋತ್ಸವ, ದ...
21-08-25 09:12 pm
FIR, YouTuber Sameer MD, Doota Arrest: ಸಾವಿರಾ...
21-08-25 03:44 pm
MRPL Accident, Mangalore: ಕಾಟಿಪಳ್ಳ ; ಟಿಪ್ಪರ್...
21-08-25 02:05 pm
Mahesh Shetty Timarodi, Udupi Police, BL Sant...
21-08-25 11:57 am
21-08-25 11:00 pm
Mangalore Correspondent
ಶೀಲ ಶಂಕೆ ; ಕ್ರಿಮಿನಾಶಕ ಕೊಡಿಸಿ ಕೊಲೆ, ಪ್ರಿಯಕರನೊ...
21-08-25 10:39 pm
Mangalore, Derlakatte, Robbery, Muthoot finan...
20-08-25 08:10 pm
Mangalore Lucky Scheme Scam Fraud, Wahab Kula...
19-08-25 10:52 pm
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm