ಜಮ್ಮು -ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ: 46 ಜನ ಮೃತ್ಯು 200ರಷ್ಟು ಮಂದಿ ನಾಪತ್ತೆ, 38 ಜನರ ಸ್ಥಿತಿ ಗಂಭೀರ

15-08-25 01:32 pm       HK News Desk   ದೇಶ - ವಿದೇಶ

ಜಮ್ಮು-ಕಾಶ್ಮೀರದ ಕಿಶ್ತ್ ವಾಡ ಜಿಲ್ಲೆಯಲ್ಲಿ ಗುರುವಾರ ಸಂಭವಿಸಿದ ಭೀಕರ ಮೇಘಸ್ಫೋಟ ಹಾಗೂ ಪ್ರವಾಹದಲ್ಲಿ 46 ಜನ ಮೃತಪಟ್ಟಿದ್ದು, 200ರಷ್ಟು ಮಂದಿ ನಾಪತ್ತೆಯಾಗಿದ್ದಾರೆ. 167 ಮಂದಿಯನ್ನು ರಕ್ಷಿಸಲಾಗಿದ್ದು, ಈ ಪೈಕಿ 38 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ. ದುರಂತದಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್ಎಫ್) ಇಬ್ಬರು ಸಿಬ್ಬಂದಿಯೂ ಮೃತಪಟ್ಟಿದ್ದಾರೆ. 

ಶ್ರೀನಗರ, ಆ.15 : ಜಮ್ಮು-ಕಾಶ್ಮೀರದ ಕಿಶ್ತ್ ವಾಡ ಜಿಲ್ಲೆಯಲ್ಲಿ ಗುರುವಾರ ಸಂಭವಿಸಿದ ಭೀಕರ ಮೇಘಸ್ಫೋಟ ಹಾಗೂ ಪ್ರವಾಹದಲ್ಲಿ 46 ಜನ ಮೃತಪಟ್ಟಿದ್ದು, 200ರಷ್ಟು ಮಂದಿ ನಾಪತ್ತೆಯಾಗಿದ್ದಾರೆ. 167 ಮಂದಿಯನ್ನು ರಕ್ಷಿಸಲಾಗಿದ್ದು, ಈ ಪೈಕಿ 38 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ. ದುರಂತದಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್ಎಫ್) ಇಬ್ಬರು ಸಿಬ್ಬಂದಿಯೂ ಮೃತಪಟ್ಟಿದ್ದಾರೆ. 

ಮಚೈಲ್ ಮಾತಾ ದೇವಾಲಯಕ್ಕೆ ಹೋಗುವ ಮಾರ್ಗದಲ್ಲಿರುವ ಜೋಸಿತಿಯಲ್ಲಿ ಗುರುವಾರ ಮಧ್ಯಾಹ್ನ 12ರಿಂದ 1 ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿದೆ. ಚೋಸಿತಿ ಗ್ರಾಮದಲ್ಲಿ ಮಟೈಲ್ ಮಾತಾ ದೇಗುಲಕ್ಕೆ ಪಾದಯಾತ್ರೆ ಹೋಗಲು ದೊಡ್ಡ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. 8.5 ಕಿ.ಮೀ. ದೂರದ ಪಾದಯಾತ್ರೆ ಇಲ್ಲಿಂದಲೇ ಪ್ರಾರಂಭವಾಗುತ್ತದೆ. ಜು.25ರಿಂದ ವಾರ್ಷಿಕ ಪಾದಯಾತ್ರೆ ಆರಂಭವಾಗಿದ್ದು, ಸೆಪ್ಟೆಂಬರ್ 5ರವರೆಗೂ ನಡೆಯಬೇಕಿತ್ತು. ದುರಂತದ ಹಿನ್ನೆಲೆಯಲ್ಲಿ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

Kishtwar cloudburst LIVE updates: Race against time as 46 feared dead, over  200 missing after flash floods – Firstpost

Kishtwar Cloudburst: 46 dead, over 100 injured as Army joins rescue  operation

Sudden, heavy rain in Indian Kashmir leaves 46 dead, more than 200 missing  | Reuters

Jammu-Kashmir Cloudburst: 46 killed after massive cloudburst hits Kishtwar;  NDRF personnel deployed - The Economic Times

ದಾಸೋಹಕ್ಕಾಗಿ ಸೇರಿದ್ದ ಜನ

ಕಿಶ್‌ವಾಡದಿಂದ ಸುಮಾರು 90 ಕಿ.ಮೀ. ದೂರದಲ್ಲಿರುವ ಚೋಸಿತಿ ಗ್ರಾಮವು ಸಮುದ್ರ ಮಟ್ಟದಿಂದ 9,500 ಅಡಿ ಎತ್ತರಲ್ಲಿದೆ. ಇಲ್ಲಿ ಮಡೈಲ್ ಮಾತಾ ದೇಗುಲಕ್ಕೆ ಹೋಗುವ ಭಕ್ತರಿಗೆ ಉಚಿತ ಅನ್ನದಾಸೋಹ ಏರ್ಪಡಿಸಲಾಗುತ್ತದೆ. ಗುರುವಾರವೂ ನೂರಾರು ಭಕ್ತರು ಪ್ರಸಾದ ಸೇವನೆಗಾಗಿ ಇಲ್ಲಿ ತಂಗಿದ್ದರು. ಈ ವೇಳೆ ಭಾರಿ ಮೇಘಸ್ಫೋಟದಿಂದಾಗಿ ಬಂಡೆಗಳು, ಮಣ್ಣು ನೀರು ಮಿಶ್ರಿತ ಪ್ರವಾಹವು ಉಂಟಾಗಿದೆ. ಗುಡ್ಡವೇ ಜರಿದು ಕಟ್ಟಡಗಳು, ಅಂಗಡಿ-ಮುಂಗಟ್ಟುಗಳನ್ನು ಕೊಚ್ಚಿ ಸಾಗಿದೆ.

ಧರಾಲಿಯನ್ನು ನೆನಪಿಸಿದ ಭಯಾನಕ ದೃಶ್ಯ

ಮೇಘಸ್ಫೋಟವಾದಾಗ ಬೃಹತ್ ಮರಗಳು, ಬಂಡೆಗಳ ಸಮೇತ ಕೆಸರು ನೀರು ರಭಸದಿಂದ ಬೆಟ್ಟ ಪ್ರದೇಶದಿಂದ ಇಳಿಜಾರಿನತ್ತ ನುಗ್ಗಿ ಬಂದಿದೆ. ನೋಡ ನೋಡುತ್ತಿದ್ದಂತೆಯೇ ಇಡೀ ಪ್ರದೇಶ ನಾಮಾವಶೇಷವಾಗಿ ಮಾರ್ಪಟ್ಟಿದೆ. ಇತ್ತೀಚೆಗೆ ಉತ್ತರಾಖಂಡ್‌ ರಾಜ್ಯದ ಧರಾಲಿ ಗ್ರಾಮದಲ್ಲಿ ಉಂಟಾದ ಮೇಘಸ್ಫೋಟ ಹಾಗೂ ಕೆಸರಿನ ಪ್ರವಾಹದ ದೃಶ್ಯವೇ ಚೋಸಿತಿಯಲ್ಲಿ ಪುನರಾವರ್ತನೆಯಾಗಿದೆ.

ಘಟನೆ ಬಳಿಕ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ, ರಾಜ್ಯ ವಿಪತ್ತು ನಿರ್ವಹಣಾ ಪಡೆ, ಪೊಲೀಸ್, ಸೇನಾ ಸಿಬ್ಬಂದಿ ಹಾಗೂ ಸ್ಥಳೀಯ ಸ್ವಯಂ ಸೇವಕರು ಜಂಟಿಯಾಗಿ ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಆದರೆ ರಸ್ತೆಗಳೂ ಕೊಚ್ಚಿ ಹೋಗಿದ್ದ ರಿಂದ ಮತ್ತು ಭಾರಿ ಮಣ್ಣು, ಕಲ್ಲುಬಂಡೆಗಳ ಹಿನ್ನೆಲೆಯಲ್ಲಿ ಕಾರ್ಯಾಚರಣೆಗೆ ಅಡಚಣೆಯಾಯಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಲೆ.ಗವರ್ನರ್ ಮತ್ತು ಮುಖ್ಯಮಂತ್ರಿ ಉಮರ್ ಅಬ್ದುಲ್ಲ ಅವರನ್ನು ಸಂಪರ್ಕಿಸಿ ಮಾಹಿತಿ ಪಡೆದಿದ್ದು ರಕ್ಷಣಾ ಕಾರ್ಯಾಚರಣೆ ಚುರುಕುಗೊಳಿಸಲು ಸೂಚಿಸಿದ್ದಾರೆ.

The death toll from the massive cloudburst in Jammu and Kashmir’s Kishtwar climbed to 65 on Friday, even as intense rescue operations continued for the second day.