ಬ್ರೇಕಿಂಗ್ ನ್ಯೂಸ್
14-08-25 07:02 pm HK News Desk ದೇಶ - ವಿದೇಶ
ದುಬೈ, ಆ.14 : 2025ರ ಜನವರಿಯಿಂದ ಜೂನ್ ಅಂತ್ಯದ ತನಕದ ಆರು ತಿಂಗಳ ಅವಧಿಯಲ್ಲಿ ದುಬೈನಲ್ಲಿ 3,600ಕ್ಕೂ ಅಧಿಕ ಜನ ಇಸ್ಲಾಂಗೆ ಮತಾಂತರಗೊಂಡಿದ್ದಾರೆ ಎಂದು ವರದಿಯೊಂದು ಬಹಿರಂಗಪಡಿಸಿದೆ. ಈ ಮಧ್ಯೆ ಯುಎಇಯಲ್ಲಿ ನೂರಾರು ಜನ ಇಸ್ಲಾಮಿಕ್ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿದ್ದು, ದುಬೈ ನಗರ ಜಾಗತಿಕ ಮಟ್ಟದಲ್ಲಿ ಧಾರ್ಮಿಕವಾಗಿ ಪ್ರತಿಫಲನಗೊಳ್ಳುತ್ತಿರುವುದನ್ನು ಸಂಕೇತಿಸುತ್ತಿದೆ.
ದುಬೈನ ಇಸ್ಲಾಮಿಕ್ ವ್ಯವಹಾರಗಳು ಮತ್ತು ದತ್ತಿ ಚಟುವಟಿಕೆಗಳ ಇಲಾಖೆ (IACAD) ಅಧೀನದ ಮೊಹಮ್ಮದ್ ಬಿನ್ ರಶೀದ್ ಇಸ್ಲಾಮಿಕ್ ಸಾಂಸ್ಕೃತಿಕ ಕೇಂದ್ರವು 2025ರ ಜನವರಿ -ಜೂನ್ ಮಧ್ಯೆ ನಡೆಸಿದ ವಿವಿಧ ಕಾರ್ಯಾಚರಣೆಗಳಿಂದಾಗಿ ಅಲ್ಲಿ ಇಸ್ಲಾಂಗೆ ಮತಾಂತರ ಆಗಿರುವ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳಕ್ಕೆ ಕಾರಣವಾಗಿದೆ. ಈ ಆರು ತಿಂಗಳಲ್ಲಿ 3,600ಕ್ಕೂ ಅಧಿಕ ಜನ ಇಸ್ಲಾಂ ಧರ್ಮವನ್ನು ಸ್ವೀಕರಿಸಿರುವುದು ಇದನ್ನು ಪುಷ್ಟೀಕರಿಸಿದೆ.
ಮತಾಂತರ ಪ್ರಕ್ರಿಯೆ ಒಂದು ಭಾಗವಾದರೆ, ಮೊಹಮ್ಮದ್ ಬಿನ್ ರಶೀದ್ ಇಸ್ಲಾಮಿಕ್ ಸಾಂಸ್ಕೃತಿಕ ಕೇಂದ್ರಕ್ಕೆ 1,300ಕ್ಕೂ ಅಧಿಕ ವಿದ್ಯಾರ್ಥಿಗಳು ಶೈಕ್ಷಣಿಕ ಕಾರ್ಯಕ್ರಮಗಳ ಉದ್ದೇಶಕ್ಕಾಗಿ ದಾಖಲಾಗಿದ್ದಾರೆ. ಈ ಕಲಿಕಾ ಕೇಂದ್ರವು 47 ಇಸ್ಲಾಂ ಜ್ಞಾನ ಹಾಗೂ ಜಾಗೃತಿಯ ಕೋರ್ಸ್ಗಳನ್ನು ಒಳಗೊಂಡಿದ್ದು ಈಗಾಗಲೇ 1,400 ಮಂದಿ ಇಲ್ಲಿ ಕಲಿಯುತ್ತಿದ್ದಾರೆ. ಇವೆಲ್ಲವೂ ದುಬೈನಲ್ಲಿ ಇಸ್ಲಾಮಿಕ್ ಸಂಸ್ಕೃತಿ ಮತ್ತು ಧಾರ್ಮಿಕ ಪ್ರಜ್ಞೆಯನ್ನು ಗಟ್ಟಿಗೊಳಿಸಲು ದುಬೈನ ಇಸ್ಲಾಮಿಕ್ ವ್ಯವಹಾರಗಳು ಮತ್ತು ದತ್ತಿ ಚಟುವಟಿಕೆಗಳ ಇಲಾಖೆಯ ಪ್ರಯತ್ನದ ಭಾಗ ಎನ್ನಲಾಗಿದೆ.
ಮೊಹಮ್ಮದ್ ಬಿನ್ ರಶೀದ್ ಇಸ್ಲಾಮಿಕ್ ಸಾಂಸ್ಕೃತಿಕ ಕೇಂದ್ರದ ನಿರ್ದೇಶಕ ಜಾಸಿಮ್ ಅಲ್ ಖಜ್ರಾಜಿ ಅವರ ಪ್ರಕಾರ, ಸಂಸ್ಥೆಯು ಶೈಕ್ಷಣಿಕ ಉದ್ದೇಶಗಳ ಜೊತೆಗೆ ಅಂತರ ಸಾಂಸ್ಕೃತಿಕ ಸಂವಾದಗಳನ್ನು ನಡೆಸುವುದಕ್ಕೆ ಒತ್ತು ಕೊಡುತ್ತಿದೆ. ನಾವು ಸಾಂಸ್ಕೃತಿಕ ಮತ್ತು ಧಾರ್ಮಿಕ ಸಂವಹನದ ಮೂಲಕ ಸಹಿಷ್ಣುತೆ, ಜ್ಞಾನದ ಆಧಾರದ ಮೇಲೆ ಜಾಗತಿಕ ಮಟ್ಟದಲ್ಲಿ ಇಸ್ಲಾಂ ಕುರಿತ ಚಿತ್ರಣವನ್ನು ಪ್ರಸ್ತುತಪಡಿಸುವ ಗುರಿಯನ್ನು ಹೊಂದಿ ಕೆಲಸ ಮಾಡುತ್ತಿದ್ದೇವೆ. ಇದು ಹೊಸದಾಗಿ ಇಸ್ಲಾಂಗೆ ಮತಾಂತರಗೊಂಡವರ ಮತ್ತು ಇಸ್ಲಾಮಿಕ್ ಸಂಸ್ಕೃತಿಯಲ್ಲಿ ಆಸಕ್ತಿ ಹೊಂದಿರುವವರ ಅನುಮಾನಗಳನ್ನು ನಿವಾರಿಸುತ್ತದೆ ಎಂದು ತಿಳಿಸಿದ್ದಾರೆ.
1969ರಲ್ಲಿ ಆಗಿನ ದುಬೈ ಆಡಳಿತಗಾರ ದಿ.ಎಚ್.ಎಚ್ ಶೇಖ್ ರಶೀದ್ ಬಿನ್ ಸಯೀದ್ ಅಲ್ ಮಕ್ತೌಮ್ ಅವರಿಂದ ಸ್ಥಾಪಿಸಲ್ಪಟ್ಟ ಐಎಸಿಎಡಿ, ಎಮಿರೇಟ್ನಾದ್ಯಂತ ಧಾರ್ಮಿಕ ಅರಿವು ಮತ್ತು ಇಸ್ಲಾಮಿಕ್ ಮೌಲ್ಯಗಳನ್ನು ಬೆಳೆಸುವ ಪ್ರಮುಖ ಉದ್ದೇಶದಿಂದ ಕಾರ್ಯ ನಿರ್ವಹಿಸುತ್ತಿದೆ. ಫತ್ವಾ (ಧಾರ್ಮಿಕ ತೀರ್ಪುಗಳು) ಮಾರ್ಗದರ್ಶನ ನೀಡುವುದು, ಕುರಾನ್ ಮತ್ತು ಇಸ್ಲಾಮಿಕ್ ಸಾಹಿತ್ಯದ ಮುದ್ರಣ ಮತ್ತು ವಿತರಣೆ ಮಾಡುವುದು, ಹಜ್ ಮತ್ತು ಉಮ್ರಾ ತೀರ್ಥಯಾತ್ರೆಗಳನ್ನು ಆಯೋಜಿಸುವುದು, ಧಾರ್ಮಿಕ ಪಠ್ಯಗಳನ್ನು ಅನುವಾದಿಸುವುದು, ಇಸ್ಲಾಮಿಕ್ ಧಾರ್ಮಿಕ ಶಿಕ್ಷಕರಿಗೆ ಪರವಾನಗಿಗಳನ್ನು ನೀಡುವುದು, ದುಬೈನಾದ್ಯಂತ ಮಸೀದಿಗಳನ್ನು ನಿರ್ವಹಿಸುವುದು ಇತ್ಯಾದಿ ಕಾರ್ಯಗಳನ್ನು ಮಾಡುತ್ತದೆ.
More than 3,600 people from diverse cultural background converted to Islam in Dubai during the first half of 2025, according to the Mohammed bin Rashid Center for Islamic Culture, part of the Islamic Affairs and Charitable Activities Department.
14-10-25 11:24 am
HK News Desk
CM Siddaramaiah, DK Shivakumar:ಶಾಸಕರ ಬೆಂಬಲವಿಲ...
13-10-25 10:09 pm
ಸಚಿವನಾಗಿ ಆದಾಯ ಮೂಲಕ್ಕೆ ಕತ್ತರಿ ; ನಟನೆಗೆ ಮರಳಲಿದ್...
13-10-25 03:54 pm
ಶಾಲಾ ಮೈದಾನ, ಪಾರ್ಕ್ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ...
13-10-25 12:51 pm
DK Shivakumar, MLA Munirathna, CM Siddaramaia...
12-10-25 08:59 pm
14-10-25 10:33 pm
HK News Desk
ಹಮಾಸ್ - ಇಸ್ರೇಲ್ ಶಾಂತಿ ಒಪ್ಪಂದ ; ಎರಡು ವರ್ಷಗಳ ಅಕ...
14-10-25 11:22 am
ಕರೂರು ಕಾಲ್ತುಳಿತ ಪ್ರಕರಣ ; ಸಿಬಿಐ ತನಿಖೆಗೆ ಒಪ್ಪಿಸ...
14-10-25 11:11 am
Ex-IAS Officer Kannan Gopinathan, Congress: ಜ...
13-10-25 10:37 pm
Kerala, IT professional dead, RSS members: ಆರ...
13-10-25 05:31 pm
14-10-25 10:36 pm
Mangalore Correspondent
ಸುಳ್ಯ ಮೂಲದ ಯುವಕ ಮಾರಿಷಸ್ ನಲ್ಲಿ ಜಲಪಾತಕ್ಕೆ ಬಿದ್ದ...
14-10-25 10:13 pm
ರಸ್ತೆಯಲ್ಲೇ ತ್ಯಾಜ್ಯ ಸುರಿಸುವ ಮೀನಿನ ಲಾರಿಗಳಿಗೆ ಮತ...
14-10-25 09:12 pm
ಮುದುಂಗಾರುಕಟ್ಟೆ ಬಸ್ ನಿಲ್ದಾಣದಲ್ಲಿ ಯುವಕನ ಮೃತದೇಹ...
14-10-25 06:39 pm
ಬಿ.ಸಿ ರೋಡ್ ; ಹೆದ್ದಾರಿ ಬದಿ ಕಾರು ರಿಪೇರಿ ಮಾಡುತ್...
14-10-25 05:46 pm
14-10-25 04:44 pm
HK News Desk
ರುಪಾಯಿಗೆ ನಾಲ್ಕು ಪಟ್ಟು ಯುಕೆ ಪೌಂಡ್ ಕರೆನ್ಸಿಯ ಆಮಿ...
14-10-25 11:19 am
Vitla, Honey Trap, Mangalore Crime: ಗಲ್ಫ್ ಉದ್...
13-10-25 10:04 pm
Mangalore, Loan Fraud, Fake Gold: ಆತ್ಮಶಕ್ತಿ ಸ...
12-10-25 03:52 pm
Udupi, Karkala, Youth suicide: ಖಾಸಗಿ ವಿಡಿಯೋ ಮ...
10-10-25 09:48 pm