ಬ್ರೇಕಿಂಗ್ ನ್ಯೂಸ್
14-08-25 11:26 am HK News Desk ದೇಶ - ವಿದೇಶ
ನವದೆಹಲಿ, ಆ.14 : ಭಾರತದ ಸರಕುಗಳಿಗೆ ಶೇ. 50 ಸುಂಕ ವಿಧಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಪರೋಕ್ಷ ಯುದ್ಧ ಸಾರುತ್ತಿರುವ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊಂಡುತನದ ಮಧ್ಯೆಯೇ ಮುಂದಿನ ತಿಂಗಳು ಅಮೆರಿಕದ ನ್ಯೂಯಾರ್ಕ್ ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ವಿಶ್ವಸಂಸ್ಥೆಯ 80ನೇ ಸಾಮಾನ್ಯ ಸಭೆ ಸೆಪ್ಟೆಂಬರ್ 9ರಿಂದ ಆರಂಭವಾಗಲಿದ್ದು, 23ರಿಂದ 29ರ ತನಕ ಉನ್ನತ ಮಟ್ಟದ ಸಭೆ ನಡೆಯಲಿದೆ. ಇದಕ್ಕೆ ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ಭಾಷಣಗಾರರ ಪ್ರಾಥಮಿಕ ಪಟ್ಟಿಯಲ್ಲಿ ನರೇಂದ್ರ ಮೋದಿಯವರ ಹೆಸರಿರುವುದು ಮಹತ್ವ ಪಡೆದುಕೊಂಡಿದೆ. ಉನ್ನತ ಮಟ್ಟದ ಸಭೆಯಲ್ಲಿ ಸಾಂಪ್ರದಾಯಿಕವಾಗಿ ಬ್ರೆಝಿಲ್ ಮೊದಲ ಭಾಷಣಗಾರ ಆಗಿದ್ದು ಆ ಬಳಿಕ ಅಮೇರಿಕಾ ಅಧ್ಯಕ್ಷರು ಮಾತನಾಡಲಿದ್ದಾರೆ.
ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೆ.23ರಂದು ವಿಶ್ವಸಂಸ್ಥೆಯಲ್ಲಿ ಮಾತನಾಡಲಿದ್ದು, ನರೇಂದ್ರ ಮೋದಿಯವರ ಭಾಷಣ ಸೆ.26ಕ್ಕೆ ನಿಗದಿಯಾಗಿದೆ. ಹೀಗಾಗಿ ಟ್ರಂಪ್ ಅವರ ಭಾಷಣಕ್ಕೆ ಮೋದಿಯವರು ವಿಶ್ವಸಂಸ್ಥೆಯ ವೇದಿಕೆಯಲ್ಲಿ ತಿರುಗೇಟು ನೀಡಲಿದ್ದಾರೆಂಬ ಆಶಾಭಾವ ಗರಿಗೆದರಿದೆ. ಆದರೂ ಅಮೇರಿಕಾದ ಒತ್ತಡಕ್ಕೆ ಮಣಿದು ಕೊನೆ ಕ್ಷಣದಲ್ಲಿ ಮೋದಿಯವರನ್ನು ಭಾಷಣಕಾರರ ಪಟ್ಟಿಯಿಂದ ಕೈಬಿಟ್ಟರೂ ಅಚ್ಚರಿಯಿಲ್ಲ.
ಸೆಪ್ಟೆಂಬರ್ 26ರಂದೇ ಇಸ್ರೇಲ್, ಚೀನಾ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳ ಅಧ್ಯಕ್ಷರು, ಪ್ರಧಾನಿಗಳಿಂದ ಭಾಷಣವೂ ನಿಗದಿಯಾಗಿದೆ. ಸುಂಕ ಸಮರದ ಕಾರಣಕ್ಕೆ ಮತ್ತು ವಿಶ್ವಸಂಸ್ಥೆಯ ಮಹಾಸಭೆ ಅಮೆರಿಕದಲ್ಲಿ ನಡೆಯುತ್ತಿರುವುದರಿಂದ ಈ ಸಭೆಯಲ್ಲಿ ಭಾರತಕ್ಕೆ ಅವಕಾಶ ನೀಡಿರುವುದು ಚರ್ಚೆಗೀಡಾಗಿದೆ.
ಎರಡು ದಿನಗಳ ಹಿಂದೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ ಸ್ಕಿ ಮತ್ತು ರಷ್ಯಾ ಅಧ್ಯಕ್ಷ ಪುತಿನ್ ಜೊತೆಗೆ ಪ್ರಧಾನಿ ಮೋದಿ ದೂರವಾಣಿ ಮಾತುಕತೆ ನಡೆಸಿದ್ದರು. ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತು ಪುತಿನ್ ಆಗಸ್ಟ್ 15ರಂದು ಮಾತುಕತೆ ನಿಗದಿಯಾಗಿದ್ದು ಅದಕ್ಕೂ ಮೊದಲೇ ಮೋದಿ ಮಾತುಕತೆ ಮಾಡಿ ಯುದ್ಧ ನಿಲ್ಲಿಸುವಂತೆ ಸಲಹೆ ನೀಡಿದ್ದಲ್ಲದೆ ಅಮೆರಿಕದ ತೆರಿಗೆ ನೀತಿಯ ಬಗ್ಗೆಯೂ ಚರ್ಚಿಸಿದ್ದರು. ಇದರ ಬೆನ್ನಲ್ಲೇ ಪ್ರಧಾನಿ ಮೋದಿ ಮುಂದಿನ ತಿಂಗಳು ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಪಾಲ್ಗೊಳ್ಳುವ ಸುದ್ದಿ ಬಂದಿದೆ. ಈಗಾಗಲೇ ಮುಂದಿನ ಫೆಬ್ರವರಿಯಲ್ಲಿ ಮೋದಿ ಅಮೆರಿಕ ತೆರಳಲಿದ್ದು ಅಲ್ಲಿನ ವೈಟ್ ಹೌಸ್ ಭೇಟಿ ನಿಗದಿಯಾಗಿದೆ. ಆ ಸಭೆಯಲ್ಲಿ ಎರಡು ರಾಷ್ಟ್ರಗಳ ನಡುವೆ ವ್ಯಾಪಾರ ಒಪ್ಪಂದ ವಿಚಾರದಲ್ಲಿ ಅಂತಿಮ ನಿರ್ಣಯವೂ ಆಗಲಿದೆ. ಇದಕ್ಕು ಮೊದಲೇ ಟ್ರಂಪ್ ಭಾರತದ ಸರಕುಗಳಿಗೆ 50 ಶೇ. ತೆರಿಗೆ ಹಾಕಿ ತಲ್ಲಣ ಸೃಷ್ಟಿಸಿದ್ದಾರೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಲ್ಗೊಳ್ಳುವ ಸಂದರ್ಭದಲ್ಲಿ ಟ್ರಂಪ್ - ಮೋದಿ ಮುಖಾಮುಖಿ ಆಗುತ್ತಾರೆಯೇ ಎಂಬುದು ದೃಢವಾಗಿಲ್ಲ.
Amid ongoing trade tensions with the United States, Prime Minister Narendra Modi is expected to address the upcoming 80th United Nations General Assembly (UNGA) in New York next month. His name has appeared in the preliminary list of speakers released by the UN, drawing significant attention.
14-10-25 11:24 am
HK News Desk
CM Siddaramaiah, DK Shivakumar:ಶಾಸಕರ ಬೆಂಬಲವಿಲ...
13-10-25 10:09 pm
ಸಚಿವನಾಗಿ ಆದಾಯ ಮೂಲಕ್ಕೆ ಕತ್ತರಿ ; ನಟನೆಗೆ ಮರಳಲಿದ್...
13-10-25 03:54 pm
ಶಾಲಾ ಮೈದಾನ, ಪಾರ್ಕ್ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ...
13-10-25 12:51 pm
DK Shivakumar, MLA Munirathna, CM Siddaramaia...
12-10-25 08:59 pm
14-10-25 10:33 pm
HK News Desk
ಹಮಾಸ್ - ಇಸ್ರೇಲ್ ಶಾಂತಿ ಒಪ್ಪಂದ ; ಎರಡು ವರ್ಷಗಳ ಅಕ...
14-10-25 11:22 am
ಕರೂರು ಕಾಲ್ತುಳಿತ ಪ್ರಕರಣ ; ಸಿಬಿಐ ತನಿಖೆಗೆ ಒಪ್ಪಿಸ...
14-10-25 11:11 am
Ex-IAS Officer Kannan Gopinathan, Congress: ಜ...
13-10-25 10:37 pm
Kerala, IT professional dead, RSS members: ಆರ...
13-10-25 05:31 pm
14-10-25 10:36 pm
Mangalore Correspondent
ಸುಳ್ಯ ಮೂಲದ ಯುವಕ ಮಾರಿಷಸ್ ನಲ್ಲಿ ಜಲಪಾತಕ್ಕೆ ಬಿದ್ದ...
14-10-25 10:13 pm
ರಸ್ತೆಯಲ್ಲೇ ತ್ಯಾಜ್ಯ ಸುರಿಸುವ ಮೀನಿನ ಲಾರಿಗಳಿಗೆ ಮತ...
14-10-25 09:12 pm
ಮುದುಂಗಾರುಕಟ್ಟೆ ಬಸ್ ನಿಲ್ದಾಣದಲ್ಲಿ ಯುವಕನ ಮೃತದೇಹ...
14-10-25 06:39 pm
ಬಿ.ಸಿ ರೋಡ್ ; ಹೆದ್ದಾರಿ ಬದಿ ಕಾರು ರಿಪೇರಿ ಮಾಡುತ್...
14-10-25 05:46 pm
14-10-25 04:44 pm
HK News Desk
ರುಪಾಯಿಗೆ ನಾಲ್ಕು ಪಟ್ಟು ಯುಕೆ ಪೌಂಡ್ ಕರೆನ್ಸಿಯ ಆಮಿ...
14-10-25 11:19 am
Vitla, Honey Trap, Mangalore Crime: ಗಲ್ಫ್ ಉದ್...
13-10-25 10:04 pm
Mangalore, Loan Fraud, Fake Gold: ಆತ್ಮಶಕ್ತಿ ಸ...
12-10-25 03:52 pm
Udupi, Karkala, Youth suicide: ಖಾಸಗಿ ವಿಡಿಯೋ ಮ...
10-10-25 09:48 pm