ಬ್ರೇಕಿಂಗ್ ನ್ಯೂಸ್
13-08-25 11:56 am HK News Desk ದೇಶ - ವಿದೇಶ
ಚೆನ್ನೈ, ಆಗಸ್ಟ್ 13 : ಸರ್ಕಾರಿ ವಸತಿ ಗೃಹದಲ್ಲಿ ಆಶ್ರಯ ಪಡೆಯುವಂತೆ ಬಾಲಕಿಗೆ ಆದೇಶ ಹೊರಡಿಸಿದ ಮದ್ರಾಸ್ ಹೈಕೋರ್ಟ್ ತೀರ್ಪು ಕೇಳಿದ ಹದಿಹರೆಯದ ಬಾಲಕಿಯೋರ್ವಳು ಕೋರ್ಟಿನ ಮೊದಲನೇ ಮಹಡಿಯಿಂದ ಧುಮುಕಿದ ನಾಟಕೀಯ ಘಟನೆ ಮಂಗಳವಾರ ಚೆನ್ನೈನಲ್ಲಿ ನಡೆದಿದೆ. ಗಾಯಾಳು 15ರ ಹರೆಯದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಾಲಕಿಯ ಹೆತ್ತವರು ವಿಚ್ಚೇದಿತರಾಗಿದ್ದು ಮಗಳು ನಾಪತ್ತೆಯಾಗಿದ್ದಾಳೆ ಎಂದು ಆಕೆಯ ತಂದೆ ಹೆಬಿಯಸ್ ಕಾರ್ಪಸ್ ಅರ್ಜಿ ದಾಖಲಿಸಿದ್ದರು. ಕೇಸು ಜಾಡು ಹಿಡಿದು ಹೊರಟ ಪೊಲೀಸರು ಬಾಲಕಿಯನ್ನು ಆಕೆಯ ಅಜ್ಜಿ ಮನೆಯಲ್ಲಿ ಪತ್ತೆ ಮಾಡಿ ಕೋರ್ಟ್ ಗೆ ಹಾಜರುಪಡಿಸಿದ್ದರು. ಕೋರ್ಟ್ ವಿಚಾರಣೆಯಲ್ಲಿ ಆಕೆ ತಾನು ತಾಯಿಯ ಜೊತೆ ಅಂಡಮಾನ್ ನಲ್ಲಿ ವಾಸಿಸುವುದಾಗಿ ಅಚ್ಚರಿಯ ಹೇಳಿಕೆ ನೀಡಿದ್ದಳು. ಬಳಿಕ ನ್ಯಾಯಮೂರ್ತಿಗಳಾದ ಎಂ.ಎಸ್ ರಮೇಶ್ ಮತ್ತು ವಿ. ಲಕ್ಷ್ಮೀನಾರಾಯಣನ್ ಅವರಿದ್ದ ಪೀಠ, ಬಾಲಕಿ ಹಾಗೂ ಕೌನ್ಸಿಲರ್ ಒಬ್ಬರ ಜೊತೆ ಅಭಿಪ್ರಾಯ ಪಡೆದು, ಅಂಡಮಾನ್ ವಾತಾವರಣ ಬಾಲಕಿಯ ವಾಸ್ತವ್ಯಕ್ಕೆ ಪೂರಕವಾಗಿಲ್ಲ ಎಂದು ಪ್ರಕಟಿಸಿ, ಸರ್ಕಾರಿ ವಸತಿ ಗೃಹದಲ್ಲಿರುವಂತೆ ಬಾಲಕಿಗೆ ನಿರ್ದೇಶನ ನೀಡಿತ್ತು. ಜೊತೆಗೆ ಬಾಲಕಿಗೆ ಮನೋವೈಜ್ಞಾನಿಕ ಚಿಕಿತ್ಸೆ ನೀಡುವಂತೆ ಆದೇಶಿಸಿ ಆಗಸ್ಟ್ 26ಕ್ಕೆ ಮುಂದಿನ ವಿಚಾರಣೆಗೆ ದಿನಾಂಕ ನಿಗದಿಪಡಿಸಿತು.


ಆದರೆ ಕೋರ್ಟ್ ಆದೇಶ ಕೇಳಿದ ಬಾಲಕಿ ಕೋರ್ಟ್ ನ ಮೊದಲ ಮಹಡಿಯಿಂದ ಕೆಳಗೆ ಧುಮುಕಿದ್ದಾಳೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಾಯದಿಂದ ಪಾರಾಗಿದ್ದಾಳೆ ಎನ್ನುವ ಮಾಹಿತಿ ಇದೆ.
In a dramatic incident at the Madras High Court on Tuesday, a 15-year-old girl jumped from the first floor of the court premises after being denied permission to stay with her mother in the Andaman Islands. She was immediately rushed to the hospital and is reported to be out of danger.
28-02-26 11:49 am
HK News Desk
ರಾಜ್ಯದಲ್ಲಿ ಆಸ್ತಿ ಖರೀದಿದಾರರಿಗೆ ಮತ್ತೊಂದು ಶಾಕ್ !...
27-02-26 10:17 pm
ಧಾರವಾಡ ಪ್ರತಿಭಟನೆ ಎಫೆಕ್ಟ್ ; ರಾಜ್ಯದಲ್ಲಿ 60 ಸಾವಿ...
26-02-26 10:01 pm
ತಂದೆ ಆಟೋ ಚಾಲಕ, ತಾಯಿ ಹೂವಿನ ವ್ಯಾಪಾರಿ, ಮಗಳು ನ್ಯಾ...
26-02-26 12:58 pm
Moral Policing, Mangalore: ಮೋರಲ್ ಪೊಲೀಸ್ ; ರೈಲ...
26-02-26 10:26 am
28-02-26 10:54 pm
HK News Desk
ಗಲ್ಫ್ ರಾಷ್ಟ್ರಗಳಿಗೆ ವಿಮಾನ ಸಂಚಾರ ವ್ಯತ್ಯಯ ; ಏರ್...
28-02-26 07:17 pm
ಇರಾನ್ ಮೇಲೆ ಮುಗಿಬಿದ್ದ ಅಮೆರಿಕ-ಇಸ್ರೇಲ್ ಪಡೆಗಳು ;...
28-02-26 05:28 pm
ತ್ರಿಷಾ ಬಿರುಗಾಳಿ ; ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ್...
28-02-26 01:08 pm
ದೆಹಲಿ ಅಬಕಾರಿ ನೀತಿ ಹಗರಣ ; ಕೇಜ್ರಿವಾಲ್, ಸಿಸೋಡಿಯಾ...
27-02-26 03:55 pm
28-02-26 08:53 pm
HK News Desk
Mangaluru Muscat Flight: ಮಂಗಳೂರು- ಮಸ್ಕತ್ ನಡುವ...
27-02-26 08:59 pm
Mangalore Sujith Madur: ಕೌನ್ಸಿಲರ್ ಸುಜಿತ್ ಮಾಡೂ...
27-02-26 08:52 pm
Leopard Mangalore, MLA Vedavyas Kamath: ಕದ್ರಿ...
27-02-26 08:40 pm
Justice Veerappa, Udupi: ಉಪ ಲೋಕಾಯುಕ್ತ ನ್ಯಾ.ವೀ...
27-02-26 08:36 pm
28-02-26 11:12 am
Mangalore Staffer
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm