ಬ್ರೇಕಿಂಗ್ ನ್ಯೂಸ್
12-08-25 11:42 am HK News Desk ದೇಶ - ವಿದೇಶ
ಶ್ರೀನಗರ, ಆ.12 : ಕಾಶ್ಮೀರಿ ಪಂಡಿತ ಕುಟುಂಬದ ಮಹಿಳೆಯೊಬ್ಬರ ಕೊಲೆ ಪ್ರಕರಣವು 35 ವರ್ಷಗಳ ಬಳಿಕ ರೀ ಓಪನ್ ಆಗಿದ್ದು, ತನಿಖೆಯ ಜಾಡು ಹಿಡಿದು ಜಮ್ಮು ಕಾಶ್ಮೀರದ ರಾಜ್ಯ ವಿಶೇಷ ತನಿಖಾ ದಳವು ಮಂಗಳವಾರ ಬೆಳಗ್ಗೆ ಹಲವೆಡೆ ದಾಳಿ ನಡೆಸಿದೆ.
ಸರಳಾ ಭಟ್ ಎಂಬ ಮಹಿಳೆ 1990ರ ಏಪ್ರಿಲ್ 18ರಂದು ಶ್ರೀನಗರದಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಘಟನೆ ಬಗ್ಗೆ ಸರಿಯಾದ ತನಿಖೆ ಆಗಿರದ ಹಿನ್ನೆಲೆಯಲ್ಲಿ 35 ವರ್ಷಗಳ ಬಳಿಕ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆನ್ನಲಾಗಿರುವ ನಿಷೇಧಿತ ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್(ಜೆಕೆಎಲ್ಎಫ್) ನ ಕೆಲವು ಸದಸ್ಯರ ಮನೆಗಳಿಗೆ ಹಾಗೂ ಅಪಾರ್ಟ್ಮೆಂಟ್ಗಳ ಮೇಲೆ ರಾಜ್ಯ ತನಿಖಾ ಸಂಸ್ಥೆ ದಾಳಿ ಮಾಡಿ ಮಾಹಿತಿ ಸಂಗ್ರಹಿಸಿದೆ. ಸೆಂಟ್ರಲ್ ಕಾಶ್ಮೀರವನ್ನು ಗುರುಯಾಗಿರಿಸಿ ತನಿಖಾ ಸಂಸ್ಥೆಯ ದಾಳಿ ನಡೆದಿದ್ದು ನಿಷೇಧಿತ ಜೆಕೆಎಲ್ಎಫ್ ಸಂಘಟನೆಯ ಸದಸ್ಯರ ಮೇಲೆ ತನಿಖೆ ಕೇಂದ್ರೀಕೃತವಾಗಿದೆ.
ಜೆಕೆಎಲ್ಎಫ್ನ ಮಾಜಿ ಮುಖ್ಯಸ್ಥ ಪೀರ್ ನೂರುಲ್ ಹಕ್ ಶಾ ಮನೆಯೂ ಸೇರಿ ಎಂಟು ಕಡೆ ದಾಳಿ ನಡೆಸಲಾಗಿದ್ದು ಹುಡುಕಾಟ ಮಾಡಲಾಗಿದೆ. 27 ವರ್ಷದ ನರ್ಸ್ ಆಗಿದ್ದ ಸರಳಾ ಭಟ್ 1990ರ ಏಪ್ರಿಲ್ನಲ್ಲಿ ಸೌರಾದ ಶೇರ್-ಇ-ಕಾಶ್ಮೀರ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ನ ಹಾಸ್ಟೆಲ್ನಿಂದ ನಾಪತ್ತೆಯಾಗಿದ್ದು, ಮರುದಿನ ಏಪ್ರಿಲ್ 18ರಂದು ಶ್ರೀನಗರದಲ್ಲಿ ಗುಂಡೇಟಿನಿಂದ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅದಕ್ಕೂ ಮುನ್ನ ಜೆಕೆಎಲ್ ಎಫ್ ಉಗ್ರರು ಸರ್ಕಾರಿ ವ್ಯವಸ್ಥೆಯಲ್ಲಿ ಕೆಲಸದಲ್ಲಿರುವ ಪಂಡಿತ್ ಬ್ರಾಹ್ಮಣ ಕುಟುಂಬದ ಸದಸ್ಯರು ಕೆಲಸ ಬಿಟ್ಟು ಹೋಗುವಂತೆ ಫರ್ಮಾನು ಹೊರಡಿಸಿದ್ದರು. ಕಾಶ್ಮೀರ ಕಣಿವೆಯಲ್ಲಿದ್ದ ಪಂಡಿತ ಕುಟುಂಬಗಳನ್ನು ಮನೆ ಬಿಟ್ಟು ಹೋಗುವಂತೆ ತಾಕೀತು ಮಾಡಿದ್ದರು. ಇದರಿಂದಾಗಿ ಅಲ್ಲಿದ್ದ ಹೆಚ್ಚಿನ ಬ್ರಾಹ್ಮಣ ಕುಟುಂಬಗಳು ಊರು ತೊರೆದು ದೆಹಲಿ ಸೇರಿದ್ದವು. ಇದೀಗ 35 ವರ್ಷ ಹಳೆಯ ಕೊಲೆ ಪ್ರಕರಣದಲ್ಲಿ ಸಾಕ್ಷ್ಯ ಹುಡುಕಲು ಪೊಲೀಸರು ಮುಂದಾಗಿದ್ದಾರೆ.
More than three decades after a brutal act of terror shook the medical community in Srinagar, the State Investigation Agency (SIA) of Jammu & Kashmir has launched fresh searches to unearth the conspiracy behind the killing of 27-year-old nurse Sarla Bhat.
14-10-25 11:24 am
HK News Desk
CM Siddaramaiah, DK Shivakumar:ಶಾಸಕರ ಬೆಂಬಲವಿಲ...
13-10-25 10:09 pm
ಸಚಿವನಾಗಿ ಆದಾಯ ಮೂಲಕ್ಕೆ ಕತ್ತರಿ ; ನಟನೆಗೆ ಮರಳಲಿದ್...
13-10-25 03:54 pm
ಶಾಲಾ ಮೈದಾನ, ಪಾರ್ಕ್ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ...
13-10-25 12:51 pm
DK Shivakumar, MLA Munirathna, CM Siddaramaia...
12-10-25 08:59 pm
14-10-25 10:33 pm
HK News Desk
ಹಮಾಸ್ - ಇಸ್ರೇಲ್ ಶಾಂತಿ ಒಪ್ಪಂದ ; ಎರಡು ವರ್ಷಗಳ ಅಕ...
14-10-25 11:22 am
ಕರೂರು ಕಾಲ್ತುಳಿತ ಪ್ರಕರಣ ; ಸಿಬಿಐ ತನಿಖೆಗೆ ಒಪ್ಪಿಸ...
14-10-25 11:11 am
Ex-IAS Officer Kannan Gopinathan, Congress: ಜ...
13-10-25 10:37 pm
Kerala, IT professional dead, RSS members: ಆರ...
13-10-25 05:31 pm
14-10-25 10:36 pm
Mangalore Correspondent
ಸುಳ್ಯ ಮೂಲದ ಯುವಕ ಮಾರಿಷಸ್ ನಲ್ಲಿ ಜಲಪಾತಕ್ಕೆ ಬಿದ್ದ...
14-10-25 10:13 pm
ರಸ್ತೆಯಲ್ಲೇ ತ್ಯಾಜ್ಯ ಸುರಿಸುವ ಮೀನಿನ ಲಾರಿಗಳಿಗೆ ಮತ...
14-10-25 09:12 pm
ಮುದುಂಗಾರುಕಟ್ಟೆ ಬಸ್ ನಿಲ್ದಾಣದಲ್ಲಿ ಯುವಕನ ಮೃತದೇಹ...
14-10-25 06:39 pm
ಬಿ.ಸಿ ರೋಡ್ ; ಹೆದ್ದಾರಿ ಬದಿ ಕಾರು ರಿಪೇರಿ ಮಾಡುತ್...
14-10-25 05:46 pm
14-10-25 04:44 pm
HK News Desk
ರುಪಾಯಿಗೆ ನಾಲ್ಕು ಪಟ್ಟು ಯುಕೆ ಪೌಂಡ್ ಕರೆನ್ಸಿಯ ಆಮಿ...
14-10-25 11:19 am
Vitla, Honey Trap, Mangalore Crime: ಗಲ್ಫ್ ಉದ್...
13-10-25 10:04 pm
Mangalore, Loan Fraud, Fake Gold: ಆತ್ಮಶಕ್ತಿ ಸ...
12-10-25 03:52 pm
Udupi, Karkala, Youth suicide: ಖಾಸಗಿ ವಿಡಿಯೋ ಮ...
10-10-25 09:48 pm