ಬ್ರೇಕಿಂಗ್ ನ್ಯೂಸ್
11-08-25 08:55 pm HK News Desk ದೇಶ - ವಿದೇಶ
ಎರ್ನಾಕುಲಂ, ಆ.11 : ಕ್ರಿಶ್ಚಿಯನ್ ಯುವತಿಯನ್ನು ಮದುವೆಯಾಗುತ್ತೇನೆಂದು ನಂಬಿಸಿ ಮುಸ್ಲಿಂ ಯುವಕನೊಬ್ಬ ಇಸ್ಲಾಮಿಗೆ ಮತಾಂತರಿಸಲು ಯತ್ನಿಸಿದ ಘಟನೆ ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ನಡೆದಿದ್ದು ಇದರಿಂದ ನೊಂದ ಯುವತಿ ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದಾಳೆ. ಪೊಲೀಸರು ಆರೋಪಿ ಯುವಕನನ್ನು ಬಂಧಿಸಿದ್ದಾರೆ.
ಎರ್ನಾಕುಲಂ ಜಿಲ್ಲೆಯ ಕೊತ್ತಮಂಗಲಂ ಎಂಬಲ್ಲಿ ಘಟನೆ ನಡೆದಿದ್ದು ಟೀಚರ್ ಟ್ರೈನಿಂಗ್ ಕೋರ್ಸ್ ಮಾಡುತ್ತಿದ್ದ 23 ವರ್ಷದ ಸೋನಾ ಎಲ್ಡೋಸ್ ಸಾವನ್ನಪ್ಪಿದ ದುರ್ದೈವಿ. ಆರೋಪಿ ರಮೀಜ್ ಮೊಹಮ್ಮದ್ ಎನ್ನುವ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಸೋನಾ ಬರೆದಿಟ್ಟ ಪತ್ರದ ಪ್ರಕಾರ, ಆಕೆಯನ್ನು ಮದುವೆಯಾಗಲೆಂದು ರಮೀಜ್ ತನ್ನ ಮನೆಗೆ ಕರೆದೊಯ್ದಿದ್ದ. ಆದರೆ ಮನೆಯವರು ಮದುವೆಗೂ ಮುನ್ನ ಇಸ್ಲಾಮಿಗೆ ಮತಾಂತರ ಆಗಬೇಕೆಂದು ಹೇಳಿದ್ದಾರೆ. ಮದುವೆಯಾಗುತ್ತೇನೆಂದು ಹೇಳಿ ದೈಹಿಕ ಸಂಬಂಧ ಹೊಂದಿದ್ದ ಯುವಕ ಮತಾಂತರ ಆಗುವಂತೆ ಒತ್ತಡ ಹೇರಿದ್ದಾನೆ. ಇದರಿಂದ ನೊಂದ ಯುವತಿ ತನ್ನ ಸಾವಿನ ಕಾರಣ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸೋನಾ ಮತ್ತು ರಮೀಜ್ ಪದವಿ ಓದುತ್ತಿದ್ದಾಗ ಕ್ಲಾಸ್ ಮೇಟ್ಸ್ ಆಗಿದ್ದು ಆಗಲೇ ಪ್ರೀತಿಸತೊಡಗಿದ್ದರು. ಆನಂತರ ಮದುವೆಯಾಗಲು ನಿರ್ಧರಿಸಿದ್ದು ಆಕೆಯ ಕುಟುಂಬದವರೂ ಒಪ್ಪಿದ್ದರು. ಆದರೆ ಮದುವೆಯಾಗಿ ಆತನ ಮನೆಗೆ ಹೋಗಲು ಸೋನಾ ನಿರಾಕರಿಸಿದ್ದಳು. ರಮೀಜ್ ಮತಾಂತರ ಆಗಿ ತನ್ನ ಮನೆಗೆ ಬರುವಂತೆ ಒತ್ತಡ ಹೇರಿದ್ದ.
ಇದರ ನಡುವೆ, ಸೋನಾ ಆಗಸ್ಟ್ 9ರಂದು ತನ್ನ ಮನೆಯಲ್ಲಿ ಸಾವಿಗೆ ಶರಣಾಗಿದ್ದಾಳೆ. ಅದಕ್ಕೂ ಮುನ್ನ ತನ್ನನ್ನು ಯುವಕ ಮಿಸ್ ಯೂಸ್ ಮಾಡಿದ ಬಗ್ಗೆ ಮತ್ತು ಮತಾಂತರಕ್ಕೆ ಯತ್ನಿಸುತ್ತಿರುವ ಬಗ್ಗೆ ಪತ್ರ ಬರೆದಿದ್ದಳು. ಇದರಂತೆ ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ಮತ್ತು ಮದುವೆಯಾಗುತ್ತೇನೆಂದು ನಂಬಿಸಿ ದೈಹಿಕ ಸಂಬಂಧ ಬೆಳೆಸಿ ಮೋಸ ಮಾಡಿದ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ. ಎರಡು ತಿಂಗಳ ಹಿಂದೆ ರಮೀಸ್ ತನ್ನ ಕುಟುಂಬ ಸದಸ್ಯರೊಂದಿಗೆ ಸೋನಾ ಮನೆಗೆ ಬಂದು ಮದುವೆ ಬಗ್ಗೆ ಚರ್ಚಿಸಿದ್ದರು. ಮತಾಂತರ ಆಗಿಯೇ ಮದುವೆ ಆಗುವಂತೆ ಹೇಳಿದ್ದು ಅದಕ್ಕೆ ಸೋನಾ ಮನೆಯವರೂ ಒಪ್ಪಿದ್ದರು. ಆದರೆ ಇದರ ನಡುವೆ ರಮೀಸ್ ಬೇರೊಬ್ಬಳು ಯುವತಿ ಜೊತೆಗಿರುವುದನ್ನು ನೋಡಿದ ಸೋನಾ ತಾನು ಇಸ್ಲಾಮಿಗೆ ಮತಾಂತರ ಆಗಲ್ಲ ಎಂದು ಹಠ ಹಿಡಿದಿದ್ದಳು. ಇದಕ್ಕಾಗಿ ಸೋನಾಳನ್ನು ಕರೆದು ರಮೀಸ್ ಹಲ್ಲೆ ಮಾಡಿ ಕಿರುಕುಳ ಕೊಟ್ಟಿದ್ದ. ಇದರ ಬಗ್ಗೆ ಮನೆಯಲ್ಲಿ ಸೋನಾ ಮೊದಲು ಹೇಳಿರಲಿಲ್ಲ. ಸಾವಿನ ಸಂದರ್ಭದಲ್ಲಿ ತನ್ನ ನೋವು ಹೇಳಿ ಅತ್ತಿದ್ದಾಳೆ ಎಂದು ಆಕೆಯ ಸೋದರ ಬಾಸಿಲ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಬಿಜೆಪಿ ನಾಯಕರು ಈ ಘಟನೆಯನ್ನು ಲವ್ ಜಿಹಾದ್ ಎಂದು ಕರೆದಿದ್ದು ಕಾಂಗ್ರೆಸ್ ಮತ್ತು ಸಿಪಿಎಂ ಪಕ್ಷಗಳ ತುಷ್ಟೀಕರಣ ನೀತಿಯಿಂದಾಗಿ ಕೇರಳ ಧಾರ್ಮಿಕ ಉಗ್ರವಾದದಿಂದ ನಲುಗುತ್ತಿದೆ. ಹಿಂದು ಮತ್ತು ಕ್ರಿಶ್ಚಿಯನ್ ಯುವತಿಯರನ್ನು ಟಾರ್ಗೆಟ್ ಮಾಡಿ ಇಸ್ಲಾಮಿಗೆ ಮತಾಂತರ ಮಾಡಲಾಗುತ್ತಿದೆ. ಲವ್ ಜಿಹಾದ್ ಇಲ್ಲ ಎನ್ನುವ ಕೇರಳ ಸರ್ಕಾರದ ನಾಯಕರು ಯುವತಿ ಸಾವಿನ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದ್ದಾರೆ.
A 23-year-old Christian woman in Kerala’s Ernakulam district died by suicide after allegedly being deceived with a promise of marriage and pressured to convert to Islam. Police have arrested the accused, identified as Rameez Mohammed.
14-01-26 03:34 pm
Bangalore Correspondent
ಆನೆ ದಂತದಿಂದ ಮಾಡಲ್ಪಟ್ಟ ರಾಧಾ ಕೃಷ್ಣರ ವಿಗ್ರಹ ಮಾರಾ...
14-01-26 02:54 pm
ಧರ್ಮಸ್ಥಳದಲ್ಲಿ 74 ಅಸಹಜ ಸಾವು ಪ್ರಕರಣ ; ಪ್ರತ್ಯೇಕ...
14-01-26 01:34 pm
ಅಕಾಲಿಕ ಮಳೆಗೆ ಕಂಗಾಲಾದ ಕಾಫಿನಾಡು ; ಭಾರೀ ಮಳೆಗೆ ಕೊ...
13-01-26 10:13 pm
ಇಲೆಕ್ಟ್ರಾನಿಕ್ ಸಿಟಿ ಪಕ್ಕದಲ್ಲೇ ಬಾಂಗ್ಲಾ ವಲಸಿಗರ ಅ...
13-01-26 03:04 pm
13-01-26 06:39 pm
HK News Desk
ರಷ್ಯಾ ಬಳಿಕ ಇರಾನ್ ಮುಂದಿಟ್ಟು ಟ್ರಂಪ್ ಬೆದರಿಕೆ ; ಇ...
13-01-26 04:21 pm
ಮುಂಬೈಗೆ ಬಂದೇ ಬರುತ್ತೇನೆ, ತಾಕತ್ತಿದ್ದರೆ ತಡೆಯಿರಿ....
12-01-26 11:00 pm
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
14-01-26 03:15 pm
Mangalore Correspondent
ಕುಂದಾಪುರ -ತಲಪಾಡಿ, ಸುರತ್ಕಲ್- ಬಿ.ಸಿ.ರೋಡ್ ಹೆದ್ದಾ...
13-01-26 10:30 pm
Ayyappa Death, Mangalore: ಶಬರಿಮಲೆ ಹೊರಟಿದ್ದ ಅಯ...
12-01-26 08:03 pm
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
13-01-26 05:28 pm
HK News Desk
ಡಿಜಿಟಲ್ ಅರೆಸ್ಟ್ ನೆಪದಲ್ಲಿ ದೆಹಲಿಯ ವೃದ್ಧ ವೈದ್ಯ...
13-01-26 03:37 pm
ಡ್ರಗ್ಸ್ ನೆಟ್ವರ್ಕ್ ಭೇದಿಸಿದ ಮಂಗಳೂರು ಪೊಲೀಸರು ; ಬ...
12-01-26 06:28 pm
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm