ಬ್ರೇಕಿಂಗ್ ನ್ಯೂಸ್
04-08-25 02:16 pm HK News Desk ದೇಶ - ವಿದೇಶ
ಭೋಪಾಲ್, ಆ.4 : ಪತ್ನಿ ತನ್ನ ಗೆಳೆಯನ ಜೊತೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದನ್ನೇ ಹಿಂಸೆ ಎಂದುಕೊಂಡ ಪತಿರಾಯ ತೀವ್ರ ಚಿಂತೆಗೀಡಾಗಿ ತನ್ನಿಬ್ಬರು ಮಕ್ಕಳು ಮತ್ತು ತಾಯಿ ಜೊತೆಗೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಆತನನ್ನು ಬಿಟ್ಟು ಬಿಡು, ಮತ್ತೆ ತನ್ನೊಂದಿಗೇ ಬದುಕು ಕಟ್ಟಿಕೊಳ್ಳು ಎಂದು ಗಂಡ ಪರಿ ಪರಿಯಾಗಿ ಬೇಡಿಕೊಂಡರೂ, ನೀನು ಬೇಡ ನಿನ್ನ ಸ್ನೇಹಿತನೇ ಬೇಕು ಎಂದು ಆಕೆ ಪಟ್ಟು ಹಿಡಿದಿದ್ದಳು. ಕೊನೆಗೆ ಕೊನೆಗೆ ನೋವು ಸಹಿಸಲಾಗದೆ ಕುಟುಂಬ ಸದಸ್ಯರೊಂದಿಗೆ ಸಾಮೂಹಿಕ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಸಾಮೂಹಿಕ ಆತ್ಮಹತ್ಯೆ ನಡೆದಿದ್ದು ಪೊಲೀಸರು ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ. ಮಹಿಳೆಯ ಪತಿ ಮನೋಹರ್ ಲೋಧಿ (45), ಅವರ ತಾಯಿ ಫೂಲ್ರಾಣಿ (70), ಮಗಳು ಶಿವಾನಿ (18) ಮತ್ತು ಅವರ 16 ವರ್ಷದ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜುಲೈ 25-26ರ ರಾತ್ರಿ ಘಟನೆ ನಡೆದಿದ್ದು ಪೊಲೀಸರು ಮನೋಹರ್ ಲೋಧಿಯವರ ಪತ್ನಿ ದ್ರೌಪದಿ ಮತ್ತು ಆಕೆಯ ಪ್ರಿಯಕರ ಸುರೇಂದ್ರನನ್ನು ಬಂಧಿಸಿದ್ದಾರೆ.
ಘಟನೆ ಬಗ್ಗೆ ತನಿಖೆ ನಡೆಸಿದಾಗ ಮನೋಹರ್ ಲೋಧಿಯ ಪತ್ನಿ ದ್ರೌಪದಿ ಮತ್ತು ಮನೋಹರ್ ಅವರ ಬಾಲ್ಯದ ಸ್ನೇಹಿತನಾಗಿದ್ದ ಸುರೇಂದ್ರ ಎಂಬಾತನ ಜೊತೆಗೆ ಅಕ್ರಮ ಸಂಬಂಧ ಹೊಂದಿರುವುದು ಮತ್ತು ಇದರಿಂದಾಗಿ ಇಡೀ ಕುಟುಂಬ ಕಿರುಕುಳ ಅನುಭವಿಸಿದ್ದು ತಿಳಿದುಬಂದಿದೆ.
ಸುರೇಂದ್ರ ಒಂದು ದಿನ ದ್ರೌಪದಿ ಜೊತೆಗಿದ್ದಾಗ, ಮಗಳು ನೋಡಿದ್ದಳು. ಬಳಿಕ ತನ್ನ ತಂದೆ ಮನೋಹರ್ ಲೋಧಿಗೆ ಮಗಳೇ ದೂರು ಹೇಳಿದ್ದರಿಂದ ವಿಷಯ ಬಹಿರಂಗಗೊಂಡಿತ್ತು. ಇದರಿಂದ ಚಿಂತೆಗೀಡಾದ ಪತಿ ಕುಟುಂಬದವರು ದ್ರೌಪದಿಯೊಂದಿಗೆ ಮಾತನಾಡಿ, ಆತನನ್ನು ಬಿಟ್ಟುಬಿಡು ಎಂದು ಬುದ್ಧಿವಾದ ಹೇಳಿದ್ದರು. ಆದರೆ ಸುರೇಂದ್ರ ಇಲ್ಲದೆ ತಾನು ಬದುಕಲು ಸಾಧ್ಯವಿಲ್ಲ ಎಂದು ಮಹಿಳೆ ಹೇಳಿದ್ದಳು. ಇದರ ವಿಚಾರದಲ್ಲಿ ಮತ್ತಷ್ಟು ಒತ್ತಡ ಹೇರಿದರೆ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದೀರಿ ಎಂದು ಪೊಲೀಸ್ ದೂರು ನೀಡುವುದಾಗಿ ಬೆದರಿಸಿದ್ದಳು. ಮನೋಹರ್ ಕೂಡ ಸುರೇಂದ್ರನಿಗೆ ಬುದ್ಧಿ ಹೇಳಿದ್ದ. ಆಕೆಯನ್ನು ಬಿಟ್ಟು ಬಿಡು, ಮಾನಸಿಕ ಹಿಂಸೆಯಾಗುತ್ತಿದೆ ಎಂದು ಹೇಳಿದ್ದ. ಆದರೆ ಆತನ ಮಾತಿಗೆ ಸುರೇಂದ್ರ ಮತ್ತು ದ್ರೌಪದಿ ಸೊಪ್ಪು ಹಾಕಲಿಲ್ಲ.
ಮನೆಯಲ್ಲಿ ಇದೇ ವಿಚಾರದಲ್ಲಿ ಗಲಾಟೆ ನಡೆಯುತ್ತಿತ್ತು. ಕೊನೆಗೆ, ಈ ಕಾಟ ಅನುಭವಿಸುವ ಬದಲು ತಮ್ಮದೇ ಬದುಕು ಮುಗಿಸುವುದಕ್ಕೆ ನಿರ್ಧಾರ ಮಾಡಿದ್ದರು. ಇದರಂತೆ ಮೊದಲೇ ನಿಶ್ಚಯ ಮಾಡಿಕೊಂಡು ಜುಲೈ 25 ರಂದು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿದ್ದರು. ತನಿಖೆಯ ನಂತರ, ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ದ್ರೌಪದಿ ಮತ್ತು ಆಕೆಯ ಪ್ರಿಯಕರ ಸುರೇಂದ್ರ ಅವರನ್ನು ಬಂಧಿಸಿ ಜೈಲಿಗೆ ತಳ್ಳಿದ್ದಾರೆ.
In a shocking case of family tragedy in Madhya Pradesh’s Sagar district, a 45-year-old man died by suicide along with his elderly mother and two teenage children after allegedly being mentally harassed due to his wife's extramarital affair with his childhood friend.
14-10-25 11:24 am
HK News Desk
CM Siddaramaiah, DK Shivakumar:ಶಾಸಕರ ಬೆಂಬಲವಿಲ...
13-10-25 10:09 pm
ಸಚಿವನಾಗಿ ಆದಾಯ ಮೂಲಕ್ಕೆ ಕತ್ತರಿ ; ನಟನೆಗೆ ಮರಳಲಿದ್...
13-10-25 03:54 pm
ಶಾಲಾ ಮೈದಾನ, ಪಾರ್ಕ್ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ...
13-10-25 12:51 pm
DK Shivakumar, MLA Munirathna, CM Siddaramaia...
12-10-25 08:59 pm
15-10-25 12:09 pm
HK News Desk
ಟ್ರಂಪ್ ಒತ್ತಡ ನಡುವೆಯೇ ಭಾರತದಲ್ಲಿ ಗೂಗಲ್ ಸಂಸ್ಥೆ ಭ...
14-10-25 10:33 pm
ಹಮಾಸ್ - ಇಸ್ರೇಲ್ ಶಾಂತಿ ಒಪ್ಪಂದ ; ಎರಡು ವರ್ಷಗಳ ಅಕ...
14-10-25 11:22 am
ಕರೂರು ಕಾಲ್ತುಳಿತ ಪ್ರಕರಣ ; ಸಿಬಿಐ ತನಿಖೆಗೆ ಒಪ್ಪಿಸ...
14-10-25 11:11 am
Ex-IAS Officer Kannan Gopinathan, Congress: ಜ...
13-10-25 10:37 pm
15-10-25 12:12 pm
Udupi Correspondent
ಮೈಸೂರು, ಬೆಂಗಳೂರು, ಶಿವಮೊಗ್ಗ ಕಂಬಳಕ್ಕೆ ಹೈಕೋರ್ಟ್...
14-10-25 10:36 pm
ಸುಳ್ಯ ಮೂಲದ ಯುವಕ ಮಾರಿಷಸ್ ನಲ್ಲಿ ಜಲಪಾತಕ್ಕೆ ಬಿದ್ದ...
14-10-25 10:13 pm
ರಸ್ತೆಯಲ್ಲೇ ತ್ಯಾಜ್ಯ ಸುರಿಸುವ ಮೀನಿನ ಲಾರಿಗಳಿಗೆ ಮತ...
14-10-25 09:12 pm
ಮುದುಂಗಾರುಕಟ್ಟೆ ಬಸ್ ನಿಲ್ದಾಣದಲ್ಲಿ ಯುವಕನ ಮೃತದೇಹ...
14-10-25 06:39 pm
15-10-25 12:00 pm
HK News Desk
ಅಮಲಿಗಾಗಿ ಯುವಕರಿಗೆ ಕಫ್ ಸಿರಪ್ ಮಾರಾಟ ದಂಧೆ ; ದಾವಣ...
14-10-25 04:44 pm
ರುಪಾಯಿಗೆ ನಾಲ್ಕು ಪಟ್ಟು ಯುಕೆ ಪೌಂಡ್ ಕರೆನ್ಸಿಯ ಆಮಿ...
14-10-25 11:19 am
Vitla, Honey Trap, Mangalore Crime: ಗಲ್ಫ್ ಉದ್...
13-10-25 10:04 pm
Mangalore, Loan Fraud, Fake Gold: ಆತ್ಮಶಕ್ತಿ ಸ...
12-10-25 03:52 pm