ಬ್ರೇಕಿಂಗ್ ನ್ಯೂಸ್
30-07-25 09:06 am HK News Desk ದೇಶ - ವಿದೇಶ
ನವದೆಹಲಿ, ಜುಲೈ 30 : ಜಗತ್ತಿನ ಯಾವುದೇ ನಾಯಕನೂ ಆಪರೇಷನ್ ಸಿಂಧೂರ್ ನಿಲ್ಲಿಸುವಂತೆ ಕೇಳಿಲ್ಲ. ಬದಲಿಗೆ ಪಾಕಿಸ್ತಾನದ ಡಿಜಿಎಂಒ ಕರೆ ಮಾಡಿ ದಯವಿಟ್ಟು ದಾಳಿ ನಿಲ್ಲಿಸಿ, ಮತ್ತಷ್ಟು ನಾಶವಾಗಲು ಬಯಸುವುದಿಲ್ಲ ಎಂದು ಮನವಿ ಮಾಡಿದ್ದರಿಂದ ಕದನ ವಿರಾಮ ಘೋಷಿಸಲಾಗಿತ್ತು ಎಂದು ಸಂಸತ್ತಿನಲ್ಲಿ ಆಪರೇಶನ್ ಸಿಂಧೂರ್ ಕುರಿತ ಚರ್ಚೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದರು.
ಪಹಲ್ಗಾಮ್ ಉಗ್ರ ಕೃತ್ಯದ ನಂತರ ಪಾಕಿಸ್ತಾನವು ದೊಡ್ಡ ದಾಳಿ ನಡೆಸಲಿದೆ ಎಂದು ಅಮೆರಿಕದ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದರು. ಆದರೆ ಇದು ಪಾಕಿಸ್ತಾನದ ಉದ್ದೇಶವಾಗಿದ್ದರೆ, ಅವರಿಗೆ ದುಬಾರಿ ಆಗಲಿದೆ ಎಂದು ಉತ್ತರಿಸಿದ್ದೆ. ಪಾಕಿಸ್ತಾನಕ್ಕೆ ಅದರದೇ ಭಾಷೆಯಲ್ಲೇ ಉತ್ತರಿಸುತ್ತೇವೆ. ನಾವು ದೊಡ್ಡ ದಾಳಿ ಮೂಲಕ ಪ್ರತಿಕ್ರಿಯಿಸುತ್ತೇವೆ. ಇದು ಸುಮಾರು ಮೇ 9ನೇ ದಿನಾಂಕದ ವಿಷಯ. 9ನೇ ತಾರೀಖಿನ ರಾತ್ರಿ ಮತ್ತು 10ನೇ ತಾರೀಖಿನ ಬೆಳಗ್ಗೆ, ನಾವು ಪಾಕಿಸ್ತಾನದ ಮಿಲಿಟರಿ ಶಕ್ತಿಯನ್ನು ನಾಶಪಡಿಸಿದ್ದೇವೆ. ಇದು ನಮ್ಮ ಉತ್ತರ ಮತ್ತು ವೈರಿಗಳ ಹುಟ್ಟಡಗಿಸಿದ್ದ ಪರಿಯಾಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನಲ್ಲಿ ಉತ್ತರ ನೀಡಿದ್ದಾರೆ.
ಮೇ 9ರ ಮಧ್ಯರಾತ್ರಿ ಮತ್ತು ಮೇ 10ರ ಬೆಳಗ್ಗೆ, ನಮ್ಮ ಕ್ಷಿಪಣಿಗಳು ಪಾಕಿಸ್ತಾನ ಸೇನೆಯ ಮೂಳೆಗಳನ್ನು ಹೊಡೆದು ಹಾಕಿ ಪಾಕಿಸ್ತಾನವನ್ನು ಮೊಣಕಾಲೂರುವಂತೆ ಮಾಡಿದ್ದವು. ಬಲವಾದ ಹೊಡೆತ ಬಿದ್ದಾಗ, ಪಾಕಿಸ್ತಾನ ಡಿಜಿಎಂಒ ಕರೆ ಮಾಡಿ, ಸಾಕು ಸಾಕು ಎಂದು ಬೇಡಿಕೊಂಡರು. ದಯವಿಟ್ಟು ದಾಳಿ ನಿಲ್ಲಿಸಿ ಎಂದು ಬೇಡಿಕೊಂಡಿದ್ದರಿಂದ ಮಾತುಕತೆ ನಡೆಸಲಾಗಿತ್ತು. ನಾವು ನಮ್ಮ ಗುರಿಯನ್ನು ಸಾಧಿಸಿದ್ದೇವೆ ಎಂದು ಭಾರತ ಮೊದಲ ದಿನವೇ ಹೇಳಿತ್ತು ಎಂದು ಮೋದಿ ಹೇಳಿದರು.
ಮೇ 10ರಂದು ಆಪರೇಷನ್ ಸಿಂಧೂರ್ ಅಡಿಯಲ್ಲಿ ತೆಗೆದುಕೊಳ್ಳುತ್ತಿರುವ ಕ್ರಮವನ್ನು ನಿಲ್ಲಿಸುವುದಾಗಿ ಭಾರತ ಘೋಷಿಸಿದಾಗ, ವಿಪರ್ಯಾಸ ಎಂದರೆ ಇಲ್ಲಿನ ನಾಯಕರು ಆಪರೇಷನ್ ಸಿಂಧೂರ್ ಬಗ್ಗೆ ಪ್ರಶ್ನೆಗಳನ್ನು ಎತ್ತಿದರು. ಪಾಕಿಸ್ತಾನದ ದುರದ್ದೇಶ ಹರಡುವ ಕೆಲಸವನ್ನು ಮಾಡತೊಡಗಿದ್ದರು. ಕೆಲವರು ಸೇನೆ ನೀಡಿದ ಮಾಹಿತಿಗಳ ಬದಲಿಗೆ ಪಾಕಿಸ್ತಾನದ ಸುಳ್ಳುಗಳನ್ನು ಹರಡಿದ್ದರು. ಆದರೆ ಭಾರತದ ನಿಲುವು ಯಾವಾಗಲೂ ಸ್ಪಷ್ಟವಾಗಿತ್ತು ಎಂದು ಮೋದಿ ಹೇಳಿದರು.
ಪಾಕಿಸ್ತಾನ ಯಾವುದೇ ದುಷ್ಕೃತ್ಯಕ್ಕೆ ಮುಂದಾದರೆ ಅದಕ್ಕೆ ಸೂಕ್ತ ಉತ್ತರ ನೀಡಲಾಗುವುದು. ಇಂದಿನ ಭಾರತವು ಆತ್ಮವಿಶ್ವಾಸದಿಂದ ತುಂಬಿದೆ. ಪೂರ್ಣ ಶಕ್ತಿಯೊಂದಿಗೆ ವೇಗವಾಗಿ ಮುನ್ನಡೆಯುತ್ತಿದೆ. ಭಾರತವು ಸ್ವಾವಲಂಬಿಯಾಗುತ್ತಿದೆ ಎಂದು ದೇಶವು ನೋಡುತ್ತಿದೆ. ಆದರೆ ಒಂದೆಡೆ ಭಾರತ ಸ್ವಾವಲಂಬಿಯಾಗುತ್ತಿದೆ. ಆದರೆ ಕಾಂಗ್ರೆಸ್ ಸಮಸ್ಯೆಗಳಿಗೆ ಪಾಕಿಸ್ತಾನವನ್ನು ಅವಲಂಬಿಸಿದೆ ಎಂಬುದನ್ನು ಈ ದೇಶವು ನೋಡುತ್ತಿದೆ. ಏನಿದ್ದರೂ ಆಪರೇಶನ್ ಸಿಂಧೂರ್ ಮುಗಿದಿಲ್ಲ ಎಂದರು
Prime Minister Narendra Modi today made a strong statement in Parliament, clarifying that no foreign leader had requested India to halt Operation Sindhoor. Instead, he revealed that it was a direct plea from Pakistan’s Director General of Military Operations (DGMO) asking for an end to the strikes that led to the announcement of a ceasefire.
14-10-25 11:24 am
HK News Desk
CM Siddaramaiah, DK Shivakumar:ಶಾಸಕರ ಬೆಂಬಲವಿಲ...
13-10-25 10:09 pm
ಸಚಿವನಾಗಿ ಆದಾಯ ಮೂಲಕ್ಕೆ ಕತ್ತರಿ ; ನಟನೆಗೆ ಮರಳಲಿದ್...
13-10-25 03:54 pm
ಶಾಲಾ ಮೈದಾನ, ಪಾರ್ಕ್ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ...
13-10-25 12:51 pm
DK Shivakumar, MLA Munirathna, CM Siddaramaia...
12-10-25 08:59 pm
15-10-25 12:09 pm
HK News Desk
ಟ್ರಂಪ್ ಒತ್ತಡ ನಡುವೆಯೇ ಭಾರತದಲ್ಲಿ ಗೂಗಲ್ ಸಂಸ್ಥೆ ಭ...
14-10-25 10:33 pm
ಹಮಾಸ್ - ಇಸ್ರೇಲ್ ಶಾಂತಿ ಒಪ್ಪಂದ ; ಎರಡು ವರ್ಷಗಳ ಅಕ...
14-10-25 11:22 am
ಕರೂರು ಕಾಲ್ತುಳಿತ ಪ್ರಕರಣ ; ಸಿಬಿಐ ತನಿಖೆಗೆ ಒಪ್ಪಿಸ...
14-10-25 11:11 am
Ex-IAS Officer Kannan Gopinathan, Congress: ಜ...
13-10-25 10:37 pm
15-10-25 12:12 pm
Udupi Correspondent
ಮೈಸೂರು, ಬೆಂಗಳೂರು, ಶಿವಮೊಗ್ಗ ಕಂಬಳಕ್ಕೆ ಹೈಕೋರ್ಟ್...
14-10-25 10:36 pm
ಸುಳ್ಯ ಮೂಲದ ಯುವಕ ಮಾರಿಷಸ್ ನಲ್ಲಿ ಜಲಪಾತಕ್ಕೆ ಬಿದ್ದ...
14-10-25 10:13 pm
ರಸ್ತೆಯಲ್ಲೇ ತ್ಯಾಜ್ಯ ಸುರಿಸುವ ಮೀನಿನ ಲಾರಿಗಳಿಗೆ ಮತ...
14-10-25 09:12 pm
ಮುದುಂಗಾರುಕಟ್ಟೆ ಬಸ್ ನಿಲ್ದಾಣದಲ್ಲಿ ಯುವಕನ ಮೃತದೇಹ...
14-10-25 06:39 pm
15-10-25 12:00 pm
HK News Desk
ಅಮಲಿಗಾಗಿ ಯುವಕರಿಗೆ ಕಫ್ ಸಿರಪ್ ಮಾರಾಟ ದಂಧೆ ; ದಾವಣ...
14-10-25 04:44 pm
ರುಪಾಯಿಗೆ ನಾಲ್ಕು ಪಟ್ಟು ಯುಕೆ ಪೌಂಡ್ ಕರೆನ್ಸಿಯ ಆಮಿ...
14-10-25 11:19 am
Vitla, Honey Trap, Mangalore Crime: ಗಲ್ಫ್ ಉದ್...
13-10-25 10:04 pm
Mangalore, Loan Fraud, Fake Gold: ಆತ್ಮಶಕ್ತಿ ಸ...
12-10-25 03:52 pm