ಬ್ರೇಕಿಂಗ್ ನ್ಯೂಸ್
28-07-25 12:28 pm HK News Desk ದೇಶ - ವಿದೇಶ
ನವದೆಹಲಿ, ಜುಲೈ 28 : ಮತಾಂತರ ಮತ್ತು ಲವ್ ಜಿಹಾದ್ ವಿಚಾರಗಳು ತೀವ್ರ ಚರ್ಚೆ ಹುಟ್ಟಿಸಿರುವಾಗಲೇ ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು ಸಂಚಲನ ಉಂಟುಮಾಡಿದೆ. ಮತಾಂತರವಿಲ್ಲದೆ ಅಂತರ್ ಧರ್ಮೀಯ ವಿವಾಹಗಳನ್ನು ಕಾನೂನುಬಾಹಿರವೆಂದು ಪರಿಗಣಿಸಲಾಗುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಆರ್ಯ ಸಮಾಜದಂತಹ ಸಂಸ್ಥೆಗಳು ವಿವಾಹ ಪ್ರಮಾಣಪತ್ರಗಳನ್ನು ನೀಡುವುದು ಮತ್ತು ವಿವಾಹ ವಿಧಿ ವಿಧಾನದ ಹೆಸರಿನಲ್ಲಿ ನಿರ್ದಿಷ್ಟ ಶುಲ್ಕವನ್ನು ಪಡೆದು ವಿವಾಹ ಪ್ರಮಾಣಪತ್ರಗಳನ್ನು ನೀಡುವ ಸಂಸ್ಥೆಗಳನ್ನು ಗಮನದಲ್ಲಿಟ್ಟು ಈ ತೀರ್ಪು ನೀಡಲಾಗಿದೆ. ಈ ವಿಷಯದಲ್ಲಿ ಕಠಿಣ ನಿಲುವು ತೆಗೆದುಕೊಂಡ ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಅವರಿದ್ದ ಏಕಸದಸ್ಯ ಪೀಠವು, ಅಂತರ ಧರ್ಮದ ಜನರಿಗೆ ಅಥವಾ ಅಪ್ರಾಪ್ತ ದಂಪತಿಗಳಿಗೆ ವಿವಾಹ ಪ್ರಮಾಣಪತ್ರಗಳನ್ನು ನೀಡುತ್ತಿರುವ ಆರ್ಯ ಸಮಾಜ, ಇನ್ನಿತರ ಸಂಘ ಸಂಸ್ಥೆಗಳನ್ನು ಡಿಸಿಪಿ ದರ್ಜೆಯ ಐಪಿಎಸ್ ಅಧಿಕಾರಿಯಿಂದ ತನಿಖೆ ಮಾಡುವಂತೆ ಉತ್ತರ ಪ್ರದೇಶ ರಾಜ್ಯದ ಗೃಹ ಕಾರ್ಯದರ್ಶಿಗೆ ಆದೇಶಿಸಿದೆ. ಈ ಆದೇಶದ ಜಾರಿ ಕುರಿತಾಗಿ ಆಗಸ್ಟ್ 29ರೊಳಗೆ ವೈಯಕ್ತಿಕ ಅಫಿಡವಿಟ್ ಜೊತೆಗೆ ವರದಿ ಸಲ್ಲಿಸುವಂತೆ ನ್ಯಾಯಾಲಯ ನಿರ್ದೇಶಿಸಿದೆ.
ಉತ್ತರ ಪ್ರದೇಶದ ಮಹಾರಾಜ್ಗಂಜ್ ಜಿಲ್ಲೆಯ ನಿಚ್ಲೌಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ಸಂಬಂಧಿಸಿ ಈ ತೀರ್ಪು ನೀಡಲಾಗಿದೆ. ಸೋನು ಅಲಿಯಾಸ್ ಸಹನೂರ್ ಎಂಬಾತನ ವಿರುದ್ಧ ಅಪಹರಣ, ಅತ್ಯಾಚಾರ ಮತ್ತು ಪೋಕ್ಸೋ ಕಾಯ್ದೆಯಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು. ಆದರೆ ಪ್ರಕರಣದಲ್ಲಿ ವಿಚಾರಣಾ ಪ್ರಕ್ರಿಯೆ ರದ್ದುಗೊಳಿಸುವಂತೆ ಆರೋಪಿ ಯುವಕನ ಪರವಾಗಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಆರ್ಯ ಸಮಾಜದಲ್ಲಿ ವಿವಾಹವಾಗಿದ್ದು ಅಲ್ಲಿಂದಲೇ ಜೊತೆಗೆ ನೆಲೆಸಿದ್ದಾರೆ. ಈಗ ಹುಡುಗಿ ಪ್ರಾಯ ಪ್ರಬುದ್ಧಳಾಗಿದ್ದು ಜೊತೆಗಿದ್ದೇವೆ. ಹೀಗಾಗಿ ತನ್ನ ಮೇಲಿನ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸಬೇಕು ಎಂದು ಕೇಳಿಕೊಂಡಿದ್ದ.
ಆದರೆ ಸರ್ಕಾರಿ ವಕೀಲರು ಈ ವಾದವನ್ನು ವಿರೋಧಿಸಿದ್ದು ಹುಡುಗ ಮತ್ತು ಹುಡುಗಿ ಬೇರೆ ಬೇರೆ ಧರ್ಮಗಳಿಗೆ ಸೇರಿದವರಾಗಿದ್ದು ಮತಾಂತರವಿಲ್ಲದೆ ನಡೆದ ಮದುವೆ ಕಾನೂನುಬಾಹಿರ. ಅಲ್ಲದೆ, ಇಲ್ಲಿ ಅಪ್ರಾಪ್ತ ಹುಡುಗಿಯನ್ನು ಮದುವೆ ಮಾಡಲಾಗಿದ್ದು ಕಾನೂನು ಉಲ್ಲಂಘನೆಯಾಗಿದೆ ಎಂದು ಆಕ್ಷೇಪಿಸಿದರು. ಎರಡೂ ಪಕ್ಷಗಳ ವಾದಗಳನ್ನು ಆಲಿಸಿದ ನಂತರ, ನ್ಯಾಯಾಲಯವು ಆರೋಪಿ ಅರ್ಜಿಯನ್ನು ತಿರಸ್ಕರಿಸಿದ್ದಲ್ಲದೆ, ಆರ್ಯ ಸಮಾಜ ದೇವಸ್ಥಾನಗಳು ವಿವಾಹ ಪ್ರಮಾಣಪತ್ರಗಳನ್ನು ನೀಡುವ ವಿಚಾರದ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿತು. ಇದೇ ವೇಳೆ, ಇಂತತ ಚಟುವಟಿಕೆಗಳನ್ನು ನಿಲ್ಲಿಸಲು ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಹೇಳಿದೆ.
ಈ ತೀರ್ಪು ಪ್ರಕಾರ, ಯಾವುದೇ ಅಂತರ್ ಧರ್ಮೀಯ ಮದುವೆಯಾಗುವುದಕ್ಕೂ ಮುನ್ನ ಮತಾಂತರ ಪ್ರಕ್ರಿಯೆ ಪೂರ್ತಿಗೊಳಿಸಿರಬೇಕು ಎಂದು ಹೇಳಿದಂತಾಗಿದೆ. ಆದರೆ ಹೆಚ್ಚಿನ ಮದುವೆಗಳು ಮತಾಂತರ ಆಗದೇ ಆಮಿಷ, ಇನ್ನಿತರ ಒತ್ತಡಗಳಿಂದ ಆಗುತ್ತವೆ, ಹಿಂದು ಯುವತಿಯರನ್ನು ಮುಸ್ಲಿಂ ಯುವಕರು ಇದೇ ತಂತ್ರ ಅನುಸರಿಸಿ ಲವ್ ಜಿಹಾದ್ ಮಾಡುತ್ತಾರೆ ಎನ್ನುವ ಬಗ್ಗೆ ಹಿಂದು ಸಂಘಟನೆಗಳು ಆಕ್ಷೇಪಿಸುತ್ತಿವೆ. ಇದೀಗ ಅಲಹಾಬಾದ್ ಹೈಕೋರ್ಟ್ ನೀಡಿರುವ ತೀರ್ಪು ಇಂತಹ ಮದುವೆಗಳ ಬಗ್ಗೆ ಮತ್ತೆ ಚರ್ಚೆ ಹುಟ್ಟು ಹಾಕಿದೆ. ಉತ್ತರ ಪ್ರದೇಶದಲ್ಲಿ ಆರ್ಯ ಸಮಾಜದಂತಹ ಸಂಸ್ಥೆಗಳು ಮುಸ್ಲಿಂ ಅಥವಾ ಕ್ರಿಶ್ಚಿಯನ್ ಯುವತಿಯರ ವಿವಾಹಗಳನ್ನು ಹಿಂದು ಯುವಕರೊಂದಿಗೆ ನಡೆಸುತ್ತಿದ್ದು ವೈದಿಕ ಪ್ರಕ್ರಿಯೆಗಳಿಂದ ಶುದ್ದೀಕರಣ ನೆಪದಲ್ಲಿ ಹಿಂದು ಧರ್ಮಕ್ಕೆ ಮರು ಮತಾಂತರ ಮಾಡಿ ಮತ್ತು ಮದುವೆಯ ಬಗ್ಗೆ ಸರ್ಟಿಫಿಕೇಟ್ ನೀಡುತ್ತವೆ. ಯಾವುದೇ ಕಾನೂನು ಮಾನ್ಯತೆ ಇಲ್ಲದಿದ್ದರೂ ಈ ರೀತಿಯ ವಿವಾಹಗಳು ಊರ್ಜಿತದಲ್ಲಿವೆ.
The Allahabad High Court ruled that interfaith marriages without religious conversion are illegal and refused to quash criminal proceedings against a man accused of marrying a minor at an Arya Samaj temple. The court also ordered a probe into Arya Samaj institutions allegedly issuing marriage certificates to underage or interfaith couples without following legal procedures.
27-08-25 06:21 pm
Bangalore Correspondent
Congress, MP Yaduveer, DK Shivakumar: ಕಾಂಗ್ರೆ...
27-08-25 06:17 pm
ದಸರಾ ಉದ್ಘಾಟಕರ ಆಯ್ಕೆ ವಿವಾದ ; ನೀವು ನಂಬಿರುವ ನಿಮ್...
27-08-25 03:17 pm
Kannada Anchor Anushree, Marriage, Mangalore:...
27-08-25 02:51 pm
ಚಾಮುಂಡಿ ಬೆಟ್ಟ ಪಕ್ಕಾ ಹಿಂದೂಗಳ ಸ್ವತ್ತು, ಮುಸ್ಲಿಮರ...
27-08-25 12:33 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
27-08-25 11:02 pm
Mangalore Correspondent
FIR, Chinnayya, Dharmasthala, Mahesh Thimarod...
27-08-25 09:19 pm
Praveen Nettaru, NIA, Mangalore: ಪ್ರವೀಣ್ ನೆಟ್...
27-08-25 08:46 pm
Pastor John Shamine, BJP, Fake Human Rights:...
26-08-25 10:57 pm
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm