ಬ್ರೇಕಿಂಗ್ ನ್ಯೂಸ್
26-07-25 03:31 pm HK News Desk ದೇಶ - ವಿದೇಶ
ಟೆಲ್ ಅವೀವ್, ಜುಲೈ 26 : ಇಸ್ಲಾಮಿಕ್ ರಾಷ್ಟ್ರಗಳ ವಿರುದ್ಧ ನಿರಂತರ ಸಂಘರ್ಷದಲ್ಲಿ ತೊಡಗಿರುವ ಇಸ್ರೇಲ್ ತನ್ನ ಸೈನಿಕರಿಗೆ ಇಸ್ಲಾಂ ಬಗ್ಗೆ ಅಧ್ಯಯನ ಮತ್ತು ಅರೇಬಿಕ್ ಭಾಷೆ ಕಲಿಕೆಯನ್ನು ಕಡ್ಡಾಯಗೊಳಿಸಿದೆ. ಸುತ್ತ ಮುಸ್ಲಿಂ ರಾಷ್ಟ್ರಗಳಿರುವ ಇಸ್ರೇಲಿ ಗುಪ್ತಚರ ಪಡೆಯನ್ನು ಇನ್ನಷ್ಟು ಪರಿಣಾಮಕಾರಿ ಆಗಿಸಲು ಈ ಕ್ರಮ ಎನ್ನಲಾಗುತ್ತಿದೆ.
ಗುಪ್ತಚರ ಸಿಬ್ಬಂದಿ ಹೌತಿ ಬಂಡುಕೋರರ ಸಂವಹನಗಳನ್ನು ಅರ್ಥೈಸುವಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ಅವರ ಭಾಷೆ, ಸಂಸ್ಕೃತಿಯನ್ನೂ ಕಲಿತುಕೊಳ್ಳುವಂತೆ ಇಸ್ರೇಲ್ ಸರ್ಕಾರ ಸೈನಿಕರಿಗೆ ಸೂಚಿಸಿದೆ. ಇಸ್ರೇಲಿ ರಕ್ಷಣಾ ಪಡೆಗಳು, ಗುಪ್ತಚರ ಸೈನಿಕರು ಮತ್ತು ಇತರ ಅಧಿಕಾರಿಗಳು ಅರೇಬಿಕ್ ಭಾಷೆ ಮತ್ತು ಇಸ್ಲಾಮಿಕ್ ಬಗ್ಗೆ ತರಬೇತಿ ಪಡೆಯಬೇಕಿದೆ. ಈ ಕುರಿತು ಜೆರುಸಲೆಮ್ ಪೋಸ್ಟ್ ವರದಿ ಮಾಡಿದ್ದು, ಅಕ್ಟೋಬರ್ 7, 2023ರ ಗುಪ್ತಚರ ವೈಫಲ್ಯದ ಹಿನ್ನೆಲೆಯಲ್ಲಿ ಈ ಕ್ರಮ ಜರುಗಿಸಲಾಗಿದೆ ಎಂದಿದೆ.
ಮುಂದಿನ ವರ್ಷದ ಅಂತ್ಯದ ವೇಳೆಗೆ, 100 ಪ್ರತಿಶತ ಗುಪ್ತಚರ ಸಿಬ್ಬಂದಿ ಇಸ್ಲಾಮಿಕ್ ಬಗ್ಗೆ ಮತ್ತು ಅರೇಬಿಕ್ ಭಾಷಾ ತರಬೇತಿಗೆ ಒಳಗಾಗುತ್ತಾರೆ. ಹೌತಿ ಮತ್ತು ಇರಾಕಿ ಉಪ ಭಾಷೆಗಳ ಬಗ್ಗೆ ವಿಶೇಷ ತರಬೇತಿ ಇರುತ್ತದೆ.
ಹಿರಿಯ ಗುಪ್ತಚರ ಅಧಿಕಾರಿಯೊಬ್ಬರು ಹೇಳಿಕೆಯನ್ನು ಉಲ್ಲೇಖಿಸಿದ್ದು, "ಇಲ್ಲಿಯವರೆಗೆ, ನಾವು ಸಂಸ್ಕೃತಿ, ಭಾಷೆ ಮತ್ತು ಇಸ್ಲಾಂ ಕ್ಷೇತ್ರಗಳಲ್ಲಿ ಪರಿಣತಿ ಪಡೆದಿರಲಿಲ್ಲ. ನಾವು ನಮ್ಮ ಗುಪ್ತಚರ ಅಧಿಕಾರಿಗಳು ಮತ್ತು ಸೈನಿಕರನ್ನು ಹಳ್ಳಿಯಲ್ಲಿ ಬೆಳೆದ ಅರಬ್ ಮಕ್ಕಳನ್ನಾಗಿ ಪರಿವರ್ತಿಸುವುದಿಲ್ಲ. ಭಾಷೆ ಮತ್ತು ಸಾಂಸ್ಕೃತಿಕ ಅಧ್ಯಯನಗಳ ಮೂಲಕ ವೈರಿಗಳ ಭಾಷೆಯಲ್ಲೇ ಅವರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ ಎಂದು ಹೇಳಿದ್ದಾರೆ.
In a significant strategic shift, Israel has made Islamic studies and Arabic language training mandatory for its soldiers, particularly those in intelligence and defense roles. Surrounded by Islamic nations and engaged in ongoing regional conflicts, Israel aims to enhance its understanding of its adversaries through cultural and linguistic familiarity.
14-10-25 11:24 am
HK News Desk
CM Siddaramaiah, DK Shivakumar:ಶಾಸಕರ ಬೆಂಬಲವಿಲ...
13-10-25 10:09 pm
ಸಚಿವನಾಗಿ ಆದಾಯ ಮೂಲಕ್ಕೆ ಕತ್ತರಿ ; ನಟನೆಗೆ ಮರಳಲಿದ್...
13-10-25 03:54 pm
ಶಾಲಾ ಮೈದಾನ, ಪಾರ್ಕ್ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ...
13-10-25 12:51 pm
DK Shivakumar, MLA Munirathna, CM Siddaramaia...
12-10-25 08:59 pm
15-10-25 12:09 pm
HK News Desk
ಟ್ರಂಪ್ ಒತ್ತಡ ನಡುವೆಯೇ ಭಾರತದಲ್ಲಿ ಗೂಗಲ್ ಸಂಸ್ಥೆ ಭ...
14-10-25 10:33 pm
ಹಮಾಸ್ - ಇಸ್ರೇಲ್ ಶಾಂತಿ ಒಪ್ಪಂದ ; ಎರಡು ವರ್ಷಗಳ ಅಕ...
14-10-25 11:22 am
ಕರೂರು ಕಾಲ್ತುಳಿತ ಪ್ರಕರಣ ; ಸಿಬಿಐ ತನಿಖೆಗೆ ಒಪ್ಪಿಸ...
14-10-25 11:11 am
Ex-IAS Officer Kannan Gopinathan, Congress: ಜ...
13-10-25 10:37 pm
15-10-25 12:12 pm
Udupi Correspondent
ಮೈಸೂರು, ಬೆಂಗಳೂರು, ಶಿವಮೊಗ್ಗ ಕಂಬಳಕ್ಕೆ ಹೈಕೋರ್ಟ್...
14-10-25 10:36 pm
ಸುಳ್ಯ ಮೂಲದ ಯುವಕ ಮಾರಿಷಸ್ ನಲ್ಲಿ ಜಲಪಾತಕ್ಕೆ ಬಿದ್ದ...
14-10-25 10:13 pm
ರಸ್ತೆಯಲ್ಲೇ ತ್ಯಾಜ್ಯ ಸುರಿಸುವ ಮೀನಿನ ಲಾರಿಗಳಿಗೆ ಮತ...
14-10-25 09:12 pm
ಮುದುಂಗಾರುಕಟ್ಟೆ ಬಸ್ ನಿಲ್ದಾಣದಲ್ಲಿ ಯುವಕನ ಮೃತದೇಹ...
14-10-25 06:39 pm
15-10-25 12:00 pm
HK News Desk
ಅಮಲಿಗಾಗಿ ಯುವಕರಿಗೆ ಕಫ್ ಸಿರಪ್ ಮಾರಾಟ ದಂಧೆ ; ದಾವಣ...
14-10-25 04:44 pm
ರುಪಾಯಿಗೆ ನಾಲ್ಕು ಪಟ್ಟು ಯುಕೆ ಪೌಂಡ್ ಕರೆನ್ಸಿಯ ಆಮಿ...
14-10-25 11:19 am
Vitla, Honey Trap, Mangalore Crime: ಗಲ್ಫ್ ಉದ್...
13-10-25 10:04 pm
Mangalore, Loan Fraud, Fake Gold: ಆತ್ಮಶಕ್ತಿ ಸ...
12-10-25 03:52 pm