ಬ್ರೇಕಿಂಗ್ ನ್ಯೂಸ್
12-07-25 04:21 pm HK News Desk ದೇಶ - ವಿದೇಶ
ನವದೆಹಲಿ, ಜುಲೈ.12: ಜಗತ್ತಿನ ಮುಂಚೂಣಿ ಟೆಕ್ ದೈತ್ಯ ಏಪಲ್ ಸಂಸ್ಥೆಯ ಮುಖ್ಯ ನಿರ್ವಾಹಕ ಅಧಿಕಾರಿ (ಸಿಓಓ) ಆಗಿ ಭಾರತೀಯ ಮೂಲದ ಸಬೀಹ್ ಖಾನ್ ಅವರನ್ನು ಕಂಪನಿಯ ಸಿಇಓ ಟಿಮ್ ಕುಕ್ ನೇಮಕ ಮಾಡಿದ್ದಾರೆ. ಬಹುಕಾಲ ಕಂಪನಿಯ ಸಿಓಓ ಆಗಿದ್ದ ಜೆಫ್ ವಿಲಿಯಮ್ಸ್ ಸದ್ಯದಲ್ಲೇ ನಿವೃತ್ತಿಯಾಗುತ್ತಿರುವುದರಿಂದ ಏಪಲ್ ಸಂಸ್ಥೆಯಲ್ಲಿ 30 ವರ್ಷಗಳಿಂದ ಸೇವೆಯಲ್ಲಿದ್ದ ಸಬೀಹ್ ಖಾನ್ ಅವರನ್ನು ಆ ಹುದ್ದೆಗೇರಿಸಲಾಗಿದೆ.
ಉತ್ತರ ಪ್ರದೇಶದ ಮೊರಾದಾಬಾದ್ ನಲ್ಲಿ 1966ರಲ್ಲಿ ಜನಿಸಿದ್ದ ಸಬೀಹ್ ಖಾನ್, ತನ್ನ ಹತ್ತು ವರ್ಷ ಪ್ರಾಯದಲ್ಲೇ ಫ್ಯಾಮಿಲಿ ಜೊತೆಗೆ ಸಿಂಗಾಪುರಕ್ಕೆ ತೆರಳಿದ್ದರು. ಅಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿ ಆನಂತರ ಯುಕೆಯಲ್ಲಿ ಉನ್ನತ ಶಿಕ್ಷಣ ಗಳಿಸಿದ್ದರು. ಟಫ್ಟ್ಸ್ ಯುನಿವರ್ಸಿಟಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮತ್ತು ಇಕನಾಮಿಕ್ಸ್ ನಲ್ಲೂ ಪ್ರತ್ಯೇಕ ಪದವಿ ಪೂರೈಸಿದ್ದರು. ಮೆಕ್ಯಾನಿಕಲ್ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನೂ ಗಳಿಸಿದ್ದರಿಂದ ಅವರೊಬ್ಬ ಟೆಕ್ನಿಕಲ್ ಮತ್ತು ಇಕನಾಮಿಕ್ಸ್ ಸೇರಿ ಟೆಕ್ನೋಮಿಕ್ಸ್ ಕಲಿತ ಅಪರೂಪದ ವ್ಯಕ್ತಿಯಾಗಿ ಹೊರಬಂದಿದ್ದರು.
ಏಪಲ್ ಸಂಸ್ಥೆ ಸೇರೋದಕ್ಕೂ ಮುನ್ನ ಜಿಇ ಪ್ಲಾಸ್ಟಿಕ್ಸ್ ಸಂಸ್ಥೆಯಲ್ಲಿ ಎಪ್ಲಿಕೇಶನ್ ಡೆವಲಪ್ಮೆಂಟ್ ಇಂಜಿನಿಯರ್ ಆಗಿ ಸೇರಿದ್ದಲ್ಲದೆ, ಅಲ್ಲಿ ಟೆಕ್ನಿಕಲ್ ಲೀಡರ್ ಆಗಿ ಅನುಭವ ಗಳಿಸಿದ್ದರು. 1995ರಲ್ಲಿ ಏಪಲ್ ಸಂಸ್ಥೆಯನ್ನು ಸೇರಿದ್ದ ಸಬೀಹ್ ಖಾನ್ ಒಂದೇ ಕಂಪನಿಯಲ್ಲಿ ಉದ್ಯೋಗದಲ್ಲಿದ್ದು ಒಂದೊಂದು ಮೆಟ್ಟಿಲು ತುಳಿಯುತ್ತಾ ಮೇಲಕ್ಕೇರುತ್ತಾ ಸಾಗಿದ್ದರು. 2019ರಲ್ಲಿ ಕಂಪನಿ ಅವರನ್ನು ಸೀನಿಯರ್ ವೈಸ್ ಪ್ರೆಸಿಡೆಂಟ್ ಆಗಿ ನೇಮಕ ಮಾಡಿತ್ತು. ಆಮೂಲಕ ಏಪಲ್ ಕಂಪನಿಯಲ್ಲಿ ತಯಾರಿ, ಲಾಜಿಸ್ಟಿಕ್ಸ್ ಮತ್ತು ಉತ್ಪನ್ನದ ಶ್ರೇಷ್ಠತೆಯನ್ನು ಉಳಿಸಿಕೊಳ್ಳುವ ಒಟ್ಟು ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದರು. ಜಗತ್ತಿನಾದ್ಯಂತ ಇರುವ ಏಪಲ್ ಸಂಸ್ಥೆಯ ಫ್ಯಾಕ್ಟರಿಗಳಲ್ಲಿ ಉತ್ಪನ್ನಗಳ ಪೂರೈಕೆ, ಅಲ್ಲಿನ ಕಾರ್ಮಿಕರನ್ನು ಅಪ್ಡೇಟ್ ಮಾಡಿಸುವ ಜವಾಬ್ದಾರಿಯೂ ಹೆಗಲೇರಿತ್ತು.
ಉತ್ಪನ್ನದ ಗುಣಮಟ್ಟ ಮತ್ತು ಕಾರ್ಪೊರೇಟ್ ಜವಾಬ್ದಾರಿ ಎರಡನ್ನೂ ಅತ್ಯುತ್ತಮವಾಗಿ ನಿರ್ವಹಿಸಿದ ಖಾನ್ ಕೆಲಸವನ್ನು ಗುರುತಿಸಿದ ಕಂಪನಿ ಈಗ ಮಹತ್ತರ ಹುದ್ದೆಯನ್ನು ವಹಿಸಿದೆ. ಇದಲ್ಲದೆ, ಸಬೀಹ್ ಖಾನ್ ತಮ್ಮ ಕಾರ್ಯಾವಧಿಯಲ್ಲಿ ಏಪಲ್ ಸಂಸ್ಥೆಯ ಫ್ಯಾಕ್ಟರಿಗಳಲ್ಲಿ 60 ಶೇಕಡಾ ಕಾರ್ಬನ್ ಹೊರಸೂಸುವಿಕೆಯನ್ನು ತಗ್ಗಿಸಿದ್ದಾರೆ. ಫ್ಯಾಕ್ಟರಿಗಳಲ್ಲಿ ಆಧುನಿಕ ಮಾದರಿಯ ತಾಂತ್ರಿಕತೆ, ಸರಬರಾಜು ವ್ಯವಸ್ಥೆ ಉತ್ತಮಪಡಿಸಿ ಒಟ್ಟು ಉತ್ಪಾದನೆಯನ್ನು ಹೆಚ್ಚಿಸಿದ್ದರಲ್ಲೂ ಇವರ ಕೊಡುಗೆ ಇದೆ. ಕಂಪನಿಯ ಸಿಇಓ ಟಿಮ್ ಕುಕ್ ಅವರು, ಸಬೀಹ್ ಖಾನ್ ಅವರನ್ನು ಅತ್ಯುತ್ತಮ ಸ್ಟ್ರಾಟಜಿಸ್ಟ್ ಎಂದು ಕರೆಯುತ್ತಾರೆ. ಅಲ್ಲದೆ, ಜಗತ್ತಿನಾದ್ಯಂತ ಕೋವಿಡ್ ತೊಂದರೆ ಮಧ್ಯೆಯೂ ಅತ್ಯುತ್ತಮ ರೀತಿಯ ಸಪ್ಲೈ ಚೈನ್ ಏರ್ಪಡಿಸಿದ್ದರಲ್ಲೂ ಇವರ ಪಾತ್ರ ಮಹತ್ವದ್ದಿದೆ. ಹೀಗಾಗಿ ಕೇವಲ ತಾಂತ್ರಿಕತೆ ಮಾತ್ರವಲ್ಲ, ಸರಬರಾಜು, ಮಾರ್ಕೆಟಿಂಗ್ ಎಲ್ಲದರಲ್ಲೂ ಇವರ ಕೊಡುಗೆ ಇದೆ ಎಂದಿದ್ದಾರೆ.
ಸಬೀಹ್ ಖಾನ್ ಏಪಲ್ ಸಂಸ್ಥೆಯ ಸಿಓಓ ಆಗಿ ನೇಮಕಗೊಳ್ಳುವುದರೊಂದಿಗೆ ಭಾರತೀಯನೊಬ್ಬ ಜಗತ್ತಿನ ಮತ್ತೊಂದು ಟೆಕ್ ದೈತ್ಯ ಕಂಪನಿಗಳಲ್ಲಿ ಮುಂಚೂಣಿ ಸ್ಥಾನ ಪಡೆದಂತಾಗಿದೆ. ಗೂಗಲ್ ಸಂಸ್ಥೆಯ ಸುಂದರ್ ಪಿಚೈನಿಂದ ತೊಡಗಿ ಅಮೆರಿಕದ ದೊಡ್ಡ ಟೆಕ್ ಕಂಪನಿಗಳಲ್ಲಿ ಭಾರತೀಯರೇ ಪ್ರಮುಖ ಸ್ಥಾನದಲ್ಲಿದ್ದಾರೆ.
Sabih Khan, Apple's new Chief Operating Officer, has a robust academic background in both engineering and economics. He holds bachelor's degrees in mechanical engineering and economics from Tufts University, and master's degree in mechanical engineering from Rensselaer Polytechnic Institute (RPI).
28-08-25 11:56 am
HK News Desk
Banumustak, DK Shivakumar, Chamundi Hill: ದೇವ...
27-08-25 06:21 pm
Congress, MP Yaduveer, DK Shivakumar: ಕಾಂಗ್ರೆ...
27-08-25 06:17 pm
ದಸರಾ ಉದ್ಘಾಟಕರ ಆಯ್ಕೆ ವಿವಾದ ; ನೀವು ನಂಬಿರುವ ನಿಮ್...
27-08-25 03:17 pm
Kannada Anchor Anushree, Marriage, Mangalore:...
27-08-25 02:51 pm
28-08-25 12:19 pm
HK News Desk
ಕೈ ಗ್ಯಾರಂಟಿಗೆ ಬೊಕ್ಕಸ ಪೂರ ಖಾಲಿ - ಖಾಲಿ ; ತೆಲಂಗಾ...
26-08-25 09:02 pm
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
28-08-25 11:27 am
Mangalore Correspondent
Pastor John Shamine, Madan Bugadi, IHRACSJC:...
27-08-25 11:02 pm
FIR, Chinnayya, Dharmasthala, Mahesh Thimarod...
27-08-25 09:19 pm
Praveen Nettaru, NIA, Mangalore: ಪ್ರವೀಣ್ ನೆಟ್...
27-08-25 08:46 pm
Pastor John Shamine, BJP, Fake Human Rights:...
26-08-25 10:57 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm