ಬ್ರೇಕಿಂಗ್ ನ್ಯೂಸ್
19-06-25 08:26 pm HK News Desk ದೇಶ - ವಿದೇಶ
ಕಣ್ಣೂರು, ಜೂನ್ 19 : ಅನ್ಯಧರ್ಮದ ವ್ಯಕ್ತಿಯೊಬ್ಬನ ಜೊತೆಗೆ ಮಾತನಾಡಿದ ಕಾರಣಕ್ಕೆ ಮುಸ್ಲಿಂ ಗುಂಪೊಂದು ಅವಮಾನಿಸಿದ್ದಕ್ಕೆ 40 ವರ್ಷದ ಮುಸ್ಲಿಂ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇರಳದ ಕಣ್ಣೂರು ಜಿಲ್ಲೆಯ ಪಿಣರಾಯಿ ಗ್ರಾಮದಲ್ಲಿ ನಡೆದಿದ್ದು ಘಟನೆ ಸಂಬಂಧಿಸಿ ಪೊಲೀಸರು ಮೂವರು ಎಸ್ಡಿಪಿಐ ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ಜೂನ್ 15ರ ಭಾನುವಾರ ಮಧ್ಯಾಹ್ನ ಕಾಯಲೋಡ್ ಅಚಂಕರ ಚರ್ಚ್ ಬಳಿಯಲ್ಲಿ ಯುವಕನೊಬ್ಬನ ಜೊತೆಗೆ ರಜಿನಾ ಎಂಬ ಮಹಿಳೆ ಮಾತನಾಡಿದ್ದು ಈ ವೇಳೆ ಮುಸ್ಲಿಂ ಗುಂಪು ಅಡ್ಡಗಟ್ಟಿ ಮಹಿಳೆಯನ್ನು ಅವಮಾನಿಸಿದ್ದಲ್ಲದೆ ಯುವಕನನ್ನು ನಿರ್ಜನ ಪ್ರದೇಶಕ್ಕೊಯ್ದು ಹಲ್ಲೆ ಮಾಡಿತ್ತು. ಐದು ಗಂಟೆಗಳ ಕಾಲ ಕೂಡಿ ಹಾಕಿ ಹಲ್ಲೆಗೈದು ರಾತ್ರಿ ಎಂಟು ಗಂಟೆ ವೇಳೆಗೆ ಯುವಕನನ್ನು ಪರಿಸರದ ಎಸ್ಡಿಪಿಐ ಕಚೇರಿಗೆ ಒಯ್ದಿದ್ದರು. ಅಲ್ಲಿಗೆ ಮಹಿಳೆ ರಜಿನಾ ಮತ್ತು ಆಕೆಯ ಮನೆಯವರನ್ನು ಕರೆಸಿ ವಾರ್ನಿಂಗ್ ಮಾಡಿ ರಾತ್ರಿ ವೇಳೆ ಬಿಟ್ಟು ಕಳಿಸಿದ್ದರು. ಯುವಕನ ಮನೆಯವರನ್ನೂ ಕರೆಸಿ ಎಚ್ಚರಿಕೆ ನೀಡಿದ್ದರು. ಈ ವೇಳೆ, ಎಸ್ಡಿಪಿಐ ಕಾರ್ಯಕರ್ತರು ಮಹಿಳೆಯನ್ನು ಅವಾಚ್ಯ ಪದಗಳಿಂದ ನಿಂದಿಸಿ ಅವಮಾನಿಸಿದ್ದರು ಎನ್ನಲಾಗಿದೆ.
ಇದರಿಂದ ನೊಂದ ಮಹಿಳೆ ಜೂನ್ 17ರ ಮಂಗಳವಾರ ತನ್ನ ಮನೆಯಲ್ಲಿ ನೇಣಿಗೆ ಶರಣಾಗಿದ್ದು ಈ ವೇಳೆ ಮೂವರು ಯುವಕರ ಹೆಸರನ್ನು ಉಲ್ಲೇಖಿಸಿ ಡೆತ್ ನೋಟ್ ಬರೆದಿಟ್ಟಿದ್ದರು. ಅದನ್ನು ಆಧರಿಸಿ ಪೊಲೀಸರು ರಫ್ನಾಸ್, ಮುಬಾಶಿರ್ ಮತ್ತು ಫೈಸಲ್ ಎಂಬವರನ್ನು ಬಂಧಿಸಿದೆ. ಕೃತ್ಯದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು ಅವರ ಪತ್ತೆಗೆ ಪೊಲೀಸರು ಶೋಧ ನಡೆಸಿದ್ದಾರೆ.
ನೈತಿಕ ಪೊಲೀಸ್ ಗಿರಿ ಮಾದರಿಯ ಘಟನೆ ಇದಾಗಿದ್ದು ಮುಸ್ಲಿಂ ಯುವಕರ ಹುಚ್ಚಾಟಕ್ಕೆ ಮಹಿಳೆ ಬಲಿಯಾಗಿದ್ದಾರೆ. ವಿಶೇಷ ಅಂದ್ರೆ, ಕೇರಳ ಸಿಎಂ ಪಿಣರಾಯಿ ವಿಜಯನ್ ಅವರ ಸ್ವಂತ ಊರಿನಲ್ಲೇ ಘಟನೆ ನಡೆದಿದೆ. ಚರ್ಚ್ ಬಳಿಯಲ್ಲಿ ನಿಂತು ಮಾತನಾಡಿದ ಕಾರಣಕ್ಕೆ ಮತಾಂಧ ಯುವಕರು ಅತಿರೇಕದ ವರ್ತನೆ ತೋರಿದ್ದರು.
In a shocking incident of moral policing in Kerala’s Kannur district, a 40-year-old Muslim woman named Rajina died by suicide after allegedly being harassed and publicly humiliated by a group of Muslim men for speaking to a man of another religion. The incident took place in Pinarayi village — the hometown of Kerala Chief Minister Pinarayi Vijayan — and has sparked widespread outrage
28-02-26 11:49 am
HK News Desk
ರಾಜ್ಯದಲ್ಲಿ ಆಸ್ತಿ ಖರೀದಿದಾರರಿಗೆ ಮತ್ತೊಂದು ಶಾಕ್ !...
27-02-26 10:17 pm
ಧಾರವಾಡ ಪ್ರತಿಭಟನೆ ಎಫೆಕ್ಟ್ ; ರಾಜ್ಯದಲ್ಲಿ 60 ಸಾವಿ...
26-02-26 10:01 pm
ತಂದೆ ಆಟೋ ಚಾಲಕ, ತಾಯಿ ಹೂವಿನ ವ್ಯಾಪಾರಿ, ಮಗಳು ನ್ಯಾ...
26-02-26 12:58 pm
Moral Policing, Mangalore: ಮೋರಲ್ ಪೊಲೀಸ್ ; ರೈಲ...
26-02-26 10:26 am
28-02-26 10:54 pm
HK News Desk
ಗಲ್ಫ್ ರಾಷ್ಟ್ರಗಳಿಗೆ ವಿಮಾನ ಸಂಚಾರ ವ್ಯತ್ಯಯ ; ಏರ್...
28-02-26 07:17 pm
ಇರಾನ್ ಮೇಲೆ ಮುಗಿಬಿದ್ದ ಅಮೆರಿಕ-ಇಸ್ರೇಲ್ ಪಡೆಗಳು ;...
28-02-26 05:28 pm
ತ್ರಿಷಾ ಬಿರುಗಾಳಿ ; ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ್...
28-02-26 01:08 pm
ದೆಹಲಿ ಅಬಕಾರಿ ನೀತಿ ಹಗರಣ ; ಕೇಜ್ರಿವಾಲ್, ಸಿಸೋಡಿಯಾ...
27-02-26 03:55 pm
28-02-26 08:53 pm
HK News Desk
Mangaluru Muscat Flight: ಮಂಗಳೂರು- ಮಸ್ಕತ್ ನಡುವ...
27-02-26 08:59 pm
Mangalore Sujith Madur: ಕೌನ್ಸಿಲರ್ ಸುಜಿತ್ ಮಾಡೂ...
27-02-26 08:52 pm
Leopard Mangalore, MLA Vedavyas Kamath: ಕದ್ರಿ...
27-02-26 08:40 pm
Justice Veerappa, Udupi: ಉಪ ಲೋಕಾಯುಕ್ತ ನ್ಯಾ.ವೀ...
27-02-26 08:36 pm
28-02-26 11:12 am
Mangalore Staffer
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm