ಬ್ರೇಕಿಂಗ್ ನ್ಯೂಸ್
12-06-25 02:52 pm HK News Desk ದೇಶ - ವಿದೇಶ
ಅಹ್ಮದಾಬಾದ್, ಜೂನ್ 12 : ಗುಜರಾತಿನ ಅಹ್ಮದಾಬಾದ್ ಏರ್ಪೋರ್ಟ್ ನಿಂದ ಲಂಡನ್ ಹೊರಟಿದ್ದ ಬೋಯಿಂಗ್ ವಿಮಾನ ಪತನಗೊಂಡಿದ್ದು, ಅದರಲ್ಲಿದ್ದ ಪ್ರಯಾಣಿಕರ ಬಗ್ಗೆ ಆತಂಕ ವ್ಯಕ್ತವಾಗಿದೆ. ಅಹ್ಮದಾಬಾದ್ ನಗರದ ವಿಮಾನ ನಿಲ್ದಾಣದಿಂದ ಹೊರಟು ಸ್ವಲ್ಪ ದೂರ ಸಾಗುತ್ತಿದ್ದಾಗಲೇ ಮೇಘನಿ ನಗರ್ ಎಂಬಲ್ಲಿನ ಜನವಸತಿ ಪ್ರದೇಶಕ್ಕೆ ವಿಮಾನ ಬಿದ್ದಿದೆ.
ಆ ಜಾಗದಲ್ಲಿ ದಟ್ಟ ಹೊಗೆ ಆವರಿಸಿದ್ದು, ವಿಮಾನದಲ್ಲಿ 242 ಮಂದಿ ಪ್ರಯಾಣಿಕರಿದ್ದರು ಎನ್ನುವ ಮಾಹಿತಿ ಇದೆ. ಸ್ಥಳದಲ್ಲಿ ಎಲ್ಲ ರಸ್ತೆಗಳನ್ನು ಬ್ಲಾಕ್ ಮಾಡಲಾಗಿದ್ದು, ಪರಿಸ್ಥಿತಿ ಏನಾಗಿದೆ ಎಂದು ತಿಳಿದುಬಂದಿಲ್ಲ. ಏರ್ ಇಂಡಿಯಾ ಸಂಸ್ಥೆಗೆ ಸೇರಿದ ಪ್ಯಾಸೆಂಜರ್ ಬೋಯಿಂಗ್ ಡ್ರೀಮ್ ಲೈನರ್ -787 ಎಂಬ ಹೆಸರಿನ ವಿಮಾನ ಇದಾಗಿದ್ದು, 300 ಜನರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿತ್ತು.
ದೂರದ ಲಂಡನ್ ಪ್ರಯಾಣವಾಗಿದ್ದರಿಂದ ಇಂಧನ ಫುಲ್ ಟ್ಯಾಂಕ್ ಮಾಡಿಕೊಂಡು ಹೊರಟಿದ್ದಾಗಲೇ ವಿಮಾನ ಹಠಾತ್ ಪತನಕ್ಕೀಡಾಗಿದೆ. ನೆಲಕ್ಕೆ ಬಡಿಯುತ್ತಲೇ ಬೆಂಕಿ ಹತ್ತಿಕೊಂಡಿದ್ದು, ಎಷ್ಟು ಮಂದಿಯ ಸಾವು, ನೋವಾಗಿದೆ ಎನ್ನುವ ಮಾಹಿತಿ ಸಿಕ್ಕಿಲ್ಲ. ಸ್ಥಳದಲ್ಲಿ ಅಗ್ನಿಶಾಮಕ ದಳ, ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ವಿಮಾನ ಮಧ್ಯಾಹ್ನ 1.30ಕ್ಕೆ ಟೇಕಾಫ್ ಆದ ಹತ್ತು ನಿಮಿಷದಲ್ಲಿ ಪತನವಾಗಿದೆ ಎಂದು ಸ್ಥಳೀಯ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. ವಿಮಾನದಲ್ಲಿ ದೇಶ- ವಿದೇಶದ ನೂರಾರು ಮಂದಿ ಪ್ರಯಾಣಿಕರಿದ್ದರು. ಘಟನೆ ಬೆನ್ನಲ್ಲೇ ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಸ್ಥಳಕ್ಕೆ ಧಾವಿಸಿದ್ದಾರೆ. ಗೃಹ ಸಚಿವ ಅಮಿತ್ ಶಾ ತುರ್ತು ಮಾಹಿತಿ ಕೇಳಿದ್ದಾರೆ. ಯಾವ ಕಾರಣಕ್ಕೆ ವಿಮಾನ ಕ್ರ್ಯಾಶ್ ಆಗಿದೆಯೆಂಬ ಮಾಹಿತಿ ಸಿಕ್ಕಿಲ್ಲ.
#BREAKING: Air India Flight AI 171 (Boeing 787‑8) from Ahmedabad to London crash‑lands near Ahmedabad’s Meghani area shortly after takeoff. Around 242 passengers onboard. Emergency crews on site; details still emerging.#AirIndia #Ahmedabad #PlaneCrash pic.twitter.com/pExLvUbtm3
— Sahil Haq 🇮🇳 (@sahil_haq86755) June 12, 2025
Video of Air India flight crash from Ahmedabad. pic.twitter.com/sCGZvs1lVx
— कुंभकरण (@_kumbhkaran) June 12, 2025
An Air India plane with 242 people onboard on Thursday crashed in Gujarat's Meghani Nagar area near Ahmedabad airport. Visuals of the plane crash site shared on social media shows thick willow of smoke emanating from the area. The aircraft departed from Ahmedabad at 1:39 pm from runway 23. It crashed in just five minutes after take off, according to details shared by the Directorate General of Civil Aviation (DGCA).
28-08-25 06:23 pm
HK News Desk
Bidar Bus Driver Suicide: ಬೀದರ್ ಬಸ್ ಡಿಪೋ ನಲ್ಲ...
28-08-25 02:41 pm
ಬಿಳಿಯಲ್ಲ ಮಾರಾಯರೇ ನೀಲಿ ಮೊಟ್ಟೆ ಇಟ್ಟ ನಾಟಿ ಕೋಳಿ ;...
28-08-25 11:56 am
Banumustak, DK Shivakumar, Chamundi Hill: ದೇವ...
27-08-25 06:21 pm
Congress, MP Yaduveer, DK Shivakumar: ಕಾಂಗ್ರೆ...
27-08-25 06:17 pm
28-08-25 12:19 pm
HK News Desk
ಕೈ ಗ್ಯಾರಂಟಿಗೆ ಬೊಕ್ಕಸ ಪೂರ ಖಾಲಿ - ಖಾಲಿ ; ತೆಲಂಗಾ...
26-08-25 09:02 pm
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
28-08-25 11:00 pm
Mangalore Correspondent
Mangalore Rain, School College Holiday: ಭಾರೀ...
28-08-25 10:07 pm
Soujanya Murder Case, Mother SIT: ಸೌಜನ್ಯಾ ಕೊಲ...
28-08-25 08:31 pm
Talapady Accident, Mangalore, Auto bus: ಕೇರಳ...
28-08-25 04:05 pm
Loudspeaker, Punjalkatte,Farangipete: ಪುಂಜಾಲ...
28-08-25 02:51 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm