ಬ್ರೇಕಿಂಗ್ ನ್ಯೂಸ್
26-05-25 08:33 pm HK News Desk ದೇಶ - ವಿದೇಶ
ನವದೆಹಲಿ, ಮೇ 26 : ಸೂಕ್ಷ್ಮ ಮಾಹಿತಿಯೊಂದನ್ನು ಪಾಕಿಸ್ತಾನದ ಗುಪ್ತಚರ ಏಜನ್ಸಿಗೆ ರವಾನಿಸಿದ ಆರೋಪದಲ್ಲಿ ಸಿಆರ್ ಪಿಎಫ್ ಸಿಬಂದಿಯೊಬ್ಬನನ್ನು ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಇದರ ಬೆನ್ನಲ್ಲೇ ಆ ವ್ಯಕ್ತಿಯನ್ನು ಕೇಂದ್ರೀಯ ಮೀಸಲು ಭದ್ರತಾ ಪಡೆಯಿಂದ ವಜಾ ಮಾಡಲಾಗಿದೆ.
ದೆಹಲಿ ಸಿಆರ್ ಪಿಎಫ್ ವಿಭಾಗದಲ್ಲಿ ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್ ಆಗಿದ್ದ ಮೋತಿ ರಾಮ್ ಜಾಟ್ ಬಂಧಿತ ವ್ಯಕ್ತಿ. 2023ರಿಂದ ದೇಶದ ಭದ್ರತೆ ವಿಚಾರ ಕುರಿತ ಮಾಹಿತಿಯನ್ನು ಪಾಕಿಸ್ತಾನದ ಐಎಸ್ಐ ಜೊತೆಗೆ ಹಂಚಿಕೊಳ್ಳುತ್ತಿದ್ದ ಎಂಬುದನ್ನು ಎನ್ಐಎ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಇದಕ್ಕಾಗಿ ಮೋತಿ ರಾಮ್ ಪಾಕಿಸ್ತಾನ ಐಎಸ್ಐ ಕಡೆಯಿಂದ ಹಣ ಪಡೆದಿದ್ದ ಎಂಬುದನ್ನೂ ಪತ್ತೆ ಮಾಡಿದ್ದಾರೆ. ಆರೋಪಿಯನ್ನು ಪಾಟಿಯಾಲ ಕೋರ್ಟಿಗೆ ಹಾಜರುಪಡಿಸಿದ್ದು, ಜೂನ್ 6ರ ವರೆಗೆ ಎನ್ಐಎ ಕಸ್ಟಡಿಗೆ ನೀಡಿದೆ.
ಎನ್ಐಎ ಬಂಧಿಸಿ ಕಸ್ಟಡಿಗೆ ಪಡೆಯುತ್ತಿದ್ದಂತೆ ಮೋತಿ ರಾಮ್ ನನ್ನು ಸಿಆರ್ ಪಿಎಫ್ ಪಡೆಯಿಂದ ವಜಾಗೊಳಿಸಿ ಆದೇಶ ಮಾಡಲಾಗಿದೆ. ಅಲ್ಲದೆ, ಆ ವ್ಯಕ್ತಿಯನ್ನು ನಾವು ಎನ್ಐಎ ಕಸ್ಟಡಿಗೆ ನೀಡಿದ್ದೇವೆ. ಆತನನ್ನು 2025ರ ಮೇ 21ರಿಂದ ಅನ್ವಯ ಆಗುವಂತೆ ಸೇವೆಯಿಂದ ವಜಾ ಮಾಡಿದ್ದೇವೆ ಎಂದು ಸಿಆರ್ ಪಿಎಫ್ ತಿಳಿಸಿದೆ.
ಗುಜರಾತಿ ಆರೋಗ್ಯ ಕಾರ್ಯಕರ್ತ ಬಂಧನ
ಪಾಕಿಸ್ತಾನ ಗಡಿಭಾಗ ಗುಜರಾತಿನ ಕಛ್ ಜಿಲ್ಲೆಯಲ್ಲಿ ಆರೋಗ್ಯ ಕಾರ್ಯಕರ್ತನಾಗಿದ್ದುಕೊಂಡು ಭಾರತದ ಸೇನೆ ನಿಯೋಜನೆ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ ನೀಡಿದ್ದಕ್ಕಾಗಿ ಸಹದೇವ್ ಸಿನ್ಹ ಗೋಹಿಲ್ (28) ಎಂಬ ವ್ಯಕ್ತಿಯನ್ನು ಗುಜರಾತ್ ಎಟಿಎಸ್ ಪೊಲೀಸರು ಬಂಧಿಸಿದ್ದಾರೆ. ತನ್ನನ್ನು ಅದಿತಿ ಭಾರದ್ವಾಜ್ ಹೆಸರಲ್ಲಿ ಪರಿಚಯ ಮಾಡಿಕೊಂಡಿದ್ದ ಪಾಕಿಸ್ತಾನ್ ಏಜಂಟ್ ಮಹಿಳೆಯೊಬ್ಬಳು, ವಾಟ್ಸಪ್ ನಲ್ಲಿ ಗೋಹಿಲ್ ಜೊತೆಗೆ ಸ್ನೇಹ ಸಂಪಾದಿಸಿ ಹಣದ ಆಮಿಷವೊಡ್ಡಿ ಸೇನಾ ಮಾಹಿತಿಯನ್ನು ಹಂಚಿಕೊಳ್ಳುವಂತೆ ಪ್ರೇರೇಪಿಸಿದ್ದಳು. ಇದರಂತೆ, ಗೋಹಿಲ್ ಬಿಎಸ್ಎಫ್ ಮತ್ತು ನೌಕಾಪಡೆಯ ಚಲವಲನ, ಅವರ ಕಟ್ಟಡ ರಚನೆಗಳ ಬಗ್ಗೆ ಫೋಟೋ, ವಿಡಿಯೋವನ್ನು ಪಾಕ್ ಏಜಂಟ್ ಜೊತೆಗೆ ಹಂಚಿಕೊಂಡಿದ್ದ. ಇದಕ್ಕಾಗಿ ಹಣವನ್ನೂ ಪಡೆದಿದ್ದ ಎಂಬುದನ್ನು ತಿಳಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
The National Investigation Agency (NIA) arrested a Central Reserved Police Force jawan on Monday (May 26, 2025) for sharing sensitive information with Pakistan Intelligence officers. The CRPF dismissed him soon after his arrest.
28-08-25 06:23 pm
HK News Desk
Bidar Bus Driver Suicide: ಬೀದರ್ ಬಸ್ ಡಿಪೋ ನಲ್ಲ...
28-08-25 02:41 pm
ಬಿಳಿಯಲ್ಲ ಮಾರಾಯರೇ ನೀಲಿ ಮೊಟ್ಟೆ ಇಟ್ಟ ನಾಟಿ ಕೋಳಿ ;...
28-08-25 11:56 am
Banumustak, DK Shivakumar, Chamundi Hill: ದೇವ...
27-08-25 06:21 pm
Congress, MP Yaduveer, DK Shivakumar: ಕಾಂಗ್ರೆ...
27-08-25 06:17 pm
28-08-25 12:19 pm
HK News Desk
ಕೈ ಗ್ಯಾರಂಟಿಗೆ ಬೊಕ್ಕಸ ಪೂರ ಖಾಲಿ - ಖಾಲಿ ; ತೆಲಂಗಾ...
26-08-25 09:02 pm
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
28-08-25 11:00 pm
Mangalore Correspondent
Mangalore Rain, School College Holiday: ಭಾರೀ...
28-08-25 10:07 pm
Soujanya Murder Case, Mother SIT: ಸೌಜನ್ಯಾ ಕೊಲ...
28-08-25 08:31 pm
Talapady Accident, Mangalore, Auto bus: ಕೇರಳ...
28-08-25 04:05 pm
Loudspeaker, Punjalkatte,Farangipete: ಪುಂಜಾಲ...
28-08-25 02:51 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm