ಬ್ರೇಕಿಂಗ್ ನ್ಯೂಸ್
13-05-25 02:51 pm HK News Desk ದೇಶ - ವಿದೇಶ
ನವದೆಹಲಿ, ಮೇ 13 : ಆಪರೇಷನ್ ಸಿಂಧೂರ್ ಸೇನಾ ಕಾರ್ಯಾಚರಣೆ ಬೆನ್ನಲ್ಲೇ, ಪಾಕಿಸ್ತಾನದ ವಿವಿಧ ಕಡೆಗಳಲ್ಲಿ 4.6 ತೀವ್ರತೆಯ ಭೂಕಂಪನ ಉಂಟಾಗಿದೆ. ಪಂಜಾಬ್ ಪ್ರಾಂತ್ಯದ ಪೀರ್ ಜೊಂಗಲ್ ಬಳಿ ಮಧ್ಯಾಹ್ನ 1-26ರ ಸುಮಾರಿನಲ್ಲಿ ಭೂಕಂಪ ಸಂಭವಿಸಿತ್ತು. ಆದರೆ ಈ ಭೂಕಂಪನ ನೈಸರ್ಗಿಕ ಅಲ್ಲ, ಪರಮಾಣು ಸಂಗ್ರಹಾಗಾರದ ಸ್ಫೋಟ ಕಾರಣ ಎಂದು ಜಾಲತಾಣದಲ್ಲಿ ಚರ್ಚೆ ಆಗುತ್ತಿದೆ.
ಮೂರು ದಿನಗಳ ಅಂತರದಲ್ಲಿ ಪಾಕಿಸ್ತಾನದಲ್ಲಿ ಮೂರನೇ ಬಾರಿಗೆ ಭೂಕಂಪವಾಗಿದೆ. ಮೇ 10 ರಂದು ಬೆಳಗ್ಗೆ 4.7 ರಷ್ಟು ತೀವ್ರತೆ, ಆನಂತರ 4.0 ತೀವ್ರತೆಯ ಕಂಪನ ದಾಖಲಾಗಿತ್ತು. ಭಾರತದ ಸೇನಾ ಕಾರ್ಯಾಚರಣೆ ಬೆನ್ನಲ್ಲೇ ಪಾಕಿಸ್ತಾನದಲ್ಲಿ ಅಸ್ವಾಭಾವಿಕ ರೀತಿಯ ಕಂಪನ ಆಗಿರುವ ನಾನಾ ರೀತಿಯಲ್ಲಿ ಪೋಸ್ಟ್ ಮಾಡಲಾಗುತ್ತಿದೆ.
ಪರಮಾಣು ಅಸ್ತ್ರಗಳಿದ್ದ ಮಹತ್ವದ ಸ್ಥಾವರಗಳ ಮೇಲೆ ಭಾರತ ದಾಳಿ ನಡೆಸಿತ್ತು. ಇದರ ಬಳಿಕವೇ ಪಾಕ್ ನಲ್ಲಿ ಆಗಾಗ್ಗೆ ಭೂಕಂಪ ಆಗುತ್ತಿದೆ ಎಂದು ಕೆಲವರು ಬರೆದುಕೊಂಡಿದ್ದಾರೆ. ಇದು ನೈಸರ್ಗಿಕ ಭೂಕಂಪವಲ್ಲ. ಬಹುಶಃ ಪಾಕಿಸ್ತಾನದ ನ್ಯೂಕ್ಲಿಯರ್ ಪ್ರದೇಶದಲ್ಲಿ ಆದ ಘಟನೆಯ ಪರಿಣಾಮವೇ ? ನ್ಯೂಕ್ಲಿಯರ್ ಸೈಟ್ ಘಟನೆಯೇ? ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಎಕ್ಸ್ ನಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.
ಇಂತಹ ಹೇಳಿಕೆಗಳನ್ನು ಅಲ್ಲಗಳೆದಿರುವ ಭೂಕಂಪ ವಿಪತ್ತು ಘಟಕದ ನಿರ್ದೇಶಕ ಓ.ಪಿ ಮಿಶ್ರಾ, ನೈಸರ್ಗಿಕ ಭೂಕಂಪವು ಎರಡು ಹಂತಗಳನ್ನು ಹೊಂದಿರುತ್ತದೆ. ಪರಮಾಣು ಸ್ಫೋಟದ ತೀವ್ರತೆಯ ಕಂಪನ ತೃತೀಯ ಹಂತವನ್ನು ಹೊಂದಿರುತ್ತದೆ. ಇದು ಪರಮಾಣು ಸ್ಫೋಟದ ನಂತರ ಮೇಲ್ಮೈ ಭಾಗದಲ್ಲಿ ಮಾತ್ರ ಉಂಟಾಗುತ್ತದೆ. ಸಿಸ್ಮೋಗ್ರಾಫ್ ಇದನ್ನು ಸ್ಪಷ್ಟವಾಗಿ ಗುರುತಿಸುತ್ತದೆ ಎಂದು ತಿಳಿಸಿದ್ದಾರೆ.
ಪಾಕಿಸ್ತಾನವು ಭಾರತ ಮತ್ತು ಯುರೇಷಿಯನ್ ಟೆಕ್ಟೋನಿಕ್ ಪ್ಲೇಟ್‌ಗಳ ನಡುವಿನ ಸಕ್ರಿಯ ಗಡಿಯಲ್ಲಿದೆ. ಈ ಭಾಗದಲ್ಲಿರುವ ಬಲೂಚಿಸ್ತಾನ್, ಖೈಬರ್ ಪಖ್ತುಂಕ್ವಾ ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರಾಂತ್ಯಗಳು ಕೂಡ ಹೆಚ್ಚು ಭೂಕಂಪಗಳಿಗೆ ಗುರಿಯಾಗುತ್ತವೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಕಿರಾನ್ ಹಿಲ್ಸ್ ಪರಮಾಣು ಸ್ಥಾವರಗಳಿಗೆ ದಾಳಿ ?
ಪಾಕಿಸ್ತಾನದ ಕಿರಾನ್ ಹಿಲ್ಸ್ ನಲ್ಲಿರುವ ಪರಮಾಣು ಸ್ಥಾವರಗಳ ಮೇಲೆಯೂ ಭಾರತ ದಾಳಿ ಮಾಡಿತ್ತೇ? ಎಂಬ ಊಹಾಪೋಹಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಪಾಕಿಸ್ತಾನದ ಸರ್ಗೋಧಾ ವಾಯುನೆಲೆಗೆ ದಾಳಿಯಾಗಿರುವ ಹಿನ್ನೆಲೆಯಲ್ಲಿ ಕಿರಾನಾ ಹಿಲ್ಸ್ ಕೆಳಗಿರುವ ಭೂಗತ ಪರಮಾಣು ಹಾಗೂ ಯುದ್ದೋಪಕರಣಗಳ ಸಂಗ್ರಹಗಾರ ಮೇಲೂ ಭಾರತ ದಾಳಿ ನಡೆಸಿರಬಹುದು ಎಂದು ಹೇಳಲಾಗುತ್ತಿದೆ. ಕಿರಾನಾ ಹಿಲ್ಸ್ ಸರ್ಗೋದಾ ಜಿಲ್ಲೆಯಲ್ಲಿರುವ ವಿಶಾಲ ಪರ್ವತ ಶ್ರೇಣಿಯಾಗಿದ್ದು, ರಕ್ಷಣಾ ಸಚಿವಾಲಯದ ಸುಪರ್ದಿಯಲ್ಲಿದೆ.
Reports from Dynamite News correspondents indicate an earthquake in Pakistan measured at a magnitude of 4.6 on the Richter scale. This earthquake has occurred around the Kota and Sukkur areas of Pakistan. For the last few days, earthquake tremors were being felt continuously in Pakistan, and now a new earthquake has come.
28-08-25 06:23 pm
HK News Desk
Bidar Bus Driver Suicide: ಬೀದರ್ ಬಸ್ ಡಿಪೋ ನಲ್ಲ...
28-08-25 02:41 pm
ಬಿಳಿಯಲ್ಲ ಮಾರಾಯರೇ ನೀಲಿ ಮೊಟ್ಟೆ ಇಟ್ಟ ನಾಟಿ ಕೋಳಿ ;...
28-08-25 11:56 am
Banumustak, DK Shivakumar, Chamundi Hill: ದೇವ...
27-08-25 06:21 pm
Congress, MP Yaduveer, DK Shivakumar: ಕಾಂಗ್ರೆ...
27-08-25 06:17 pm
28-08-25 12:19 pm
HK News Desk
ಕೈ ಗ್ಯಾರಂಟಿಗೆ ಬೊಕ್ಕಸ ಪೂರ ಖಾಲಿ - ಖಾಲಿ ; ತೆಲಂಗಾ...
26-08-25 09:02 pm
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
28-08-25 11:00 pm
Mangalore Correspondent
Mangalore Rain, School College Holiday: ಭಾರೀ...
28-08-25 10:07 pm
Soujanya Murder Case, Mother SIT: ಸೌಜನ್ಯಾ ಕೊಲ...
28-08-25 08:31 pm
Talapady Accident, Mangalore, Auto bus: ಕೇರಳ...
28-08-25 04:05 pm
Loudspeaker, Punjalkatte,Farangipete: ಪುಂಜಾಲ...
28-08-25 02:51 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm