ಬ್ರೇಕಿಂಗ್ ನ್ಯೂಸ್
11-05-25 11:02 pm HK News Desk ದೇಶ - ವಿದೇಶ
ನವದೆಹಲಿ, ಮೇ 11 : ಪಾಕಿಸ್ತಾನ ತನ್ನ ಮೇಲಾಗಿರುವ ದಾಳಿ, ಅದರಿಂದ ಆಗಿರುವ ನಷ್ಟದ ಬಗ್ಗೆ ಹೇಳಿಕೊಂಡಿಲ್ಲವಾದರೂ ಅಲ್ಲಿನ ಸೇನಾ ನೆಲೆ ಹಾಗೂ ಉಗ್ರರ ಶಿಬಿರಗಳ ಮೇಲೆ ದೊಡ್ಡ ಮಟ್ಟದ ದಾಳಿ ಮಾಡಿರುವ ಕುರಿತಾಗಿ ಭಾರತದ ಮೂರು ಸೇನಾ ಪಡೆಯ ಅಧಿಕಾರಿಗಳು ಫೋಟೋ ಸಹಿತ ಸಾಕ್ಷಿ ತೋರಿಸಿದ್ದಾರೆ. ಉಗ್ರರಿಗೆ ಆಶ್ರಯ ಕೊಟ್ಟಿರುವ ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ ಮೂಲಕ ತಕ್ಕ ಉತ್ತರ ಕೊಟ್ಟಿದ್ದೇವೆ ಎಂದು ಹೇಳಿದ್ದಾರೆ.
ಆಪರೇಷನ್ ಸಿಂಧೂರ ಕುರಿತು ಭಾರತದ ಮೂರು ಪಡೆಯ ಅಧಿಕಾರಿಗಳು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಡಿಜಿಎಂಒ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್, ಏರ್ ಮಾರ್ಷಲ್ ಎ.ಕೆ ಭಾರ್ತಿ ಮಾತನಾಡಿ, ಖಚಿತ ಮಾಹಿತಿ ಆಧರಿಸಿ ಉಗ್ರರ ಅಡುಗುತಾಣಗಳನ್ನು ಗುರಿಯಾಗಿಸಿ ಹೊಡೆದಿದ್ದೇವೆ. ಉಗ್ರರ ನೆಲೆಗಳನ್ನು ಧ್ವಂಸ ಮಾಡುವಲ್ಲಿ ಭಾರತ ಯಶಸ್ವಿಯಾಗಿದೆ. ನಮ್ಮ ದಾಳಿಯಿಂದ ಹೆದರಿ ಉಗ್ರರು ತಮ್ಮ ನೆಲೆಗಳಿಂದ ಕಾಲ್ಕಿತ್ತಿದ್ದಾರೆ ಎಂದು ಹೇಳಿದ್ದಾರೆ.
ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ನಮ್ಮ ಗುರಿ ಭಯೋತ್ಪಾದಕರ ತಾಣಗಳೇ ಹೊರತು ನಾಗರಿಕರು ಅಲ್ಲ. ಪಾಕಿಸ್ತಾನ ಹಲವು ಉಗ್ರರಿಗೆ ಆಶ್ರಯ ಕೊಟ್ಟಿದೆ. ಉಗ್ರರ ತರಬೇತಿ ಕೇಂದ್ರಗಳನ್ನು ಧ್ವಂಸ ಮಾಡಲಾಗಿದೆ. ಇದರ ಜೊತೆ ಪ್ರಮುಖ ಉಗ್ರ ಎಂದು ಗುರುತಿಸಲಾದ ಅಬ್ದುಲ್ ಮಲೀಕ್ನನ್ನು ಹೊಡೆ ಹಾಕಲಾಗಿದೆ. 100ಕ್ಕೂ ಹೆಚ್ಚು ಉಗ್ರರನ್ನು ಕೊಂದು ಹಾಕಲಾಗಿದೆ ಎಂದು ಹೇಳಿದ್ದಾರೆ.
ಪಾಕಿಸ್ತಾನದ ಬಾವಲ್ಪುರ, ಮುರಿದ್ಕೆ, ಮರ್ಕಜಾ ಪ್ರದೇಶಗಳಿಗೆ ದಾಳಿ ಮಾಡಿ ಉಗ್ರ ನೆಲೆಗಳನ್ನು ಧ್ವಂಸ ಮಾಡಲಾಗಿದೆ. ವಾಯು ಪ್ರದೇಶದಿಂದ ಕ್ಷಿಪಣಿ ಹಾರಿಸಿ ದಾಳಿ ಮಾಡಿದ್ದೇವೆ. ಪಿಒಕೆ, ಪಾಕಿಸ್ತಾನಕ್ಕೆ ನುಗ್ಗಿ 9 ಉಗ್ರರ ನೆಲೆಗಳನ್ನು ಇನ್ನಿಲ್ಲದಂತೆ ಫಿನಿಶ್ ಮಾಡಿದ್ದೇವೆ. ಆಫರೇಷನ್ ಸಿಂಧೂರ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.
ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿರುವ ಕುರಿತು ಫೋಟೋಗಳನ್ನು ಬಿಡುಗಡೆ ಮಾಡಿದ್ದು ದಾಳಿಗೆ ಮೊದಲು ಹಾಗೂ ನಂತರದ ಉಗ್ರರ ನೆಲೆಗಳು ಹೇಗೆ ನಾಶವಾದವು ಎಂಬುದನ್ನು ಫೋಟೋದಲ್ಲಿ ತೋರಿಸಲಾಗಿದೆ. ಪಾಕಿಸ್ತಾನ ಡ್ರೋಣ್, ಫೈಟರ್ ಜೆಟ್ ಮೂಲಕ ಭಾರತದ ಮೇಲೆ ದಾಳಿಗೆ ಯತ್ನಿಸಿದೆ. ಆದರೆ ನಮ್ಮ ಯಾವುದೇ ಸೇನಾ ನೆಲೆಗೂ ತೊಂದರೆ ಎದುರಾಗಿಲ್ಲ ಎಂದು ಹೇಳಿದ್ದಾರೆ.
The Indian Armed Forces on Sunday briefed the nation about the work put into Operation Sindoor that targeted terror infrastructure in PoJK and Pakistan's Punjab province on May 7.
28-08-25 06:23 pm
HK News Desk
Bidar Bus Driver Suicide: ಬೀದರ್ ಬಸ್ ಡಿಪೋ ನಲ್ಲ...
28-08-25 02:41 pm
ಬಿಳಿಯಲ್ಲ ಮಾರಾಯರೇ ನೀಲಿ ಮೊಟ್ಟೆ ಇಟ್ಟ ನಾಟಿ ಕೋಳಿ ;...
28-08-25 11:56 am
Banumustak, DK Shivakumar, Chamundi Hill: ದೇವ...
27-08-25 06:21 pm
Congress, MP Yaduveer, DK Shivakumar: ಕಾಂಗ್ರೆ...
27-08-25 06:17 pm
28-08-25 12:19 pm
HK News Desk
ಕೈ ಗ್ಯಾರಂಟಿಗೆ ಬೊಕ್ಕಸ ಪೂರ ಖಾಲಿ - ಖಾಲಿ ; ತೆಲಂಗಾ...
26-08-25 09:02 pm
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
28-08-25 11:00 pm
Mangalore Correspondent
Mangalore Rain, School College Holiday: ಭಾರೀ...
28-08-25 10:07 pm
Soujanya Murder Case, Mother SIT: ಸೌಜನ್ಯಾ ಕೊಲ...
28-08-25 08:31 pm
Talapady Accident, Mangalore, Auto bus: ಕೇರಳ...
28-08-25 04:05 pm
Loudspeaker, Punjalkatte,Farangipete: ಪುಂಜಾಲ...
28-08-25 02:51 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm