ಬ್ರೇಕಿಂಗ್ ನ್ಯೂಸ್
09-05-25 12:33 pm HK News Desk ದೇಶ - ವಿದೇಶ
ಜಮ್ಮು, ಮೇ 9 : ಗಡಿ ನಿಯಂತ್ರಣ ರೇಖೆ (LoC) ಮತ್ತು ಭಾರತ - ಪಾಕ್ ಅಂತಾರಾಷ್ಟ್ರೀಯ ಗಡಿಗಳಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡಿದ್ದು ಜನಸಾಮಾನ್ಯರು ತೀವ್ರ ಆತಂಕಗೊಂಡಿದ್ದಾರೆ. ಪಾಕಿಸ್ತಾನ ಕಡೆಯಿಂದ ಶೆಲ್ ದಾಳಿ, ಕ್ಷಿಪಣಿ ಉಡಾವಣೆ ಸತತವಾಗಿ ಆಗುತ್ತಿದ್ದರೆ, ಭಾರತೀಯ ಸೇನೆ ಅದನ್ನು ಸಶಕ್ತವಾಗಿ ತಡೆಯುವ ಪ್ರಯತ್ನ ಮಾಡುತ್ತಿದೆ. ನಿನ್ನೆ ರಾತ್ರಿ 50ಕ್ಕೂ ಹೆಚ್ಚು ಪಾಕಿಸ್ತಾನಿ ಡ್ರೋನ್ಗಳನ್ನು ಭಾರತದ ವಾಯು ರಕ್ಷಣಾ ಪಡೆ ಮೂಲಕ ಹೊಡೆದುರುಳಿಸಲಾಗಿದೆ.
ಜಮ್ಮು ಕಾಶ್ಮೀರದ ಉಧಮ್ಪುರ, ಸಾಂಬಾ, ಜಮ್ಮು, ಅಖ್ನೂರ್, ನಾಗ್ರೋಟಾ ಮತ್ತು ಪಠಾಣ್ಕೋಟ್ ಸೇರಿದಂತೆ ಸೇನಾ ನೆಲೆಗಳಿರುವ ಪ್ರದೇಶಗಳನ್ನು ಗುರಿಯಾಗಿಸಿ ಪಾಕ್ ಡ್ರೋನ್ಗಳನ್ನು ಉಡಾಯಿಸುತ್ತಿದ್ದು ಭಾರತದ ಏರ್ ಡಿಫೆನ್ಸ್ ಸಿಸ್ಟಮ್ ಅಷ್ಟೇ ಕರಾರುವಾಕ್ಕಾಗಿ ಹೊಡೆಯುವ ಕೆಲಸ ಮಾಡುತ್ತಿದೆ. ರಾತ್ರಿ ವೇಳೆ ಉಡಾಯಿಸಿದ 50ಕ್ಕೂ ಹೆಚ್ಚು ಡ್ರೋಣ್ ಬಾಂಬ್ ಗಳನ್ನು ಹೊಡೆದು ಹಾಕಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, "ನಿನ್ನೆ ರಾತ್ರಿ ಜಮ್ಮು ನಗರ ಮತ್ತು ಇತರ ಭಾಗಗಳ ಮೇಲೆ ಪಾಕಿಸ್ತಾನದ ಡ್ರೋನ್ ದಾಳಿ ವಿಫಲವಾದ ನಂತರ ಪರಿಸ್ಥಿತಿಯನ್ನು ಅವಲೋಕಿಸಲು ಜಮ್ಮುವಿಗೆ ತೆರಳುತ್ತಿದ್ದೇನೆ" ಎಂದು ಹೇಳಿದ್ದಾರೆ. ಇದೇ ವೇಳೆ, ಸಾಂಬಾ ಪ್ರದೇಶದಲ್ಲಿ ಗಡಿಯ ಮೂಲಕ ಉಗ್ರರು ಒಳ ನುಸುಳಲು ಯತ್ನಿಸಿದ್ದು ಏಳು ಉಗ್ರರನ್ನು ಬಿಎಸ್ಎಫ್ ಯೋಧರು ಹೊಡೆದು ಹಾಕಿದ್ದಾರೆ.
1971 ರ ನಂತರ ಇದೇ ಮೊದಲ ಬಾರಿಗೆ ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಘರ್ಷ ಉಂಟಾಗಿದೆ. ಪಾಕಿಸ್ತಾನದ 15 ನಗರಗಳನ್ನು ಗುರಿಯಾಗಿಸಿ ಭಾರತದ ವಾಯುಪಡೆ ಡ್ರೋಣ್ ದಾಳಿ ನಡೆಸಿದೆ. ಭಾರತದ ಗಡಿಯಲ್ಲೇ ಇರುವ ಪಾಕಿಸ್ತಾನ ಪಾಲಿಗೆ ಪ್ರಮುಖ ಎನಿಸಿದ್ದ ಸರ್ಗೋಧಾ ವಾಯುನೆಲೆಯನ್ನು ಧ್ವಂಸ ಮಾಡಲಾಗಿದೆ. ಅಲ್ಲದೆ, ಐಎನ್ಎಸ್ ವಿಕ್ರಮಾದಿತ್ಯ ವಾರ್ ಶಿಪ್ ನಿಂದ ಕರಾಚಿ ಬಂದರಿಗೂ ಬಾಂಬ್ ದಾಳಿ ನಡೆಸಲಾಗಿದೆ. 1965-71ರ ಯುದ್ಧದಲ್ಲಿ ಸರ್ಗೋಧಾ ವಾಯುನೆಲೆಯೇ ಪಾಕ್ ಪಾಲಿನ ಪ್ರಬಲ ಅಸ್ತ್ರವಾಗಿತ್ತು. ಈ ಎರಡು ದಾಳಿಯಿಂದ ಭಾರೀ ಪ್ರಮಾಣದ ಹಾನಿಯಾಗಿರುವ ಬಗ್ಗೆ ಮಾಹಿತಿ ಇದೆ. ಇದೇ ವೇಳೆ, ಪಂಜಾಬ್, ರಾಜಸ್ಥಾನ, ಜಮ್ಮು ಸೇರಿದಂತೆ ಪಾಕ್ ಗಡಿ ಜಿಲ್ಲೆಗಳಲ್ಲಿ ವಿದ್ಯುತ್ ಕಡಿತ ಮಾಡಲಾಗಿದೆ. ಈ ಭಾಗದಲ್ಲಿ ಶಾಲೆ, ಕಾಲೇಜಿಗೆ ಪೂರ್ತಿ ರಜೆ ನೀಡಲಾಗಿದೆ. ಜನರು ಸುರಕ್ಷತೆ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ.
30ಕ್ಕೂ ಹೆಚ್ಚು ವಿಮಾನ ನಿಲ್ದಾಣ ಸ್ಥಗಿತ
ಕೇಂದ್ರ ಸರ್ಕಾರವು ಪಂಜಾಬ್, ಜಮ್ಮು ಕಾಶ್ಮೀರ, ಉತ್ತರಾಖಂಡ, ಹರ್ಯಾಣ ಸೇರಿದಂತೆ ಈ ಭಾಗದಲ್ಲಿ 30ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿ ಆದೇಶ ಹೊರಡಿಸಿದೆ.
Indian armed forces in retaliation targeted air defence radars and systems in Pakistan, neutralising one in Lahore. The ministry of defence on Thursday said that Pakistan attempted to target several military sites across northern and western India on the night of May 7-8, using drones and missiles.
28-08-25 06:23 pm
HK News Desk
Bidar Bus Driver Suicide: ಬೀದರ್ ಬಸ್ ಡಿಪೋ ನಲ್ಲ...
28-08-25 02:41 pm
ಬಿಳಿಯಲ್ಲ ಮಾರಾಯರೇ ನೀಲಿ ಮೊಟ್ಟೆ ಇಟ್ಟ ನಾಟಿ ಕೋಳಿ ;...
28-08-25 11:56 am
Banumustak, DK Shivakumar, Chamundi Hill: ದೇವ...
27-08-25 06:21 pm
Congress, MP Yaduveer, DK Shivakumar: ಕಾಂಗ್ರೆ...
27-08-25 06:17 pm
29-08-25 01:47 pm
HK News Desk
ಮೋದಿ 75 ವರ್ಷಕ್ಕೆ ನಿವೃತ್ತರಾಗಬೇಕು ಎಂದು ಹೇಳಿಲ್ಲ...
29-08-25 12:50 pm
ಪ್ರತಿ ಭಾರತೀಯ ಕುಟುಂಬಗಳು ಮೂರಕ್ಕಿಂತ ಹೆಚ್ಚು ಮಕ್ಕಳ...
29-08-25 10:56 am
Kanhangad Suicide: ಕಾಞಂಗಾಡ್ ; ಬೆಳೆದು ನಿಂತ ಇಬ್...
28-08-25 12:19 pm
ಕೈ ಗ್ಯಾರಂಟಿಗೆ ಬೊಕ್ಕಸ ಪೂರ ಖಾಲಿ - ಖಾಲಿ ; ತೆಲಂಗಾ...
26-08-25 09:02 pm
28-08-25 11:00 pm
Mangalore Correspondent
Mangalore Rain, School College Holiday: ಭಾರೀ...
28-08-25 10:07 pm
Soujanya Murder Case, Mother SIT: ಸೌಜನ್ಯಾ ಕೊಲ...
28-08-25 08:31 pm
Talapady Accident, Mangalore, Auto bus: ಕೇರಳ...
28-08-25 04:05 pm
Loudspeaker, Punjalkatte,Farangipete: ಪುಂಜಾಲ...
28-08-25 02:51 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm