ಬ್ರೇಕಿಂಗ್ ನ್ಯೂಸ್
07-04-25 10:01 pm HK News Desk ದೇಶ - ವಿದೇಶ
ನವದೆಹಲಿ, ಎ.7 : ರಾಜ್ಯ ಸರ್ಕಾರದ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನತೆಗೆ ಈಗ ಕೇಂದ್ರ ಸರ್ಕಾರವೂ ಬೆಲೆ ಏರಿಕೆಯ ಬರೆ ಎಳೆದಿದೆ. ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಿದೆ. ಇದರ ಜೊತೆಗೆ, ಎಲ್ ಪಿಜಿ ಸಿಲಿಂಡರ್ ಮೇಲಿನ ದರವನ್ನೂ 50 ರೂ. ಹೆಚ್ಚಿಸಲಾಗಿದೆ.
ಎಲ್ಲಾ ರೀತಿಯ ಎಲ್ ಪಿಜಿ ಗ್ರಾಹಕರಿಗೆ ದರ ಏರಿಕೆ ಮಾಡಲಾಗಿದೆ. ಅಡುಗೆ ಅನಿಲ ಅಥವಾ ಎಲ್ಪಿಜಿ ಬೆಲೆಯನ್ನು ಸಿಲಿಂಡರ್ಗೆ 50 ರೂ. ಹೆಚ್ಚಿಸಲಾಗಿದೆ ಎಂದು ಕೇಂದ್ರ ತೈಲ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.
ಬೆಲೆ ಏರಿಕೆಯು ಸಬ್ಸಿಡಿ ಮತ್ತು ಸಾಮಾನ್ಯ ವರ್ಗದ ಗ್ರಾಹಕರಿಗೂ ಅನ್ವಯವಾಗಲಿದೆ. "ಉಜ್ವಲ ಯೋಜನೆ ಅಡಿಯಲ್ಲಿ 14.2 ಕೆಜಿ ಎಲ್ಪಿಜಿ ಬೆಲೆ 500 ರಿಂದ 550 ಕ್ಕೆ ಮತ್ತು ಉಜ್ವಲ ಯೋಜನೆಯ ಹೊರತಾದ ಬಳಕೆದಾರರಿಗೆ 803ರಿಂದ 853 ಕ್ಕೆ ಹೆಚ್ಚಾಗಲಿದೆ" ಎಂದು ಸಚಿವ ಪುರಿ ತಿಳಿಸಿದ್ದಾರೆ.
ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಿದೆ. ಆದಾಗ್ಯೂ, ಈ ಹೆಚ್ಚಳವನ್ನು ಗ್ರಾಹಕರಿಗೆ ವರ್ಗಾಯಿಸಲಾಗುವುದಿಲ್ಲ ಮತ್ತು ತೈಲ ಮಾರುಕಟ್ಟೆ ಕಂಪನಿಗಳು ಭರಿಸುತ್ತವೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್ಗೆ 2 ರೂ. ಹೆಚ್ಚಿಸಲಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಂಗಳವಾರದಿಂದಲೇ ಜಾರಿಗೆ ಬರಲಿದೆ. ಅಮೆರಿಕದ ಆಡಳಿತವು ವಿಧಿಸಿರುವ ಸುಂಕಗಳ ಪರಿಣಾಮ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ ಎನ್ನಲಾಗುತ್ತಿದೆ. ಏತನ್ಮಧ್ಯೆ, ಅಬಕಾರಿ ಸುಂಕ ಹೆಚ್ಚಳದ ಹೊರತಾಗಿಯೂ ಪೆಟ್ರೋಲ್ ಮತ್ತು ಡೀಸೆಲ್ ಚಿಲ್ಲರೆ ಬೆಲೆಗಳು ಬದಲಾಗುವ ಸಾಧ್ಯತೆಯಿಲ್ಲ ಎಂದು ಉದ್ಯಮ ಮೂಲಗಳು ತಿಳಿಸಿವೆ.
The government hiked excise duty on petrol and diesel by Rs 2 per litre, using the opportunity provided by the falling international oil prices to shore up its revenue. The duty hike will not push up pump prices but the government has allowed companies to raise cooking gas prices on which there was no tax increase.
28-02-26 11:49 am
HK News Desk
ರಾಜ್ಯದಲ್ಲಿ ಆಸ್ತಿ ಖರೀದಿದಾರರಿಗೆ ಮತ್ತೊಂದು ಶಾಕ್ !...
27-02-26 10:17 pm
ಧಾರವಾಡ ಪ್ರತಿಭಟನೆ ಎಫೆಕ್ಟ್ ; ರಾಜ್ಯದಲ್ಲಿ 60 ಸಾವಿ...
26-02-26 10:01 pm
ತಂದೆ ಆಟೋ ಚಾಲಕ, ತಾಯಿ ಹೂವಿನ ವ್ಯಾಪಾರಿ, ಮಗಳು ನ್ಯಾ...
26-02-26 12:58 pm
Moral Policing, Mangalore: ಮೋರಲ್ ಪೊಲೀಸ್ ; ರೈಲ...
26-02-26 10:26 am
01-03-26 09:52 am
HK News Staffer
ದುಬೈ, ಅಬುಧಾಬಿ ಮೇಲೆ ಇರಾನ್ ಮಿಸೈಲ್ ದಾಳಿ ; ಜಗತ್ತಿ...
28-02-26 10:54 pm
ಗಲ್ಫ್ ರಾಷ್ಟ್ರಗಳಿಗೆ ವಿಮಾನ ಸಂಚಾರ ವ್ಯತ್ಯಯ ; ಏರ್...
28-02-26 07:17 pm
ಇರಾನ್ ಮೇಲೆ ಮುಗಿಬಿದ್ದ ಅಮೆರಿಕ-ಇಸ್ರೇಲ್ ಪಡೆಗಳು ;...
28-02-26 05:28 pm
ತ್ರಿಷಾ ಬಿರುಗಾಳಿ ; ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ್...
28-02-26 01:08 pm
28-02-26 08:53 pm
HK News Desk
Mangaluru Muscat Flight: ಮಂಗಳೂರು- ಮಸ್ಕತ್ ನಡುವ...
27-02-26 08:59 pm
Mangalore Sujith Madur: ಕೌನ್ಸಿಲರ್ ಸುಜಿತ್ ಮಾಡೂ...
27-02-26 08:52 pm
Leopard Mangalore, MLA Vedavyas Kamath: ಕದ್ರಿ...
27-02-26 08:40 pm
Justice Veerappa, Udupi: ಉಪ ಲೋಕಾಯುಕ್ತ ನ್ಯಾ.ವೀ...
27-02-26 08:36 pm
28-02-26 11:12 am
Mangalore Staffer
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm