ಬ್ರೇಕಿಂಗ್ ನ್ಯೂಸ್
01-03-25 10:39 pm HK News Desk ದೇಶ - ವಿದೇಶ
ನವದೆಹಲಿ, ಮಾ.1: ಬಾಹ್ಯಾಕಾಶ ಕ್ಷೇತ್ರದಲ್ಲಿ ದೊಡ್ಡ ಮೈಲಿಗಲ್ಲು ಸ್ಥಾಪಿಸುವ ಕನಸು ಇಟ್ಟುಕೊಂಡಿರುವ ಮಹತ್ವಾಕಾಂಕ್ಷಿ ಉದ್ಯಮಿ ಎಲಾನ್ ಮಸ್ಕ್ 14ನೇ ಮಗುವಿಗೆ ಅಪ್ಪನಾಗಿದ್ದಾರೆ. ಮಸ್ಕ್ ಒಡೆತನದ ನ್ಯೂರಾಲಿಂಕ್ ಸಂಸ್ಥೆಯ ಕಾರ್ಯದರ್ಶಿ ಶಿವೊನ್ ಜಿಲಿಸ್ ಜೊತೆ ಈಗಾಗಲೇ ಮಸ್ಕ್ ಮೂರು ಮಕ್ಕಳನ್ನು ಹೊಂದಿದ್ದಾರೆ. ಈಗ ನಾಲ್ಕನೆಯದಾಗಿ ಗಂಡು ಮಗು ಜನಿಸಿದೆ.
ಎಲಾನ್ ಮಸ್ಕ್ ಜೊತೆ ನಾವು ನಮ್ಮ ಮನೆಗೆ ಬರುತ್ತಿರುವ ಮತ್ತೊಬ್ಬ ಮಗನ ಬಗ್ಗೆ ಚರ್ಚಿಸಿದ್ದು ಈ ವಿಚಾರವನ್ನು ನೇರವಾಗಿ ಹೇಳುವುದಾಗಿ ನಿರ್ಧರಿಸಿದೆವು ಎಂದು ಜಿಲಿಸ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಆಮೂಲಕ ಮಸ್ಕ್ ಜೋಡಿ ಅಧಿಕೃತವಾಗಿ 14ನೇ ಮಗುವಿನ ಜನನದ ಬಗ್ಗೆ ಹೇಳಿಕೊಂಡಿದ್ದಾರೆ. ಇವರಿಗೆ ಮತ್ತೊಂದು ಮಗುವಾಗಿರುವುದು ಎಲಾನ್ ಮಸ್ಕ್ ವೈಯಕ್ತಿಕ ಬದುಕಿನ ಮತ್ತೊಂದು ಅಧ್ಯಾಯವನ್ನು ತೆರೆದಿಟ್ಟಿದೆ. ಸಂತಾನಭಿವೃದ್ಧಿಯೆಂಬುವುದು ಸಾಮಾಜಿಕ ಕರ್ತವ್ಯ ಎಂಬ ಅವರ ನಂಬಿಕೆಯಂತೆ ಮಸ್ಕ್ ಕುಟುಂಬ ಈಗ ಬೆಳೆಯುತ್ತಲೇ ಇದೆ.
ಎಲಾನ್ ಮಸ್ಕ್ ಮತ್ತು ಜಿಲಿಸ್ ಮೊದಲ ಬಾರಿ 2021ರಲ್ಲಿ ಇನ್ ಫಿಟ್ರೋ ಫರ್ಟಿಲೈಜೇಷನ್ ಮೂಲಕ ಅವಳಿ ಮಕ್ಕಳನ್ನು ಪಡೆದಿದ್ದರು. ಅವರ ಹೆಸರು ಸ್ಟ್ರೈಡರ್ ಮತ್ತು ಅಜ್ಯುರ್ ಎಂದು. ನಂತರ ಮೂರನೇ ಮಗು ಆರ್ಕಾಡಿಯಾ 2024ರಲ್ಲಿ ಜನಿಸಿತ್ತು. ಮಗು ಜನಿಸಿದ ಒಂದು ತಿಂಗಳ ಬಳಿಕ ಮಸ್ಕ್ ಇದರ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿದ್ದರು.
ಜಿಲಿಸ್ ಅವರು ನ್ಯೂರಾಲಿಂಕ್ನ ಆರ್ಟಿಫಿಷಿಯಲ್ ಇಂಟಲಿಜೆನ್ಸ್ನ ಪ್ರಮುಖ ತಜ್ಞೆಯಾಗಿ ಗುರುತಿಸಿಕೊಂಡಿದ್ದಾರೆ. ಈಗಾಗಲೇ ಜಿಲಿಸ್ ಅವರು, ಎಲಾನ್ ಮಸ್ಕ್ ಜೊತೆ ಸೇರಿ ಮಕ್ಕಳನ್ನು ಏಕೆ ಮಾಡಿಕೊಳ್ಳಬೇಕು ಎಂಬುದನ್ನು ಹೇಳಿದ್ದಾರೆ. ಮಸ್ಕ್ ಮಕ್ಕಳನ್ನು ಹೊಂದಲು ಅತ್ಯಂತ ಸ್ಮಾರ್ಟ್ ಯುವತಿಯರನ್ನು ಹುಡುಕುತ್ತಾರಂತೆ. ಹೀಗಾಗಿ ಅವರೇ ನನ್ನಲ್ಲಿ ಧೈರ್ಯ ತುಂಬಿದರು. ವಿರ್ಯದಾನ ಮಾಡುವ ಅವರ ಆಯ್ಕೆಯನ್ನು ಇಡೀ ಜಗತ್ತೇ ಕೊಂಡಾಡುತ್ತದೆ. ಇದು ನನಗೆ ತುಂಬಾ ಸರಳವಾದ ನಿರ್ಧಾರ ಅಂತ ಅನಿಸುತ್ತದೆ ಎಂದಿದ್ದಾರೆ.
Billionaire entrepreneur Elon Musk has confirmed the birth of his 14th child with Shivon Zilis, an executive at his company Neuralink. The two also share twins, Strider and Azure, 3, and daughter Arcadia, 1. Mr Musk has reacted to a post shared by Shivon Zilis on X (formerly Twitter). It revealed the arrival of their son, Seldon Lycurgus.
06-05-25 11:23 pm
Bangalore Correspondent
Mysuru, Prison, Arrest, Siddaramaiah: ಬೆಳಗಾವಿ...
06-05-25 09:38 pm
ಓಬಳಾಪುರಂ ಅಕ್ರಮ ಮೈನಿಂಗ್ ಪ್ರಕರಣ ; ಮಾಜಿ ಸಚಿವ ಗಾಲ...
06-05-25 08:18 pm
Hubballi Accident, Sagara, Five Killed: ಹುಬ್ಬ...
06-05-25 01:35 pm
Hassan Suicide, Police Constable Harrasment:...
05-05-25 01:30 pm
07-05-25 12:20 pm
HK News Desk
India strikes terror camps in Pak; ಪಾಕಿಸ್ತಾನದ...
07-05-25 09:54 am
ವಿಶ್ವಸಂಸ್ಥೆಯಲ್ಲಿ ಬೆತ್ತಲಾದ ಪಾಕ್ ; ಚೀನಾ ಬಿಟ್ಟು...
06-05-25 02:45 pm
ಭಾರತ - ಪಾಕ್ ಯುದ್ಧ ಸನ್ನಿವೇಶ ; ದೇಶಾದ್ಯಂತ ಮೇ 7ರಂ...
05-05-25 11:10 pm
ಪಾಕ್ ವಾಯು ಪ್ರದೇಶದಲ್ಲಿ ಭಾರತದ ವಿಮಾನಗಳಿಗೆ ನಿರ್ಬಂ...
30-04-25 06:59 pm
06-05-25 06:36 pm
Mangalore Correspondent
Suhas Shetty Murder, Bommai, Dinesh Gundurao:...
06-05-25 06:17 pm
Mangalore, Kodikere Loki Arrest: ಕಮ್ಯುನಲ್ ಕೇಸ...
06-05-25 04:02 pm
Suhas Shetty Murder, Mangalore, Police: ಅಹಿತಕ...
06-05-25 12:32 pm
Mangalore Police, Sharan Pumpwell: ದಕ್ಷಿಣ ಕನ್...
05-05-25 10:59 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm