ಬ್ರೇಕಿಂಗ್ ನ್ಯೂಸ್
16-02-25 01:04 pm HK News Desk ದೇಶ - ವಿದೇಶ
ನವದೆಹಲಿ, ಫೆ 16: ಶನಿವಾರ ಸಂಜೆ ನವದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ ಸಂಭವಿಸಿದ್ದು, ಮೂವರು ಮಕ್ಕಳು ಸೇರಿದಂತೆ ಕನಿಷ್ಠ 18 ಜನರು ಪ್ರಾಣ ಕಳೆದುಕೊಂಡಿದ್ದಾರೆ. 15-20 ನಿಮಿಷಗಳ ಅವಧಿಯಲ್ಲಿ ನೂರಾರು ಪ್ರಯಾಣಿಕರು 13 ಮತ್ತು 14 ನೇ ಪ್ಲಾಟ್ಫಾರ್ಮ್ಗಳಲ್ಲಿ ಹಠಾತ್ ಜಮಾಯಿಸಿದ ನಂತರ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ.
ಮೃತಪಟ್ಟವರಲ್ಲಿ 10 ಮಹಿಳೆಯರು, ಮೂವರು ಮಕ್ಕಳು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ಬಗ್ಗೆ ರೈಲ್ವೇ ಇಲಾಖೆ ತನಿಖೆಗೆ ಆದೇಶಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, "ನವದೆಹಲಿ ರೈಲು ನಿಲ್ದಾಣದಲ್ಲಿ ನಡೆದ ಕಾಲ್ತುಳಿತದ ಬಗ್ಗೆ ನನಗೆ ದುಃಖವಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಎಲ್ಲರಿಗೂ ನನ್ನ ಸಂತಾಪಗಳು. ಗಾಯಗೊಂಡವರು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.







ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಲು ತೆರಳುವ ಪ್ರಯಾಣಿಕರು ಭಾರೀ ಪ್ರಮಾಣದಲ್ಲಿ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದರು. ಘಟನೆ ಬಗ್ಗೆ ರೈಲ್ವೆ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಕೆಪಿಎಸ್ ಮಲ್ಹೋತ್ರಾ, ಪ್ರಯಾಗ್ರಾಜ್ ಎಕ್ಸ್ಪ್ರೆಸ್ ಪ್ಲಾಟ್ಫಾರ್ಮ್ ಸಂಖ್ಯೆ 14 ರಲ್ಲಿ ನಿಂತಿದ್ದಾಗ ಅಪಾರ ಸಂಖ್ಯೆಯ ಜನರು ಸೇರಿದ್ದರು. ಅದೇ ಸಮಯದಲ್ಲಿ ಎರಡು ರೈಲುಗಳು - ಸ್ವತಂತ್ರ ಸೇನಾನಿ ಎಕ್ಸ್ಪ್ರೆಸ್ ಮತ್ತು ಭುವನೇಶ್ವರ ರಾಜಧಾನಿ ರೈಲು ವಿಳಂಬಗೊಂಡ ಕಾರಣ ಅವುಗಳ ಪ್ರಯಾಣಿಕರು ಸಹ ಪ್ಲಾಟ್ಫಾರ್ಮ್ ಸಂಖ್ಯೆ 12, 13 ಮತ್ತು 14 ರಲ್ಲಿ ಬಂದು ಸೇರಿದ್ದರು.
ಪ್ರಕರಣದ ತನಿಖೆಯನ್ನು ಆರಂಭಿಸಿರುವ ದೆಹಲಿ ಪೊಲೀಸರು, ಘಟನೆ ಸ್ಫೋಟಗೊಳ್ಳುವ ಮುನ್ನ ಏನಾಯಿತು ಎಂಬುವುದರ ಬಗ್ಗೆ ನಿರ್ಧರಿಸಲು ಸಿಸಿಟಿವಿ ದೃಶ್ಯಾವಳಿಗಳನ್ನು ವಿಶ್ಲೇಷಣೆ ಮಾಡಲಿದ್ದಾರೆ. ‘ಕಾಲ್ತುಳಿತ ಸಂಭವಿಸಲು ಕಾರಣವಾದ ಘಟನೆ ಏನೆಂಬುವುದನ್ನು ತಿಳಿದುಕೊಳ್ಳುವುದು ನಮ್ಮ ಮೊದಲ ಗುರಿಯಾಗಿದೆ. ಆ ಸಮಯದ ಸಿಸಿಟಿವಿ ದೃಶ್ಯಾವಳಿಗಳನ್ನು ಮತ್ತು ಧ್ವನಿ ಪ್ರಕಟಣೆಗಳನ್ನು ಸಂಗ್ರಹಿಸುತ್ತಿದ್ದೇವೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ಲಾರ್ಟ್ಫಾರ್ಮ್ ಬದಲಾವಣೆ ಬಗ್ಗೆ ತಪ್ಪಾಗಿ ಪ್ರಕಟಣೆ ಹೊರಡಿಸಿದ್ದರಿಂದ ಗೊಂದಲ ಉಂಟಾಗಿ ಕಾಲ್ತುಳಿತ ಸಂಭವಿಸಿರುವ ಸಾಧ್ಯತೆಯಿದೆ ಎಂದೂ ಮೂಲಗಳು ತಿಳಿಸಿವೆ.
At least 18 people were killed and more than a dozen injured in a stampede that broke out late Saturday (February 15, 2025) night at the New Delhi Railway Station, officials said. The stampede was preceded by a swell in crowd of passengers waiting to board trains for Prayagraj — where the Maha Kumbh is underway — on platform number 14 and 15 of the station.
01-03-26 04:51 pm
HK News Desk
ವರನ ಮೇಲೆ ಕೇಸು, ಮಂಟಪಕ್ಕೆ ಬಂದು ಕೊನೆ ಕ್ಷಣದಲ್ಲಿ ಮ...
28-02-26 11:49 am
ರಾಜ್ಯದಲ್ಲಿ ಆಸ್ತಿ ಖರೀದಿದಾರರಿಗೆ ಮತ್ತೊಂದು ಶಾಕ್ !...
27-02-26 10:17 pm
ಧಾರವಾಡ ಪ್ರತಿಭಟನೆ ಎಫೆಕ್ಟ್ ; ರಾಜ್ಯದಲ್ಲಿ 60 ಸಾವಿ...
26-02-26 10:01 pm
ತಂದೆ ಆಟೋ ಚಾಲಕ, ತಾಯಿ ಹೂವಿನ ವ್ಯಾಪಾರಿ, ಮಗಳು ನ್ಯಾ...
26-02-26 12:58 pm
01-03-26 09:52 am
HK News Staffer
ದುಬೈ, ಅಬುಧಾಬಿ ಮೇಲೆ ಇರಾನ್ ಮಿಸೈಲ್ ದಾಳಿ ; ಜಗತ್ತಿ...
28-02-26 10:54 pm
ಗಲ್ಫ್ ರಾಷ್ಟ್ರಗಳಿಗೆ ವಿಮಾನ ಸಂಚಾರ ವ್ಯತ್ಯಯ ; ಏರ್...
28-02-26 07:17 pm
ಇರಾನ್ ಮೇಲೆ ಮುಗಿಬಿದ್ದ ಅಮೆರಿಕ-ಇಸ್ರೇಲ್ ಪಡೆಗಳು ;...
28-02-26 05:28 pm
ತ್ರಿಷಾ ಬಿರುಗಾಳಿ ; ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ್...
28-02-26 01:08 pm
01-03-26 04:07 pm
HK News Desk
ಹುಲಿಕಲ್ ಘಾಟಿಯಲ್ಲಿ ದುರ್ಗಾಂಬಾ ಬಸ್ ಗೆ ಬೆಂಕಿ ; ಕು...
28-02-26 08:53 pm
Mangaluru Muscat Flight: ಮಂಗಳೂರು- ಮಸ್ಕತ್ ನಡುವ...
27-02-26 08:59 pm
Mangalore Sujith Madur: ಕೌನ್ಸಿಲರ್ ಸುಜಿತ್ ಮಾಡೂ...
27-02-26 08:52 pm
Leopard Mangalore, MLA Vedavyas Kamath: ಕದ್ರಿ...
27-02-26 08:40 pm
28-02-26 11:12 am
Mangalore Staffer
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm