ಬ್ರೇಕಿಂಗ್ ನ್ಯೂಸ್
07-02-25 05:27 pm HK News Desk ದೇಶ - ವಿದೇಶ
ಜೈಪುರ, ಫೆ.7: ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ತೆರಳುತ್ತಿದ್ದ ಕಾರು ಮತ್ತು ಜೋಧಪುರಕ್ಕೆ ಹೋಗುತ್ತಿದ್ದ ಬಸ್ ಡಿಕ್ಕಿ ಹೊಡೆದು ಕಾರಿನಲ್ಲಿದ್ದ 8 ಮಂದಿ ಮೃತಪಟ್ಟ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಜೈಪುರ-ಅಜ್ಮೀರ್ ಹೆದ್ದಾರಿಯ ದುಡು ಎಂಬಲ್ಲಿ ಅಪಘಾತ ನಡೆದಿದೆ.
ಕಾರು ಭಿಲ್ವಾರದಿಂದ ಉತ್ತರ ಪ್ರದೇಶಕ್ಕೆ ತೆರಳುತ್ತಿದ್ದರೆ, ಬಸ್ ಜೈಪುರದಿಂದ ಜೋಧಪುರಕ್ಕೆ ಹೋಗುತ್ತಿತ್ತು. ಬಸ್ನಲ್ಲಿ 30ರಿಂದ 40 ಪ್ರಯಾಣಿಕರಿದ್ದರು. ಗುರುವಾರ (ಫೆ.6) ಅಪರಾಹ್ನ 3.30ರ ವೇಳೆ ಈ ಅಪಘಾತ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ʼʼಗುರುವಾರ ಅಪರಾಹ್ನ 3.30ರ ವೇಳೆ ಅಪಘಾತ ನಡೆದಿದೆ. ಟೈರ್ ಸ್ಫೋಟಗೊಂಡ ಕಾರಣ ನಿಯಂತ್ರಣ ಕಳೆದುಕೊಂಡ ಬಸ್ ಚಾಲಕ ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದಾನೆʼʼ ಎಂದು ಜೈಪುರ ಗ್ರಾಮಾಂತರ ಎಸ್ಪಿ ಆನಂದ್ ಶರ್ಮಾ ಮಾಹಿತಿ ನೀಡಿದ್ದಾರೆ. ಮೃತರನ್ನು ಭಿಲ್ವಾರದ ಕೊಟ್ರಿ ಪ್ರದೇಶದ ನಿವಾಸಿಗಳಾದ ದಿನೇಶ್ ರೇಗರ್, ಸುರೇಶ್ ರೇಗರ್, ರವಿಕಾಂತ್ ರೇಗರ್, ಬಾಬು ರೇಗರ್, ಬಬ್ಲು ಮೇವಾರ, ಕಿಶನ್ ಲಾಲ್, ನಾರಾಯಣ ಬೈರ್ವಾ ಮತ್ತು ಪ್ರಮೋದ್ ಸುತಾರ್ ಎಂದು ಗುರುತಿಸಲಾಗಿದೆ.
ʼʼರೇಗರ್ ಕುಟುಂಬಸ್ಥರು ಮತ್ತು ಅವರ ಕೆಲವು ಸ್ನೇಹಿತರು ಮಹಾ ಕುಂಭಮೇಳದಲ್ಲಿ ಭಾಗವಹಿಸಲು ಉತ್ತರ ಪ್ರದೇಶದ ಪ್ರಯಾಗರಾಜ್ಗೆ ತೆರಳುತ್ತಿದ್ದಾಗ ಅವರ ಕಾರು ಅಪಘಾತಕ್ಕೀಡಾಗಿದೆ ಎಂದು ಶರ್ಮಾ ಹೇಳಿದ್ದಾರೆ. ಅಪಘಾತದ ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
A tragic road accident in Rajasthan’s Dudu claimed eight lives and left six others injured as a Roadways bus lost control due to a tyre burst and collided with a car which was coming from the other side, an official said on Thursday.
08-09-25 08:07 pm
HK News Desk
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
ತುಳು ರಾಜ್ಯ ಭಾಷೆ ಘೋಷಣೆ ಬಗ್ಗೆ ಸಂಪುಟದಲ್ಲಿ ಚರ್ಚೆ...
08-09-25 02:41 pm
Prajwal Revanna: ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರ...
07-09-25 07:43 pm
08-09-25 06:07 pm
HK News Desk
ಮಲ್ಲಿಗೆ ಮುಡಿದಿದ್ದ ನಟಿ ನವ್ಯಾ ನಾಯರ್ಗೆ ಒಂದು ಲಕ್...
08-09-25 02:02 pm
ಸಾವಿರಾರು ಕೋಟಿ ವಂಚಿಸಿದ ವಿಜಯ್ ಮಲ್ಯ, ನೀರವ್ ಮೋದಿ...
07-09-25 08:33 pm
UPI Transaction Limit: ಯುಪಿಐ ಪಾವತಿ ಮಿತಿ ಹೆಚ್ಚ...
06-09-25 10:34 am
ಗಣೇಶ ವಿಸರ್ಜನೆ ಸಡಗರ ಹಿನ್ನೆಲೆ ; ಮುಂಬೈ ಮಹಾನಗರದಲ್...
04-09-25 08:47 pm
08-09-25 12:08 pm
Udupi Correspondent
Mangalore, Bantwal Mosque Speaker: ಬಂಟ್ವಾಳದಲ್...
07-09-25 11:24 pm
ಬಂಗ್ಲೆಗುಡ್ಡೆ ಕಾಡಿಗೆ ಮತ್ತೆ ಭದ್ರತೆ ; ಸ್ಥಳ ಮಹಜರು...
07-09-25 10:59 pm
ಅಪ್ರಾಪ್ತ ಬಾಲಕನ ತ್ರಿಬಲ್ ರೈಡ್ ; ಸ್ಕೂಟರ್ ಕೊಟ್ಟ ಹ...
07-09-25 10:04 pm
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಗೆಹರಿಯದ ಕೆಂಪು ಕಲ್ಲು...
07-09-25 02:25 pm
07-09-25 03:34 pm
Mangalore Correspondent
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm
Udupi cyber fraud crime; ಷೇರು ಟ್ರೇಡಿಂಗ್ ಹೆಸರಿ...
06-09-25 01:58 pm