ಬ್ರೇಕಿಂಗ್ ನ್ಯೂಸ್
03-02-25 11:01 pm HK News Desk ದೇಶ - ವಿದೇಶ
ನವದೆಹಲಿ, ಫೆ.3: 2025-27ರ ಅವಧಿಯಲ್ಲಿ 50 ನಮೋ ಭಾರತ್ ರೈಲು, 100 ವಂದೇ ಭಾರತ್ ರೈಲುಗಳನ್ನು ಆರಂಭಿಸಲಾಗುವುದು. ಕರ್ನಾಟಕದಲ್ಲಿ ತುಮಕೂರು, ಯಶವಂತಪುರ ಮತ್ತು ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣ ಅಭಿವೃದ್ಧಿ ಸೇರಿದಂತೆ ಹಲವು ಯೋಜನೆಗಳನ್ನು ಕಾರ್ಯಗತ ಮಾಡಲಾಗುವುದು ಎಂದು ರೈಲ್ವೇ ಸಚಿವ ಅಶ್ವಿನ್ ವೈಷ್ಣವ್ ಹೇಳಿದ್ದಾರೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ಸೋಮವಾರ ಅಶ್ವಿನ್ ವೈಷ್ಣವ್ ರೈಲ್ವೇ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದರು. 2025-26ರ ಬಜೆಟ್ನಲ್ಲಿ ರೈಲ್ವೇ ಸಚಿವಾಲಯಕ್ಕೆ 2.65 ಲಕ್ಷ ಕೋಟಿ ರೂ. ಮೊತ್ತದ ಬಂಡವಾಳ ಹಂಚಿಕೆಯನ್ನು ನಿಗದಿಪಡಿಸಲಾಗಿದೆ. ಕರ್ನಾಟಕದಲ್ಲಿ ರೈಲ್ವೇ ವಾರ್ಷಿಕ ಬಜೆಟ್ ಹಂಚಿಕೆಯಲ್ಲಿ 7,564 ಕೋಟಿ ರೂ.ಗಳ ಹಂಚಿಕೆ ಮಾಡಲಾಗಿದೆ. 2024-25ರ ಹಣಕಾಸು ವರ್ಷದಲ್ಲಿ 7,559 ಕೋಟಿ ರೂ. ನಿಗದಿಪಡಿಸಲಾಗಿತ್ತು.
2014 ರಿಂದ ಕರ್ನಾಟಕದಲ್ಲಿ ಒಟ್ಟು 1,652 ಕಿಲೋಮೀಟರ್ ಹೊಸ ಹಳಿಗಳನ್ನು ನಿರ್ಮಿಸಲಾಗಿದ್ದು, ಇದು ಶ್ರೀಲಂಕಾದ ಸಂಪೂರ್ಣ ರೈಲ್ವೆ ಜಾಲಕ್ಕಿಂತ ಹೆಚ್ಚಾಗಿದೆ. ಪ್ರಸ್ತುತ, 31 ರೈಲ್ವೆ ಯೋಜನೆಗಳು ಪ್ರಗತಿಯಲ್ಲಿವೆ, 47,016 ಕೋಟಿ ರೂ.ಗಳ ಹೂಡಿಕೆಯಿಂದ 3,840 ಕಿಲೋಮೀಟರ್ ಹೊಸ ಹಳಿಗಳನ್ನು ಮಾಡಲಾಗುತ್ತಿದೆ. 1,981 ಕೋಟಿ ರೂ.ಗಳ ಹೂಡಿಕೆಯಿಂದ 61 ಅಮೃತ್ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ರಾಜ್ಯವು ಪ್ರಸ್ತುತ 10 ವಂದೇ ಭಾರತ್ ರೈಲುಗಳನ್ನು ನಿರ್ವಹಿಸುತ್ತಿದ್ದು, ಇದು ಕರ್ನಾಟಕದಾದ್ಯಂತ 12 ಜಿಲ್ಲೆಗಳು ಮತ್ತು 18 ನಿಲುಗಡೆಗಳನ್ನು ಒಳಗೊಂಡಿದೆ.
ತುಮಕೂರು ನಿಲ್ದಾಣವನ್ನು 88 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುವುದು. ಯಶವಂತಪುರ ಮತ್ತು ಬೆಂಗಳೂರು ಕಂಟೋನ್ಮೆಂಟ್ ಸೇರಿದಂತೆ ಇತರ ನಿಲ್ದಾಣಗಳನ್ನೂ ಅಭಿವೃದ್ಧಿ ಪಡಿಸಲಿದ್ದು, ಕ್ರಮವಾಗಿ 367 ಕೋಟಿ ಮತ್ತು 485 ಕೋಟಿ ರೂ. ವೆಚ್ಚ ನಿಗದಿ ಪಡಿಸಲಾಗಿದೆ. ದೇಶಾದ್ಯಂತ ಹೆಚ್ಚುವರಿಯಾಗಿ, 50 ಹೊಸ ನಮೋ ಭಾರತ್ ರೈಲುಗಳನ್ನು ಪರಿಚಯಿಸಲಾಗುವುದು, ಪ್ರತಿಯೊಂದೂ 16 ಬೋಗಿಗಳನ್ನು (ಎಸಿ ಮತ್ತು ನಾನ್ ಎಸಿ ಬೋಗಿಗಳು) ಒಳಗೊಂಡಿದೆ. ಇದಲ್ಲದೆ, 100 ಅಮೃತ್ ಭಾರತ್ ರೈಲುಗಳನ್ನು (ಎಸಿ ಅಲ್ಲದ) ಪ್ರಾರಂಭಿಸಲಾಗುವುದು, ಒಟ್ಟು 200 ವಂದೇ ಭಾರತ್ ರೈಲುಗಳನ್ನು ಸಹ ಪರಿಚಯಿಸಲಾಗುವುದು. ಇದು ಹೈಸ್ಪೀಡ್ ಪ್ರಯಾಣ ಜಾಲವನ್ನು ಮತ್ತಷ್ಟು ಹೆಚ್ಚಿಸಲಿದೆ.
ರೈಲ್ವೇ 17,500 ಎಸಿ ರಹಿತ ಸಾಮಾನ್ಯ ಬೋಗಿಗಳನ್ನು ತಯಾರಿಸಲು ಯೋಜಿಸಿದೆ. ಮುಂದಿನ ಐದು ವರ್ಷಗಳಲ್ಲಿ ಸಾಂಪ್ರದಾಯಿಕ ಐಸಿಎಫ್ ಬೋಗಿಗಳನ್ನು ಎಲ್ಎಚ್ಬಿ ಬೋಗಿಗಳೊಂದಿಗೆ ಬದಲಾಯಿಸಲಾಗುವುದು, ಇದು ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸುತ್ತದೆ. ಮೊದಲ ವಂದೇ ಸ್ಲೀಪರ್ ರೈಲು ಪ್ರಸ್ತುತ ಪರೀಕ್ಷೆಗೆ ಒಳಗಾಗುತ್ತಿದ್ದು ಶೀಘ್ರದಲ್ಲೇ ಜಾರಿಗೆ ಬರಲಿದೆ. 2025-27ರ ನಡುವೆ 50 ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ತಯಾರಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ.
The Union Budget for 2025-26, presented by Finance Minister Nirmala Sitharaman on Saturday, earmarked Rs 7,564 crore for railway projects in Karnataka, a slight increase from last year’s allocation of Rs 7,559 crore. The Budget continues to prioritise infrastructure in Karnataka, with a focus on improving connectivity in and around Bengaluru.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 12:00 am
HK News Desk
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
ರಾಷ್ಟ್ರಪತಿ ದ್ರೌಪದಿ ಮುರ್ಮು ಮೇ 18ರಂದು ಶಬರಿಮಲೆಗೆ...
08-05-25 12:47 pm
Masood Azhar: ಜೈಶ್ ಮೊಹಮ್ಮದ್ ಉಗ್ರರ ನೆಲೆ ಧ್ವಂಸ...
07-05-25 10:45 pm
08-05-25 10:54 pm
Mangalore Correspondent
Satish Kumapla, Mangalore, U T Khader: ಮೂಡಾ ಅ...
08-05-25 09:06 pm
Mangalore Rohan Corporation, Shah Rukh Khan:...
08-05-25 04:52 pm
Mangalore, Suhas Shetty, NIA, Sunil Kumar: ಸು...
08-05-25 04:14 pm
MLA Harish Poonja, High Court: ಮುಸ್ಲಿಮರ ಬಗ್ಗೆ...
07-05-25 10:30 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm