ಬ್ರೇಕಿಂಗ್ ನ್ಯೂಸ್
28-01-25 08:24 pm HK News Desk ದೇಶ - ವಿದೇಶ
ಮುಂಬೈ, ಜ.28: ಟೊರೇಸ್ ಜುವೆಲ್ಲರಿ ಹೆಸರಲ್ಲಿ ನಕಲಿ ಸ್ಕೀಂ ಯೋಜನೆ ಮಾಡಿ ನೂರಾರು ಕೋಟಿ ರೂಪಾಯಿ ವಂಚಿಸಿದ ಪ್ರಕರಣದಲ್ಲಿ ಹಗರಣದ ಮಾಸ್ಟರ್ ಮೈಂಡ್ ಎನ್ನಲಾದ ಮೊಹಮ್ಮದ್ ತೌಸಿಫ್ ರಿಯಾಝ್ ಅಲಿಯಾಸ್ ಜಾನ್ ಕಾರ್ಟರ್ ಎಂಬಾತನನ್ನು ಪೊಲೀಸರು ಥಾಣೆಯಲ್ಲಿ ಬಂಧಿಸಿದ್ದಾರೆ.
ಮುಂಬೈ, ಥಾಣೆಯಲ್ಲಿ ಸಾವಿರಾರು ಮಂದಿ ಟೊರೇಸ್ ಜುವೆಲ್ಲರಿ ಹೆಸರಲ್ಲಿ ನಕಲಿ ಸ್ಕೀಂ ಯೋಜನೆಯಡಿ ಹಣ ಕಂತಿನಲ್ಲಿ ಕಟ್ಟಿದ್ದು ಮೋಸ ಹೋಗಿದ್ದಾರೆ. ಇದಕ್ಕೂ ಮುನ್ನ ಮುಂಬೈ ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳು ಉಜ್ಬೆಕಿಸ್ತಾನ್ ಮೂಲದ, ಕಂಪನಿಯ ಜನರಲ್ ಮ್ಯಾನೇಜರ್ ಆಗಿದ್ದ ತನಿಯಾ ಕ್ಸಸಟೋವಾ, ಡೈರೆಕ್ಟರ್ ಸರ್ವೇಶ್ ಅಶೋಕ್ ಸುರ್ವೆ, ಸ್ಟೋರ್ ಇನ್ ಚಾರ್ಜ್ ವ್ಯಾಲಂಟೈನ್ ಗಣೇಶ್ ಕುಮಾರ್, ಹವಾಲಾ ಹಣದ ರೂವಾರಿ ಎನ್ನಲಾದ ಅಲ್ಪೇಶ್ ಖೇರಾ ಎಂಬವರನ್ನು ಬಂಧಿಸಿದ್ದರು. ರಿಯಾಜ್ ಐದನೇ ವ್ಯಕ್ತಿಯಾಗಿ ಬಂಧಿಸಲ್ಪಟ್ಟಿದ್ದಾನೆ.
ಪ್ರಕರಣದಲ್ಲಿ ಎಂಟು ಮಂದಿ ಉಕ್ರೇನ್ ಮೂಲದವರು ಮತ್ತು ಒಬ್ಬ ಟರ್ಕಿ ಮೂಲದ ಆರೋಪಿ ತಲೆಮರೆಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಮುಂಬೈ ಪೊಲೀಸರು ಇಂಟರ್ ಪೋಲ್ ಮೂಲಕ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಿದ್ದಾರೆ. ಹಗರಣದ ಹೊರಬರುವುದಕ್ಕೂ ಮೊದಲು ಉಕ್ರೇನ್ ಮೂಲದ ಆರೋಪಿಗಳು 200 ಕೋಟಿ ರೂಪಾಯಿ ಮೊತ್ತವನ್ನು ವಿದೇಶಕ್ಕೆ ರವಾನೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಆರೋಪಿಗಳ ನಡುವಿನ ಇಮೇಲ್ ಸಂದೇಶವೊಂದು ಸಿಕ್ಕಿದ್ದು, ಅದನ್ನು ಆಧರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇಮೇಲ್ ನಲ್ಲಿ ಕಳೆದ ಮೂರು ತಿಂಗಳ ಹಿಂದೆ 200 ಕೋಟಿ ಮೌಲ್ಯದ ಕ್ರಿಪ್ಟೋ ಕರೆನ್ಸಿ ಖರೀದಿಸಲಾಗಿದ್ದು, ಅದನ್ನು ವಿದೇಶಕ್ಕೆ ರವಾನಿಸಿದ್ದಾರೆ ಎನ್ನುವ ಮಾಹಿತಿಯಿದೆ.
ಟೊರೇಸ್ ಜುವೆಲ್ಲರಿಗೆ ಮುಂಬೈ ಮತ್ತು ಥಾಣೆಯಲ್ಲಿ ಆರು ಶಾಖೆಗಳಿದ್ದು, ವಾರಕ್ಕೆ ಇಂತಿಷ್ಟು ಬಡ್ಡಿಯೆಂದು ಹಣ ಸಂಗ್ರಹ ಮಾಡಲಾಗುತ್ತಿತ್ತು. ಒಮ್ಮೆ ಹತ್ತು ಸಾವಿರ ಕಟ್ಟಿದರೆ ವಾರಕ್ಕೆ 800 ರೂ.ನಂತೆ 52 ವಾರದ ವರೆಗೂ ಹಣ ಬರುತ್ತದೆ ಎಂದು ನಂಬಿಸಲಾಗಿತ್ತು. ನಕಲಿ ಸ್ಕೀಂ ನಂಬಿ ಸಾಮಾನ್ಯ ವ್ಯಾಪಾರಿಗಳು ಲಕ್ಷಾಂತರ ರೂಪಾಯಿ ಹಣವನ್ನು ಸುರಿದಿದ್ದರು. ವಿವಿಧ ಶಾಖೆಗಳಲ್ಲಿ ಸಂಗ್ರಹವಾಗುತ್ತಿದ್ದ ಹಣವನ್ನು ಅಲ್ಪೇಶ್ ಖೇರಾ ಸೇರಿದಂತೆ ಪ್ರಮುಖ ಸ್ಥಾನದಲ್ಲಿದ್ದವರು ಹವಾಲಾ ಜಾಲದ ಮೂಲಕ ಕ್ರಿಪ್ಟೋ ಕರೆನ್ಸಿಯಾಗಿ ಪರಿವರ್ತಿಸುತ್ತಿದ್ದರು. ಕ್ರಿಪ್ಟೋದಲ್ಲಿ ಹೂಡಿಕೆಯಾದ ಹಣಕ್ಕೆ ಭಾರತದ ಆರ್ಥಿಕತೆಯಲ್ಲಿ ನಿಯಂತ್ರಣ ಇಲ್ಲದಿರುವುದರಿಂದ ಅದನ್ನು ನೇರವಾಗಿ ವಿದೇಶದ ಯಾವುದೇ ಕರೆನ್ಸಿಗೂ ಪರಿವರ್ತಿಸಲು ಅವಕಾಶ ಇರುತ್ತದೆ.
ಡಿಸೆಂಬರ್ ಕೊನೆಯಲ್ಲಿ ನಕಲಿ ಸ್ಕೀಂ ಹಗರಣ ಬೆಳಕಿಗೆ ಬಂದಿದ್ದರೆ, ಅದೇ ಸಂದರ್ಭದಲ್ಲಿ ಹಲವಾರು ಇಮೇಲ್ ಸಂದೇಶಗಳು ಆರೋಪಿಗಳು ಮತ್ತು ವಿದೇಶಗಳಲ್ಲಿರುವ ವ್ಯಕ್ತಿಗಳ ಜೊತೆಗೆ ರವಾನೆಯಾಗಿವೆ. ಡಿ.30ರಿಂದ ಜ.3ರ ನಡುವೆ ರಿಯಾಜ್, ಕಂಪನಿಯ ಸಿಎ ಅಭಿಷೇಕ್ ಗುಪ್ತಾ ಮತ್ತು ಡೈರೆಕ್ಟರ್ ಸರ್ವೇಶ್ ಸುರ್ವೆ ಇಮೇಲ್ ನಲ್ಲಿ ಬರೆದುಕೊಂಡಿರುವುದು ಅಧಿಕಾರಿಗಳ ತನಿಖೆಯಲ್ಲಿ ಪತ್ತೆಯಾಗಿದೆ. ಇಮೇಲ್ ಮಾಹಿತಿ ಪ್ರಕಾರ, 60 ಸಾವಿರಕ್ಕೂ ಹೆಚ್ಚು ಜನರು ಟೊರೇಸ್ ಕಂಪನಿಯಲ್ಲಿ ಹೂಡಿಕೆ ಮಾಡಿದ್ದಾರೆ. ಈವರೆಗೆ ಮುಂಬೈ ಆರ್ಥಿಕ ಅಪರಾಧ ವಿಭಾಗಕ್ಕೆ ನಾಲ್ಕು ಸಾವಿರ ಮಂದಿ ದೂರು ನೀಡಿದ್ದು, ಪೊಲೀಸರು ಪ್ರಕರಣ ಸಂಬಂಧಿಸಿ ಹಲವಾರು ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಿದ್ದಾರೆ. ಆದರೆ ಪೊಲೀಸರಿಗೆ ಸಿಕ್ಕಿದ್ದು ಕೇವಲ 20 ಕೋಟಿಯಷ್ಟು ಮಾತ್ರ. ಹೀಗಾಗಿ ನಕಲಿ ಸ್ಕೀಂ ಯೋಜನೆಯ ನೂರಾರು ಕೋಟಿ ಹಣವನ್ನು ವಿದೇಶಕ್ಕೆ ರವಾನೆ ಮಾಡಿರುವುದರ ಸೂಚಕ ಎಂದು ಹೇಳಲಾಗುತ್ತಿದೆ.
ರಿಯಾಜ್ ಮೂಲತಃ ಬಿಹಾರದ ಪಾಟ್ನಾ ಮೂಲದವನು ಎಂದು ಹೇಳಲಾಗುತ್ತಿದ್ದರೂ, ಉಕ್ರೇನ್ ಪ್ರಜೆಯಾಗಿಯೂ ಗುರುತಿಸಿಕೊಂಡಿದ್ದಾನೆ. ಅಲ್ಲದೆ, ಟೊರೇಸ್ ಜುವೆಲ್ಲರಿ ಕಂಪನಿಯ ಮಾತೃಸಂಸ್ಥೆ ಪ್ಲಾಟಿನಂ ಹರ್ನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸಿಇಓ ಆಗಿದ್ದು ಟೋರೇಸ್ ಸಂಸ್ಥೆಯನ್ನೂ ನಡೆಸುತ್ತಿದ್ದ. ಟೋರೇಸ್ ಜುವೆಲ್ಲರಿ ನಕಲಿ ಸ್ಕೀಂ ಹೆಸರಲ್ಲಿ ಸಾವಿರ ಕೋಟಿಗೂ ಹೆಚ್ಚು ಮೊತ್ತವನ್ನು ಒಂದೆರಡು ವರ್ಷದಲ್ಲಿ ಸಂಗ್ರಹಿಸಲಾಗಿದೆ ಎನ್ನಲಾಗುತ್ತಿದ್ದು, ಸಾವಿರಾರು ಮಂದಿ ಹಣ ಕಳಕೊಂಡಿದ್ದಾರೆ.
Torres Jewellery scam, Ukrainian Actor Arrested In Mumbai Ponzi Scam. A Ukrainian actor has been arrested in a Ponzi scam which cheated hundreds in Mumbai by promising high returns on investments. Earlier this month, Torres Jewellery - which operated several stores across Mumbai - was shut after collecting crores from investors.
10-05-25 12:40 pm
Bangalore Correspondent
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm