ಬ್ರೇಕಿಂಗ್ ನ್ಯೂಸ್
16-12-20 10:56 am Headline Karnataka News Network ದೇಶ - ವಿದೇಶ
ನವದೆಹಲಿ, ಡಿ.16: ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಸರಕಾರದ ಮಾರ್ಗಸೂಚಿ ಉಲ್ಲಂಘಿಸಿ ತಬ್ಲಿಘಿ ಸಮಾವೇಶದಲ್ಲಿ ಪಾಲ್ಗೊಂಡು ಬಂಧಿತರಾಗಿದ್ದ 36 ಮಂದಿ ವಿದೇಶಿ ತಬ್ಲಿಘಿ ಸದಸ್ಯರನ್ನು ದೆಹಲಿ ಕೋರ್ಟ್ ಖುಲಾಸೆಗೊಳಿಸಿ ಬಿಡುಗಡೆ ಮಾಡಿದೆ.
14 ವಿವಿಧ ದೇಶಗಳ ತಬ್ಲಿಘಿ ಜಮಾತ್ ಸಂಘಟನೆಯ ಸದಸ್ಯರು ದೆಹಲಿಯಲ್ಲಿ ಕಳೆದ ಮಾರ್ಚ್ ತಿಂಗಳ ಕೊನೆಯಲ್ಲಿ ನಡೆದಿದ್ದ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ವಿದೇಶಿ ತಬ್ಲಿಘಿಗಳನ್ನು ಬಂಧಿಸಿದ್ದ ದೆಹಲಿ ಪೊಲೀಸರು ವಿವಿಧ ಪ್ರಕರಣಗಳನ್ನು ದಾಖಲಿಸಿದ್ದರು. ವೀಸಾ ಅವಧಿ ಮುಗಿದರೂ ದೇಶದಲ್ಲಿ ಉಳಿದುಕೊಂಡಿದ್ದು, ಕೊರೊನಾ ಸೋಂಕು ಹರಡಲು ಕಾರಣವಾಗುವಂತೆ ವರ್ತಿಸಿದ್ದು , ಕ್ವಾರಂಟೈನ್ ನಿಯಮವನ್ನು ಉಲ್ಲಂಘಿಸಿದ್ದು ಹೀಗೆ ವಿವಿಧ ಆರೋಪದಡಿ ಕೇಸು ದಾಖಲಿಸಲಾಗಿತ್ತು. ಕೋರ್ಟಿನಲ್ಲಿ ವಿಚಾರಣೆ ನಡೆಸಿದ ನ್ಯಾಯಾಧೀಶರು ಒಂಬತ್ತು ತಿಂಗಳ ಬಳಿಕ ಜೈಲಿನಿಂದ ಬಿಡುಗಡೆ ಮಾಡಿದ್ದಾರೆ.
36 ಮಂದಿ ಅಲ್ಲದೆ ಇತರೇ ಆರು ದೇಶಗಳಿಂದ ಬಂದಿದ್ದ ಎಂಟು ಮಂದಿಯನ್ನು ಕೂಡ ಕೋರ್ಟ್ ಬಿಡುಗಡೆ ಮಾಡಿದೆ. ಯಾವುದೇ ದಾಖಲೆ ಪತ್ರಗಳಿಲ್ಲದೇ ದೇಶದಲ್ಲಿ ಉಳಿದುಕೊಂಡ ಆರೋಪವನ್ನು ಅವರ ಮೇಲೆ ವಿಧಿಸಲಾಗಿತ್ತು. ಕೋರ್ಟ್ ಎಲ್ಲ ಆರೋಪಗಳಿಂದ ಮುಕ್ತಗೊಳಿಸಿ ಆದೇಶ ನೀಡಿದೆ.
ಮಾರ್ಚ್ ತಿಂಗಳಲ್ಲಿ ದೆಹಲಿಯ ನಿಜಾಮುದ್ದೀನ್ ಏರಿಯಾದಲ್ಲಿ ನಡೆದಿದ್ದ ತಬ್ಲಿಘಿ ಜಮಾತ್ ಸಮಾವೇಶದಲ್ಲಿ ವಿವಿಧ ದೇಶಗಳ ಪ್ರತಿನಿಧಿಗಳು ಸೇರಿ ಐದು ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.
Observing that the prosecution failed to “prove the presence of accused inside the Markaz premises” and noting “contradictions” in statements by its witnesses, a Delhi court Tuesday acquitted 36 foreigners facing trial for allegedly flouting Covid guidelines while participating in a Tablighi Jamaat event in Nizamuddin in March that was later linked to infections in 14 states.
07-09-25 10:17 am
Bangalore Correspondent
Mandya Suicide, Marriage: ಮದುವೆ ಕ್ಯಾನ್ಸಲ್ ಆಗಿ...
07-09-25 10:11 am
Sirsi Airgun, Murder, Crime: ಶಿರಸಿ; ಏರ್ಗನ್ ಗ...
06-09-25 08:28 pm
Prathap Simha, Mysuru Dasara: ದಸರಾ ಕುಸ್ತಿ ; ಬ...
06-09-25 07:26 pm
Sonia Gandhi, Dharmasthala: Who Killed the Wo...
05-09-25 11:15 pm
06-09-25 10:34 am
HK News Desk
ಗಣೇಶ ವಿಸರ್ಜನೆ ಸಡಗರ ಹಿನ್ನೆಲೆ ; ಮುಂಬೈ ಮಹಾನಗರದಲ್...
04-09-25 08:47 pm
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
07-09-25 02:25 pm
Mangalore Correspondent
Ullal, Mangalore Police: ಮೊದಲ ಪತ್ನಿಗೆ ಜೀವನಾಂಶ...
06-09-25 10:59 pm
Mangalore, Dharmasthala, Vittal Gowda, Skull:...
06-09-25 10:15 pm
ಗೋಮಾಂಸ ಭಕ್ಷಕರಿಗೆ ರಾಜ್ಯ ಸರ್ಕಾರ ಶಾದಿ ಭಾಗ್ಯ ರೀತಿ...
06-09-25 05:56 pm
Mla Vedavyas Kamath, Mangalore: ಮಳೆಗೆ ಹದಗೆಟ್ಟ...
06-09-25 04:46 pm
07-09-25 03:34 pm
Mangalore Correspondent
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm
Udupi cyber fraud crime; ಷೇರು ಟ್ರೇಡಿಂಗ್ ಹೆಸರಿ...
06-09-25 01:58 pm