ಬ್ರೇಕಿಂಗ್ ನ್ಯೂಸ್
08-01-25 10:53 pm HK News Desk ದೇಶ - ವಿದೇಶ
ನಾಗ್ಪುರ, ಜ 08: ಮದುವೆ ವಾರ್ಷಿಕೋತ್ಸವನ್ನುವುದು ದಂಪತಿಗಳ ನಡುವಿನ ಮಧುರ ಬಂಧಕ್ಕೆ ಸಾಕ್ಷಿ ! ಅದರಂತೆ ಮಹಾರಾಷ್ಟ್ರ ನಾಗ್ಪುರದಲ್ಲಿ ವಧು-ವರರಂತೆ ಶೃಂಗರಿಸಿಕೊಂಡು ಸ್ನೇಹಿತರೊಂದಿಗೆ ಮಧ್ಯರಾತ್ರಿವರೆಗೆ ತಮ್ಮ 26ನೇ ವಿವಾಹ ವಾರ್ಷಿಕೋತ್ಸವದ ಔತಣ ಕೂಟ ನಡೆಸಿದ ದಂಪತಿಗಳು, ನಂತರ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಮೃತ ದಂಪತಿಗಳನ್ನು ಜೆರಿಲ್ ಡ್ಯಾಮ್ಸನ್ ಆಸ್ಕರ್ (57) ಮತ್ತು ಆ್ಯನ್ (46) ಎಂದು ಗುರುತಿಸಲಾಗಿದ್ದು, ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ದಂಪತಿ ಕಳುಹಿಸಿದ ಮೊಬೈಲ್ ಸಂದೇಶದಿಂದ ಘಟನೆ ಬೆಳಕಿಗೆ ಬಂದಿದ್ದು, ಈ ದಂಪತಿಗಳು ತಮ್ಮ ಮದುವೆ ದಿನದಂದು ಧರಿಸಿದ್ದ ವಸ್ತ್ರವನ್ನೇ ಧರಿಸಿ ದಂಪತಿಗಳು ತಮ್ಮ 26ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ.
“ಜೆರಿಲ್ ತನ್ನ ಪತ್ನಿಗೆ ಮೊದಲು ಜೀವನವನ್ನು ಅಂತ್ಯಗೊಳಿಸಲು ಅವಕಾಶ ಮಾಡಿಕೊಟ್ಟಿರಬಹುದು ಎನ್ನಲಾಗಿದೆ. ಆಕೆಯ ದೇಹವನ್ನು ಹಗ್ಗದಿಂದ ಕಿತ್ತುಹಾಕಿದ ನಂತರ, ಜೆರಿಲ್ ಅವಳನ್ನು ಬಟ್ಟೆಯಿಂದ ಮುಚ್ಚಿ, ಅದರ ಮೇಲೆ ಹೂವುಗಳನ್ನು ಹಾಕಿ ನಂತರ ಅವನು ಸೀಲಿಂಗ್ಗೆ ಸ್ಕಾರ್ಫ್ನಿಂದ ನೇಣು ಹಾಕಿಕೊಂಡಿರಬಹುದು ಎಂದು ನಾಗ್ಪುರ ಪೊಲೀಸರು ತಮ್ಮ ವರದಿಯಲ್ಲಿ ಉಲ್ಲೇಖಿಸಲಾಗಿದೆ.
25 ವರ್ಷವಾದರೂ ಮಕ್ಕಳಿಲ್ಲ ;
ಮದುವೆಯಾಗಿ 25 ವರ್ಷ ಕಳೆದರೂ ದಂಪತಿಗೆ ಮಕ್ಕಳಾಗಿರಲಿಲ್ಲ. ಇದರಿಂದ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದ್ದು, ಇಬ್ಬರು ಮರಣಪತ್ರವನ್ನು ಬರೆದಿಟ್ಟಿದ್ದಾರೆ. ಆದರೆ ತಮ್ಮ ಪತ್ರದಲ್ಲಿ ಅವರು ತಮ್ಮ ಆತ್ಮಹತ್ಯಗೆ ಯಾರನ್ನು ಸಹ ಹೊಣೆ ಮಾಡಿಲ್ಲ. ಇನ್ನು ದಂಪತಿಯ ಕೊನೆಯ ಆಸೆಯಂತೆ, ಮಂಗಳವಾರ ಸಂಜೆ ಜರಿಪಟ್ಕಾ ಕ್ಯಾಥೋಲಿಕ್ ಸ್ಮಶಾನದಲ್ಲಿ ಅವರ ದಂಪತಿಗಳಿಗೆ ಒಟ್ಟಿಗೆ ಶವಪೆಟ್ಟಿಯನ್ನು ತಯಾರಿಸಿ ನಂತರ ಅದನ್ನು ಒಟ್ಟಿಗೆ ಸ್ಮಶಾನದಲ್ಲಿ ಜೋಡಿಸಲಾಗಿದೆ.
ಏತನ್ಮಧ್ಯೆ ದಂಪತಿಯು ಕಳೆದ ಎರಡು ತಿಂಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದರು. ಆದರೆ ಕೊನೆಗೆ ಸಂಬಂಧಿಕರೊಂದಿಗೆ ಕ್ರಿಸ್ಮಸ್ ಆಚರಣೆಯ ನಂತರ, ತಮ್ಮ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡು ತಮ್ಮ ಜೀವನವನ್ನು ಕೊನೆಗೊಳಿಸಲು ನಿರ್ಧರಿಸಿದರು. ಮೃತದೇಹಗಳನ್ನು ಅಂತ್ಯಕ್ರಿಯೆಗಾಗಿ ಸಂಬಂಧಿಕರಿಗೆ ಹಸ್ತಾಂತರಿಸುವ ಮೊದಲು ಮೇಯೊ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಘಟನೆಯಲ್ಲಿ ಯಾವುದೇ ದುಷ್ಕೃತ್ಯ ನಡೆದಿಲ್ಲ. ಹೀಗಾಗಿ ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಾಗಿದೆ. ಇನ್ನು ಜೆರಿಲ್ ಅವರು ಕೋವಿಡ್ 19 ಸಾಂಕ್ರಾಮಿಕ ರೋಗದ ಸಮಯದಲ್ಲಿ ದೊಡ್ಡ ಹೋಟೆಲ್ಗಳಲ್ಲಿ ಬಾಣಸಿಗರಾಗಿ ಸೇವೆ ಸಲ್ಲಿಸಿದ್ದರು, ಮತ್ತೊಂದೆಡೆ ಆನಿ ಅವರು ಗೃಹಿಣಿಯಾಗಿದ್ದರು ಎನ್ನಲಾಗಿದೆ.
ಕೈಯಲ್ಲಿ ಡೆತ್ನೋಟ್ ಹಿಡಿದು ಪ್ರಾಣ ಬಿಟ್ಟ KSDL ನೌಕರ!
ರಾಜ್ಯದಲ್ಲಿ ಅಧಿಕಾರಿಗಳ ಆತ್ಮಹತ್ಯೆ ಹೆಚ್ಚಾಗುತ್ತಿದ್ದು, ಈ ಬೆನ್ನಲ್ಲೇ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ (KSDL) ಅಧಿಕಾರಿ ಅಮೃತ್ ಶಿರಿಯೂರ್ ಎಂಬುವವರು ಕೈಯಲ್ಲಿ ಡೆತ್ನೋಟ್ ಹಿಡಿದುಕೊಂಡು ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ!
ಕೆಎಸ್ಡಿಎಲ್ ಮೆಟಿರಿಯಲ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಅಮೃತ್ ಸಿರಿಯೂರ್ ಅವರು, 28ನೇ ತಾರೀಖು ಸಂಜೆ 5.30ರ ಸುಮಾರಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2019ರಲ್ಲಿ ಎರಡನೇ ಮದುವೆಯಾಗಿದ್ದರು. ತುಂಬಾ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
A couple were found dead at their home in Maharashtra’s Nagpur city on Tuesday (January 7, 2025), Nagpur police said.“Jeryl alias Tony Oscar Moncript (56) and his wife Annie (45) were found dead in their home in the Martin Nagar locality in the morning,” a police official said. “It was the couple’s 28th wedding anniversary,” he said.
02-07-25 11:02 pm
Bangalore Correspondent
Vikas Kumar IPS, CAT: ವಿಕಾಸ್ ಕುಮಾರ್ ಅಮಾನತು ರದ...
02-07-25 10:47 pm
Bengaluru Rural Name: ಬೆಂಗಳೂರು ಗ್ರಾಮಾಂತರ ಜಿಲ್...
02-07-25 10:05 pm
CM Siddaramaiah: ಐದು ವರ್ಷ ನಾನೇ ಸಿಎಂ ಆಗಿರ್ತೀನಿ...
02-07-25 07:55 pm
Belagavi, ASP Narayan Bharamani, Dharwad: ಅಂದ...
02-07-25 02:21 pm
02-07-25 11:05 pm
HK News Desk
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
ಹೈದ್ರಾಬಾದಿನಲ್ಲಿ ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಫ್ಯ...
01-07-25 08:57 pm
ಸುಟ್ಟರೂ ಬುದ್ಧಿ ಕಲಿಯದ ಪಾಕಿಸ್ತಾನ ; ಆಪರೇಶನ್ ಸಿಂಧ...
29-06-25 11:13 am
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
02-07-25 08:05 pm
Mangalore Correspondent
Puttur Bjp, Krishna Rao, Pregnant: ಬಿಜೆಪಿ ಮುಖ...
02-07-25 11:39 am
ಹಾಸನದಲ್ಲಿ ಹೃದಯಾಘಾತ ಹೆಚ್ಚಳ ಬಗ್ಗೆ ವರದಿ ಕೇಳಿದ್ದೇ...
30-06-25 10:59 pm
Mangalore KDP Meeting: ಕೆಡಿಪಿ ಸಭೆಯಲ್ಲಿ ಮರಳು,...
30-06-25 08:19 pm
Mangalore, Rain, School News: ತರಗತಿ ನಡೆಯುತ್ತಿ...
30-06-25 03:20 pm
02-07-25 10:15 pm
Bangalore Correspondent
Massive Scam, Mangalore City Corporation, Fak...
02-07-25 12:24 pm
Mulki Abdul Latif Murder Case, Accused Arrest...
01-07-25 04:36 pm
Bangalore crime, TALAQ, Politicians: ರಾಜಕಾರಣಿ...
01-07-25 02:22 pm
Mysuru Murder, Police suspended: ಪತ್ನಿ ಕೊಲೆಗೈ...
01-07-25 01:55 pm