ಬ್ರೇಕಿಂಗ್ ನ್ಯೂಸ್
11-10-24 03:35 pm HK News Desk ದೇಶ - ವಿದೇಶ
ನವದೆಹಲಿ, ಅ.11: ಟಾಟಾ ಗ್ರೂಪ್ ಹೊಸ ಅಧ್ಯಕ್ಷರಾಗಿ ರತನ್ ಟಾಟಾ ಅವರ ಮಲ ಸಹೋದರ ನೋಯೆಲ್ ಟಾಟಾ ಅವರನ್ನು ನೇಮಕ ಮಾಡಲಾಗಿದೆ. ಶುಕ್ರವಾರ ನಡೆದ ಟಾಟಾ ಟ್ರಸ್ಟ್ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ನೋಯೆಲ್ ಟಾಟಾ ಅವರು ರತನ್ ಟಾಟಾ ಅವರ ಮಲ ಸಹೋದರ. ಟಾಟಾ ಟ್ರಸ್ಟ್ ತುರ್ತಾಗಿ ಎರಡು ಸಭೆಗಳನ್ನು ನಡೆಸಿದ್ದು, ಒಂದು ಸಭೆಯಲ್ಲಿ ರತನ್ ಟಾಟಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗಿದ್ದರೆ, ಮತ್ತೊಂದರಲ್ಲಿ ಟಾಟಾ ಟ್ರಸ್ಟ್ ಹೊಸ ಅಧ್ಯಕ್ಷರ ನೇಮಕಾತಿ ವಿಚಾರ ಚರ್ಚೆ ನಡೆದು ನೋಯೆಲ್ ಟಾಟಾ ಹೆಸರು ಅಂತಿಮಗೊಳಿಸಲಾಗಿದೆ.
ನೋಯೆಲ್ ಟಾಟಾ ಅವರು ರತನ್ ಟಾಟಾ ಅವರ ತಂದೆ ನವಾಲ್ ಟಾಟಾ ಅವರ ಎರಡನೇ ಪತ್ನಿ ಸಿಮೋನ್ ಟಾಟಾ ಅವರ ಪುತ್ರ. ಈಗಾಗಲೇ ನೋಯೆಲ್ ಟಾಟಾ ಅವರು ದೊರಾಬ್ಜಿ ಮತ್ತು ರತನ್ ಟಾಟಾ ಟ್ರಸ್ಟ್ಗಳಲ್ಲಿ ಟ್ರಸ್ಟಿ ಆಗಿದ್ದರು. ಈ ಎರಡು ಟ್ರಸ್ಟ್ಗಳು ಟಾಟಾ ಸನ್ಸ್ನಲ್ಲಿ 66% ಪಾಲನ್ನು ಹೊಂದಿವೆ.
ಟಾಟಾ ಟ್ರಸ್ಟ್ ಚೇರ್ಮನ್ ಪಟ್ಟಕ್ಕೆ ಹಲವರ ಹೆಸರು ಚಾಲ್ತಿಯಲ್ಲಿತ್ತು. ನೋಯೆಲ್ ಟಾಟಾ ಅವರ ಹೊರತಾಗಿ ಮೆಹಲಿ ಮಿಸ್ತ್ರಿ ಅವರ ಹೆಸರು ಮುಂಚೂಣಿಯಲ್ಲಿತ್ತು. ಮೆಹಲಿ ಮಿಸ್ತ್ರಿ ಅವರು ರತನ್ ಟಾಟಾ ಆಪ್ತರೆಂದು ನಂಬಲಾಗಿದೆ. 2000ನೇ ಇಸವಿಯಿಂದಲೂ ಎರಡೂ ಟಾಟಾ ಟ್ರಸ್ಟ್ಗಳಲ್ಲಿ ಮಿಸ್ತ್ರಿ ಸಕ್ರಿಯರಾಗಿದ್ದರು. 2022ರ ಅಕ್ಟೋಬರ್ನಲ್ಲಿ ಅವರನ್ನು ಟ್ರಸ್ಟಿ ಎಂದು ಸೇರ್ಪಡೆಗೊಳಿಸಲಾಗಿದೆ.
ನೋಯೆಲ್ ಟಾಟಾ ಅವರು ಕಳೆದ 40 ವರ್ಷಗಳಿಂದ ಟಾಟಾ ಸಮೂಹದ ಭಾಗವಾಗಿದ್ದಾರೆ. ಅವರು ಟ್ರೆಂಟ್ನಂತಹ ಅನೇಕ ದೊಡ್ಡ ಕಂಪನಿಗಳನ್ನು ಮುನ್ನಡೆಸಿದ್ದಾರೆ. ಪ್ರಸ್ತುತ, ಟಾಟಾ ಗ್ರೂಪ್ ಕಂಪನಿಗಳ ಮಂಡಳಿಯ ಸದಸ್ಯರಾಗಿದ್ದಾರೆ. ಪ್ರಸ್ತುತ ಟಾಟಾ ಸ್ಟೀಲ್ ಮತ್ತು ಟೈಟಾನ್ ಕಂಪನಿ ಲಿಮಿಟೆಡ್ನಲ್ಲಿ ಉಪಾಧ್ಯಕ್ಷ.
ನೋಯೆಲ್ ಟಾಟಾ ಅವರು ಆಗಸ್ಟ್ 2010 ರಿಂದ ನವೆಂಬರ್ 2021ರ ವರೆಗೆ ಟ್ರೆಂಟ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಅವರ ನಾಯಕತ್ವದಲ್ಲಿ, ಟ್ರೆಂಟ್ನ ವಹಿವಾಟು 500 ಮಿಲಿಯನ್ ಡಾಲರ್ನಿಂದ 3 ಬಿಲಿಯನ್ ಡಾಲರ್ಗೆ ಏರಿತ್ತು. ನೋಯೆಲ್ ಟಾಟಾ ಅವರು ಸಸೆಕ್ಸ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ.
Noel Tata, the half-brother of Ratan Tata, has been appointed Chairman of Tata Trust, following a board meeting held in Mumbai today. Noel succeeds Ratan Tata who died at the age of 86 in a Mumbai hospital on Wednesday.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
15-10-26 12:19 pm
HK News Staffer
Mangalore Agnes College Protest, ABVP: ಮಂಗಳೂರ...
14-10-26 10:45 pm
UT Khader, News, Mangalore: ನವರಾತ್ರಿ ನೆಪದಲ್ಲಿ...
14-10-26 08:40 pm
Kollur Temple News: ಕೊಲ್ಲೂರು ದೇವಸ್ಥಾನದ ಬಳಿ ಅವ...
14-10-26 04:36 pm
Raghupathi Bhat: 'ಕಾಂಗ್ರೆಸ್ನಿಂದ ಬುಲಾವ್, ಬಿಜೆ...
14-10-26 02:00 pm
14-10-26 09:09 pm
Mangaluru Staffer
Mangalore Valencia Church, Fr Cyprian Pinto:...
14-10-26 08:55 pm
ಒಡಿಶಾದಿಂದ ಕೇರಳಕ್ಕೆ ಡ್ರಗ್ಸ್ ಸಪ್ಲೈ ; ₹1.78 ಕೋಟಿ...
14-10-26 12:23 pm
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm
ಮುಂಬೈ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿ ಪುತ್ತೂರಿನ...
12-10-26 10:36 pm