ಬ್ರೇಕಿಂಗ್ ನ್ಯೂಸ್
08-08-20 07:37 am Headline Karnataka News Network ದೇಶ - ವಿದೇಶ
ಕ್ಯಾಲಿಕಟ್, ಆಗಸ್ಟ್ 8: ಇಲ್ಲಿಯ ಕರಿಪುರ್ ಏರ್ಪೋರ್ಟ್ನಲ್ಲಿ ಶುಕ್ರವಾರ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ರನ್ವೇಯಿಂದ ಜಾರಿಬಿದ್ದು ಭಾರೀ ದುರಂತ ಸಂಭವಿಸಿತ್ತು. ಮಳೆ ಅತಿಯಾಗಿ ಸುರಿಯುತ್ತಿದ್ದುರಿಂದ ಈ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆಯಾದರೂ ಇದಕ್ಕೆ ಅಸಲಿ ಕಾರಣ ಇನ್ನೂ ತಿಳಿದು ಬಂದಿಲ್ಲ. ಸದ್ಯ, ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆ ಆಗಿದೆ. ಈ ಬ್ಲ್ಯಾಕ್ ಬಾಕ್ಸ್ನಲ್ಲಿ ದುರಂತದ ಹಿಂದಿನ ನಿಜವಾದ ರಹಸ್ಯ ಇದೆ ಎನ್ನಲಾಗುತ್ತಿದೆ.
ಪ್ರತಿ ವಿಮಾನದಲ್ಲೂ ಬ್ಲ್ಯಾಕ್ ಬಾಕ್ಸ್ ಇರುತ್ತದೆ. ಈ ಬ್ಲ್ಯಾಕ್ ಬಾಕ್ಸ್ನಲ್ಲಿ ವಿಮಾನದ ವೇಗ, ವಿಮಾನದ ಸ್ಥಿತಿ-ಗತಿ, ಪೈಲಟ್ಗಳ ಸಂಭಾಷಣೆ ಕೂಡ ಇರಲಿದೆ. ಹೀಗಾಗಿ, ಏರ್ ಇಂಡಿಯಾ ವಿಮಾನ ದುರಂತಕ್ಕೆ ಒಳಗಾಗುವುದಕ್ಕೂ ಮೊದಲು ಏನಾಗಿತ್ತು ಎನ್ನುವುದು ಈ ಬ್ಲ್ಯಾಕ್ ಬಾಕ್ಸ್ನಲ್ಲಿ ರೆಕಾರ್ಡ್ ಆಗಿರುತ್ತದೆ.
ನಾಗರಿಕ ವಿಮಾನಯಾನ, ವಿಮಾನ ಅಪಘಾತ ತನಿಖಾ ವಿಭಾಗ, ಏರ್ ಇಂಡಿಯಾ ಹಾಗೂ ಏರ್ ಇಂಡಿಯಾ ಎಕ್ಸ್ಪ್ರೆಸ್ನ ಅಧಿಕಾರಿಗಳು ಈಗಾಗಲೇ ಕೋಯಿಕ್ಕೋಡ್ ತಲುಪಿದ್ದಾರೆ ಎಂದು ಏರ್ ಇಂಡಿಯಾ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಸಾವಿನ ಸಂಖ್ಯೆ ಹೆಚ್ಚಳ:
ಕೇರಳದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಇದು ಅಪಘಾತಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. X1344 ಬೋಯಿಂಗ್ 737 ವಿಮಾನ ದುಬೈನಿಂದ ಕೋಯಿಕ್ಕೋಡ್ಗೆ ಹೊರಟಿತ್ತು. ಸಂಜೆ 7:41ಕ್ಕೆ ವಿಮಾನ ಲ್ಯಾಂಡ್ ಆಗಿದ್ದು, ರನ್ವೇನಲ್ಲಿ ಅಪಘಾತಕ್ಕೆ ಈಡಾಗಿದೆ. ಈ ವೇಳೆ ಇಬ್ಬರು ಪೈಲಟ್ ಸೇರಿ 17 ಜನರು ಮೃತಪಟ್ಟಿದ್ದರು. ಈಗ ಸಾವಿನ ಸಂಖ್ಯೆ 19ಕ್ಕೆ ಏರಿಕೆ ಆಗಿದೆ.
13-01-26 10:13 pm
HK News Desk
ಇಲೆಕ್ಟ್ರಾನಿಕ್ ಸಿಟಿ ಪಕ್ಕದಲ್ಲೇ ಬಾಂಗ್ಲಾ ವಲಸಿಗರ ಅ...
13-01-26 03:04 pm
ಉಪನ್ಯಾಸಕರ ಟಾರ್ಚರ್ ಎಂದು ಡೆಂಟಲ್ ವಿದ್ಯಾರ್ಥಿನಿ ಆತ...
13-01-26 12:57 pm
Gadag Lakkundi, Gold: ಲಕ್ಕುಂಡಿ ನಿಧಿ ಪತ್ತೆ ಜಾಗ...
12-01-26 08:20 pm
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
13-01-26 06:39 pm
HK News Desk
ರಷ್ಯಾ ಬಳಿಕ ಇರಾನ್ ಮುಂದಿಟ್ಟು ಟ್ರಂಪ್ ಬೆದರಿಕೆ ; ಇ...
13-01-26 04:21 pm
ಮುಂಬೈಗೆ ಬಂದೇ ಬರುತ್ತೇನೆ, ತಾಕತ್ತಿದ್ದರೆ ತಡೆಯಿರಿ....
12-01-26 11:00 pm
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
13-01-26 10:30 pm
Mangalore Correspondent
Ayyappa Death, Mangalore: ಶಬರಿಮಲೆ ಹೊರಟಿದ್ದ ಅಯ...
12-01-26 08:03 pm
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
13-01-26 05:28 pm
HK News Desk
ಡಿಜಿಟಲ್ ಅರೆಸ್ಟ್ ನೆಪದಲ್ಲಿ ದೆಹಲಿಯ ವೃದ್ಧ ವೈದ್ಯ...
13-01-26 03:37 pm
ಡ್ರಗ್ಸ್ ನೆಟ್ವರ್ಕ್ ಭೇದಿಸಿದ ಮಂಗಳೂರು ಪೊಲೀಸರು ; ಬ...
12-01-26 06:28 pm
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm