ಬ್ರೇಕಿಂಗ್ ನ್ಯೂಸ್
07-12-20 08:59 pm Headline Karnataka News Network ದೇಶ - ವಿದೇಶ
ಪಣಜಿ, ಡಿ.7: ಹತ್ತು ದಿನಗಳ ಹಿಂದೆ ಪತನಗೊಂಡಿದ್ದ ಮಿಗ್ 29-ಕೆ ಜೆಟ್ ವಿಮಾನದ ಪೈಲಟ್ ಶವ ಗೋವಾ ಕರಾವಳಿಯಿಂದ 30 ಮೈಲ್ ದೂರದಲ್ಲಿ ಸಮುದ್ರದಾಳದಲ್ಲಿ ಪತ್ತೆಯಾಗಿದೆ.
ನಿರಂತರ ಕಾರ್ಯಾಚರಣೆಯ ಬಳಿಕ ಸಮುದ್ರ ಮಧ್ಯೆ 70 ಮೀಟರ್ ಆಳದಲ್ಲಿ ಪೈಲಟ್ ನಿಶಾಂತ್ ಸಿಂಗ್ ಶವ ಪತ್ತೆಯಾಗಿದೆ ಎಂದು ನೇವಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಷ್ಯಾ ಮೂಲದ ಮಿಗ್ -29 ಜೆಟ್ ವಿಮಾನ ಅರಬ್ಬೀ ಸಮುದ್ರದಲ್ಲಿ ಪ್ರಯೋಗಾರ್ಥ ಹಾರಾಟದ ವೇಳೆ ನ.26ರಂದು ಸಂಜೆ 5 ಗಂಟೆಗೆ ಪತನಗೊಂಡಿತ್ತು. ಐಎನ್ಎಸ್ ವಿಕ್ರಮಾದಿತ್ಯ ಹಡಗಿನಿಂದ ಮೇಲೇರಿದ್ದ ಜೆಟ್ ಪತನದಿಂದಾಗಿ ಕೂಡಲೇ ನೌಕಾಪಡೆಯ ಅಧಿಕಾರಿಗಳು ಹುಡುಕಾಟ ಆರಂಭಿಸಿದ್ದರು. ಒಬ್ಬ ಪೈಲಟ್ ಜೀವಂತ ಪತ್ತೆಯಾಗಿದ್ದರೆ, ಇನ್ನೊಬ್ಬ ಪೈಲಟ್ ಕಮಾಂಡರ್ ನಿಶಾಂತ್ ಸಿಂಗ್ ನಾಪತ್ತೆಯಾಗಿದ್ದರು. ನಿರಂತರ ಹುಡುಕಾಟದ ಹತ್ತು ದಿನಗಳ ಬಳಿಕ ನಿಶಾಂತ್ ಶವ ನೀರಿನ ಆಳದಲ್ಲಿ ಪತ್ತೆಯಾಗಿದ್ದು, ಗುರುತು ಸಿಗದ ಸ್ಥಿತಿಯಲ್ಲಿದೆ. ಹೀಗಾಗಿ ನಿಶಾಂತ್ ಸಿಂಗ್ ಕುಟುಂಬ ಡಿಎನ್ಎ ಪರೀಕ್ಷೆ ನಡೆಸಲು ಕೋರಿಕೊಂಡಿದೆ.
ಮಿಗ್ -29 ಜೆಟ್ ಎಲ್ಲ ಹವಾಮಾನಗಳಿಗೂ ಹೊಂದಿಕೊಳ್ಳುವ ಶಕ್ತಿಯಿರುವ ಫೈಟರ್ ವಿಮಾನ ಆಗಿದ್ದು ಹತ್ತು ವರ್ಷಗಳ ಹಿಂದೆ 42 ಮಿಗ್ ವಿಮಾನಗಳನ್ನು ರಷ್ಯಾದಿಂದ ತರಿಸಲಾಗಿತ್ತು. ಇವನ್ನು ನೌಕಾಪಡೆಯ ಐಎನ್ಎಸ್ ವಿಕ್ರಮಾದಿತ್ಯದ ಮೂಲಕ ಕಾರ್ಯಾಚರಣೆಗೆ ತೊಡಗಿಸಲಾಗಿದೆ. ಸದ್ಯ ಭಾರತ, ಅಮೆರಿಕ, ಜಪಾನ್, ಆಸ್ಟ್ರೇಲಿಯಾ ನಡುವಿನ ಜಂಟಿ ನೌಕಾ ಸಮರಾಭ್ಯಾಸದಲ್ಲಿ ವಿಕ್ರಮಾದಿತ್ಯ ಕಾರ್ಯಾಚರಣೆಯಲ್ಲಿದೆ.
Almost 12 days after the tragic crash of MiG-29K aircraft crash in the Arabian Sea, Indian Navy on Monday recovered the body of missing pilot Commander Nishant Singh on the seabed. The body was found 70 metres below water and 30 miles off the Goa coast.
14-10-26 02:02 pm
HK News Staffer
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
14-10-26 08:40 pm
HK News Desk
Kollur Temple News: ಕೊಲ್ಲೂರು ದೇವಸ್ಥಾನದ ಬಳಿ ಅವ...
14-10-26 04:36 pm
Raghupathi Bhat: 'ಕಾಂಗ್ರೆಸ್ನಿಂದ ಬುಲಾವ್, ಬಿಜೆ...
14-10-26 02:00 pm
ಪಾಂಡೇಶ್ವರ ಟ್ರಾಫಿಕ್ ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ...
13-10-26 11:10 pm
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
14-10-26 08:55 pm
Mangaluru Staffer
ಒಡಿಶಾದಿಂದ ಕೇರಳಕ್ಕೆ ಡ್ರಗ್ಸ್ ಸಪ್ಲೈ ; ₹1.78 ಕೋಟಿ...
14-10-26 12:23 pm
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm
ಮುಂಬೈ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿ ಪುತ್ತೂರಿನ...
12-10-26 10:36 pm
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm