ಬ್ರೇಕಿಂಗ್ ನ್ಯೂಸ್
20-05-24 11:35 am HK News Desk ದೇಶ - ವಿದೇಶ
ನವದೆಹಲಿ, ಮೇ.20: ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮತ್ತು ವಿದೇಶಾಂಗ ಇಲಾಖೆ ಮಂತ್ರಿ ಹುಸೇನ್ ಅಮೀರಬ್ದುಲ್ಲಾ ಅವರು ಹೆಲಿಕಾಪ್ಟರ್ ದುರಂತದಲ್ಲಿ ದುರಂತ ಸಾವಿಗೀಡಾಗಿದ್ದಾರೆ.
ಭಾನುವಾರ ಸಂಜೆ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅರಣ್ಯ ಭಾಗದಲ್ಲಿ ಪತನಗೊಂಡಿದ್ದ ಬಗ್ಗೆ ಇರಾನ್ ದೇಶದ ಅಧಿಕಾರಿಗಳು ಮಾಹಿತಿ ನೀಡಿದ್ದರು. ಆದರೆ, ಯಾರು ಬದುಕಿದ್ದಾರೆ, ಅಧ್ಯಕ್ಷ ಇಬ್ರಾಹಿಂ ರೈಸಿ ಸ್ಥಿತಿ ಹೇಗಿದೆ ಎಂದು ಮಾಹಿತಿ ಇರಲಿಲ್ಲ. ರಾತ್ರಿಯಾಗಿದ್ದರಿಂದ ಕಾರ್ಯಾಚರಣೆ ಮತ್ತು ಆ ಜಾಗಕ್ಕೆ ತಲುಪುವುದು ಸಾಧ್ಯವಾಗಿರಲಿಲ್ಲ. ಸೋಮವಾರ ಬೆಳಗ್ಗೆ ಹೆಲಿಕಾಪ್ಟರಿನಲ್ಲಿದ್ದ ಎಲ್ಲರೂ ಸಾವಿಗೀಡಾಗಿದ್ದಾರೆ. ಹೆಲಿಕಾಪ್ಟರ್ ಪೂರ್ತಿ ಸುಟ್ಟು ಹೋಗಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ದುರಂತಕ್ಕೂ ಮುನ್ನ ಇಬ್ರಾಹಿಂ ರೈಸಿ ಅವರು ಹೆಲಿಕಾಪ್ಟರಿನಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ಫೋಟೋ ವೈರಲ್ ಆಗಿದೆ. ಪರ್ವತ ಪ್ರದೇಶದಲ್ಲಿ ಹೆಲಿಕಾಪ್ಟರ್ ಪ್ರಯಾಣಿಸುತ್ತಿದ್ದಾಗಿನ ಫೋಟೋ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ. ಪಶ್ಚಿಮ ಅಜರ್ ಬೈಜಾನ್ ಪ್ರದೇಶದ ಜೋಲ್ಫಾ ಪ್ರಾಂತದಲ್ಲಿ ಹೆಲಿಕಾಪ್ಟರ್ ಪ್ರಯಾಣಿಸುತ್ತಿದ್ದಾಗಿನ ಚಿತ್ರ ಎಂದು ಹೇಳಲಾಗುತ್ತಿದೆ. ಅಮೆರಿಕದಿಂದ ಖರೀದಿಸಿದ್ದ ಹತ್ತು ವರ್ಷ ಹಳೆಯ ಮಾದರಿಯ ಬೆಲ್ 212 ಹೆಲಿಕಾಪ್ಟರ್ ಇದಾಗಿದ್ದು, ಅಸುರಕ್ಷತೆಯಿಂದ ಕೂಡಿತ್ತು ಎಂದು ಬಿಬಿಸಿ ವರದಿ ಮಾಡಿದೆ.
ಹೆಲಿಕಾಪ್ಟರ್ ನಲ್ಲಿ ಇಬ್ರಾಹಿಂ ರೈಸಿ ಸೇರಿದಂತೆ 9 ಮಂದಿ ಇದ್ದರು. ಮೂವರು ಇರಾನ್ ದೇಶದ ಅಧಿಕಾರಿಗಳು ಹಾಗೂ ಒಬ್ಬರು ಇಮಾಮ್ ಇದ್ದರು ಎನ್ನುವ ಮಾಹಿತಿ ಇದೆ. ಘಟನೆ ನಡೆದಿರುವ ಪಶ್ಚಿಮ ಅಜರ್ ಬೈಜಾನ್ ಪ್ರದೇಶದಲ್ಲಿ ಮಂಜು ಮುಸುಕಿದ ಮತ್ತು ಶೀತ ವಾತಾವರಣ ಇದೆ. ಹೀಗಾಗಿ ದುರಂತ ನಡೆದಿರುವ ಜಾಗಕ್ಕೆ ರಕ್ಷಣಾ ತಂಡ ತೆರಳಲು ಸಾಧ್ಯವಾಗಿಲ್ಲ. ರಕ್ಷಣಾ ಕಾರ್ಯಾಚರಣೆಗೆ ಟರ್ಕಿಯ ಡ್ರೋಣ್ ಮತ್ತು ರಷ್ಯಾ ಸ್ಪೆಷಲ್ ಹೆಲಿಕಾಪ್ಟರ್ ಕಳಿಸಿಕೊಟ್ಟಿದೆ. ಅಲ್ಲದೆ, 50 ಮಂದಿ ವಿಶೇಷ ಪರಿಣತಿಯ ಯೋಧರನ್ನು ಕಳಿಸಲು ರಷ್ಯಾ ಏರ್ಪಾಡು ಮಾಡಿದೆ. ಇನ್ನೆರಡು ಹೆಲಿಕಾಪ್ಟರ್ ಕಳಿಸಿಕೊಡಲಾಗುವುದು. ರಕ್ಷಣಾ ಕಾರ್ಯಾಚರಣೆಗೆ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಹೇಳಿದ್ದಾರೆ.
ಇತ್ತೀಚೆಗೆ ಇಸ್ರೇಲ್ ಮೇಲೆ ಪರಮಾಣು ದಾಳಿಗೂ ನಾವು ತಯಾರಿ ನಡೆಸಿದ್ದೇವೆ ಎಂದು ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಹೇಳಿದ್ದರು. ಇಸ್ರೇಲ್ ಮೇಲೆ ಆಗಿಂದಾಗ್ಗೆ ದಾಳಿ ಘಟನೆಗಳು ನಡೆಯುತ್ತಿರುವಾಗಲೇ ಇರಾನ್ ಅಧ್ಯಕ್ಷ ದುರಂತ ಸಾವಿಗೀಡಾಗಿದ್ದಾರೆ.
Iran President Ebrahim Raisi helicopter crash: Iranian state media confirmed Ebrahim Raisi died in the chopper crash. He along with Iranian Foreign Minister Hossein Amirabdollhian and other senior officials have all died in the incident that happened on Sunday.
15-05-25 10:16 pm
HK News Desk
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
15-05-25 08:04 pm
Mangalore Correspondent
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm