ಬ್ರೇಕಿಂಗ್ ನ್ಯೂಸ್
17-05-24 09:56 pm HK News Desk ದೇಶ - ವಿದೇಶ
ನವದೆಹಲಿ, ಮೇ 17: ಪಾಕಿಸ್ಥಾನದ ಸಂಸದನೊಬ್ಬ ಭಾರತ ಚಂದ್ರನಲ್ಲಿಗೆ ಹೋಗಿರುವುದು ಸುದ್ದಿಯಾಗುತ್ತಿದ್ದರೆ, ಕರಾಚಿಯಲ್ಲಿ ಮಗು ಚರಂಡಿಗೆ ಬಿದ್ದು ಸತ್ತಿರುವುದು ಸುದ್ದಿಯಾಗುತ್ತದೆ ಎಂದು ಅಲ್ಲಿನ ದಯನೀಯ ಸ್ಥಿತಿಯನ್ನು ಹೇಳಿದ್ದ ವಿಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಪಾಕಿಸ್ಥಾನ ಮೂಲದ ಅಮೆರಿಕನ್ ಉದ್ಯಮಿ ಸಾಜಿದ್ ತಾರ ಎಂಬವರು ಭಾರತದ ಪ್ರಧಾನಿ ನರೇಂದ್ರ ಮೋದಿಯನ್ನು ಶ್ಲಾಘಿಸಿದ್ದಾರೆ.
ಮೋದಿ ಬಲಿಷ್ಠ ನಾಯಕ. ಅವರ ನೇತೃತ್ವದಲ್ಲಿ ಭಾರತ ಹೊಸ ಎತ್ತರಕ್ಕೆ ಹೋಗಿದೆ. ಮೂರನೇ ಬಾರಿಯೂ ಅವರೇ ಮತ್ತೆ ಪ್ರಧಾನಿಯಾಗಲಿದ್ದಾರೆ. ಅಂತಹದ್ದೇ ನಾಯಕ ಪಾಕಿಸ್ತಾನಕ್ಕೂ ಸಿಗಲಿ ಎಂದು ಸಾಜಿದ್ ತಾರಾ ಹಾರೈಸಿದ್ದಾರೆ. ಪಾಕಿಸ್ತಾನದ ಬಾಲ್ಟಿಮೋರ್ ಮೂಲದ ಸಾಜಿದ್, ನರೇಂದ್ರ ಮೋದಿ ಕೇವಲ ಭಾರತಕ್ಕೆ ಮಾತ್ರ ನಾಯಕನಲ್ಲ. ಈ ಭಾಗ, ಇಡೀ ಜಗತ್ತಿಗೆ ಆಕರ್ಷಣೆ ಹುಟ್ಟಿಸಿದವರು. ಅದೇ ಮಾದರಿಯ ವ್ಯಕ್ತಿತ್ವ ಪಾಕಿಸ್ತಾನದಲ್ಲೂ ಬರಬೇಕು ಎಂದಿದ್ದಾರೆ.
ಮೋದಿ ಹುಟ್ಟಿನಿಂದಲೇ ನಾಯಕತ್ವ ಗುಣ ಹೊಂದಿದವರು. ಅಪಾಯಕಾರಿ ಸನ್ನಿವೇಶ ಇದ್ದಾಗಲೂ ಪಾಕಿಸ್ತಾನಕ್ಕೆ ಭೇಟಿ ಕೊಟ್ಟ ಒಬ್ಬರೇ ಪ್ರಧಾನಿ ಮೋದಿ. ತನ್ನ ರಾಜಕೀಯ ಹಾದಿಗೆ ಅಪಾಯ ಇದ್ದರೂ ಪಾಕಿಸ್ತಾನಕ್ಕೆ ಬಂದು ಹೋಗಿದ್ದಾರೆ. ಮೋದಿ ಪಾಕ್ ಜೊತೆಗೆ ಮಾತುಕತೆ ಮಾಡಬೇಕು. ಪಾಕಿಸ್ತಾನದ ಜೊತೆಗೆ ವ್ಯಾಪಾರ ವಹಿವಾಟಿನಲ್ಲಿ ತೊಡಗಬೇಕು. ಶಾಂತಿಯುತ ಪಾಕಿಸ್ತಾನ ಭಾರತದ ಒಳಿತಿಗೂ ಅಗತ್ಯ. ಎಲ್ಲ ಕಡೆಯೂ ಮೋದಿ ಮತ್ತೆ ಪ್ರಧಾನಿಯಾಗುತ್ತಾರೆಂದು ಬರೆದುಕೊಂಡಿರುವುದನ್ನು ನೋಡಿದ್ದೇನೆ ಎಂದು ಸಾಜಿದ್ ಹೇಳಿದ್ದಾರೆ.
ಪಾಕಿಸ್ತಾನದ ಆರ್ಥಿಕತೆ ಕುಸಿದು ಹೋಗಿದೆ
ಸಾಜಿದ್ 1990ರ ವೇಳೆಗೆ ಅಮೆರಿಕಕ್ಕೆ ಹೋಗಿದ್ದು, ಅಲ್ಲಿಯೇ ಉದ್ಯಮ ನಡೆಸುತ್ತಿದ್ದಾರೆ. ಆದರೆ ತಾಯ್ನಾಡು ಪಾಕಿಸ್ತಾನದ ಜೊತೆಗೂ ಸಂಬಂಧ ಇರಿಸಿಕೊಂಡಿದ್ದಾರೆ. ಪಿಓಕೆಯಲ್ಲಿ ಜನರು ಪ್ರತಿಭಟನೆ ನಡೆಸುತ್ತಿರುವ ವಿಚಾರದಲ್ಲಿ ಕೇಳಿದ ಪ್ರಶ್ನೆಗೆ, ಇಡೀ ಪಾಕಿಸ್ತಾನದಲ್ಲಿ ಆರ್ಥಿಕತೆ ಕುಸಿದು ಹೋಗಿದೆ. ಹಣದುಬ್ಬರ ಮಿತಿಮೀರಿದೆ, ಪೆಟ್ರೋಲ್ ರೇಟ್ ಏರಿದೆ. ಐಎಂಎಫ್ ಪಾಕಿಸ್ತಾನಕ್ಕೆ ಟ್ಯಾಕ್ಸ್ ರೇಟ್ ಹೆಚ್ಚು ಮಾಡಲು ಮುಂದಾಗಿದೆ. ಇಲೆಕ್ಟ್ರಿಕ್ ಬಿಲ್ ಹೆಚ್ಚಿದ್ದು, ನಾವು ಯಾವುದನ್ನೂ ರಫ್ತು ಮಾಡುವ ಸ್ಥಿತಿಯಲ್ಲಿ ಇಲ್ಲ. ಪಿಓಕೆಯಲ್ಲಿ ಪ್ರತಿಭಟನೆ ಆಗುತ್ತಿರುವುದಕ್ಕೆ ವಿದ್ಯುತ್ ಬಿಲ್ ಹೆಚ್ಚಿರುವುದೇ ಕಾರಣ ಎಂದಿದ್ದಾರೆ.
ಮುಂಚೂಣಿ ಕಂಪನಿಗಳಿಗೆ ಭಾರತೀಯರೇ ಸಿಇಓ
ಇತ್ತೀಚೆಗೆ ಮುತ್ತಹಿದಾ ಖ್ವಾಮಿ ಮೂವ್ ಮೆಂಟ್ ಪಾಕಿಸ್ತಾನ್ ಪಕ್ಷದ ನಾಯಕ ಸೈಯದ್ ಮುಸ್ತಫಾ ಕಮಲ್ ಸಂಸತ್ತಿನಲ್ಲಿ ಮಾಡಿರುವ ವಿಡಿಯೋ ತುಣುಕುಗಳು ವೈರಲ್ ಆಗಿದ್ದವು. ಅದರಲ್ಲಿ ಭಾರತದ ಪ್ರಗತಿಯನ್ನು ಹೋಲಿಸಿ, ಪಾಕಿಸ್ತಾನದ ದಯನೀಯ ಸ್ಥಿತಿಯನ್ನು ಹೇಳಿದ್ದರು. 30 ವರ್ಷಗಳ ಹಿಂದೆಯೇ ನೆರೆ ರಾಷ್ಟ್ರ ಭಾರತವು ತಮ್ಮ ಮಕ್ಕಳಿಗೆ ಈಗ ಜಗತ್ತು ಏನು ಬಯಸುತ್ತದೆಯೋ ಅದನ್ನು ಕಲಿಸಿಕೊಟ್ಟಿದೆ. ಅದರ ಫಲವಾಗಿ ವಿಶ್ವದ ಮುಂಚೂಣಿ 25 ಕಂಪನಿಗಳಿಗೆ ಭಾರತೀಯರೇ ಸಿಇಓ ಆಗಿದ್ದಾರೆ. ನಮ್ಮ ಐಟಿ ರಫ್ತು ಮೌಲ್ಯ 7 ಅರಬ್ ಡಾಲರ್ ಆಗಿದ್ದರೆ, ಭಾರತದ ಐಟಿ ರಫ್ತು ಮೌಲ್ಯ 270 ಅರಬ್ ಡಾಲರ್. ನಮ್ಮಲ್ಲಿ ಇನ್ನೂ ಎರಡು ಕೋಟಿ ಮಕ್ಕಳು ಶಾಲೆಗೆ ಹಾಜರಾಗುತ್ತಿಲ್ಲ. ಈ ಕುರಿತು ನಾವು ಚಿಂತಿಸಲು ಆರಂಭಿಸಿದರೆ, ನಮ್ಮ ದೇಶದ ಒಬ್ಬ ನಾಯಕನಿಗೂ ನಿದ್ದೆ ಹತ್ತುವುದಿಲ್ಲ ಎಂದಿದ್ದಾರೆ.
P Prime Minister Narendra Modi is a strong leader who has taken India to new heights and he will return as the country’s PM for a third term, a prominent Pakistani-American businessman has said.
15-05-25 10:16 pm
HK News Desk
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
15-05-25 08:04 pm
Mangalore Correspondent
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm